Horoscope Today: ದಿನ ಭವಿಷ್ಯ ಫೆಬ್ರವರಿ 22- ಆಂಜನೇಯನ ಆಶೀರ್ವಾದದಿಂದ ಈ ರಾಶಿಗೆ ಶ್ರೀಮಂತಿಕೆ ಯೋಗ
ಫೆಬ್ರವರಿ 22 ಶನಿವಾರ 12 ರಾಶಿಗಳಿಗೆ ತುಂಬಾ ವಿಶೇಷವಾಗಿದೆ. ಈ ದಿನ ಬ್ರಹ್ಮ ಮುಹೂರ್ತ ಬೆಳಗ್ಗೆ 5 ಗಂಟೆಯಿಂದ ಬೆಳಗ್ಗೆ 5:48ರವರೆಗೆ ಇದೆ. ರಾಹುಕಾಲ ಬೆಳಗ್ಗೆ 9:35 ರಿಂದ ಬೆಳಗ್ಗೆ 11:04ರವರೆಗೆ ಇದೆ. ಫೆಬ್ರವರಿ ತಿಂಗಳ ನಾಲ್ಕನೇ ಶನಿವಾರ ರಾಮದಾಸ ನವಮಿ, ಕೊಟ್ಟೂರು ಬಸವೇಶ್ವರ ರಥ, ಕಂಬಳೂರು ಆಂಜನೇಯ ರಥವನ್ನು ಆಚರಿಸಲಾಗುತ್ತದೆ. ಈ ದಿನ ಯಾವ ರಾಶಿಯವರು ಅದೃಷ್ಟವಂತರು? ಆಂಜನೇಯನ ಆಶೀರ್ವಾದ ಪಡೆಯುವ ರಾಶಿಗಳು ಯಾವುವು? 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಫೆಬ್ರವರಿ 22 ಶುಭವಾಗಿಲ್ಲ. ಈ ದಿನ ನೀವು ಅನಗತ್ಯ ವಾದಗಳನ್ನು ತಪ್ಪಿಸಬೇಕು. ಮನೆಯಲ್ಲಿ ಒತ್ತಡ ಹೆಚ್ಚಾಗಬಹುದು. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಬೆಳಿಗ್ಗೆ ಶನಿದೇವನನ್ನು ಪೂಜಿಸಿ. ಹನುಮಾನ ಚಾಲೀಸ್ ಪಠಿಸಿ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಫೆಬ್ರವರಿ 22ರಂದು ಶೈಕ್ಷಣಿಕ ಸ್ಪರ್ಧೆಯಲ್ಲಿನ ಪ್ರಯತ್ನಗಳು ಫಲ ನೀಡುತ್ತವೆ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗುವುದು. ಮನಸ್ಸು ಪ್ರಸನ್ನವಾಗಿರುತ್ತದೆ. ಕೆಲಸದಲ್ಲಿ ಸ್ಥಳದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಪತ್ತು ಕೂಡ ಹೆಚ್ಚಳವಾಗಲಿದೆ. ಇಂದು ವ್ಯವಹಾರ ಮತ್ತು ವೈಯಕ್ತಿಕ ಕೆಲಸಗಳಿಗೆ ಉತ್ತಮ ದಿನವಾಗಿರುತ್ತದೆ.
ಮಿಥುನ ರಾಶಿ
ಈ ದಿನ ಮಿಥುನ ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಕಂಡುಬರುತ್ತದೆ. ಬಹುನಿರೀಕ್ಷಿತ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ಅಧಿಕಾರಿಯಿಂದ ಬೆಂಬಲ ಸಿಗುವುದು. ಆರ್ಥಿಕ ಪ್ರಗತಿ ಕಂಡುಬರುತ್ತದೆ. ಅಲ್ಲದೆ ಕೆಲಸದ ಸ್ಥಳದಲ್ಲೂ ಪ್ರಗತಿ ಕಂಡುಬರಲಿದೆ.
ಕರ್ಕಾಟಕ ರಾಶಿ
ಕಟಕ ರಾಶಿಯವರಿಗೆ ಫೆಬ್ರವರಿ 22 ಶುಭವಾಗಿಲ್ಲ. ಈ ದಿನ ನಿಮ್ಮ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸ ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ. ನಿಮ್ಮ ಆರೋಗ್ಯ ಹದಗೆಡಬಹುದು. ಪ್ರಯಾಣಯನ್ನು ಈ ದಿನ ತಪ್ಪಿಸಿ. ಆರ್ಥಿಕ ಸಂಕಷ್ಟಗಳ ನಿವಾರಣೆ ಬೆಳಿಗ್ಗೆ ಬಡವರಿಗೆ ಅಗತ್ಯವಿರುವ ವಸ್ತುಗಳನ್ನು ದಾನ ಮಾಡಿ ಮತ್ತು ಶನಿಯ ಮಂತ್ರವನ್ನು ಜಪಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಫೆಬ್ರವರಿ 22 ಮಿಶ್ರ ಫಲ ನೀಡಲಿದೆ. ಕೌಟುಂಬಿಕ ವಿಷಯಗಳಲ್ಲಿ ಸಂಯಮ ಕಾಪಾಡಿಕೊಳ್ಳಿ. ಸೃಜನಶೀಲ ಕೆಲಸಗಳಲ್ಲಿ ಹೆಚ್ಚು ಭಾಗಿಯಾಗಿ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ತುಂಬಾ ಮುಖ್ಯ. ಆಗ ಮಾತ್ರ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಆದರೆ ಮನಸ್ಸು ತೊಂದರೆಗೊಳಗಾಗಬಹುದು. ಇದರಿಂದ ಪರಿಹಾರ ಪಡೆಯಲು ಹಸಿದ ಪ್ರಾಣಿಗಳಿಗೆ ಆಹಾರ ನೀಡಿ.
