Horoscope Today: ದಿನ ಭವಿಷ್ಯ ಮಾರ್ಚ್ 12- ಈ ರಾಶಿಗೆ ಸಮಸ್ಯೆಗಳಿಂದ ಹೊರಬರಲು ಸುವರ್ಣ ಸಮಯ
ಮಾರ್ಚ್ 12 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ. ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಕೆಲವು ಜನರು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು, ಇನ್ನೂ ಕೆಲವರು ವ್ಯವಹಾರದಲ್ಲಿ ಭಾರಿ ಲಾಭ ಗಳಿಸಬಹುದು. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹಾಗಾದರೆ ಮಾರ್ಚ್ 12 ಬುಧವಾರ 12 ರಾಶಿಗಳ ಭವಿಷ್ಯ ಹೇಗಿದ ಎಂದು ಈಗ ತಿಳಿಯೋಣ.
ಮೇಷ ರಾಶಿ
ಮಾರ್ಚ್ 12 ಮೇಷ ರಾಶಿಯವರಿಗೆ ಮಂಗಳಕರವಾಗಿದೆ. ಈ ದಿನ ನೀವು ವಾಹನ ಖರೀದಿಸಲು ಯೋಚನೆ ಮಾಡಬಹುದು. ಆಸ್ತಿ ಖರೀದಿ ಬಗ್ಗೆ ಕೂಡ ಯೋಚನೆ ಮಾಡಬಹುದು. ಇದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ವೃತ್ತಿಯಲ್ಲಿ ಯಶಸ್ಸು ಕಂಡು ಬರಲಿದೆ. ಹೊಸ ಅವಕಾಶಗಳು ನಿಮಗೆ ಸಿಗಲಿವೆ. ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರಲಿದೆ. ವ್ಯವಹಾರದಲ್ಲಿ ಉತ್ತಮ ಲಾಭವನ್ನು ನೀವು ಪಡೆಯುವಿರಿ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಇದು ಸರಿಯಾದ ಸಮಯವಾಗಿದೆ. ಈ ರಾಶಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಧಾರ್ಮಿಕ ಒಲವು ಹೆಚ್ಚಾಗುತ್ತದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನ ಆರ್ಥಿಕವಾಗಿ ಪ್ರಯೋಜನಕಾರಿಯಾಗಿದೆ. ಹೂಡಿಕೆಯಿಂದ ಲಾಭ ಸಿಗಲಿದೆ. ಸಾಲ ಕೊಟ್ಟ ಹಣವನ್ನು ಮರಳಿ ಪಡೆಯುವಿರಿ. ಹಠಾತ್ ಆರ್ಥಿಕ ಲಾಭದ ಸಾಧ್ಯತೆಯಿದೆ. ಹೂಡಿಕೆಗೂ ಇದು ಒಳ್ಳೆಯ ಸಮಯ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ. ಮನಸ್ಸು ಸಂತೋಷವಾಗಿರುತ್ತದೆ.
ಮಿಥುನ ರಾಶಿ
ಈ ದಿನ ಹಣ ಹೆಚ್ಚು ಖರ್ಚಾಗಬಹುದು. ಆದರೆ ಇದರಿಂದ ನಿಮಗೆ ಖುಷಿ ಆಗಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇರುವುದು. ಮಕ್ಕಳು ಅಥವಾ ಶಿಕ್ಷಣದ ಕಾರಣದಿಂದಾಗಿ ನೀವು ಚಿಂತೆ ಮಾಡುತ್ತೀರಿ. ನಿಮ್ಮ ಗುರಿಯತ್ತ ಗಮನಹರಿಸಿ ಮತ್ತು ಚಿಂತಿಸಬೇಡಿ. ವಿದ್ಯಾಭ್ಯಾಸದಲ್ಲಿನ ಅಡೆತಡೆಗಳ ನಿವಾರಣೆಗಾಗಿ ಬೆಳಿಗ್ಗೆ ವಿಘ್ನವಿನಾಯಕನನ್ನು ಪೂಜಿಸಿ.
ಕರ್ಕಾಟಕ ರಾಶಿ
ಈ ದಿನ ನೀವು ಮಾಡುವ ಕಾರ್ಯಗಳಿಗೆ ಸಂಗಾತಿಯಿಂದ ನಿಮಗೆ ಬೆಂಬಲ ಸಿಗಲಿದೆ. ಮನೆಯ ಮುಖ್ಯಸ್ಥರೊಂದಿಗೆ ಉದ್ವಿಗ್ನತೆ ಹಾಗೂ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಶಾಂತವಾಗಿರಿ. ತಾಳ್ಮೆಯಿಂದಿರಲು ಆಧ್ಯಾತ್ಮಿಕತೆಯ ಸಹಾಯ ಪಡೆಯಿರಿ. ಈ ದಿನ ಗಣೇಶನನ್ನು ಪೂಜಿಸುವುದು ತುಂಬಾ ಶುಭವಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲು ಉತ್ತಮ ಅವಕಾಶಗಳನ್ನು ಪಡೆಯಲಿದ್ದಾರೆ. ಕೆಲಸದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳದ ಲಕ್ಷಣಗಳಿವೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಈ ದಿನ ನಿಮಗೆ ಶುಭವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಕನ್ಯಾ ರಾಶಿ
ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಮಾತೇ ನಡೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಹೆತ್ತವರ ಆಶೀರ್ವಾದದೊಂದಿಗೆ ಕೆಲಸ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ತುಲಾ ರಾಶಿ
ಕೆಲಸದಲ್ಲಿ ಹೆಚ್ಚು ನಿರತರಾಗಿರುವುದರಿಂದ ವೈಯಕ್ತಿಕ ಸಂಬಂಧಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರಬಹುದು. ಯಾವುದೇ ಸಮಸ್ಯೆ ಬಂದರೂ ಪರಸ್ಪರ ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಿ. ಮಹಿಳೆಯರೊಂದಿಗೆ ಹೆಚ್ಚು ಮಾತನಾಡುವುದನ್ನು ತಪ್ಪಿಸಿ. ಬಡವರಿಗೆ ದಾನ ಮಾಡಿ.
ವೃಶ್ಚಿಕ ರಾಶಿ
ಮಾರ್ಚ್ 12 ವೃಶ್ಚಿಕ ರಾಶಿಯವರಿಗೆ ಅದೃಷ್ಟದ ದಿನವಾಗಿರುತ್ತದೆ. ಉದ್ಯೋಗದಲ್ಲಿ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ಒತ್ತಡ ಕಡಿಮೆಯಾಗಲಿದೆ. ಏಕಾಂಗಿಯಾಗಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನೀವು ಯಾವುದೇ ಪರೀಕ್ಷೆ ಅಥವಾ ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದರೆ, ಯಶಸ್ಸಿನ ಸಾಧ್ಯತೆಯಿದೆ. ಕಷ್ಟಪಟ್ಟು ಮತ್ತು ತಾಳ್ಮೆಯಿಂದ ಕೆಲಸ ಮಾಡಿ, ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.
ಧನು ರಾಶಿ
ಪ್ರಯಾಣ ಆಹ್ಲಾದಕರವಾಗಿರುತ್ತದೆ. ಸಂಪತ್ತು, ಖ್ಯಾತಿ ಹೆಚ್ಚಳವಾಗುತ್ತದೆ. ಶೈಕ್ಷಣಿಕ ಸ್ಪರ್ಧೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ಕಾರಣವಿಲ್ಲದೆ ಯಾರೊಂದಿಗೂ ಸಂಘರ್ಷಕ್ಕೆ ಇಳಿಯಬೇಡಿ. ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಮಾತೇ ನಡೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಹೆತ್ತವರ ಆಶೀರ್ವಾದದೊಂದಿಗೆ ಕೆಲಸ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಹೊಸ ಆರಂಭವಾಗಿದೆ. ನೀವು ಯಾವುದೇ ಹೊಸ ಹೂಡಿಕೆ ಅಥವಾ ವ್ಯವಹಾರದ ಬಗ್ಗೆ ಯೋಚಿಸುತ್ತಿದ್ದರೆ, ಮುಂದುವರಿಯಬಹುದು. ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ. ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಮನೆ ಮತ್ತು ಕುಟುಂಬದಲ್ಲಿಯೂ ಸಂತೋಷ ಹೆಚ್ಚಾಗಲಿದೆ.
ಮಾಧ್ಯಮ, ಆರೋಗ್ಯ, ಕಲೆ ಅಥವಾ ಕಾನೂನು ವಲಯದಲ್ಲಿ ಕೆಲಸ ಮಾಡುವವರ ಗೌರವ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಮೊದಲಿಗಿಂತ ಹೆಚ್ಚು ನಂಬಿಕೆ ಇರುತ್ತದೆ. ಕೆಲಸದಲ್ಲಿನ ಆತ್ಮವಿಶ್ವಾಸ ಹೆಚ್ಚಾಗಲಿದೆ. ಪ್ರಗತಿಗೆ ಹೊಸ ಅವಕಾಶಗಳು ಸಿಗುತ್ತವೆ. ಮನೆಯಲ್ಲಿ ಸಂಘರ್ಷದ ವಾತಾವರಣ ದೂರವಾಗಲಿದೆ.
ಕುಂಭ ರಾಶಿ
ಈ ದಿನ ಆರ್ಥಿಕ ಪ್ರಗತಿ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜೀವನದಲ್ಲಿ ಅನಗತ್ಯವಾಗಿ ಓಡಾಡುವುದು ಇರುತ್ತದೆ. ಆರ್ಥಿಕ ಅಪಾಯಗಳಿಂದ ದೂರವಿರಿ. ದಾನ ಮಾಡುವುದರಿಂದ ಮತ್ತು ದೇವರನ್ನು ಪೂಜಿಸುವುದರಿಂದ ಏಕಾಂಗಿಯಾಗಿರುವವರಿಗೆ ಕಲ್ಯಾಣವಾಗುತ್ತದೆ.
ಮೀನ ರಾಶಿ
ಯಾವುದೇ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಎಚ್ಚರಿಕೆಯಿಂದ ಚಾಲನೆ ಮಾಡಿ. ಮಕ್ಕಳು ಅಥವಾ ಶಿಕ್ಷಣದ ಬಗ್ಗೆ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ನೀವು ಜನರ ಹೃದಯಗಳನ್ನು ಗೆಲ್ಲುತ್ತೀರಿ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನಕಾರಾತ್ಮಕ ಜನರಿಂದ ದೂರವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನಮ್ಮ ಉದ್ದೇಶ ಮಾಹಿತಿಯನ್ನು ನೀಡುವುದು. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications