Samsaptak Yoga 2024: ಶನಿ ಮತ್ತು ಸೂರ್ಯ ಗ್ರಹಗಳಿಂದ ಸಮಾಸಪ್ತ ಯೋಗ- ಈ 3 ರಾಶಿಯವರು ಎಚ್ಚರ!
ಶನಿಯು 30 ವರ್ಷಗಳ ನಂತರ ಸಂಸಪ್ತಕ ಯೋಗವನ್ನು ಮಾಡುತ್ತಾನೆ: ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ನಿರ್ದಿಷ್ಟ ಸಮಯದದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಈ ವೇಳೆ ಮಂಗಳಕರ ಮತ್ತು ಅಶುಭ ಯೋಗವನ್ನು ರೂಪಿಸುತ್ತವೆ. ಇಂತಹ ಯೋಗಗಳ ಪರಿಣಾಮವನ್ನು ಎಲ್ಲಾ ರಾಶಿಗಳ ಮೇಲೆ ಕಾಣಬಹುದು.
ಶನಿ ಗ್ರಹಗಳಲ್ಲಿ ಅತ್ಯಂತ ಕೆಟ್ಟ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇದು ಒಬ್ಬ ವ್ಯಕ್ತಿ ಕಾರ್ಯಗಳಿಗೆ ಅನುಗುಣವಾಗಿ ಫಲ ನೀಡುವ ದೇವರು ಎನ್ನಲಾಗುತ್ತದೆ. ಹೀಗಾಗಿ ಶನಿ ದೇವನ ಕೋಪಕ್ಕೆ ಗುರಿಯಾಗದೇ ಇರಲು ಜನ ಭಯಸುತ್ತಾರೆ.
ಅಂದಹಾಗೆ, ಗ್ರಹಗಳ ಅಧಿಪತಿ ಎಂದು ಪರಿಗಣಿಸಲ್ಪಟ್ಟಿರುವ ಸೂರ್ಯ ಆಗಸ್ಟ್ 16 ರಂದು ಸಿಂಹ ರಾಶಿಗೆ ಪ್ರವೇಶಿಸುತ್ತದೆ. ಹಾಗೇ ಶನಿಯು 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಹೀಗಾಗಿ ಈ ಎರಡು ಗ್ರಹಗಳು ಪರಸ್ಪರ 180 ಡಿಗ್ರಿಗಳಷ್ಟು ದೂರದಲ್ಲಿದ್ದು 7ನೇ ಮನೆಯನ್ನು ಆಕ್ರಮಿಸಿಕೊಳ್ಳುತ್ತವೆ.
ಪರಿಣಾಮವಾಗಿ ಸಮಾಸಪ್ತ ಯೋಗವು ರೂಪುಗೊಳ್ಳುತ್ತದೆ. ಈ ಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಾಣಬಹುದಾದರೂ 3 ರಾಶಿಯವರು ಸ್ವಲ್ಪ ಎಚ್ಚರದಿಂದಿರಬೇಕು. ಅದೂ ಕೂಡ ಹಣದ ವಿಷಯಗಳಲ್ಲಿ ಮತ್ತು ಆರೋಗ್ಯದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ಹಾಗಾದರೆ ಸಮಾಸಪ್ತ ಯೋಗದಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂಬುದನ್ನು ಈಗ ತಿಳಿಯೋಣ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಸಮಾಸಪ್ತ ಯೋಗ ಸ್ವಲ್ಪ ಹಾನಿಕಾರಕವಾಗಿದೆ. ಈ ಸಮಯದಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಖರ್ಚುಗಳನ್ನು ಎದುರಿಸಬೇಕಾಗುತ್ತದೆ. ಅನಗತ್ಯ ಒತ್ತಡವನ್ನು ಎದುರಿಸಬಹುದು. ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಹೆಚ್ಚಾಗಬಹುದು.
ತಂದೆಯೊಂದಿಗಿನ ಸಂಬಂಧ ಹದಗೆಡಬಹುದು. ಅದೃಷ್ಟದ ಬೆಂಬಲದ ಕೊರತೆಯಿಂದಾಗಿ ಕೆಲಸ ಮತ್ತು ವ್ಯವಹಾರದಲ್ಲಿ ನಿರೀಕ್ಷಿಸಿದ್ದನ್ನು ಹೆಚ್ಚಿನ ಹಣ ಪಡೆಯಲು ವಿಫಲವಾಗಬಹುದು. ಜೊತೆಗೆ ಕುಟುಂಬ ಸದಸ್ಯರೊಂದಿಗೆ ನೀವು ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು.

ಮಕರ ರಾಶಿ
ಸಮಾಸಪ್ತ ಯೋಗ ಮಕರ ರಾಶಿಯವರಿಗೆ ಸ್ವಲ್ಪ ಕೆಟ್ಟದಾಗಿರುತ್ತದೆ. ಈ ಸಮಯದಲ್ಲಿ ಯಾವುದೋ ಒತ್ತಡ ನಿಮ್ಮನ್ನು ಕಾಡುತ್ತದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಎದುರಾಗುತ್ತವೆ. ಈ ಸಮಯದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸುವುದು ಉತ್ತಮ. ಕೆಲವರು ಆರ್ಥಿಕ ನಷ್ಟವನ್ನು ಎದುರಿಸಬಹುದು.
ನೌಕರರು ಕಚೇರಿಯಲ್ಲಿ ಅಜಾಗರೂಕತೆಯಿಂದ ವರ್ತಿಸುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ಆರೋಗ್ಯ ಹದಗೆಡಬಹುದು. ಈ ಅವಧಿಯಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು.

ಮೀನ ರಾಶಿ
ಮೀನ ರಾಶಿಯವರಿಗೆ ಸಮಾಸಪ್ತ ಯೋಗ ಅಶುಭ ಪರಿಣಾಮಗಳನ್ನು ಉಂಟು ಮಾಡಬಹುದು. ಮುಖ್ಯವಾಗಿ ಈ ಸಮಯದಲ್ಲಿ ಧನಹಾನಿಯಾಗುವ ಸಂಭವವಿರುವುದರಿಂದ ಹಣದ ವಿಚಾರದಲ್ಲಿ ಜಾಗರೂಕರಾಗಿರಬೇಕು. ವ್ಯಾಪಾರಸ್ಥರಿಗೆ ವ್ಯಾಪಾರ ಸ್ವಲ್ಪ ಮಂದವಾಗಿರುತ್ತದೆ.
ಆರೋಗ್ಯ ಹದಗೆಡಬಹುದು. ಮಾತನ್ನು ನಿಯಂತ್ರಿಸುವುದು ತುಂಬಾ ಒಳ್ಳೆಯದು. ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಹಾಳುಮಾಡುತ್ತದೆ. ನೀವು ಕಂಡಿದ್ದನ್ನು ತಿನ್ನುವುದನ್ನು ತಪ್ಪಿಸಿ. ಯಾರಿಗೂ ಸಾಲ ಕೊಡಬೇಡಿ. ಇಲ್ಲದಿದ್ದರೆ ಹಣ ಕಳೆದುಕೊಳ್ಳಬಹುದು. ಒಟ್ಟಿನಲ್ಲಿ ಈ ಸಮಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿರುತ್ತದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ)












Click it and Unblock the Notifications