ಕನ್ಯಾ ರಾಶಿ
ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಕೆಲಸದಲ್ಲಿ ಅಧಿಕಾರಿಯಿಂದ ಬೆಂಬಲ ಸಿಗುತ್ತದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಆರ್ಥಿಕ ವಿಷಯಗಳಲ್ಲಿ ಬೆಳವಣಿಗೆ ಇರುತ್ತದೆ. ಸ್ನೇಹಿತ ಅಥವಾ ಸಂಬಂಧಿಕರನ್ನು ಭೇಟಿ ಮಾಡುವುದರಿಂದ ನಿಮಗೆ ಆರ್ಥಿಕ ಲಾಭ ಸಿಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಫೆಬ್ರವರಿ 22 ಕೊಂಚ ತೊಂದರೆಯನ್ನುಂಟು ಮಾಡಬಹುದು. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ದಾಂಪತ್ಯ ಜೀವನದಲ್ಲಿ ಸಂತೋಷ ಕಡಿಮೆ ಆಗುತ್ತದೆ. ಮನಸ್ತಾಪಗಳು ಹೆಚ್ಚಾಗಬಹುದು. ಆದರೂ ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ವ್ಯವಹಾರದಲ್ಲಿ ಹೆಚ್ಚಿನ ಶ್ರಮ ಇರುತ್ತದೆ. ಆದರೆ ಲಾಭ ಮಾತ್ರ ಸಿಗುವುದಿಲ್ಲ. ಇದರಿಂದ ಪರಿಹಾರ ಪಡೆಯಲು ಶನಿದೇವನನ್ನು ಪೂಜಿಸಿ.
ವೃಶ್ಚಿಕ ರಾಶಿ
ಈ ದಿನ ವೃಶ್ಚಿಕ ರಾಶಿಯವರಿಗೆ ವಿದೇಶ ಪ್ರವಾಸಕ್ಕೆ ಹೋಗಲು ಅನುಕೂಲಕರ ವಾತಾವರಣವಿರುತ್ತದೆ. ಅತಿಯಾದ ಕೋಪವನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ. ಆರ್ಥಿಕ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸ ಕೈಹಿಡಿಯುವುದು ಕಷ್ಟ ಇದೆ. ಈ ಸಮಸ್ಯೆಗಳಿಂದ ಮುಕ್ತರಾಗಲು ಹನುಮಾನ್ ಚಾಲೀಸಾ ಪಠಿಸಿ.
ಧನು ರಾಶಿ
ಈ ದಿನ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ನಿಮ್ಮ ಮಹತ್ವಾಕಾಂಕ್ಷೆ ಈಡೇರುತ್ತದೆ. ನಿಮ್ಮಲ್ಲಿರುವ ಆತ್ಮವಿಶ್ವಾಸ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ. ನಿಮ್ಮ ಎಲ್ಲಾ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಬಹುದಿನದ ಚಿಂತೆ ದೂರವಾಗಲಿದೆ. ಬೆಳಿಗ್ಗೆ ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಗೆ ಹೋಗಿ. ಇಂದು ಶನಿ ಮಂತ್ರವನ್ನು ಜಪಿಸಬೇಕು. ಇದು ತುಂಬಾ ಒಳ್ಳೆಯದು.
ಮಕರ ರಾಶಿ
ಫೆಬ್ರವರಿ 22 ಮಕರ ರಾಶಿಯವರಿಗೆ ಶನಿ ಬಲವಿದೆ. ದೇವರಲ್ಲಿ ನಂಬಿಕೆ ಹೆಚ್ಚಾಗುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಸ್ಥಳಕ್ಕೆ ಹೋಗುತ್ತೀರಿ. ಕೆಟ್ಟ ಚಟಗಳಿಂದ ದೂರವಾಗುವ ಸಮಯ ಇದು. ಇದರ ಪ್ರಯತ್ನದಲ್ಲಿ ನೀವು ಯಶಸ್ವಿಯಾಗುವಿರಿ. ಉದ್ಯೋಗ ಹುಡುಕುವ ನಿಮ್ಮ ಪ್ರಯತ್ನ ಸಕಾರಗೊಳ್ಳಲಿದೆ. ಬೆಳಿಗ್ಗೆ ಶನಿದೇವನ ಮಂತ್ರವನ್ನು ಪಠಿಸಿ. ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪ ಹಚ್ಚಿ.
ಕುಂಭ ರಾಶಿ
ಈ ದಿನ ಕುಂಭ ರಾಶಿಯವರ ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಮನೆಯ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇತರರಿಂದ ಸಹಕಾರ ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ. ಇಂದು ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪ ಹಚ್ಚಿ.
ಮೀನ ರಾಶಿ
ಫೆಬ್ರವರಿ 22 ಮೀನ ರಾಶಿಯವರಿಗೆ ಅಪರಿಚಿತ ವ್ಯಕ್ತಿಗಳಿಂದ ಭಯ ಹೆಚ್ಚಾಗಬಹುದು. ಆದರೆ ಚಿಂತೆ ಬೇಡ. ಶನಿ ದೇವರ ಆರಾಧನೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications