Daily Horoscope Aug 24: ಈ ರಾಶಿಯವರ ಸಮಸ್ಯೆಗಳೆಲ್ಲಾ ಬಗೆಹರಿಯುವುದು, ಇವರು ಎಚ್ಚರಿಕೆಯಿಂದ ಇರಬೇಕು
Daily Horoscope Aug 24: ಇಂದಿನ ನಿತ್ಯ ಭವಿಷ್ಯದ ಆಧಾರದಲ್ಲಿ ನೋಡುವುದಾದರೆ ಕೆಲವು ರಾಶಿಯವರ ಸಮಸ್ಯೆಗಳೆಲ್ಲಾ ಬಗೆಹರಿಯುವುದು. ಕೆಲವರು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಹಣಕಾಸಿನ ಸಮಸ್ಯೆಯೂ ಕಾಡುವುದು. ದ್ವಾದಶ ರಾಶಿಯಲ್ಲಿ ಯಾರಿಗೆ ಇಂದು ಅದೃಷ್ಟವನ್ನು ತರುವುದು.
ಮೇಷ ರಾಶಿ (Aries)
ಇವತ್ತು ಹೆಚ್ಚು ಶ್ರಮ ವಹಿಸಬೇಕಾಗುವುದು. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಭಾವನೆಗಳ ಮೇಲೆ ನಿಯಂತ್ರಣ ಇರಲಿ. ಆರೋಗ್ಯದ ಸಮಸ್ಯೆ ಕಾಡಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ವೃಷಭ ರಾಶಿ (Taurus)
ಮನೆ ನಿರ್ಮಾಣದ ಯೋಜನೆಗಳನ್ನು ಸದ್ಯಕ್ಕೆ ಮುಂದೂಡುವುದು ಒಳ್ಳೆಯದು. ಸಮಸ್ಯೆಗಳ ಪರಿಹಾರದ ಬಗ್ಗೆ ಕುಟುಂಬ ಸದಸ್ಯರ ಸಲಹೆ ಪಡೆಯುವುದು ಸೂಕ್ತ. ಪ್ರಯಾಣ ಮಾಡುವ ವೇಳೆ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಮಿಥುನ ರಾಶಿ (Gemini)
ಆಧ್ಯಾತ್ಮಿಕತೆಯತ್ತ ಗಮನ ಹರಿಯುವುದು. ಹಣ ಹೂಡಿಕೆ ಮಾಡುವುದಕ್ಕೆ ಸರಿಯಾದ ಸಮಯ ಅಲ್ಲ. ಹಣದ ಬಗ್ಗೆ ಎಚ್ಚರಿಕೆಯ ನಿರ್ಧಾಋ ತೆಗೆದುಕೊಳ್ಳಿ. ಮೊಣಕಾಲು ಮತ್ತು ಕೀಲು ನೋವಿನ ಸಮಸ್ಯೆ ಕಾಡಬಹುದು.
ಕರ್ಕಾಟಕ ರಾಶಿ (Cancer)
ಇಲ್ಲಿಯವರೆಗೆ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಬೇರೆಯವರ ವಿಷಯದ ಬಗ್ಗೆ ಗಮನ ಕೊಡಬೇಡಿ. ನಿಮಗೇ ಸಮಸ್ಯೆಯಾಗುವುದು. ವ್ಯವಹಾರದಲ್ಲಿ ಲಾಭವಾಗುವುದು. ಕುಟುಂಬದ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಪೂರೈಸುವಿರಿ.
ಸಿಂಹ ರಾಶಿ (Leo)
ಮಕ್ಕಳ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ವೆಚ್ಚಗಳು ಹೆಚ್ಚಾಗುವುದು. ವ್ಯಾಪಾರದಲ್ಲಿ ಸ್ವಲ್ಪಮಟ್ಟಿನ ನಷ್ಟವಾಗುವುದು. ನಿಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಮಾತಿನಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಿ.
ಕನ್ಯಾ ರಾಶಿ (Virgo)
ಬಾಕಿ ಇರುವ ಕೆಲಸಗಳು ಪೂರ್ತಿಯಾಗುವುದು. ಸಾಲವಾಗಿ ಕೊಟ್ಟ ಹಣ ವಾಪಸ್ ಬರುವುದು. ಆನ್‌ಲೈನ್ ಕೆಲಸಗಳಲ್ಲಿ ಅನಿರೀಕ್ಷಿತ ಯಶಸ್ಸು ಸಿಗುವುದು. ಸ್ನೇಹಿತರೊಂದಿಗೆ ಪ್ರಯಾಣಕ್ಕೆ ಹೋಗುವಿರಿ. ಕೋಪವನ್ನು ನಿಯಂತ್ರಿಸಿ.
ತುಲಾ ರಾಶಿ (Libra)
ನಿಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಿಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ. ಸಾಲ ಕೊಡುವುದು ಅಥವಾ ಸಾಲ ನೀಡುವುದು ಎರಡೂ ಒಳ್ಳೆಯದಲ್ಲ. ಹಣದ ವಹಿವಾಟುಗಳನ್ನು ನಡೆಸದಿರುವುದೇ ಒಳ್ಳೆಯದು. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.ಸಂಗಾತಿಯಿಂದ ಉಡುಗೊರೆಯೂ ಸಿಗುವುದು.
ವೃಶ್ಚಿಕ ರಾಶಿ (Scorpio)
ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಕಚೇರಿ ಕೆಲಸದಲ್ಲಿ ಯಶಸ್ಸು ಸಿಗುವುದು. ಸಂಗಾತಿಯೊಂದಿಗೆ ಸಾಮರಸ್ಯ ಹೆಚ್ಚಾಗುವುದು. ಮಕ್ಕಳಿಂದ ಶುಭ ಸುದ್ದಿ ಬರುವುದು. ಮಕ್ಕಳ ಸಾಧನೆ ಹೆಮ್ಮೆ ತರುವುದು.
ಧನು ರಾಶಿ (Sagitarius)
ಒಡ ಹುಟ್ಟಿದವರೊಂದಿಗಿನ ವಿವಾದವನ್ನು ಪರಸ್ಪರ ತಿಳುವಳಿಕೆಯ ಮೂಲಕ ಪರಿಹರಿಸಲಾಗುತ್ತದೆ. ಪ್ರಯಾಣ, ಪ್ರವಾಸದಲ್ಲಿ ಸಮಯ ವ್ಯರ್ಥ ಮಾಡಬೇಡಿ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಂಗಾತಿಯ ನಿರೀಕ್ಷೆಗಿಂತ ಹೆಚ್ಚು ಬೆಂಬಲ ನೀಡುತ್ತಾರೆ.
ಮಕರ ರಾಶಿ (Capricorn)
ವಿದೇಶ ಪ್ರಯಾಣ ಯೋಗ ಸಿಗುವುದು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ವ್ಯವಹಾರದಲ್ಲಿ ಕಠಿಣ ಪರಿಶ್ರಮದ ಅಗತ್ಯವಿದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕುಂಭ ರಾಶಿ (Aquarius)
ಆಸ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿಯುವುದು. ವಾಹನ ಚಲಾಯಿಸುವಾಗ ಎಚ್ಚರದಿಂದ ಇರಿ. ನಿರ್ಧಾರ ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ. ಸ್ನೇಹಿತರ ಬೆಂಬಲ ಸಿಗುವುದು.
ಮೀನ ರಾಶಿ (Pisces)
ದಿನವು ಹೊಸ ಉತ್ಸಾಹದಿಂದ ಆರಂಭವಾಗುವುದು. ಕೆಲಸ ಕಾರ್ಯಗಳಲ್ಲಿ ಗೆಲುವುದು ಸಿಗುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಸಣ್ಣ ವಿಷಯಗಳಿಗೆ ಸ್ನೇಹಿತರೊಂದಿಗೆ ಜಗಳ ನಡೆಯುವುದು. ವ್ಯವಹಾರ ಒಪ್ಪಂದಕ್ಕೆ ಗಮನಾರ್ಹ ಲಾಭವಾಗುವುದು.


Click it and Unblock the Notifications
