Daily Horoscope September 1: ವೃದ್ಧಿ - ಸರ್ವಾಮೃತ ಯೋಗದಿಂದಾಗಿ 4 ರಾಶಿಯವರಿಗೆ ಧನ ಲಾಭ, ಹಣಕಾಸಿನ ಸಮಸ್ಯೆ ನಿವಾರಣೆ!

Daily Horoscope September 1: ಗ್ರಹ ಮತ್ತು ನಕ್ಷತ್ರ ಸಂಚಾರದ ದೃಷ್ಟಿಯಿಂದ ಕೆಲ ರಾಶಿಯವರಿಗೆ ಇಂದು ಅತ್ಯಂತ ಶುಭ ಮತ್ತು ಹೊಸ ಅವಕಾಶಗಳಿಂದ ತುಂಬಿರುತ್ತದೆ. ಇಂದು ಕೃಷ್ಣ ಪಕ್ಷದ ಚತುರ್ಥಿ ತಿಥಿ ಬೆಳಿಗ್ಗೆ 7:42 ರವರೆಗೆ ಇರುತ್ತದೆ. ನಂತರ ಪಂಚಮಿ ತಿಥಿ ಪ್ರಾರಂಭವಾಗುತ್ತದೆ. ಅಶ್ವಿನಿ ನಕ್ಷತ್ರವು ದಿನವಿಡೀ ಇರುವುದು. ಚಂದ್ರನು ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಾ ಇರುವನು.

ಇಂದು ವೃದ್ಧಿ ಯೋಗ ಮತ್ತು ಸರ್ವಾಮೃತ ಯೋಗದ ಉತ್ತಮ ಸಂಯೋಜನೆಯು ರೂಪುಗೊಳ್ತಾ ಇದೆ. ಇದರ ಶುಭ ಪ್ರಭಾವದಿಂದಾಗಿ, ಕೆಲವು ರಾಶಿಯವರಿಗೆ ವ್ಯವಹಾರದಲ್ಲಿ ಗಣನೀಯ ಲಾಭವಾಗುವುದು. ಉದ್ಯೋಗಗಳಲ್ಲಿ ಬಡ್ತಿಗೆ ಬಲವಾದ ಅವಕಾಶಗಳಿವೆ.

Daily Horoscope September 1 Vriddhi-Sarvamrita Yoga Brings Financial Gains to 4 Zodiac Signs

ಮೇಷ ರಾಶಿ (Aries)

ವೃದ್ಧಿ ಮತ್ತು ಸರ್ವಾಮೃತ ಯೋಗದಿಂದಾಗಿ ವ್ಯವಹಾರದಲ್ಲಿ ಅಪೇಕ್ಷಿತ ಫಲ ಸಿಗುವುದು. ನಿಮ್ಮ ಉದ್ಯೋಗ ಹುಡುಕಾಟ ಕೊನೆಯಾಗುವುದು. ಬಡ್ತಿ ಸಿಗುವ ಅವಕಾಶಗಳಿವೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕುಟುಂಬ ಜೀವನವು ಶಾಂತಿಯುತವಾಗಿರುವುದು. ಸೂಕ್ಷ್ಮ ವಿಷಯಗಳ ಬಗ್ಗೆ ಅನಗತ್ಯ ವಾದಗಳಿಗೆ ಇಳಿಯಬೇಡಿ.

ವೃಷಭ ರಾಶಿ (Taurus)

ಹಣಕಾಸಿನ ವಹಿವಾಟುಗಳಲ್ಲಿ ವಿಶೇಷ ಎಚ್ಚರಿಕೆ ಅಗತ್ಯ. ವ್ಯವಹಾರದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಬೇಡಿ. ತಾಳ್ಮೆ ಮತ್ತು ಶಾಂತ ಮನಸ್ಸಿನಿಂದ ಕೆಲಸವನ್ನು ಮಾಡಿ ಮುಗಿಸಿ. ಸಂಗಾತಿಯೊಂದಿಗೆ ವಿನಾ ಕಾರಣ ಜಗಳಕ್ಕೆ ಹೋಗಬೇಡಿ. ಪರಸ್ಪರ ತಿಳುವಳಿಕೆಯಿಂದ ಸಂದರ್ಭಗಳನ್ನು ನಿರ್ವಹಿಸಿ.

ಮಿಥುನ ರಾಶಿ (Gemini)

ವೃದ್ಧಿ ಮತ್ತು ಸರ್ವಾಮೃತ ಯೋಗದಿಂದಾಗಿ ದೀರ್ಘಕಾಲದಿಂದ ಕೈ ಸೇರದೆ ಇದ್ದ ಹಣ ವಾಪಸ್‌ ಬರುವಂತಾಗುವುದು. ವ್ಯವಹಾರದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ. ಕೆಲಸದಲ್ಲಿ ದಿನವಿಡೀ ಚೈತನ್ಯಶೀಲರಾಗಿರುವಿರಿ. ಮಾನಸಿಕ ಒತ್ತಡ ಕಡಿಮೆಯಾಗುವುದು.

ಕಟಕ ರಾಶಿ (Cancer)

ನಿರೀಕ್ಷೆಯಂತೆ ವ್ಯಾಪಾರ ವಿಸ್ತರಣೆಗೆ ದಿನ ಸೂಕ್ತವಾಗಿದೆ. ಬೇಡಿಕೆ ಹೆಚ್ಚಾಗುವುದರಿಂದ ಲಾಭ ಕೂಡಾ ಹೆಚ್ಚಾಗುವುದು. ನಿಮ್ಮ ಯೋಜನೆಗಳನ್ನು ಸ್ಪರ್ಧಿಗಳಿಂದ ರಹಸ್ಯವಾಗಿಡಿ.ಕೆಲಸದಲ್ಲಿನ ಅಡೆತಡೆಗಳು ದೂರವಾಗುವುದು. ಒಳ್ಳೆಯ ಸುದ್ದಿ ಬರುವುದು.

ಸಿಂಹ ರಾಶಿ (Leo)

ವ್ಯಾಪಾರ ಪ್ರವಾಸವು ದೊಡ್ಡ ಮಟ್ಟದ ಲಾಭವನ್ನು ತಂದುಕೊಡುವುದು. ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವಿರಿ. ಕೆಲಸದಲ್ಲಿ ನಿಮ್ಮ ಅಧಿಕಾರ ಹೆಚ್ಚಾಗುವುದು. ಕೆಲಸದಲ್ಲಿ ನಿಮ್ಮ ನಿರ್ಧಾರಗಳು ನಿಮ್ಮ ಮೇಲಧಿಕಾರಿಗಳನ್ನು ಸಂತೋಷಪಡಿಸುವುದು. ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು.

ಕನ್ಯಾರಾಶಿ (Virgo)

ಪ್ರೊಡಕ್ಟಿವಿಟಿ ಜೊತೆಗೆ ಮಾರ್ಕೆಟಿಂಗ್ ಬಗ್ಗೆಯೂ ಗಮನ ಕೊಡಿ. ಯಾರನ್ನೂ ಕುರುಡಾಗಿ ನಂಬಬೇಡಿ. ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಅತಿಯಾದ ಕೆಲಸದ ಹೊರೆಯಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುವುದು. ಮಾತಿನ ಮೇಲೆ ನಿಯಂತ್ರಣವಿರಲಿ.

ತುಲಾ ರಾಶಿ (Libra)

ಸಣ್ಣ ಬದಲಾವಣೆಗಳನ್ನು ಮಾಡುವುದರಿಂದ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಹಾಯವಾಗುವುದು. ಮಧ್ಯಾಹ್ನ 12.15 ರಿಂದ 2 ರ ನಡುವೆ ಹೊಸ ಕೆಲಸವನ್ನು ಪ್ರಾರಂಭಿಸುವುದು ಶುಭ. ಕೆಲಸ ಮತ್ತು ಮನೆಯ ನಡುವೆ ಉತ್ತಮ ಸಮತೋಲನ ಇರುವುದು. ಮೇಲಧಿಕಾರಿಗಳೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿರುವುದು.

ವೃಶ್ಚಿಕ ರಾಶಿ (Scorpio)

ಹಬ್ಬದ ಋತುವಿನಲ್ಲಿ, ಸಾಮಾನ್ಯಕ್ಕಿಂತ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆಗಳಿವೆ. ಕಠಿಣ ಪ್ರಯತ್ನದ ಮೂಲಕ ಬಡ್ತಿ ಪಡೆಯುವಿರಿ. ಯಾವುದೇ ಅವಕಾಶವನ್ನು ಬಿಟ್ಟುಕೊಡಬೇಡಿ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಿರಿ. ಪ್ರೇಮ ಜೀವನದಲ್ಲಿ ಸ್ನೇಹಿತರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ.

ಧನು ರಾಶಿ (Sagittarius)

ಸರ್ವಾಮೃತದ ಯೋಗದಿಂದ, ನಿಮ್ಮ ವೃತ್ತಿಪರ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಬಾಸ್ ನಿಮ್ಮ ಕೆಲಸದ ದಕ್ಷತೆಯನ್ನು ಹೊಗಳುವರು. ಪಾಲುದಾರಿಕೆ ವ್ಯವಹಾರಗಳಿಗೆ ಸಮಯ ಅನುಕೂಲಕರವಾಗಿಲ್ಲ. ಅಂತಹ ಯೋಜನೆಗಳನ್ನು ಮುಂದೂಡುವುದು ಒಳ್ಳೆಯದು.

ಮಕರ ರಾಶಿ (Capricorn)

ಹೊಸ ಆಸ್ತಿಯನ್ನು ಖರೀದಿಸುವಾಗ, ವಂಚನೆಯನ್ನು ತಪ್ಪಿಸಲು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆವರಿಸಲು ಬಿಡಬೇಡಿ. ನಿಮ್ಮ ಧೈರ್ಯವು ವೃತ್ತಿಪರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವುದು. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ.

ಕುಂಭ ರಾಶಿ (Aquarius)

ವೃದ್ಧಿ ಮತ್ತು ಸರ್ವಾಮೃತ ಯೋಗವು ಇದ್ದಕ್ಕಿದ್ದಂತೆ ಒಂದು ಪ್ರಮುಖ ವ್ಯವಹಾರ ಒಪ್ಪಂದಕ್ಕೆ ಕಾರಣವಾಗಬಹುದು. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಭಾವನಾತ್ಮಕ ಬಾಂಧವ್ಯವು ಗಾಢವಾಗುವುದು.

ಮೀನ ರಾಶಿ (Pisces)

ವ್ಯಾಪಾರ ಚಟುವಟಿಕೆಗಳು ಕ್ರಮೇಣ ಸುಧಾರಿಸುವುದು. ನಿಮ್ಮ ವಿರೋಧಿಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿ. ಶ್ರದ್ಧೆಯಿಂದ ಕೆಲಸ ಮಾಡಿ.ಸಂಗಾತಿಯೊಂದಿಗೆ ಸಾಮರಸ್ಯವು ಅತ್ಯುತ್ತಮವಾಗಿರುವುದು. ಅದೃಷ್ಟವು ನಿಮ್ಮ ಕಡೆ ಇರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+