Chanakya Niti: ಮಕ್ಕಳು ಆತ್ಮವಿಶ್ವಾಸದಿಂದ ಇರಬೇಕಾದರೆ ಪೋಷಕರು ಈ 5 ನಿಯಮಗಳನ್ನು ತಿಳಿದಿರಬೇಕು

Chanakya Niti: ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ಮಗುವಿನ ಭವಿಷ್ಯ ಮತ್ತು ಯಶಸ್ಸು ಯಾವ ರೀತಿಯಲ್ಲಿ ರೂಪುಗೊಳ್ಳುವುದು ಎನ್ನುವುದು ಮಗುವಿನ ಬಾಲ್ಯದಲ್ಲಿಯೇ ನಿರ್ಧಾರವಾಗುವುದು. ಮಗು ಮನೆಯಲ್ಲಿಯೇ ಮನೆ ಮಂದಿಯ ಎದುರಿನಲ್ಲಿಯೇ ಅತಿ ಹೆಚ್ಚು ಸಮಯ ಕಳೆಯುವುದು. ಹಾಗಾಗಿ ಮನೆಯ ವಾತಾವರಣ ಮಗುವಿನ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆಚಾರ್ಯ ಚಾಣಕ್ಯ ಅವರು ಮಕ್ಕಳ ಪಾಲನೆಯ ಕುರಿತು ಕೆಲವು ಮಾರ್ಗದರ್ಶನವನ್ನು ನೀಡಿದ್ದಾರೆ. ಆ ಕಾಲದಲ್ಲಿ ಅವರು ನೀಡಿದ ಕೆಲವು ಮಾರ್ಗದರ್ಶನ, ಸಲಹೆಗಳು ಇಂದಿಗೂ ಬಹಳ ಪ್ರಸ್ತುತವಾಗಿದೆ. ಚಾಣಕ್ಯ ತನ್ನ ನೀತಿಯಲ್ಲಿ ಪೋಷಕರು ಅನುಸರಿಸಲೇ ಬೇಕಾದ 5 ಪ್ರಮುಖ ಪಾಠಗಳನ್ನು ಹೇಳಿದ್ದಾರೆ.

Chanakya Niti For Parents One Must Follow Five Major Rules Build Confidence In Child Says Chanakya

ಪ್ರಶ್ನೆ ಕೇಳಲು ಬಿಡಿ

ಚಾಣಕ್ಯರ ಪ್ರಕಾರ, ಜ್ಞಾನವೇ ವ್ಯಕ್ತಿಯ ದೊಡ್ಡ ಆಸ್ತಿ. ಮಗುವಿನ ಜ್ಞಾನ ಹೆಚ್ಚಾಗಬೇಕಾದರೆ ಅದರ ಮನಸ್ಸಿನಲ್ಲಿ ಕುತೂಹಲ ಮೂಡಬೇಕು. ಯಾವ ಮನಸ್ಸಿನಲ್ಲಿ ಕುತೂಹಲ ಇರುವುದೋ ಆ ಮಗು ಪ್ರಶ್ನೆಗಳನ್ನು ಕೇಳುತ್ತದೆ. ಕೆಲವೊಮ್ಮೆ ಮಗು ವಿಪರೀತ ಪ್ರಶ್ನೆಗಳನ್ನು ಕೇಳಲೂಬಹುದು. ಆದರೆ ಮಗುವಿನ ಪ್ರಶ್ನೆಗಳನ್ನು ಹತ್ತಿಕ್ಕುವ ಬದಲು ತಾಳ್ಮೆಯಿಂದ ಆ ಪ್ರಶ್ನೆಗೆ, ಮನಸ್ಸಿನ ಗೊಂದಲಕ್ಕೆ ಉತ್ತರ ನೀಡಬೇಕು.
ಇಲ್ಲವಾದರೆ ಮಗು ಪ್ರಶ್ನೆ ಕೇಳುವುದೇ ತಪ್ಪು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳುತ್ತದೆ. ಇನ್ನು ಶಾಲೆಯಲ್ಲಿ ಏನು ಕಲಿಸುತ್ತಾರೆ, ಎಷ್ಟು ಕಲಿಸುತ್ತಾರೆ ಅಷ್ಟು ಮಗುವಿಗೆ ಖಂಡಿತವಾಗಿಯೂ ಸಾಕಾಗುವುದಿಲ್ಲ. ಅದನ್ನು ಮೀರಿದ ಜ್ಞಾನ ಮಗುವಿಗೆ ಬೇಕಾಗುತ್ತದೆ. ಹಾಗಾಗಿ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಸಹಾಯ ಮಾಡಬೇಕು. ವಿಮರ್ಶೆಗೆ ಅವಕಾಶ ನೀಡಬೇಕು.

ಮಕ್ಕಳು ಬೆಳೆದಂತೆ ಪೋಷಕರೂ ಬೆಳೆಯಬೇಕು, ಬದಲಾಗಬೇಕು

ಬಾಲ್ಯದಲ್ಲಿ ಮಕ್ಕಳನ್ನು ಮುದ್ದಿಸಬೇಕು. ಮಧ್ಯವಯಸ್ಸಿನಲ್ಲಿ ಶಿಸ್ತನ್ನು ಬೆಳೆಸಬೇಕು ಅಂದರೆ ಇಲ್ಲಿ ನೀವು ಸ್ವಲ್ಪ ಖಡಕ್ಕಾಗಿ ಇರಬೇಕು. ಹದಿಹರೆಯದಲ್ಲಿ ಅವರಿಗೆ ಬೆಂಬಲ ನೀಡುವ ಸ್ನೇಹಿತನಾಗಿ ಬದಲಾಗಬೇಕು. ಈ ವಯಸ್ಸಿಗೆ ಸೂಕ್ತವಾದ ವಿಕಸನವು ಭಾವನಾತ್ಮಕ ದೂರವನ್ನು ತಡೆಯುತ್ತದೆ. ಪರಸ್ಪರ ಮುಕ್ತವಾಗಿ ಮಾತುಕತೆ ನಡೆಸಲು ಅವಕಾಶ ನೀಡುತ್ತದೆ.

ಮಕ್ಕಳು ನೋಡಿ ಕಲಿಯುವುದೇ ಹೆಚ್ಚು

ನಾವು ಮಕ್ಕಳಿಗೆ ಏನು ಹೇಳಿ ಕೊಡುತ್ತೇವೆ ಎನ್ನುವುದು ಖಂಡಿತವಾಗಿಯೂ ಮುಖ್ಯವಾಗಿರುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಮಕ್ಕಳಿಗೆ ಹೇಳಿಕೊಡುವ ಪಾಠವನ್ನು ನಾವೂ ಅನುಸರಿಸಬೇಕು. ಯಾಕೆಂದರೆ ಮಕ್ಕಳು ತಮ್ಮ ಸುತ್ತ ಮುತ್ತ ಏನು ನಡೆಯುತ್ತಿದೆ ಎನ್ನುವುದನ್ನು ನೋಡಿ ಕಲಿಯುತ್ತಾರೆ. ಪ್ರಾಮಾಣಿಕತೆ, ದಯೆ ಮತ್ತು ಪರಸ್ಪರ ಗೌರವದಂತಹ ಮೂಲ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಬೇಕಾದರೆ ಮೊದಲು ಪೋಷಕರು ಈ ಗುಣಗಳನ್ನು ಮಕ್ಕಳೆದುರು ತೋರಿಸಬೇಕು. ಸಹಾನುಭೂತಿಯ ವಾತಾವರಣವು ಮಗುವಿನ ನೈತಿಕ ಅಡಿಪಾಯವನ್ನು ಸ್ವಾಭಾವಿಕವಾಗಿ ರೂಪಿಸುತ್ತದೆ.

ಹೋಲಿಸಿ ಮಾತನಾಡುವುದು ದೊಡ್ಡ ತಪ್ಪು

ಎಲ್ಲಾ ಮಕ್ಕಳು ಒಂದೇ ರೀತಿ ಇರುವುದಿಲ್ಲ. ಮಕ್ಕಳು ಶೈಕ್ಷಣಿಕ ಹಿನ್ನೆಡೆ ಅಥವಾ ವೈಯಕ್ತಿಕ ವೈಫಲ್ಯಗಳನ್ನು ಎದುರಿಸಿದಾಗ ಅದನ್ನು ಸ್ವೀಕರಿಸುವ ಗುಣ ಮೊದಲು ಹೆತ್ತವರಿಗೆ ಬರಬೇಕು. ಅದು ಬಿಟ್ಟು ಅವರನ್ನು ಗೆಳೆಯರೊಂದಿಗೆ ಹೋಲಿಸಿ ಮಾತನಾಡಬಾರದು. ತಪ್ಪು ಮಾಡುವುದು ತಪ್ಪಲ್ಲ. ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಾಗುವುದಕ್ಕಾದರೂ ಮಕ್ಕಳು ತಪ್ಪು ಮಾಡಲೇ ಬೇಕು. ಹಾಗಾಗಿ ಮಕ್ಕಳು ಮಾಡುವ ಸಣ್ಣ ತಪ್ಪುಗಳನ್ನು ಮೂದಲಿಸುವ ಬದಲು ಪೋಷಕರು ಆ ತಪ್ಪನ್ನು ಸರಿಪಡಿಸುವ ಬಗ್ಗೆ ಮಕ್ಕಳ ಜೊತೆ ನಿಲ್ಲಬೇಕು. ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು.

ಪ್ರೀತಿ ವಾತ್ಸಲ್ಯ ಬಹಳ ಮುಖ್ಯ

ಪೋಷಕರು ಮಕ್ಕಳಿಗೆ ಶಿಸ್ತು ಕಲಿಸುವಾಗ ಕಟ್ಟುನಿಟ್ಟಾಗಿ ಇರಬೇಕು ನಿಜ, ಆದರೆ ಅದರ ಜೊತೆಗೆ ಪ್ರೀತಿ ವಾತ್ಸಲ್ಯವೂ ಇರಬೇಕು. ಇಲ್ಲವಾದರೆ ಬರೀ ಕಟ್ಟುನಿಟ್ಟಾದ ನಿಯಮಗಳು ಭಯವನ್ನು ಸೃಷ್ಟಿಸುತ್ತವೆ. ಮಕ್ಕಳಿಗೆ ಭಯದ ವಾತಾವರಣ ಅಲ್ಲ, ಪ್ರೀತಿಯ ಮಾರ್ಗದರ್ಶನದ ಅಗತ್ಯವಿರುತ್ತದೆ.ಹೀಗಾದಾಗ ಮಾತ್ರ ಮಕ್ಕಳು ತಾವು ಮಾಡಿದ ತಪ್ಪುಗಳನ್ನು ಮರೆಮಾಡುವುದಿಲ್ಲ. ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ.

ಮಗುವಿನ ಭವಿಷ್ಯವು ಬಾಹ್ಯ ಸಂಪತ್ತಿಗಿಂತ ಆಂತರಿಕ ಮೌಲ್ಯಗಳ ಮೇಲೆ ಅವಲಂಬಿತವಾಗಿದೆ ಎನ್ನುವುದನ್ನು ಚಾಣಾಕ್ಯರು ಒತ್ತಿ ಹೇಳಿದ್ದಾರೆ. ಕುತೂಹಲ, ವಯಸ್ಸಿಗೆ ಅನುಗುಣವಾಗಿ ಮಾರ್ಗದರ್ಶನ, ವೈಯಕ್ತಿಕ ಉದಾಹರಣೆ, ಸಮತೋಲಿತ ಶಿಸ್ತುಗಳನ್ನು ಸಂಯೋಜಿಸುವ ಮೂಲಕ, ಪೋಷಕರು ತಮ್ಮ ಮಕ್ಕಳನ್ನು ಜೀವನಲ್ಲಿ ಯಶಸ್ಸಿನ ದಾರಿಗೆ ತೆಗೆದುಕೊಂಡು ಹೋಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+