2022: ಅತೀಂದ್ರಿಯ ಶಕ್ತಿಯ ಅಂಧ ಮಹಿಳೆ ಬಾಬಾ ವಂಗಾ ಭೀಕರ ಭವಿಷ್ಯ
ತನ್ನ ಹನ್ನೆರಡನೇ ವರ್ಷಕ್ಕೆ ಅಂಧತ್ವಕ್ಕೆ ಒಳಗಾದ, ಬಲ್ಗೇರಿಯಾದ ಮಹಿಳೆ ಬಾಬಾ ವಂಗಾ ನುಡಿದಿದ್ದಾರೆ ಎಂದೇ ನಂಬಲಾಗುವ ಮುಂದಿನ ವರ್ಷದ ಭವಿಷ್ಯ ಹೊರಬಿದ್ದಿದೆ. ಇದುವರೆಗೆ ಆಕೆ ನುಡಿದ ಭವಿಷ್ಯವೆಲ್ಲವೂ ಬಹುತೇಕ ನಿಜವಾಗಿರುವುದರಿಂದ ಆಕೆಯ ಭವಿಷ್ಯದ ಬಗ್ಗೆ ಜನರಿಗೆ ನಂಬಿಕೆ ಮತ್ತು ಆಸಕ್ತಿ ಜಾಸ್ತಿ.
ಅಮೆರಿಕಾದ ಮೇಲೆ ಭಯೋತ್ಪಾದಕರ ದಾಳಿ, ರಾಜಕುಮಾರಿ ಡಯಾನ ಸಾವು, ವಿಶ್ವದ ದೊಡ್ಡಣ್ಣನ ಪ್ರಥಮ ಪ್ರಜೆಯಾಗಿ ಕಪ್ಪು ವರ್ಣೀಯರೊಬ್ಬರ ಆಯ್ಕೆ (ಬರಾಕ್ ಒಬಾಮ) , ಥೈಲ್ಯಾಂಡ್ ಸುನಾಮಿ ಸೇರಿದಂತೆ ಈಕೆ ನುಡಿದಿದ್ದ ಭವಿಷ್ಯಗಳೆಲ್ಲವೂ ನಿಜವಾಗಿದ್ದವು.
ಸುಮಾರು ಎರಡೂವರೆ ದಶಕಗಳ ಹಿಂದೆಯೇ ಬಾಬಾ ವಂಗಾ ಮೃತ ಪಟ್ಟಿದ್ದರೂ, ಮುಂದಿನ 5059 ಇಸವಿಯವರೆಗೂ ಈಕೆ ಭವಿಷ್ಯವನ್ನು ಬರೆದಿಟ್ಟಿದ್ದಾಳೆ ಎಂದೇ ನಂಬಲಾಗುತ್ತಿದೆ. 5059ಕ್ಕೆ ಜಗತ್ತು ಕೊನೆಗೊಳ್ಳಲಿದೆ ಎನ್ನುವ ಸಂದೇಶವನ್ನೂ ಈಕೆ ಬರೆದಿಟ್ಟಿದ್ದಾಳೆ.
ಜಲಪ್ರಳಯ, ಹೊಸ ವೈರಸ್, ಮಿಡತೆ ದಾಳಿ, ಏಲಿಯನ್ಸ್ ದಾಳಿ ಸೇರಿದಂತೆ ಮುಂದಿನ ವರ್ಷದ ಈಕೆಯ ಭವಿಷ್ಯ, ನೆಮ್ಮದಿಯನ್ನು ಹಾಳು ಮಾಡುವಂತಿದೆ. ಮುಂದಿನ ವರ್ಷದಲ್ಲಿ ಜನರು ಸ್ಕ್ರೀನ್ ಮುಂದೆಯೇ ಹೆಚ್ಚಿನ ಸಮಯವನ್ನು ಕಳೆಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎನ್ನುವ ಭವಿಷ್ಯವನ್ನೂ ಈಕೆ ನುಡಿದಿದ್ದಾಳೆ. ಆಕೆಯ ಭವಿಷ್ಯದ ಒಟ್ಟಾರೆ ಸಾರಾಂಶ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಭೂಕಂಪದಿಂದ ಸುನಾಮಿ
ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಭೂಕಂಪದಿಂದ ಸುನಾಮಿ ಅಪ್ಪಳಿಸಲಿದೆ. ಶಾಂತವಿರುವ ಸಮುದ್ರ ಜನರ ಪಾಲಿಗೆ ನರಕ ಸೃಷ್ಟಿಸಲಿದೆ. ಭಾರತವೂ ಸೇರಿದಂತೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಇಂಡೋನೇಷ್ಯಾ ತೀರ ಪ್ರದೇಶಗಳ ಮೇಲೆ ಸುನಾಮಿ ಅಪ್ಪಳಿಸಲಿದೆ ಎನ್ನುವ ಭವಿಷ್ಯವನ್ನು ಬಾಬಾ ವಂಗಾ ಬರೆದಿದ್ದಾರೆ. ಬಲ್ಗೇರಿಯಾದ ದೇವತಾ ಮಹಿಳೆಯೆಂದೇ ಕರೆಯಲ್ಪಡುವ ಈಕೆಯ ಭವಿಷ್ಯದ ಪ್ರಕಾರ ಅನ್ಯಗ್ರಹದ ಜೀವಿಯ ಕಾಟ, ಭೂಲೋಕಕ್ಕೆ ತಟ್ಟಲಿದೆ.

ಬಾಬಾ ವಂಗಾ ಎಂದೇ ಹೆಸರಾಗಿರುವ ಈಕೆಯ ಹೆಸರು ವಾಂಜಜೆಲಿಯಾ ಗುಶ್ವೇರೋವಾ
ಬಾಬಾ ವಂಗಾ ಎಂದೇ ಹೆಸರಾಗಿರುವ ಈಕೆಯ ನಿಜ ಹೆಸರು ವಾಂಜಜೆಲಿಯಾ ಗುಶ್ವೇರೋವಾ ಎಂದು. ಬಾಲ್ಕನ್ಸ್ ನಾಸ್ಟ್ರಾಡಾಮಸ್ ಎಂದೂ ಹೆಸರು ಪಡೆದಿರುವ ವಂಗಾ, 2022ರಲ್ಲಿ Oumuamua ಎಂದು ಕರೆಯಲ್ಪಡುವ ಅನ್ಯಗ್ರಹದ ಜೀವಿಗಳು ಭೂಮಿಗೆ ಬರಲಿದೆ. ಕಾಲಕ್ರಮೇಣ ಇದು ಜನರ ಮೇಲೆ ದಾಳಿ ನಡೆಸಲಿವೆ. ಮನುಷ್ಯ ಮತ್ತು ಏಲಿಯನ್ಸ್ ನಡುವೆ ಭೀಕರ ಸಮರವೇ ನಡೆಯಲಿದೆ ಎಂದು ಆಕೆಯ ಭವಿಷ್ಯದಲ್ಲಿ ಹೇಳಲಾಗಿದ್ದರೂ, ಈ ಸಮರದ ಕೊನೆಯ ಜಯ ಯಾರಿಗೆ ಮನುಷ್ಯರಿಗೋ ಅಥವಾ ಏಲಿಯನ್ಸ್ ಗಳಿಗೋ ಎನ್ನುವುದು ಹೇಳಲಾಗಿಲ್ಲ.

ಮುಂದಿನ ವರ್ಷ ಇನ್ನಷ್ಟು ಜಲಕಂಟಕ ಎದುರಾಗಲಿದೆ ಎಂದ ವಂಗಾಳ ಭವಿಷ್ಯ
ಮನುಕುಲಕ್ಕೆ ಎಲ್ಲಿಲ್ಲದ ಕಾಟವನ್ನು ಕೊಡುತ್ತಿರುವ ಕೊರೊನಾ ಹಾವಳಿ ಮುಂದಿನ ವರ್ಷವೂ ಮುಗಿಯದು. ಸೈಬೀರಿಯಾದಲ್ಲಿ ಇನ್ನೊಂದು ವೈರಸ್ ಹುಟ್ಟಲಿದೆ. ತಾಪಮಾನದಲ್ಲಿನ ಬದಲಾವಣೆಯಿಂದ ಈ ವೈರಸ್ ಜನ್ಮತಾಳಲಿದ್ದು ಜಗತ್ತಿಗೆ ಹರಡಲಿದೆ. ಸೂಕ್ತ ಕ್ರಮ ತೆಗೆದುಕೊಳ್ಳದೇ ಹೋದರೆ, ಇದರ ನಿಯಂತ್ರಣ ಇಡೀ ವಿಶ್ವಕ್ಕೆ ಸವಾಲಾಗಲಿದೆ. ಈ ವರ್ಷ ಕಂಡ ಅತಿವೃಷ್ಟಿ ಏನೇನೂ ಅಲ್ಲ, ಮುಂದಿನ ವರ್ಷ ಇನ್ನಷ್ಟು ಜಲಕಂಟಕ ಎದುರಾಗಲಿದೆ ಎಂದು ವಂಗಾಳ ಭವಿಷ್ಯದಲ್ಲಿ ನುಡಿಯಲಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಭಾಗದಲ್ಲಿ ಮಿಡತೆಗಳ ಹಾವಳಿ
ಅಬ್ಬರಿಸಿ ಬರುವ ಸಾಗರದ ಅಲೆಗಳಿಂದ ಭಾರತದ ಕರಾವಳಿ ಪ್ರದೇಶದ ಜನರ ಬದುಕು ದಿಕ್ಕಾಪಾಲಾಗಲಿದೆ. ಒಂದು ಕಡೆ ಸುನಾಮಿಯಾದರೆ, ಇನ್ನೊಂದು ಕಡೆ ಅನಾವೃಷ್ಟಿ ಉಂಟಾಗಲಿದೆ. ಮುಂದಿನ ವರ್ಷ ಮಿಡತೆಗಳ ಹಾವಳಿ ಹೆಚ್ಚಾಗಲಿದೆ. ಇದರಿಂದ ಫಸಲು ರೈತರಿಗೆ ಸೇರದಂತಾಗುತ್ತದೆ. ಪ್ರಮುಖವಾಗಿ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಭಾಗದಲ್ಲಿ ಮಿಡತೆಗಳ ಹಾವಳಿ ವಿಪರಿಮೀತವಾಗಲಿದೆ. ಭಾರತ ಸೇರಿದಂತೆ ಜಗತ್ತಿನ ಪ್ರಮುಖ ನಗರಗಳಲ್ಲಿ ನೀರಿನಾ ಹಾಹಾಕಾರ ಏಳಲಿದೆ. ನದಿ ನೀರು ಕಲುಷಿತಗೊಳ್ಳಲಿದೆ ಎನ್ನುವ ಭವಿಷ್ಯವನ್ನೂ ಬಾಬಾ ವಂಗಾ ತನ್ನ ಭವಿಷ್ಯವಾಣಿಯಲ್ಲಿ ಹೇಳಿದ್ದಾಳೆ ಎಂದು ವರದಿಯಾಗುತ್ತಿದೆ.












Click it and Unblock the Notifications