Horoscope Today: ದಿನ ಭವಿಷ್ಯ ಜನವರಿ 29- ಮೌನಿ ಅಮವಾಸ್ಯೆಯಂದು ಈ ರಾಶಿಗೆ ಸುಖ ಸಮೃದ್ಧಿ ಕರುಣಿಸಲಿದ್ದಾನೆ ವಿಘ್ನವಿನಾಯಕ

ಜನವರಿ 29 ಮಾಘ ಮಾಸದ ಕೃಷ್ಣ ಪಕ್ಷದ ಉತ್ತರಾಷಾಡ ತಿಥಿ. ಈ ದಿನ ಮೌನಿ ಅಮವಾಸ್ಯೆ ಇದೆ. ವಜ್ರ ಯೋಗ ಮತ್ತು ಪೂರ್ವಾಷಾಢ ನಕ್ಷತ್ರದ ಸಂಯೋಜನೆ ನಡೆಯಲಿದೆ. ರಾಹುಕಾಲ ಮಧ್ಯಾಹ್ನ 12:32 ರಿಂದ 1:59 ರವರೆಗೆ ಇರುತ್ತದೆ. ಜನವರಿ 29 ಬುಧವಾರದ ದಿನ 12 ರಾಶಿಗಳಿಗೆ ಹೇಗಿದೆ? ಇಂದಿನ ರಾಶಿ ಭವಿಷ್ಯ ಮತ್ತು ಪರಿಹಾರ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಜನವರಿ 29 ಒಂದು ಅದ್ಭುತ ದಿನವಾಗಿದೆ. ನೀವು ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸದಿಂದ ಇರುತ್ತೀರಿ. ಸಮಾಜದಲ್ಲಿ ಹೊಸ ಗುರುತು ಸೃಷ್ಟಿಯಾಗುತ್ತದೆ. ಜನರಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಾಗುತ್ತದೆ. ಕೆಲಸದಲ್ಲಿ ಲಾಭ ಉಂಟಾಗಬಹುದು. ಉದ್ಯಮಿಗಳಿಗೆ ಸಮಯ ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸಂಸಾರದಲ್ಲಿನ ಪರಸ್ಪರ ಭಿನ್ನಾಭಿಪ್ರಾಯಗಳನ್ನು ದೂರವಾಗುತ್ತವೆ.

astrology dina bhavishya january 29 12 zodiac signs today prediction

ವೃಷಭ ರಾಶಿ

ಜನವರಿ 29ರಂದು ವೃಷಭ ರಾಶಿಯವರು ಶೈಕ್ಷಣಿಕ ಸ್ಪರ್ಧೆಯಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಚರ ಅಥವಾ ಸ್ಥಿರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಸಂಪತ್ತು, ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಗಣೇಶನ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಬೆಳಗಿಸಿ.

ಮಿಥುನ ರಾಶಿ

ಈ ದಿನ ಇತರರಿಂದ ಸಹಾಯ ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಬಹುನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳುತ್ತವೆ.

ಕರ್ಕಾಟಕ ರಾಶಿ

ಜನವರಿ 29 ಕರ್ಕಾಟಕ ರಾಶಿಚಕ್ರದ ಜನರಿಗೆ ತುಂಬಾ ಒಳ್ಳೆಯ ದಿನವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಗಳಿವೆ. ಸಂಪತ್ತಿನ ಹೆಚ್ಚಳದೊಂದಿಗೆ ಸಮಾಜದಲ್ಲಿ ಗೌರವವೂ ಹೆಚ್ಚಾಗಬಹುದು. ಮನಸ್ಸು ಮೊದಲಿಗಿಂತ ಹೆಚ್ಚು ಸಂತೋಷವಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ಎಲ್ಲೋ ಪ್ರಯಾಣಿಸಲು ನೀವು ಯೋಜಿಸಬಹುದು. ಉದ್ಯೋಗಿಗಳಿಗೆ ಬಡ್ತಿ ಸಿಗುತ್ತದೆ. ಯಾವುದೇ ಆತುರದ ನಿರ್ಧಾರ ಮಾಡಬೇಡಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಜನವರಿ 29 ಸಂಪತ್ತು ಹೆಚ್ಚಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಎಲ್ಲಾ ಸಾಧ್ಯತೆಗಳಿವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಜನವರಿ 29 ಮಿಶ್ರ ಫಲ ನೀಡಲಿದೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಶತ್ರುಗಳ ಕಾಟ ನಾಶವಾಗಲಿದೆ. ಮಹಿಳಾ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಇಂದು ಗಣೇಶನ ದೇವಸ್ಥಾನಕ್ಕೆ ಹೋಗಿ ದೀಪ ಬೆಳಗಿಸಿ, ವಕ್ರತುಂಡೋಕ್ತಿ ಪಠಿಸಿ. ಅಗತ್ಯ ಇರುವವರಿಗೆ ದಾನ ಮಾಡಿ.

ತುಲಾ ರಾಶಿ

ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಸಂಬಂಧಿಕರಿಂದ ನೀವು ಒತ್ತಡವನ್ನು ಎದುರಿಸಬಹುದು. ತಪ್ಪು ನಿರ್ಧಾರಗಳು ನೋವಿನಿಂದ ಕೂಡಿರುತ್ತವೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿ. ಸಮಸ್ಯೆಗಳ ನಿವಾರಣೆಗೆ ವಿಘ್ನವಿನಾಯಕನನ್ನು ಪೂಜಿಸಿ.

ವೃಶ್ಚಿಕ ರಾಶಿ

ಜನವರಿ 29 ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಿದೆ. ನಿಮ್ಮ ಮನಸ್ಸನ್ನು ಸಂತೋಷವಾಗಿಡುವ ಪ್ರವಾಸಕ್ಕೆ ನೀವು ಹೊರಡಬಹುದು. ಆತ್ಮವಿಶ್ವಾಸ ಮೊದಲಿಗಿಂತ ಹೆಚ್ಚಾಗುತ್ತದೆ. ಮನೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಾಧ್ಯವಾಗುತ್ತದೆ. ಅದಕ್ಕೆ ಬೆಲೆ ಕೂಡ ಸಿಗಲಿದೆ. ಮನೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಉದ್ಯಮಿಗಳಿಗೆ ಸಮಯ ಉತ್ತಮವಾಗಿರುತ್ತದೆ. ನೀವು ಉದ್ಯೋಗದಲ್ಲಿದ್ದರೆ, ಕೆಲಸದಲ್ಲಿ ಸಹೋದ್ಯೋಗಿಯ ಬೆಂಬಲ ಸಿಗಲಿದೆ. ಅದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ.

ಧನು ರಾಶಿ

ಈ ದಿನ ಧನು ರಾಶಿಯವರಿಗೆ ಅಷ್ಟೊಂದು ಉತ್ತಮವಾಗಿರುವುದಿಲ್ಲ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಪ್ರೇಮ ಮದುವೆ ಸಾಧ್ಯವಾಗುತ್ತದೆ. ಬುದ್ಧಿಮತ್ತೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಕುಟುಂಬದ ಸಮಸ್ಯೆಗಳು ಬಗೆಹರಿಯುತ್ತವೆ. ಈ ದಿನ ಮಾಡಿದ ಪೂಣ್ಯದ ಕಾರ್ಯಗಖು ಕೊನೆಯವರೆಗೂ ಕೈ ಹಿಡಿಯುತ್ತವೆ.

ಮಕರ ರಾಶಿ

ಮಕರ ರಾಶಿಯವರಿಗೆ ಜನವರಿ 29 ತುಂಬಾ ಉತ್ತಮವಾಗಿಲ್ಲ. ಈ ದಿನ ನಿಮ್ಮ ಮಾತನ್ನು ನಿಯಂತ್ರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೈಹಿಕ ತೊಂದರೆ ಉಂಟಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿರಬಹುದು. ಗಂಡ-ಹೆಂಡತಿಯ ಸಂಬಂಧ ಸುಧಾರಣೆಗೆ ಸಮಯ ಅದ್ಭುತವಾಗಿದೆ. ಈ ದಿನ ಹಸಿದ ಪ್ರಾಣಿಗಳಿಗೆ ಅನ್ನ ನೀಡಿ.

ಕುಂಭ ರಾಶಿ

ಜನವರಿ 29 ಕುಂಭ ರಾಶಿಯವರಿಗೆ ವಿಶೇಷ ದಿನವಾಗಿದೆ. ಅನಗತ್ಯ ವಿಷಯಗಳಿಂದ ನಿಮ್ಮ ಮನಸ್ಸನ್ನು ತೊಂದರೆಗೊಳಿಸಬೇಡಿ. ನಿಮ್ಮ ಕೆಲಸಕ್ಕೆ ವಿಶೇಷ ಗಮನ ಕೊಡಿ. ಭವಿಷ್ಯದಲ್ಲಿ ಪ್ರಗತಿ ಸಾಧಿಸುವಿರಿ. ಮನಸ್ಸಿನಲ್ಲಿ ಬೇರೆ ರೀತಿಯ ಸಂತೋಷ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಸಮಯ ಸಿಗುವುದು. ನೀವು ಯಾವುದಾದರೂ ಕೆಲಸದ ನಿಮಿತ್ತ ಪ್ರಯಾಣ ಮಾಡಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳೂ ಇವೆ.

ಮೀನ ರಾಶಿ

ಜನವರಿ 29 ಮೀನ ರಾಶಿಯವರಿಗೆ ಮಂಗಳಕರವಾಗಿದೆ. ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನೀವು ವ್ಯಾಪಾರ ಮಾಡುತ್ತಿದ್ದರೆ ಶೀಘ್ರದಲ್ಲೇ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಜನರಲ್ಲಿ ಗೌರವ ಹೆಚ್ಚಾಗುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂಪತ್ತಿನ ಹೆಚ್ಚಳದಿಂದ ನೀವು ಆರ್ಥಿಕ ಬಿಕ್ಕಟ್ಟನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರ ಮಾಡುವ ಜನರು ಯಶಸ್ಸನ್ನು ಸಾಧಿಸುವರು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನ ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯ ರೂಪಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+