Daily Horoscope: ಶುಭಯೋಗದಿಂದ ಈ ರಾಶಿಯವರಿಗೆ ಸುದಿನ, ಹೊಸ ಅವಕಾಶ, ಸಾಲದಿಂದ ಮುಕ್ತಿ

ಇವತ್ತು ಇಡೀ ದಿನ ಅಶ್ವಿನಿ ಕೃಷ್ಣ ಪಕ್ಷದ ನವಮಿಯ ತಿಥಿ ಇರುತ್ತದೆ. ಇಡೀ ದಿನ ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಸಂಜೆ 6.32ರ ವರೆಗೆ ಚಂದ್ರ ಮಿಥುನ ರಾಶಿಯಲ್ಲಿ ಇರ್ತಾನೆ. ನಂತರ ಚಂದ್ರಮ ಸ್ವರಾಶಿ ಕರ್ಕಕ್ಕೆ ಪ್ರವೇಶ ಮಾಡ್ತಾನೆ.

ಮೇಷ ರಾಶಿ (Aries):

ವ್ಯಾಪಾರ ವ್ಯವಹಾರದಲ್ಲಿ ಅನುಕೂಲ. ಹೊಸ ಕೆಲಸದ ಆರ್ಡರ್​ ಗಳು ಸಿಗಬಹುದು. ಕಾನೂನು ವ್ಯವಹಾರಗಳು ಸರಳವಾಗಲಿವೆ. ಕೆಲಸದಲ್ಲಿ ಪ್ರಮೋಶನ್ ಸಿಗಲಿದೆ. ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗ್ತೀರಿ. ಸಹದ್ಯೋಗಿಗಳ ಸಹಕಾರ ಸಿಗಲಿದೆ. ಸಂಗಾತಿಯ ಸಹಕಾರದಿಂದ ನಿಂತಿರುವ ಕೆಲಸ ಪೂರ್ಣಗೊಳ್ಳಲಿದೆ. ಹಣಕಾಸು ಸ್ಥಿತಿ ಉತ್ತಮಗೊಳ್ಳಲಿದೆ. ಆರೋಗ್ಯ ಚೆನ್ನಾಗಿರಲಿದೆ.

Daily Horoscope October 4 Today Rashi Bhavishya Zodiac Predictions Lucky Number Colour of all signs

ವೃಷಭ ರಾಶಿ (Taurus):

ವ್ಯಾಪಾರದಲ್ಲಿ ಸಫಲತೆ ಸಿಗಲಿದೆ. ಉದ್ಯೋಗ ಬದಲಿಸಲು ಇದು ಸಕಾಲ. ಉದ್ಯೋಗ ಕ್ಷೇತ್ರದ ಟಾರ್ಗೆಟ್ ಪೂರ್ಣಗೊಳ್ಳಲಿದೆ. ಗೆಳತಿಗೆ ಮನದ ಇಚ್ಚೆ ತಿಳಿಸಲು ಇದು ಸಕಾಲ. ಬಂಡವಾಳ ವ್ಯವಹಾರದಲ್ಲಿ ಸುಧಾರಣೆ ಕಾಣಲಿದೆ. ಉತ್ತಮ ಆರೋಗ್ಯ ಇರಲಿದೆ.

ಮಿಥುನ ರಾಶಿ (Gemini):

ವ್ಯಾಪಾರದ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.ಕಚೇರಿಯಲ್ಲಿ ಶುಭ ಸಮಾಚಾರ ಸಿಗಲಿದೆ. ಕೌಟುಂಬಿಕ ವಿಷಯಗಳಲ್ಲಿ ಹಠಮಾರಿ ಧೋರಣೆ ಬೇಡ.ಹೆಚ್ಚುವರಿ ಆದಾಯದ ಹೊಸ ಮೂಲ ಸಿಗಲಿದೆ. ಆರೋಗ್ಯ ಸಾಮಾನ್ಯವಾಗಿರಲಿದೆ.

ಕರ್ಕಾಟಕ ರಾಶಿ (Cancer):

ಹೊಸ ಉದ್ಯೋಗ ಆರಂಭಿಸಲು ಇದು ಸರಿಯಾದ ಸಮಯ ಅಲ್ಲ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳ ಮನಸ್ಸು ವಿಚಲಿತವಾಗುವ ಸಾಧ್ಯತೆಗಳಿವೆ. ಗೆಳತಿಯ ಜೊತೆಗಿನ ಸಂಬಂಧ ಬಿಗಡಾಯಿಸಬಹುದು. ಮನಸ್ಸಿಗೆ ಕಿರಿಕಿರಿ ಹೆಚ್ಚಾಗಬಹುದು

ಸಿಂಹ ರಾಶಿ (Leo):

ಬುಧಾದಿತ್ಯ ಯೋಗ ಇದೆ. ವಿದೇಶಿ ಕಂಪನಿಗಳಿಂದ ದೊಡ್ಡ ಆರ್ಡರ್​ ಸಿಗಬಹುದು. ದೊಡ್ಡ ನಿರ್ಧಾರ ಕೈಗೊಳ್ಳಬಹುದು. ಕಚೇರಿಯಲ್ಲಿ ಶಾಂತಿಪೂರ್ಣವಾಗಿ ವರ್ತಿಸಿ. ವಿದ್ಯಾರ್ಥಿಗಳು ಕಠಿಣ ಅಧ್ಯಯನನಿರತರಾಗಬೇಕು. ಹಣಕಾಸು ವಿಚಾರದಲ್ಲಿ ಸುಧಾರಣೆ. ಆರೋಗ್ಯ ಚೆನ್ನಾಗಿರಲಿದೆ.

ಕನ್ಯಾ ರಾಶಿ (Virgo):

ಹೊಸ ಅಧಿಕಾರಿಯ ಕಾರಣದಿಂದ ಬ್ಯಾಂಕ್ ಲೋನ್ ಸಮಸ್ಯೆ ಬಗೆಹರಿಯಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಕಚೇರಿಯಲ್ಲಿ ಯಾರೊಂದಿಗೂ ವಾದ ವಿವಾದ ಬೇಡ. ಪ್ರೇಮ ಸಂಬಂಧಗಳು ಮಧುರವಾಗಲಿವೆ.ಹಣಕಾಸು ಸುದೃಢವಾಗಲಿದೆ.

ತುಲಾ ರಾಶಿ (libra):

ವ್ಯಾಪಾರ ಸ್ಥಿತಿ ಉತ್ತಮವಾಗಿರಲಿದೆ. ಧನಲಾಭದ ಯೋಗ ಇದೆ. ಉದ್ಯೋಗದಲ್ಲಿ ಉನ್ನತಿ. ಪ್ರತಿಷ್ಟಿತ ಪ್ರಾಜೆಕ್ಟ್ ಭಾಗವಾಗುವ ಸಾಧ್ಯತೆ ಇದೆ. ಹಣಕಾಸು ಸ್ಥಿತಿ ಸರಿಯಾಗಲಿದೆ. ಗೃಹೋಪಯೋಗಿ ವಸ್ತು ಖರೀದಿಸುವ ಯೋಗ ಇದೆ. ಮಾನಸಿಕ ಶಾಂತಿ ಕಾಪಾಡಿಕೊಳ್ಳಿ

ವೃಶ್ಚಿಕ ರಾಶಿ (Scorpio):

ಸಹದ್ಯೋಗಿಗಳ ಜೊತೆ ತಾಳಮೇಳ ಇರಲಿ. ಹೊಸ ವ್ಯಾಪಾರಿಗಳಿಗೆ ಮೋಸ ಆಗುವ ಸಾಧ್ಯತೆ. ಆಫೀಸ್ ಪಾಲಿಟಿಕ್ಸ್​ ನಿಂದ ದೂರ ಇರಿ. ಗೆಳತಿಯ ಭಾವನೆಗಳಿಗೆ ಬೆಲೆ ಕೊಡಿ. ಅಪಾಯ ಇರುವ ಉದ್ಯೋಗದಿಂದ ದೂರ ಇರಿ. ಯೋಗ, ಪ್ರಾಣಾಯಾಮ ಮಾಡಿ.

ಧನು ರಾಶಿ (Sagittarius):

ವಿದೇಶಿ ವ್ಯಾಪಾರದಿಂದ ಧನಲಾಭ. ಮಾರ್ಕೆಟಿಂಗ್​ ನಿಂದ ಲಾಭ. ಕೆಲಸದಲ್ಲಿ ಬ್ಯುಸಿ ಇರ್ತೀರಿ.ಹಳೆಯ ಯೋಜನೆಗಳು ಪೂರ್ಣಗೊಳ್ಳಲಿವೆ. ಪತ್ನಿ ಮತ್ತು ತಾಯಿಯ ನಡುವೆ ತಾಳಮೇಳ ಚೆನ್ನಾಗಿರಲಿದೆ. ಕೌಟುಂಬಿಕ ವಾತಾವರಣ ಚೆನ್ನಾಗಿರಲಿದೆ. ಉಳಿತಾಯದ ದುಡ್ಡು ಬಿಕ್ಕಟ್ಟಿನ ಸಮಯಕ್ಕೆ ಬರಲಿದೆ. ಆರೋಗ್ಯ ಚೆನ್ನಾಗಿರಲಿದೆ.ಆಟಗಾರರಿಗೆ ಒಳ್ಳೆಯ ದಿನ

ಮಕರ ರಾಶಿ (Capricorn):

ವ್ಯವಹಾರದ ವ್ಯಾಪ್ತಿ ಹೆಚ್ಚಾಗಲಿದೆ. ಸಂಪತ್ತು ಹೆಚ್ಚಲಿದೆ. ಕಚೇರಿಯ ಅಡಚಣೆಗಳು ದೂರವಾಗಲಿವೆ. ಸಂತಾನಭಾಗ್ಯದ ಸಿಹಿ ಸುದ್ದಿ ಸಿಗಲಿದೆ. ಅವಿವಾಹಿತರಿಗೆ ಕಂಕಣ ಕೂಡಿ ಬರುವ ಸಮಯ. ಕೊಡು-ಕೊಳ್ಳುವ ವ್ಯವಹಾರದಲ್ಲಿ ಲಾಭ. ಹಣಕಾಸು ಸದೃಢ. ಮನಸ್ಸಿಗೆ ಶಾಂತಿ ಸಿಗಲಿದೆ.

ಕುಂಭ ರಾಶಿ (Aquarius):

ಹೊಸ ವ್ಯಾಪಾರ ಏಳಿಗೆ ಕಾಣಲಿದೆ. ಮಾರುಕಟ್ಟೆಯಲ್ಲಿ ಕೀರ್ತಿ ಹೆಚ್ಚಾಗಲಿದೆ. ವ್ಯವಹಾರ ತೀರ್ಮಾನಕ್ಕೆ ಉತ್ತಮ ದಿನ. ಕಚೇರಿಯಲ್ಲಿ ನಿಮ್ಮ ಸಾಧನೆ ಹೆಚ್ಚಾಗಲಿದೆ. ಹೊಸ ಅವಕಾಶಗಳು ಸಿಗಲಿವೆ. ಕುಟುಂಬ ನಿಮ್ಮ ಮೊದಲ ಆದ್ಯತೆ ಆಗಲಿದೆ. ಆದಾಯ ಹೆಚ್ಚಲಿದೆ.ಆರೋಗ್ಯ ವಿಚಾರದಲ್ಲಿ ಒಳ್ಳೆಯ ದಿನ.

ಮೀನಾ ರಾಶಿ (Pisces):

ಕೊಟ್ಟ ಹಣ ಸಮಯಕ್ಕೆ ಸರಿಯಾಗಿ ಹಿಂತಿರುಗಲ್ಲ. ಯೋಜನೆಗಳು ವಿಳಂಬವಾಗಲಿವೆ. ಹಣಕಾಸು ವಿಚಾರದಲ್ಲಿ ಗಡಿಬಿಡಿ ಬೇಡ. ಕೆಲಸದಲ್ಲಿ ಪ್ರಮೋಶನ್​, ವೇತನ ಹೆಚ್ಚಾಗಲಿದೆ. ಸಂಯಮದಿಂದ ಇದ್ದಷ್ಟು ಉತ್ತಮ. ಖರ್ಚು ಹೆಚ್ಚಾಗಲಿದೆ. ಅನಗತ್ಯ ಖರ್ಚು ಬೇಡ. ದೇಹಕ್ಕೆ ಸುಸ್ತಾಗಲಿದೆ. ಸಕಾರಾತ್ಮಕ ಯೋಚನೆಗಳನ್ನು ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+