ಕುಂಭ ನವಾಂಶಕ್ಕೆ ಗುರು ಸಂಚಾರ; ಸೆ. 25ರೊಳಗೆ ರಾಜ್ಯ ಸರಕಾರಕ್ಕೆ ಸಂಚಕಾರ?!
ಈ ಬಾರಿ ಕರ್ನಾಟಕ ರಾಜಕಾರಣದಲ್ಲಿ ಗುರು ಗ್ರಹದ ಸಂಚಾರ ಸಂಚಲನ ಉಂಟು ಮಾಡುತ್ತದೆಯೇ? ಈ ಪ್ರಶ್ನೆಗೆ ಜ್ಯೋತಿಷಿಗಳು 'ಹೌದು' ಎನ್ನುತ್ತಿದ್ದಾರೆ. ಈ ಹಿಂದೆ ಚಂದ್ರಗ್ರಹಣ ಸಂಭವಿಸಿದ ನಲವತ್ತೆಂಟು ದಿನಗಳ ಒಳಗಾಗಿ ರಾಜ್ಯದಲ್ಲಿನ ಮೈತ್ರಿ ಸರಕಾರ ಬಿದ್ದು ಹೋಗುತ್ತದೆ ಎಂಬ ರೀತಿಯಲ್ಲಿ ಒನ್ ಇಂಡಿಯಾ ಕನ್ನಡದ ಜತೆ ಮಾತನಾಡುವಾಗ ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದರು.
ಇದೀಗ ಗುರು ಗ್ರಹವು ಕುಂಭ ರಾಶಿಯನ್ನು ಪ್ರವೇಶ ಮಾಡುವವನಿದ್ದು ಸೆಪ್ಟೆಂಬರ್ ಇಪ್ಪತ್ತೈದನೇ ತಾರೀಕು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಭಾರೀ ಗಂಡಾಂತರ ಎದುರಾಗಲಿದೆ. ಆ ಸಮಯದೊಳಗೆ ಈಗಿನ ಸರಕಾರ ಪತನವಾದರೂ ಅಚ್ಚರಿಯಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ ಜ್ಯೋತಿಷಿಗಳು.
ಈ ವಿಚಾರವಾಗಿ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಮಾತನಾಡಿಸಿದಾಗ, " ಗುರು ಗ್ರಹವು ಕುಂಭ ನವಾಂಶ ಪ್ರವೇಶ ಮಾಡುವವನಿದ್ದು, ಈಗಿನ ಬಿಜೆಪಿ ಸರಕಾರ ಪತನ ಆಗುವ ಸೂಚನೆಗಳು ಇರುವುದು ನಿಜ. ಆದರೆ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಉಳಿಸಿಕೊಳ್ಳಬಹುದು. ಆದರೆ ಅದು ಕೂಡ ಬಹಳ ಸಮಯ ಸಾಧ್ಯವಿಲ್ಲ. ದಯವಿಟ್ಟು ಇದಕ್ಕಿಂತ ಹೆಚ್ಚಿಗೆ ನನ್ನನ್ನು ಕೇಳಬೇಡಿ" ಎಂದರು.

ಕರ್ನಾಟಕ ರಾಜಕೀಯದ ಈಚೆಗಿನ ಬೆಳವಣಿಗೆ ಹಾಗೂ ಜ್ಯೋತಿಷ್ಯ ರೀತಿಯ ಭವಿಷ್ಯ ಜತೆಜತೆಗೆ ಸಾಗುತ್ತಿರುವಂತೆ ಕಾಣುತ್ತಿದೆ. ರಾಜ್ಯದ ಪ್ರಮುಖ ಪಕ್ಷಗಳಲ್ಲಿ ಇರುವ ನಾಯಕರು ಕೆಲವರಿಗೆ ಜ್ಯೋತಿಷ್ಯದ ಮೇಲೆ ಇರುವ ನಂಬಿಕೆ ಇದಕ್ಕೆ ಕಾರಣ. ಆದ್ದರಿಂದಲೇ ಸರಕಾರ ರಚನೆ, ವಿಶ್ವಾಸ ಮತ ಮಂಡನೆ, ಸಂಪುಟ ರಚನೆ, ವಿಸ್ತರಣೆ ಇತ್ಯಾದಿಯನ್ನು ಜ್ಯೋತಿಷ್ಯವನ್ನು ನಂಬಿಯೇ ಮಾಡುತ್ತಿದ್ದಾರೆ.
ಯಾವುದೇ ಸರಕಾರದ ಅಳಿವು- ಉಳಿವು ಪಂಚಾಂಗದಿಂದ ನಿರ್ಧಾರ ಆಗುತ್ತದೆ ಎಂಬ ನಂಬಿಕೆ ಒನ್ ಇಂಡಿಯಾ ಕನ್ನಡದ್ದಲ್ಲ. ಆದರೆ ಈ ಹಿಂದಿನ ಹಲವು ಉದಾಹರಣೆಗಳು ಜ್ಯೋತಿಷ್ಯಕ್ಕೂ ರಾಜಕಾರಣದಲ್ಲಿ ಒಂದು ಸ್ಥಾನವನ್ನು ಒದಗಿಸಿಕೊಟ್ಟಿದೆ. ಆದ್ದರಿಂದ ಜ್ಯೋತಿಷಿಗಳ ಅಭಿಪ್ರಾಯಕ್ಕೂ ಒಂದು ವೇದಿಕೆ ಒದಗಿಸಲಾಗುತ್ತಿದೆ, ಅಷ್ಟೆ.
-
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು -
Job Resignation: ಇರೋ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಕೇಳಿಕೊಳ್ಳಬೇಕಾದ 17 ಪ್ರಶ್ನೆಗಳಿವು -
KSRTC: ಕನಕಪುರ-ಬೆಂಗಳೂರು ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ, 20 ವರ್ಷದ ಬಳಿಕ 4 ಬಸ್ ಸಂಚಾರ -
ಪತಿ ವಿಜಯ್ ದೇವರಕೊಂಡ ಜೊತೆ ಮೊದಲ ಬಾರಿಗೆ ತವರಿಗೆ ಬಂದ ರಶ್ಮಿಕಾ: ತಂದೆಯಿಂದ ಐಷಾರಾಮಿ ಬಂಗಲೆ ಉಡುಗೊರೆ












Click it and Unblock the Notifications