• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ

By ನಾಗನೂರಮಠ ಎಸ್.ಎಸ್.
|

ನಾವು ಹುಟ್ಟಿದ ಸಮಯದಲ್ಲಿ ರಾಶಿ ಚಕ್ರದಲ್ಲಿದ್ದ ನಕ್ಷತ್ರ ಆಧರಿಸಿ ನಮ್ಮ ಹೆಸರನ್ನು ಹಿರಿಯರು ಇಟ್ಟಿರುತ್ತಾರೆ. ಜನ್ಮ ನಕ್ಷತ್ರದಿಂದ ನಮ್ಮ ಜನ್ಮರಾಶಿ, ಜನ್ಮಲಗ್ನ ಗೊತ್ತಾಗುತ್ತದೆ. ಒಂದೇ ರಾಶಿಯವರು ಬೇರೆ ಬೇರೆ ತರಹ ಗುಣಾವಶೇಷ ಯಾಕೆ ಹೊಂದಿರುತ್ತಾರೆ ಎಂದರೆ ಅದಕ್ಕೆ ಕಾರಣ ಅವರು ಹುಟ್ಟಿದ್ದ ನಕ್ಷತ್ರ ಬೇರೆ ಬೇರೆಯಾಗಿರುವುದರಿಂದ. ಜನ್ಮ ನಕ್ಷತ್ರವನ್ನಾಧರಿಸಿ ಗ್ರಹಗಳ ಸ್ಥಿತಿ ಭಾವಚಲಿತ ಕುಂಡಲಿಯಲ್ಲಿ ನೋಡಿಕೊಂಡು ನಿಖರವಾದ ಭವಿಷ್ಯ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಮುಂಬರುವ ದೈಹಿಕ ತೊಂದರೆ ಹಾಗೂ ರೋಗಗಳು, ಅತೀ ಕಷ್ಟದ ದಿನಗಳ ಸಮಯ ಹಾಗೂ ಸಂತಸದ ದಿನಗಳನ್ನು ಮೊದಲೇ ಗುರ್ತಿಸಿಟ್ಟುಕೊಂಡು ಜೀವನ ಸುಗಮವಾಗಿಸಿಕೊಳ್ಳಬಹುದು.

ನಿಮಗೊಂದು ವಿಷಯ ಗೊತ್ತಿರಬಹುದು. ಕೆಲವೇ ಕೆಲವು ಜನರು ಮಾತ್ರ ಇಂಜಿನಿಯರ್ಸ್ ಆಗುತ್ತಾರೆ. ಕೆಲವರೇ ಡ್ರೈವರ್‌ಗಳಾಗುತ್ತಾರೆ. ಕೆಲವರು ರಾಜಕಾರಣಿಗಳಾಗುತ್ತಾರೆ, ಇನ್ನಷ್ಟು ಮಂದಿ ಕ್ರೀಡಾಪಟುಗಳಾಗುತ್ತಾರೆ. ಇನ್ನೊಂದಿಷ್ಟು ಜನ ನಟರಾಗುತ್ತಾರೆ. ಆದರೆ ಎಲ್ಲರೂ ಇಂಜಿನಿಯರ್ಸ್ ಏಕೆ ಆಗಲ್ಲ? ಎಲ್ಲರೂ ಡ್ರೈವರ್ಸ್ ಏಕೆ ಆಗುವುದಿಲ್ಲ? ಎಂಬುದಕ್ಕೆ ಉತ್ತರವೇ ಜನ್ಮನಕ್ಷತ್ರ.

ನಾವು ಹುಟ್ಟಿದ ನಕ್ಷತ್ರದಿಂದ ರೂಪುಗೊಳ್ಳುವ ನಮ್ಮ ಜನ್ಮಕುಂಡಲಿಯಿಂದ ಮುಂದೆ ನಾವೇನಾಗುತ್ತೇವೆಯೋ ಅದು ನಿರ್ಧರಿತವಾಗಿರುತ್ತದೆ. ಅದನ್ನು ಮೊದಲೇ ಅರಿತುಕೊಂಡರೆ ತುಂಬಾ ಒಳ್ಳೆಯದು. ಯಾಕೆಂದರೆ ಡ್ರೈವರ್ ಆಗುವ ಯೋಗವಿರುವವನ್ನು ದುಡ್ಡು ಕೊಟ್ಟು ಇಂಜಿನಿಯರಿಂಗ್ ಓದಿಸಲು ಒತ್ತಾಯಿಸಿದರೆ ಅವನು ಫೇಲ್ ಆಗಿ ಜೀವನದಲ್ಲೇ ಸೋಲುತ್ತಾನೆ. ಆದ್ದರಿಂದ ಮೊದಲೇ ಜನ್ಮಜಾತಕ ತೋರಿಸಿಕೊಂಡು ಮಕ್ಕಳು ಮುಂದೆ ಏನಾಗಬಹುದೆಂದು ಮೊದಲೇ ತಿಳಿದುಕೊಳ್ಳಿ ಎಂದು ಹೇಳುವುದು. ಯಾಕೆಂದರೆ ವೈದ್ಯನಾಗುವ ಯೋಗವಿರುವ ಮಗನಿಗೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದನ್ನು ಓದಿಸಿ ಅವನಲ್ಲಿ ಆಸಕ್ತಿ ಬೆಳೆಸಬಹುದು. "ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡು" ಎಂಬಂತೆ ಮಕ್ಕಳ ಮುಂದಿನ ಜೀವನವನ್ನು ಮೊದಲೇ ಕಣ್ತುಂಬಿಕೊಳ್ಳಬಹುದು.

ಆದರೆ, ಎಷ್ಟೋ ಜನ ಇದನ್ನೂ ಕೂಡ ಮೂಢನಂಬಿಕೆ ಎಂದು ಉಢಾಪೆ ಮಾಡುತ್ತಾರೆ. ನಮ್ಮಲ್ಲ ಭಕ್ತಿ, ನಂಬಿಕೆಗಳನ್ನು ಮೂಢನಂಬಿಕೆ ಎನ್ನುವವರಿಗೆ ಅವರ ತಂದೆ ತಾಯಿ ಅವರ ಜನ್ಮನಕ್ಷತ್ರ ಆಧರಿಸಿಯೇ ಅವರಿಗೆ ಹೆಸರಿಟ್ಟಿರುತ್ತಾರೆ! ಆದರೆ ಅದೇ ಮೂಢರು ನಮ್ಮ ನಂಬಿಕೆ, ವಿಶ್ವಾಸಗಳನ್ನು ಮೂಢನಂಬಿಕೆ ಎನ್ನುತ್ತಾರೆ. ಈ ರೀತಿ ಹೇಳುವವರು ತಮ್ಮ ಮದುವೆಗೆ, ಗೃಹ ಪ್ರವೇಶಕ್ಕೆ ಮುಹೂರ್ತ ನೋಡಬಾರದು. ಅಷ್ಟೇ ಅಲ್ಲ ತಮ್ಮ ಮಕ್ಕಳಿಗೆ ನಾಮಕರಣ ಕಾರ್ಯಕ್ರಮ ಮಾಡಬಾರದು. ಮಕ್ಕಳ ಮದುವೆಗೆ ತಮ್ಮದೇ ಜಾತಿಯವರನ್ನು ನೋಡಬಾರದು. ಯಾವುದೇ ಪದ್ಧತಿ ಅನುಸರಿಸಬಾರದು. ಯಾವುದೇ ಹಬ್ಬಗಳನ್ನು ಆಚರಿಸಬಾರದು.

ತಮಗೇನು ತಿಳಿಯುತ್ತದೆಯೋ ಅದನ್ನೇ ಮಾಡಬೇಕು. ಅಕಸ್ಮಾತ್ ಹಾಗೆ ಮಾಡುತ್ತ ನಮ್ಮ ನಂಬಿಕೆ, ವಿಶ್ವಾಸಗಳನ್ನು ಮೂಢನಂಬಿಕೆ ಎನ್ನುತ್ತಲೇ ಇದ್ದರೆ ಒಂದಿಲ್ಲೊಂದಿನ ಮಖಕ್ಕೆ ಗುದ್ದಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಬೇರೆ ಧರ್ಮದವರ‍್ಯಾರೂ ಇದುವರೆಗೆ ನಮ್ಮ ಆಚರಣೆಗಳನ್ನು ಮೂಢನಂಬಿಕೆ ಎಂದಿಲ್ಲ. ಆದರೆ ನಮ್ಮವರೇ ನಮ್ಮ ಆಚರಣೆಗಳನ್ನು ಮೂಢನಂಬಿಕೆ ಎನ್ನುವ ಮಹಾನ್ ಮೂಢರಾಗಿದ್ದಾರೆ. ಇಂಥವರಿಗೆ, ಎಲ್ಲ ಆಚರಣೆಗೆ ಮುಹೂರ್ತಗಳನ್ನು ಸ್ವಾಮಿಗಳು ನಕ್ಷತ್ರ ಮತ್ತು ಶನಿಚಲನೆಯನ್ನು ನೋಡಿಯೇ ಹೇಳುತ್ತಾರೆ ಎಂಬುದೇ ಗೊತ್ತಿರುವುದಿಲ್ಲ.

ತಿರುಮಲದಲ್ಲಿ ಶ್ರೀ ವೆಂಕಟೇಶ್ವರನಿಗೆ ಮುಡಿ ಕೊಡುವುದನ್ನು ಮೂದಲಿಸಿ, ಆ ಮುಡಿಯಿಂದ ದೇವಸ್ಥಾನದವರು ಕೋಟಿಗಟ್ಟಲೆ ದುಡ್ಡು ಮಾಡಿಕೊಳ್ಳುತ್ತಾರೆ ಎಂದಿದ್ದಾರೆ ಕೆಲ ಹುಳುಕು ಬುದ್ಧಿಯವರು. ಆದರೆ ನಮ್ಮ ಸೌಂದರ್ಯಕ್ಕೆ ಮೆರಗು ನೀಡುವುದು ನಮ್ಮ ಕೂದಲು. ತಿಮ್ಮಪ್ಪನಿಗೆ ನಮ್ಮ ಸೌಂದರ್ಯವನ್ನೇ ಧಾರೆ ಎರೆಯುತ್ತಿದ್ದೇವೆ ಎಂದು ಮುಡಿ ಕೊಡುತ್ತಾರೆ ಭಕ್ತಿಯಿಂದ ಭಕ್ತರು. ಆ ಮುಡಿಯಿಂದ ಬಂದ ಹಣವನ್ನು ದೇವಸ್ಥಾನದವರು ಭಕ್ತರಿಗೇನೆ ಉಪಯೋಗಿಸುತ್ತಾರೆ. ಅದನ್ನು ಬೇಕಿದ್ದರೆ ಹೋಗಿ ಕೇಳಬಹುದು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಹೋಗಿ ನ್ಯಾಯ ಕೇಳಬೇಕು. ಅದನ್ನು ಬಿಟ್ಟು ದೇವರಾಚರಣೆಗಳನ್ನು ಮೂಢನಂಬಿಕೆ ಎನ್ನಲೇಬಾರದು.

ಇದನ್ನು ಅರಿಯದ ಆ ಹುಳುಕು ಬುದ್ಧಿಯವರಿಗೆ ಹುಳು ಹತ್ತಿಸಿ ಸಾಯುವ ಹಾಗೆ ಮಾಡುತ್ತಾನೆ ಶನಿದೇವನು! ಯಾಕೆಂದರೆ ಅರಿಯದೆ ನಮ್ಮ ದೇವರ ಬಗ್ಗೆ ಮಾತನಾಡಲೇಬಾರದು. ಮಾತನಾಡಿದರೆನ್ನಿ ಅನುಭವಿಸಲು ರೆಡಿಯಾಗಿಯೇ ಇರಬೇಕು. ನಾವು ನೋಡಲು ರೆಡಿಯಾಗಿಯೇ ಇರುತ್ತೇವೆ. ನಾವು ನಂಬಿರುವ ದೇವರು ಹೆಚ್ಚೋ ಇಂದೋ ನಾಳೆಯೋ ಹುಳು ಹತ್ತಿಸಿಕೊಂಡು ಸಾಯುವ ಹುಳುಕು ಬುದ್ಧಿಯವರು ಹೆಚ್ಚೋ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಏಕೆಂದರೆ ಪುಣ್ಯದ ಸಾವು ಬರಲೂ ಕೂಡ ನಾವು ಪುಣ್ಯವಂತರಾಗಿರಬೇಕು. ಇಲ್ಲವಾದಲ್ಲಿ ನರಳಿ ನರಳಿ ಸಾಯಬೇಕಾಗುತ್ತದೆ. ಆದ್ದರಿಂದ ಹುಳುಕು, ಕೇಡು, ನೀಚ ಬುದ್ಧಿ ಇದ್ದರೆ ಬಿಟ್ಟು ಬಿಡಬೇಕು ಸುಖದ ಸಾವು ಬೇಕಿದ್ದರೆ.

"ಅಶ್ವಿನಿ ನಕ್ಷತ್ರ" ವಿಶೇಷ ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ದಿನದಲ್ಲಿರುವ ನಕ್ಷತ್ರದಿಂದ ಆ ಸಮಯದ ಯೋಗ ತಿಳಿದುಕೊಳ್ಳಬಹುದು.

ದೈವಕೃಪೆಗೆ : ದೇವರಿಗೆ ಕುಂಕುಮ, ಗಂಧ, ವಿಭೂತಿ ಹಚ್ಚಲು ಮಧ್ಯದ ಬೆರಳು ಬಳಸಬಾರದು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. We can train our children accordingly and avert any wrong doings too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more