ಚೈತ್ರ ಮಾಸದ ವಾರದ ಪಂಚಾಂಗ: ಮಾ. 22ರಿಂದ 28
ಚೈತ್ರ ಮಾಸದ ಮಾ.22ರಿಂದ 28ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ವಾರಭವಿಷ್ಯ : ರಾಶಿಫಲ ಮಾ.22ರಿಂದ 28ರವರೆಗೆ]

ಮಾ.22. ರವಿವಾರ : ಅಶ್ವಿನಿ ನಕ್ಷತ್ರ. ನೂತನ ವಾಹನ ತೆಗೆದುಕೊಳ್ಳಲು ಮತ್ತು ಔಷಧೋಪಚಾರ ಆರಂಭಿಸಲು ಉತ್ತಮ. ದೂರ ಪ್ರಯಾಣಕ್ಕೆ ತುಂಬಾ ಶುಭಕರ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಮಾ.23. ಸೋಮವಾರ : ಭರಣಿ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಮಾ.24. ಮಂಗಳವಾರ : ಕೃತ್ತಿಕಾ. ದೂರ ಪ್ರಯಾಣದಿಂದ ತೊಂದರೆ.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಮಾ.25. ಬುಧವಾರ : ರೋಹಿಣಿ. ತಾರಸಿ ಹಾಕಿಸಲು ಮತ್ತು ಕಚೇರಿಯ ಮುಖ್ಯ ಕೆಲಸಕ್ಕೆ ಉತ್ತಮ. ದೂರ ಪ್ರಯಾಣದಿಂದ ಶುಭಕರ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಮಾ.26. ಗುರುವಾರ : ಮೃಗಶಿರಾ. ಹೊಸ ಮನೆಯ ಚೌಕಟ್ಟು ಕೂಡಿಸಲು ಉತ್ತಮ. ದೂರ ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಮಾ.27. ಶುಕ್ರವಾರ : ಆರಿದ್ರಾ. ದೂರ ಪ್ರಯಾಣದಿಂದ ಶುಭಕರ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಮಾ.28. ಶನಿವಾರ : ಪುನರ್ವಸು. ವಿದ್ಯುತ್ ಉಪಕರಣ ತೆಗೆದುಕೊಳ್ಳಲು ಉತ್ತಮ. ರಾಮನವಮಿ. ದೂರ ಪ್ರಯಾಣದಿಂದ ಶುಭಕರ. ['ರಾಮ'ನಾಮ ಪಾಯಸಕ್ಕೆ 'ಶ್ಯಾಮ' ನಾಮ ಸಕ್ಕರೆ!]
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ರವಿವಾರ, ಬುಧವಾರ, ಗುರುವಾರ, ಶನಿವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.
ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಅನಿವಾರ್ಯವಿದ್ದರೆ ಮಾತ್ರ ಮಾಡಿಕೊಳ್ಳಬಹುದು.
ಈ ವಾರದ ಗ್ರಹಗತಿ : ಮೇಷ: ಶುಕ್ರ+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಕರ್ಕ: ಗುರು. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಕುಂಭ: ಬುಧ. ಮೀನ: ಕೇತು+ರವಿ+ಮಂಗಳ.












Click it and Unblock the Notifications