Rahu Transit 2024: ರಾಹು ನಕ್ಷತ್ರ ಪರಿವರ್ತನ- ಈ ರಾಶಿಗೆ ಮಾನಸಿಕ ಒತ್ತಡ, ಲಾಭದಲ್ಲಿ ನಷ್ಟ!

ನವಗ್ರಹಗಳಲ್ಲಿ ಶನಿ ನಂತರ ರಾಹುವನ್ನು ಅತ್ಯಂತ ಕೆಟ್ಟ ಗ್ರಹ ಎಂದು ಪರಿಗಣಿಸಲಾಗುತ್ತದೆ. ಇದು ಕರ್ಮಗಳಿಗೆ ಫಲ ನೀಡುವ ದೇವರು. ಎಲ್ಲಾ ಗ್ರಹಗಳಂತ ರಾಹು ಕೂಡ ಸಂಚಾರದ ವೇಳೆ ನಕ್ಷತ್ರಗಳನ್ನು ಬದಲಾಯಿಸುತ್ತಾನೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡುಬರಲಿದೆ.

ನವೆಂಬರ್ 10 ರಂದು ರಾಹು ಗ್ರಹ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಹಂತವನ್ನು ಪ್ರವೇಶಿಸುತ್ತಿದೆ. ಇದರ ನಂತರ ರಾಹು ರೇವತಿ ನಕ್ಷತ್ರವನ್ನು ಪ್ರವೇಶಿಸಲಿದೆ. ಪ್ರತಿಯೊಂದು ಗ್ರಹದಂತೆ, ರಾಹು ಕೂಡ ನಕ್ಷತ್ರಪುಂಜ ಅಥವಾ ರಾಶಿಯನ್ನು ಬದಲಾಯಿಸಿದಾಗ, ಅದರ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಉತ್ತರ ಭಾದ್ರಪದ ನಕ್ಷತ್ರದಲ್ಲಿ ರಾಹು ಗ್ರಹದ ಬದಲಾವಣೆ ಕೆಲವು ರಾಶಿಗಳಿಗೆ ಅಶುಭವಾಗಲಿದೆ. ಹಾಗಾದರೆ ಉತ್ತರ ಭಾದ್ರಪದ ನಕ್ಷತ್ರದಲ್ಲಿ ರಾಹುವಿನ ಸಂಕ್ರಮಣದಿಂದ ಯಾವ ರಾಶಿಚಕ್ರದವರು ಜಾಗರೂಕರಾಗಿರಬೇಕು ಎಂಬುದನ್ನು ಈಗ ತಿಳಿಯೋಣ.

ರಾಶಿಗಳ ಮೇಲೆ ರಾಹುವಿನ ನಕ್ಷತ್ರ ಬದಲಾವಣೆ

Astrology Rahu Nakshatra Parivartan 10 November Increase in mental stress for this sign loss profit

ಮೇಷ ರಾಶಿ

ಉತ್ತರ ಭಾದ್ರಪದ ನಕ್ಷತ್ರದಲ್ಲಿ ರಾಹು ಸಂಚಾರದಿಂದಾಗಿ ಮೇಷ ರಾಶಿಯ ಜನರು ಕೆಲ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಮೇಷ ರಾಶಿಯವರ ಜಾತಕದಲ್ಲಿ ರಾಹು ಅನುಕೂಲಕರ ಸ್ಥಾನದಲ್ಲಿ ಇಲ್ಲ. ಹೀಗಾಗಿ ಈ ಅವಧಿಯಲ್ಲಿ ಮಾನಸಿಕ ಒತ್ತಡ ಮತ್ತು ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು.

ವ್ಯಾಪಾರದಲ್ಲಿ ಏರಿಳಿತಗಳಿರುತ್ತವೆ. ಹೊಸ ಹೂಡಿಕೆಗಳನ್ನು ತಪ್ಪಿಸುವುದು ಈ ಸಮಯದಲ್ಲಿ ಉತ್ತಮ. ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಇದು ಹಠಾತ್ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು. ಜೊತೆಗೆ ನಿಮ್ಮ ಮೇಲೆ ಸಾಲಗಳು ಹೆಚ್ಚಾಗಬಹುದು. ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.

Astrology Rahu Nakshatra Parivartan 10 November Increase in mental stress for this sign loss profit

ಸಿಂಹ ರಾಶಿ

ಉತ್ತರ ಭಾದ್ರಪದ ನಕ್ಷತ್ರದಲ್ಲಿ ರಾಹು ಸಂಚಾರದಿಂದಾಗಿ ಸಿಂಹ ರಾಶಿಯ ಜನರು ಆರ್ಥಿಕ ನಷ್ಟ, ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಕುಟುಂಬಸ್ಥರ ಆರೋಗ್ಯ, ಖಿನ್ನತೆ ಮತ್ತು ಚಿಂತೆ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯವಾಗಿರುತ್ತದೆ.

ಸಿಂಹ ರಾಶಿಯ ಜನರು ಆರ್ಥಿಕ ನಷ್ಟ ಮತ್ತು ಜೀವನದಲ್ಲಿ ಹಠಾತ್ ಬದಲಾವಣೆಗಳನ್ನು ಎದುರಿಸಬೇಕಾಗಬಹುದು. ಹೂಡಿಕೆ ಮಾಡುವಾಗ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳು ಮತ್ತು ಕೆಲಸದಲ್ಲಿ ಅಸ್ಥಿರತೆ ಇರಬಹುದು. ನಕಾರಾತ್ಮಕ ಶಕ್ತಿಯ ಪರಿಣಾಮವು ಹೆಚ್ಚಾಗಬಹುದು. ಹೀಗಾಗಿ ತಾಳ್ಮೆಯಿಂದ ಮುಂದಾಲೋಚಿಸಿ ನಡೆಯುವುದು ಉತ್ತಮ.

Astrology Rahu Nakshatra Parivartan 10 November Increase in mental stress for this sign loss profit

ಮಕರ ರಾಶಿ

ಉತ್ತರ ಭಾದ್ರಪದ ನಕ್ಷತ್ರದಲ್ಲಿ ರಾಹು ಸಂಚಾರದಿಂದಾಗಿ ಮಕರ ರಾಶಿಯ ಜನರು ಆರ್ಥಿಕ ಅಸಮತೋಲನ ಮತ್ತು ವೃತ್ತಿಜೀವನದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಹೊಸ ಹೂಡಿಕೆಗಳನ್ನು ತಪ್ಪಿಸಿ. ಕೆಲಸದ ಸ್ಥಳದಲ್ಲಿ ಎಚ್ಚರಿಕೆ ವಹಿಸಬೇಕು.

ಜೊತೆಗೆ ಹಳೆಯ ಹೂಡಿಕೆಗಳಿಗೆ ಸಂಬಂಧಿಸಿದ ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ವಿದೇಶಿ ವ್ಯಾಪಾರದಲ್ಲಿ ತೊಡಗಿರುವ ಜನರು ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ಭಾವನಾತ್ಮಕ ಅಸ್ಥಿರತೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗಬಹುದು.

(ಗಮನಿಸಿ: ಈ ಮಾಹಿತಿಯು ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಭಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಅಥವಾ ಯಾವುದೇ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಸೂಕ್ತವಾಗಿದೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+