Darshan Thoogudeepa: ದರ್ಶನ್ ವಿಚಾರದಲ್ಲಿ ನಿಜವಾಯ್ತು ಬೀರಲಿಂಗೇಶ್ವರ ದೈವ ನುಡಿದ ಭವಿಷ್ಯ...
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಆರೋಗ್ಯ ಸರಿಯಾಗಿಲ್ಲ. ಹೀಗಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಸರ್ಜರಿ ಮಾಡಬೇಕು ಎನ್ನುವ ಕಾರಣಕ್ಕೆ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಈ ಹಿಂದೆ ದರ್ಶನ್ ಅದೆಷ್ಟೇ ಪ್ರಯತ್ನ ಪಟ್ಟರೂ ಜೈಲಿನಿಂದ ಹೊರಬರುವುದು ಸುಲಭವಾಗಿರಲಿಲ್ಲ. ಇದರಿಂದಾಗಿ ದರ್ಶನ್ ಯಾವಾಗ ಜೈಲಿನಿಂದ ಹೊರಬರುತ್ತಾರೆ ಎನ್ನುವ ಬಗ್ಗೆ ಬಳ್ಳಾರಿಯ ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿತ್ತು. ಈ ಭವಿಷ್ಯ ಸದ್ಯ ನಿಜವಾಗಿದೆ.
ಹೌದು... ದರ್ಶನ್ ಆರೋಗ್ಯ ಕಾರಣಕ್ಕೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಆದರೆ ಕೋರ್ಟ್ ನೀಡಿದ ಆರು ವಾರಗಳ ಒಳಗೆ ದರ್ಶನ್ ಸರ್ಜರಿ ಮಾಡಿಸಿಕೊಂಡು ಜೈಲಿಗೆ ವಾಪಸ್ ಹೋಗಬೇಕಿದೆ. ಆದರೆ ಕೋರ್ಟ್ ನೀಡಿದ ಆರು ವಾರಗಳಲ್ಲಿ 12 ದಿನಗಳು ಕಳೆದು ಹೋಗಿವೆ. ಆದರೀನ್ನೂ ಕೂಡ ದರ್ಶನ್ ಸರ್ಜರಿ ಮಾಡಿಸಿಕೊಂಡಿಲ್ಲ. ಸರ್ಜರಿ ಮಾಡಿದರೆ ವಾಸಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ದರ್ಶನ್ ಜಾಮೀನು ಅವಧಿ ಪೂರ್ಣಗೊಳ್ಳುವುದರ ಒಳಗಾಗಿ ಅವರಿಗೆ ಸರ್ಜರಿ ಆಗಬೇಕಿದೆ. ಇಲ್ಲವಾದಲ್ಲಿ ದರ್ಶನ್ ಆರು ವಾರಗಳ ಅವಧಿಗೂ ಮುನ್ನ ಜೈಲಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

ಇದರಿಂದಾಗಿ ದರ್ಶನ್ ಜೈಲಿನಿಂದ ಹೊರಬಂದ ಮೇಲೋ ನೆಮ್ಮದಿ ಇಲ್ಲದಂತಾಗಿದೆ. ದರ್ಶನ್ ಅವರಿಗೆ ತಮ್ಮ ಆರೋಗ್ಯದ ಚಿಂತೆ ಒಂದೆಡೆಯಾದರೆ, ಜೈಲಿಗೆ ಹೋಗುವ ಚಿಂತೆ ಮತ್ತೊಂದೆಡೆ ಕಾಡ ತೊಡಗಿದೆ. ಜೈಲಿನಲ್ಲಿ ಇರುವಾಗ ನಿದ್ದೆ ಮಾಡದ ದಾಸ ಜೈಲಿನಿಂದ ಹೊರ ಬಂದ ಬಳಿಕವೂ ನಿದ್ದೆಗೆ ಜಾರದಂತಾಗಿದೆ.
ದರ್ಶನ್ ಹೊರಬರಲೆಂದು ದರ್ಶನ್ ಪತ್ನಿ ಭೇಟಿ ನೀಡದ ದೇವರಿಲ್ಲ. ಪ್ರಮುಖ ಶಕ್ತಿದೇವರಿಗೆ ಹರಕೆ ಹೊತ್ತು, ನವಗ್ರಹಗಳ ಶಾಂತಿ ಹೋಮ ಮಾಡಿಸಿ ಗಂಡನ ದರ್ಶನಕ್ಕಾಗಿ ಬೇಡಿಕೊಂಡಿದ್ದರು. ಅಭಿಮಾನಿಗಳು ಕೂಡ ದೇವರ ಮೊರೆ ಹೋಗಿ ದರ್ಶನ್‌ಗಾಗಿ ಸಾಕಷ್ಟು ಪೂಜೆಗಳನ್ನು ಮಾಡಿಸಿದ್ದರು. ದರ್ಶನ್ ಪತ್ನಿ ಹಾಗೂ ಅಭಿಮಾನಿಗಳ ಪೂಜಾ ಫಲ ಈಗ ಸಿಕ್ಕಿದೆ. ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ. ಈ ವಿಚಾರದಲ್ಲಿ ಅನೇಕ ಜ್ಯೋತಿಷಿಗಳು ನುಡಿದ ಭವಿಷ್ಯದಲ್ಲಿ ಬಳ್ಳಾರಿಯ ಬೀರಲಿಂಗೇಶ್ವರ ದೈವ ನುಡಿದ ಭವಿಷ್ಯ ಕೂಡ ನಿಜವಾಗಿದೆ.
ದರ್ಶನ್ ವಿಚಾರದಲ್ಲಿ ನಿಜವಾಯ್ತು ಬೀರಲಿಂಗೇಶ್ವರ ದೈವ ನುಡಿದ ಭವಿಷ್ಯ
ಕೊಲೆ ಆರೋಪಿ ದರ್ಶನ್ ಬಿಡುಗಡೆ ಬಗ್ಗೆ ಅವರ ಅಭಿಮಾನಿಗಳು ಫೋಟೋ ಹಿಡಿದು ದೈವದ ಮೊರೆ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗೆ ಬಳ್ಳಾರಿಯ ಬಲಕಲ್ ಅನ್ನೋ ಗ್ರಾಮದ ಬೀರಲಿಂಗೇಶ್ವರ ದೈವದ ಬಳಿ ದರ್ಶನ್ ಬಿಡುಗಡೆ ಬಗ್ಗೆ ಅಭಿಮಾನಿಗಳು ದಿನಾಂಕ ಕೇಳಿದ್ದರು. ಈ ವೇಳೆ ಮೂರು ತಿಂಗಳ ಬಳಿಕ ದರ್ಶನ್ ಜೈಲಿನಿಂದ ಹೊರಬರುತ್ತಾರೆ ಅಂತಾ ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿತ್ತು.
ದರ್ಶನ್ ಭಾವಚಿತ್ರದ ಮೇಲೆ ತಲೆಯಿಟ್ಟು ದೈವ ನುಡಿದ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ದರ್ಶನ್ ಬಿಡುಗಡೆ ಬಗ್ಗೆ ದೈವ ಹೇಳಿದ ಮಾತಿನ ವಿಡಿಯೋವನ್ನು ಮಾಡಿ ಅಭಿಮಾನಿಗಳು ತಮ್ಮ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದರು. ಸದ್ಯ ಈ ದೈವ ನುಡಿದ ಭವಿಷ್ಯ ನಿಜವಾಗಿದೆ.
ದರ್ಶನ್ ಮೂರು ತಿಂಗಳಲ್ಲಿ ಜೈಲಿನಿಂದ ಹೊರಬರುತ್ತಾರೆ. ಆದರೆ ಅವರು ಜೈಲಿನಿಂದ ಹೊರಬಂದ ಬಳಿಕವೂ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ ಎಂದು ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿತ್ತು. ಇದು ದರ್ಶನ್ ವಿಚಾರದಲ್ಲಿ ಅಕ್ಷರಶ: ನಿಜವಾಗಿದೆ. ಹೀಗಾಗಿ ಬೀರಲಿಂಗೇಶ್ವರ ದೈವದ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗಿದೆ.
ಒಟ್ಟಿನಲ್ಲಿ ಜೈಲಿನಿಂದ ಹೊರಬಂದಿರುವ ದರ್ಶನ್ ಸರ್ಜರಿ ಮಾಡಿಸಿಕೊಳ್ತಾರಾ? ಇಲ್ವಾ? ಜೈಲಿಗೆ ವಾಪಾಸ್ ಹೋಗ್ತಾರಾ? ಸರ್ಜರಿ ಮಾಡಿಸಿಕೊಂಡು ಇನ್ನಷ್ಟು ದಿನ ಜೈಲಿನಿಂದ ಹೊರಗಡೆ ಇರಲು ಸಮಯ ತೆಗೆದುಕೊಂಡು ಆಸ್ಪತ್ರೆಯಲ್ಲಿ ಉಳಿಯುತ್ತಾರಾ ಕಾದು ನೋಡಬೇಕಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications