Horoscope Today: ದಿನ ಭವಿಷ್ಯ ಏಪ್ರಿಲ್ 24- ಈ ರಾಶಿಗೆ ವಿಷ್ಣು ದೇವನ ಕೃಪೆಯಿಂದ ಅನಿರೀಕ್ಷಿತ ಸಂಪತ್ತು ವೃದ್ಧಿ

ಏಪ್ರಿಲ್ 24 ಗುರುವಾರ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ಗ್ರಹಗಳ ಸ್ಥಾನದಿಂದ ಹಲವಾರು ಪ್ರಯೋಜಗಳು ಇವೆ. ಇಂದು ಗುರು ರಾಯರೊಂದಿಗೆ ವಿಷ್ಣು ದೇವನನ್ನು ಪೂಜಿಸಲು ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಇಂದು 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಮಿಶ್ರ ಫಲವನ್ನು ನೀಡಲಿದೆ. ಸಂಸಾರದಲ್ಲಿ ನೆಮ್ಮದಿ, ದಾಂಪತ್ಯದಲ್ಲಿ ಸಂತೋಷ, ಕೆಲಸದಲ್ಲಿ ಏಳಿಗೆ ಕಂಡು ಬರಲಿದೆ. ನೀವುಂದುಕೊಂಡ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಎಲ್ಲಾ ಕೆಲಸ ಕಾರ್ಯಗಳಲ್ಲಿ ನಿಮ್ಮ ಸಹೋದ್ಯೋಗಿಗಳು ಸಹಾಯ ಮಾಡುತ್ತಾರೆ. ಇಂದು ವಿಷ್ಣು ದೇವನ ಮಂತ್ರವನ್ನು ಪಠಿಸುವುದು ತುಂಬಾ ಶುಭ ಫಲಗಳನ್ನು ನೀಡಲಿದೆ.

astrology dina bhavishya april 24 12 zodiac signs today prediction

ವೃಷಭ ರಾಶಿ

ಈ ದಿನ ವೃಷಭ ರಾಶಿಯವರಿಗೆ ಅತ್ಯಂತ ಮಂಗಳಕರವಾದ ದಿನವಾಗಿದೆ. ಈ ದಿನ ಮಾಡಿದ ಕೆಲಸಗಳಿಂದ ಅಧಿಕ ಧನಲಾಭ ಸಿಗುವುದು. ಮನೆಗೆ ಸಂಬಂಧಿಕರು ಇಂದು ಬರುತ್ತಾರೆ. ಇದರಿಂದ ಮನೆಯ ವಾತಾವರಣ ಸಂತೊಷದಿಂದ ಕೂಡಿರುತ್ತದೆ. ಪ್ರೇಮಿಗಳಿಗೆ ತುಂಬಾ ಉತ್ತಮವಾದ ದಿನವಾಗಿದೆ. ಇದರಿಂದಾಗಿ ಈ ದಿನ ನಿಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಮಾತನಾಡಬಹುದು.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ದಿನವಾಗಿರಲಿದೆ. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರಲಿದೆ. ನಿಮ್ಮ ಕೆಲವು ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಇದರಿಂದ ನಿಮಗೆ ದೊಡ್ಡ ಆರ್ಥಿಕ ಲಾಭ ಸಿಗಲಿದೆ. ಕಾರ್ಮಿಕ ವರ್ಗದ ಜನರಿಗೆ ವಿಶೇಷ ಬಡ್ತಿಗಳು ಸಿಗಲಿವೆ.

Take a Poll

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ತುಂಬಾ ತೊಂದರೆದಾಯಕ ದಿನವಾಗಬಹುದು. ಸಾಲ ಇತ್ಯಾದಿಗಳನ್ನು ಮರುಪಾವತಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ನೀವು ಎಲ್ಲೋ ಅವಮಾನವನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಯಾರಿಗೂ ಸಾಲವಾಗಿ ಹಣವನ್ನು ನೀಡಬೇಡಿ.

ಸಿಂಹ ರಾಶಿ

ಸಿಂಹ ರಾಶಿಯವರ ಮನಸ್ಸು ಚಂಚಲದಿಂದ ಕೂಡಿರುತ್ತದೆ. ಅದಕ್ಕೆ ಒಂದು ಕಾರಣ ನಿಮ್ಮ ಆರೋಗ್ಯವಾಗಿರಬಹುದು. ನಿಮ್ಮ ಆರೋಗ್ಯದ ಕಾರಣದಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಅನುಭವಿಸುವಿರಿ. ಕುಟುಂಬದಲ್ಲಿ ಯಾರೊಬ್ಬರ ಆರೋಗ್ಯವೂ ಹದಗೆಡಬಹುದು. ಹೀಗಾಗಿ ಜಾಗರೂಕರಾಗಿರಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಆರೋಗ್ಯದಲ್ಲಿ ನೀವು ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಹಳೆಯ ಸ್ನೇಹಿತ ಅಥವಾ ಸಹೋದ್ಯೋಗಿಯನ್ನು ಭೇಟಿಯಾಗಬೇಕಾಗುತ್ತದೆ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಕೇಳಿಬರುತ್ತವೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ಸುದ್ದಿಗಳು ಬರಬಹುದು. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕೆಲಸ ಸಿಗುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಯಾರೊಂದಿಗೂ ಜಗಳ ಮಾಡಿಕೊಳ್ಳಬೇಡಿ. ತಾಳ್ಮೆಯಿಂದ ಸಂದರ್ಭಗಳನ್ನು ಎದುರಿಸುವುದು ಉತ್ತಮ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಕೆಲವು ಪ್ರಮುಖ ಕೆಲಸಗಳನ್ನು ಮಾಡಲು ಯೋಜಿಸಬಹುದು. ನಿಮ್ಮ ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳಿಂದ ವಿಶೇಷ ಗೌರವ ಮತ್ತು ಬಡ್ತಿ ಸಿಗಬಹುದು. ಕುಟುಂಬ ಸದಸ್ಯರೊಂದಿಗೆ ಎಲ್ಲೋ ಹೊರಗೆ ಹೋಗಲು ಯೋಜನೆ ರೂಪಿಸಬಹುದು. ಇಂದು ವಿಷ್ಣುವಿನ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿ.

ಧನು ರಾಶಿ

ನೀವು ನಿಮ್ಮ ಮನಸ್ಸಿನಲ್ಲಿ ಹೊಸ ಕೆಲಸಕ್ಕಾಗಿ ಒಂದು ಯೋಜನೆಯನ್ನು ಮಾಡಬಹುದು. ಸ್ನೇಹಿತರಿಂದ ಆರ್ಥಿಕ ಸಹಾಯವನ್ನು ಕೇಳಬಹುದು. ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ನಿಮ್ಮ ಮೇಲೆ ಕುಟುಂಬದ ಒತ್ತಡವಿರುತ್ತದೆ. ಇದರಿಂದಾಗಿ ನೀವು ಬಯಸದಿದ್ದರೂ ಒತ್ತಡ ಹೆಚ್ಚಾಗಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನ ವಿಶೇಷವಾಗಿರುತ್ತದೆ. ಈ ದಿನ ನೀವು ಪ್ರವಾಸಕ್ಕೆ ಹೋಗಬಹುದು. ನಿಮ್ಮ ಯಾವುದೇ ಪ್ರಮುಖ ಯೋಜನೆ ಸ್ಥಗಿತಗೊಳ್ಳಬಹುದು. ಈ ದಿನ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು. ವ್ಯವಹಾರದಲ್ಲಿ ಪರಿಸ್ಥಿತಿ ಸ್ವಲ್ಪ ವಿರುದ್ಧವಾಗಿ ಕಾಣುತ್ತದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಒಳ್ಳೆಯ ದಿನವಾಗಿದೆ. ಮನಸ್ಸು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿರುತ್ತದೆ. ಮನೆಯಲ್ಲಿ ಶುಭ ಸಮಾರಂಭ ನಡೆಯುವ ಸಾಧ್ಯತೆ ಇದೆ. ನೀವು ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ಕಾರ್ಮಿಕ ವರ್ಗದ ಜನರಿಗೆ ಒಳ್ಳೆಯ ದಿನವಾಗಿದೆ. ವ್ಯಾಪಾರಿಗಳಿಗೆ ಇಂದು ಆದಾಯ ಹೆಚ್ಚಾಗಬಹುದು. ಈ ದಿನ ಗುರು ರಾಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.

ಮೀನ ರಾಶಿ

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಯಾವುದೇ ನಿರ್ದಿಷ್ಟ ಕೆಲಸಕ್ಕಾಗಿ ನೀವು ಮಾಡುವ ಯೋಜನೆ ಯಶಸ್ವಿಯಾಗುತ್ತದೆ. ನಿಮಗೆ ಕೆಲವು ಪ್ರಮುಖ ಹುದ್ದೆ ದೊರೆಯಬಹುದು. ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ. ಅಂದುಕೊಂಡದ್ದನ್ನು ಸಾಧಿಸುವ ಛಲ ಹೊಂದುವಿರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+