Daily Horoscope Aug 28: ಚಂದ್ರಗ್ರಹಣ, ಶ್ರಾವಣ ಹುಣ್ಣಿಮೆ ಈ 5 ರಾಶಿಯವರಿಗೆ ಅದೃಷ್ಟ, ಧನಲಾಭ, ವೃತ್ತಿಯಲ್ಲಿ ಹೊಸ ಅವಕಾಶ
Daily Horoscope Aug 28: ಇವತ್ತು ಶ್ರಾವಣ ಹುಣ್ಣಿಮೆ. ರಕ್ಷಾ ಬಂಧನ ಹಬ್ಬವೂ ಇದೆ. ಜೊತೆಗೆ ಭಾಗಶಃ ಚಂದ್ರಗ್ರಹಣದ ನೆರಳು ಕೂಡಾ ಈ ದಿನ ಇದೆ. ಇವೆಲ್ಲವನ್ನೂ ನೋಡಿ ಈ ದಿನ ಯಾವ ರಾಶಿಯವರಿಗೆ ಅದೃಷ್ಟ ಯಾವ ರಾಶಿಯವರಿಗೆ ಅಶುಭ ಎನ್ನುವುನ್ನು ನೋಡೋಣ.
ಮೇಷ ರಾಶಿ (Aries)
ಬುದ್ಧಿವಂತಿಕೆಯಿಂದ ವಿರೋಧಿಗಳನ್ನು ಸೋಲಿಸುವಿರಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಶ್ರಾವಣ ಹುಣ್ಣಿಮೆಯ ದಿನದಂದು ಬೆಳಿಗ್ಗೆ 8:15 ರಿಂದ 10:15 ರವರೆಗೆ ಅಥವಾ ಮಧ್ಯಾಹ್ನ 1:15 ರಿಂದ 2:15 ರ ನಡುವಿನ ಸಮಯವು ಹೊಸ ಆರಂಭಿಸಲು ಸೂಕ್ತವಾಗಿದೆ. ಅಪಾಯಕಾರಿ ಕೆಲಸಕ್ಕೆ ಕೈ ಹಾಕಬೇಡಿ. ಅತಿಗಂಡ ಯೋಗವು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ.

ವೃಷಭ ರಾಶಿ (Taurus)
ಕೆಲಸದಲ್ಲಿ ಹೊಸತನವನ್ನು ಪ್ರಯತ್ನಿಸುವಿರಿ.ಕಚೇರಿ ಕೆಲಸಗಳಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಸಿಗುವುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಹೆಚ್ಚುವರಿ ಆದಾಯಕ್ಕಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಬೇಡಿ. ನಷ್ಟವಾಗಬಹುದು. ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಿ.
ಮಿಥುನ ರಾಶಿ (Gemini)
ಆನ್‌ಲೈನ್ ವ್ಯವಹಾರಗಳಿಂದ ಲಾಭವಾಗುವುದು. ಅತಿಗಂಡ ಯೋಗದಿಂದ ಇಂದು ಲಾಭವಾಗುವುದು. ಹೊಸ ಹೂಡಿಕೆ ಮಾಡುವ ಮೊದಲು ಅನುಭವಿ ಜನರಿಂದ ಸಲಹೆ ಪಡೆಯಿರಿ. ಕಚೇರಿಯಲ್ಲಿನ ವಾತಾವರಣ ನಿಮಗೆ ಅನುಕೂಲಕರವಾಗಿರುವುದು. ರಕ್ಷಾ ಬಂಧನವಾಗಿರುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುವುದು.
ಕರ್ಕಾಟಕ ರಾಶಿ (Cancer)
ಇವತ್ತು ಹೊಸ ಕೆಲಸ ಶುರು ಮಾಡಲೇಬಾರದು. ಕಚೇರಿಯಲ್ಲಿಯೂ ಜಾಗರೂಕರಾಗಿರಬೇಕು. ಪ್ರತಿ ಹೆಜ್ಜೆ ಇಡುವಾಗಲೂ ಎಚ್ಚರಿಕೆಯಿಂದ ಇರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮೇಲಧಿಕಾರಿಗಳೊಂದಿಗೆ ಚರ್ಚಿಸಿ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಇರಲಿ.
ಸಿಂಹ ರಾಶಿ (Leo)
ಸಿಂಹ ರಾಶಿಯವರು ವ್ಯವಹಾರ ವಿಸ್ತರಣೆ ಮಾಡಬಹುದು. ಪ್ರಮುಖ ಕಂಪನಿಗಳಿಂದ ಅತ್ಯುತ್ತಮ ವ್ಯವಹಾರದ ಆಫರ್ ಬರಬಹುದು. ಕಚೇರಿ ಕೆಲಸದ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಕರ್ತವ್ಯಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬೇಡಿ.
ಕನ್ಯಾರಾಶಿ (Virgo)
ಅತಿಗಂಡ ಯೋಗವು ಕನ್ಯಾ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವುದು. ಹೊಸ ಯೋಜನೆಯನ್ನು ಪ್ರಾರಂಭಿಸುವ ಮೊದಲು, ಕುಟುಂಬ ಸದಸ್ಯರ ಸಲಹೆ ತೆಗೆದುಕೊಳ್ಳಿ. ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ರಿಸ್ಕ್ ತೆಗೆದುಕೊಳ್ಳಲು ಸಮಯ ಸೂಕ್ತವಾಗಿಲ್ಲ.
ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಇಂದು ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ವರ್ಷಗಳಿಂದ ಕಾಡುತ್ತಿರುವ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದು. ನಿಮಗೆ ವಹಿಸಿದ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕೆಲಸದ ಹೊರೆ ಕಡಿಮೆಯಾಗುವುದು.
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರಿಗೆ ಗ್ರಹಣದ ಪ್ರಭಾವದಿಂದ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯಗಳಲ್ಲಿ ಇತರರ ಮೇಲೆ ಹೆಚ್ಚು ಅವಲಂಬಿತರಾಗಬೇಡಿ. ಇತಿಮಿತಿಯಲ್ಲಿ ಹಣ ಖರ್ಚು ಮಾಡಿದರೆ ಒಳ್ಳೆಯದು. ಕೆಲಸದ ಸ್ಥಳದಲ್ಲಿ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಕೋಪದ ಕೈಗೆ ಬುದ್ದಿ ಕೊಟ್ಟರೆ ಎಲ್ಲವೂ ಹಾಳಾಗುವುದು.
ಧನು ರಾಶಿ (Sagittarius)
ಶ್ರಾವಣ ಪೂರ್ಣಿಮೆಯು ಮಧ್ಯಾಹ್ನ ಧನು ರಾಶಿಯವರಿಗೆ ಗಮನಾರ್ಹ ಆರ್ಥಿಕ ಲಾಭವನ್ನು ತರುವುದು. ಪ್ರಮುಖ ವ್ಯವಹಾರ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಹೊಸ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು.
ಮಕರ ರಾಶಿ (Capricorn)
ವ್ಯವಹಾರಗಳಲ್ಲಿ ಲಾಭವಾಗುವುದು. ಅನಿರೀಕ್ಷಿತ ಧನಲಾಭವಾಗುವುದು. ಕಠಿಣ ಪರಿಶ್ರಮವನ್ನು ಮುಂದುವರೆಸಿ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಆರೋಗ್ಯ ಉತ್ತಮವಾಗಿರುವುದು.
ಕುಂಭ ರಾಶಿ (Aquarius)
ಶ್ರಾವಣ ಪೂರ್ಣಿಮೆಯ ಶುಕ್ರವಾರದಂದು ಕುಂಭ ರಾಶಿಯವರ ಅದೃಷ್ಟ ಹೆಚ್ಚಾಗುವುದು. ವ್ಯಾಪಾರ ವ್ಯವಹಾರದಲ್ಲಿ ಯಶಸ್ವಿಯಾಗುವಿರಿ. ಹಿಡಿದ ಕೆಲಸವನ್ನು ಪೂರ್ಣ ಮಾಡುವಿರಿ. ಬಹಳ ಸಮಯದ ನಂತರ, ಕುಟುಂಬದೊಂದಿಗೆ ಸಂತೋಷದಾಯಕ ಸಮಯವನ್ನು ಕಳೆಯುವಿರಿ. ಇಡೀ ದಿನ ಸಂತೋಷದಿಂದ ಕೂಡಿರುವುದು.
ಮೀನ ರಾಶಿ (Pisces)
ಗ್ರಹಣ ಇರುವುದರಿಂದ ವ್ಯಾಪಾರ ವ್ಯವಹಾರಗಳು ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕು . ಹಣಕಾಸಿನ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗಿಗಳು ಕೆಲಸದ ಮೇಲೆ ಗಮನಹರಿಸಬೇಕು. ಕುಟುಂಬದಲ್ಲಿ ಸಂತೋಷ ಇರುವುದು. ಆರೋಗ್ಯ ಉತ್ತಮವಾಗಿರುವುದು.


Click it and Unblock the Notifications
