Chandra Guru Yuti 2024: ಚಂದ್ರ ಗುರುವಿನ ಸಂಯೋಗದಿಂದ ಗಜಕೇಸರಿ ಯೋಗ- ಈ ರಾಶಿಗೆ ಇದ್ದಲ್ಲೇ ಬರುತ್ತೆ ಹಣ..

ಗ್ರಹಗಳ ಸ್ಥಾನ ಬದಲಾವಣೆ ಒಬ್ಬ ವ್ಯಕ್ತಿಯ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ನವಗ್ರಹಗಳ ರಾಶಿ ಬದಲಾವಣೆ ಪ್ರಮುಖ ವಿದ್ಯಾಮಾನವಾಗಿದೆ. ಗ್ರಹಗಳು ಒಂದು ನಿರ್ದಿಷ್ಟ ಅವಧಿಯವರೆಗೆ ರಾಶಿಚಕ್ರ ಚಿಹ್ನೆ ಅಥವಾ ನಕ್ಷತ್ರಪುಂಜದಲ್ಲಿ ಸಂಚಾರ ಮಾಡುತ್ತವೆ. ಈ ಪರಿವರ್ತನೆ 12 ರಾಶಿಚಕ್ರ ಚಿಹ್ನೆಗಳಲ್ಲಿ ಕೆಲವು ರಾಶಿಯವರಿಗೆ ಧನಾತ್ಮಕವಾಗಿ ಪರಿಣಾಮ ಬೀರುತ್ತವೆ. ಇತರ ರಾಶಿಗಳಿಗೆ ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಈ ಬಾರಿ 16 ನವೆಂಬರ್ 2024 ರಂದು, ಚಂದ್ರನು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರು ದೇವ ಈಗಾಗಲೇ ವೃಷಭ ರಾಶಿಯಲ್ಲಿ ಕುಳಿತಿದ್ದಾನೆ.

ಯಾವ ಸಮಯದಲ್ಲಿ ಚಂದ್ರನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ?

ನವೆಂಬರ್ 16 ಶನಿವಾರ ಮಧ್ಯಾಹ್ನ 3:17 ಕ್ಕೆ ಚಂದ್ರನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ನಂತರ ಸೋಮವಾರ ನವೆಂಬರ್ 18 ರಂದು ಬೆಳಿಗ್ಗೆ 4:31 ರ ನಂತರ ಎರಡನೇ ರಾಶಿಚಕ್ರ ಚಿಹ್ನೆಗೆ ಸಾಗುತ್ತದೆ. ಆದರೆ ವೃಷಭರಾಶಿಗೆ ಪ್ರವೇಶ ಮಾಡುವುದರಿಂದ ಚಂದ್ರ ಮತ್ತು ಗುರುವಿನ ಸಂಯೋಗವಾಗಲಿದ್ದು ಇದರಿಂದ ಗಜಕೇಸರಿ ಯೋಗವುಂಟಾಗುತ್ತದೆ. ಹಾಗಾದರೆ ಗಜಕೇಸರಿ ಯೋಗ ಯಾವ 3 ರಾಶಿಗಳಿಗೆ ಲಾಭದಾಯಕ ಎಂದು ತಿಳಿಯೋಣ?

Astrology Moon and Jupiter Conjunction on November 16 Money will come to this zodiac sign

ವೃಷಭ ರಾಶಿ

ವೃಷಭ ರಾಶಿಯ ಜನರು ಚಂದ್ರ ಮತ್ತು ಗುರುಗಳ ಸಂಯೋಗದಿಂದ ಲಾಭ ಪಡೆಯಲಿದ್ದಾರೆ. ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ. ಅಂದುಕೊಮಡ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ಶಾಂತಿ ಪ್ರೀತಿ ಹೆಚ್ಚು. ಈ ಸಮಯದಲ್ಲಿ ಸಂಗಾತಿಯೊಂದಿಗೆ ತಿಳುವಳಿಕೆ ಹೆಚ್ಚಾಗುತ್ತದೆ. ನಿಮ್ಮ ಜೀವನದಲ್ಲಿ ಅದೃಷ್ಟ ಕೂಡ ಹೆಚ್ಚಾಗಲಿದೆ. ಗುರುವಿನ ಬಲ ವೃಷಭ ರಾಶಿಯ ಜಾತಕದಲ್ಲಿ ಇರುವುದರಿಂದ ಎಲ್ಲಾ ಕಾರ್ಯಗಳು ಸರಳವಾಗಿ ಪೂರ್ಣಗೊಳ್ಳಲಲಿವೆ.

ಚಂದ್ರ ಮತ್ತು ಗುರು ಎರಡೂ ಗ್ರಹಗಳ ಸಂಯೋಗದಿಂದ ಗಜಕೇಸರಿ ಯೋಗ ಉಂಟಾಗುತ್ತದೆ. ಇದರಿಂದಾಗಿ ವೃಷಭ ರಾಶಿಯವರ ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನೀವು ಪ್ರಗತಿಯತ್ತ ನಿಮ್ಮ ಹೆಜ್ಜೆ ಇಡುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ. ಅನಗತ್ಯ ಚಿಂತೆಗಳಿಂದ ದೂರವಿರುತ್ತೀರಿ. ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ.

Astrology Moon and Jupiter Conjunction on November 16 Money will come to this zodiac sign

ಧನು ರಾಶಿ

ಮುಂಬರುವ ದಿನ ಧನು ರಾಶಿಯವರಿಗೆ ಉತ್ತಮವಾಗಿರುತ್ತದೆ. ಹೊಸ ವಾಹನ, ಆಸ್ತಿ ಖರೀದಿಗೆ ಅವಕಾಶ ಸಿಗಲಿದೆ. ನಿಮ್ಮ ಉದ್ಯೋಗದಲ್ಲಿ ಸಹಕಾರ ಇರಲಿದೆ. ಉದ್ಯೋಗ ಸಂಬಂಧಿತ ಸಮಸ್ಯೆಗಳು ದೂರವಾಗಿ ಶಾಂತಿ ನೆಲೆಸಲಿದೆ. ಕುಟುಂಬ ಜೀವನ ಸಮಸ್ಯೆಗಳಿಂದ ಸುದಾರಣೆ ಕಾಣಲಿದೆ.

ಸಮಾಜದಲ್ಲಿ ಹೊಸ ಗುರುತು ರೂಪುಗೊಳ್ಳುತ್ತದೆ. ಕ್ರಮೇಣ ಜನರೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಲು ನಿಮಗೆ ಸಾಧ್ಯವಾಗುತ್ತದೆ. ಮುಂದಿನ ದಿನಗಳು ಉದ್ಯೋಗಿಗಳಿಗೆ ಉತ್ತಮವಾಗಿರುತ್ತದೆ. ಯಶಸ್ಸಿಗೆ ಹೊಸ ಬಾಗಿಲುಗಳು ನಿಮಗೆ ತೆರೆದುಕೊಳ್ಳುತ್ತವೆ. ಪರಸ್ಪರ ಭಿನ್ನಾಭಿಪ್ರಾಯಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ.

Astrology Moon and Jupiter Conjunction on November 16 Money will come to this zodiac sign

ಮೀನ ರಾಶಿ

ಚಂದ್ರ-ಗುರು ಸಂಯೋಗವು ಮೀನ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಇರಲಿದೆ. ಎಲ್ಲಾ ಆಯಾಮಗಳಿಂದ ನಿಮ್ಮ ಜೀವನ ಅಭಿವೃದ್ಧಿ ಕಾಣುವುದು. ಸಮಸ್ಯೆಗಳನ್ನು ಎದರಿಸುವ ಶಕ್ತಿ ಧೈರ್ಯ ಗುರು ಬಲದಿಂದ ಸಿಗಲಿದೆ. ಈ ರಾಶಿಯವರ ಜೀವನ ಸಂವೃದ್ಧಿಯಿಂದ ಕೂಡಿರುತ್ತದೆ.

ನೀವು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಜನರಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಸಮಾಜಸೇವೆಯಲ್ಲಿ ನಿಮ್ಮ ಆಸಕ್ತಿ ಹೆಚ್ಚಲಿದೆ. ಮುಂಬರುವ ದಿನಗಳು ಲಾಭದಾಯಕವಾಗಲಿದೆ. ನೀವು ಸಂಬಂಧಿಕರ ಸ್ಥಳಕ್ಕೆ ಭೇಟಿ ನೀಡಬೇಕಾಗಬಹುದು ಮತ್ತು ಅಲ್ಲಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+