ಪ್ರಶ್ನೋತ್ತರ : ವಿವಾಹ ವಿಳಂಬವಾಗುತ್ತಿದೆ, ಪರಿಹಾರವೇನು?

By: ವಿಠ್ಠಲ್ ಭಟ್, ಜ್ಯೋತಿಷಿ
Subscribe to Oneindia Kannada

ನಮ್ಮ ಜ್ಯೋತಿಷ್ಯ ವಿಭಾಗದಲ್ಲಿ ಎಂದಿನಂತೆ ಪ್ರಶ್ನೋತ್ತರ ಮುಂದುವರಿದಿದೆ. ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ಹಲವಾರು ಜನರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪರಿಹಾರಕ್ಕೆ ಪತ್ರ ಬರೆಯುತ್ತಿದ್ದಾರೆ. ಅವುಗಳಲ್ಲಿ ಸಮಂಜಸವಾಗಿರುವ ಕೆಲವನ್ನು ಹೆಕ್ಕಿ ಜ್ಯೋತಿಷಿ ವಿಠ್ಠಲ್ ಭಟ್ ಅವರು ಉತ್ತರಗಳನ್ನು ನೀಡಿದ್ದಾರೆ.

ನಿಮಗೂ ಸಮಸ್ಯೆಗಳಿದ್ದರೆ, ನಮ್ಮ ಜ್ಯೋತಿಷಿಗಳಿಂದ ಪರಿಹಾರ ಕಂಡುಕೊಳ್ಳಬೇಕಿದ್ದರೆ, ಈ ವಿಳಾಸಕ್ಕೆ ಪತ್ರ ಬರೆಯಿರಿ : astrology.kannada@oneindia.co.in. ಜೊತೆಗೆ, ನಿಮ್ಮ ಸಮಸ್ಯೆಯನ್ನು ಸ್ಪಷ್ಟವಾಗಿ ಬರೆಯಿರಿ. ಹೆಸರು, ಊರು, ಹುಟ್ಟಿದ ದಿನಾಂಕ, ಹುಟ್ಟಿದ ಸಮಯ, ರಾಶಿ ಮತ್ತು ನಕ್ಷತ್ರಗಳನ್ನು ನಮೂದಿಸಿದರೆ ಉತ್ತರ ನೀಡಲು ಸುಲಭವಾಗುತ್ತದೆ.[ಜಾತಕ ನೋಡಿ ಔಷಧ ನೀಡುವ ಹೊನ್ನಾವರ ಬಳಿಯ ಧನ್ವಂತರಿ ದೇಗುಲ]

ನೀವು ಜ್ಯೋತಿಷಿಗಳನ್ನು ಅವರ ಮೊಬೈಲ್ (9845682380) ಸಂಖ್ಯೆಯ ಮೂಲಕ ಅವರನ್ನು ನೇರವಾಗಿ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು. ಪರಿಹಾರ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ಸೂಚಿಸಿದ್ದರ ಬಗ್ಗೆ ನಂಬಿಕೆ ಇದ್ದಲ್ಲಿ ಅನುಸರಿಸಬಹುದು. ಈ ವಿಚಾರದಲ್ಲಿ ಒನ್ ಇಂಡಿಯಾ ಕನ್ನಡ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ - ಸಂಪಾದಕ.[ಜೂನ್ 21ರಂದು ವೃಶ್ಚಿಕಕ್ಕೆ ಶನಿ ವಕ್ರೀ ಪ್ರವೇಶ, ಯಾವ ರಾಶಿಗೆ ಏನು ಫಲ]

Astrology : Ask question to astrologer and get answers

ಸ್ವಂತ ಮನೆ ಮಾಡಿಕೊಳ್ಳುವುದು ಯಾವಾಗ?

ಪ್ರಶ್ನೆ : ನಮಸ್ಕಾರ ವಿಠ್ಠಲ್ ಭಟ್ ಅವರಿಗೆ, ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ. ಸ್ವಂತ ಮನೆ ಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಎರಡು ವರ್ಷಗಳಿಂದ ಪ್ರಯತ್ನ ಯಶಸ್ವಿಯಾಗಿಲ್ಲ. ಸದ್ಯಕ್ಕೆ ಒಂದು ಪ್ಲಾಟ್ ಕೊಂಡಿದ್ದೇವೆ. ಇನ್ನೂ ಕನ್ವರ್ಷನ್ ಆಗಬೇಕು. ಅಲ್ಲಿ ಫ್ಯಾಕ್ಟರಿ ಕಟ್ಟಬೇಕು. ಒಳ್ಳೆ ಬಾಡಿಗೆ ಮನೆ ಸಿಗಬೇಕು. ಆರೋಗ್ಯವೂ ಸರಿಯಾಗಿಲ್ಲ. ಒಟ್ಟಿನಲ್ಲಿ ನನ್ನ ನಸೀಬೇ ನೆಟ್ಟಗಿಲ್ಲ. ಯಾವ ಸ್ತ್ರೋತ್ರ ಹೇಳಿದರೆ ಒಳ್ಳೆ ಮನೆ ಸಿಗಬಹುದು ದಯವಿಟ್ಟು ತಿಳಿಸಿ. ಮನೆಯಲ್ಲಿ ಮಾಡಬೇಕಾದ ಪೂಜೆಯ ಬಗ್ಗೆಯೂ ತಿಳಿಸಿ. ನನ್ನದು ಸಿಂಹ ರಾಶಿ, ಪುಬ್ಬ ನಕ್ಷತ್ರ. ಗಂಡನದು ಕರ್ಕ ರಾಶಿ ಮತ್ತು ಪುಷ್ಯ ನಕ್ಷತ್ರ.

ವಿಠ್ಠಲ್ ಭಟ್ ಉತ್ತರ : ನಿಮ್ಮ ಯಜಮಾನರ ಜಾತಕದಲ್ಲಿ ಕುಜ ಸರಿಯಾಗಿ ಇಲ್ಲದಿರುವುದರಿಂದ ಭೂಮಿ ಕೊಳ್ಳುವುದು ಮನೆ ಕಟ್ಟುವುದು ಸ್ವಲ್ಪ ಕಷ್ಟ. ನೀವು ಸಾಧ್ಯವಾದಲ್ಲಿ ಅಪಾರ್ಟ್ಮೆಂಟ್ ಅಥವಾ ಮೇಲಿನ ಅಂತಸ್ತಿನಲ್ಲಿ ಇರುವ ಬಾಡಿಗೆ ಮನೆ ಹುಡುಕಿ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರತಿ ಶನಿವಾರ ಶನಿ ದೇಗುಲಕ್ಕೆ ಹೋಗಿ ಅಲ್ಲಿ ಪರಿಶುದ್ದ ಎಳ್ಳೆಣ್ಣೆ ದಾನ ಮಾಡಿ ಪೂಜಾದಿಗಳನ್ನು ಮಾಡಿಸಿ. ನಿಮ್ಮ ಯಜಮಾನರಿಗೆ ಬಲಗೈ ಉಂಗುರದ ಬೆರಳಿಗೆ "ಜಲ ರತ್ನ" ಹರಳನ್ನು ಬೆಳ್ಳಿಯ ಉಂಗುರ ಮಾಡಿಸಿ ಲಕ್ಷ್ಮಿನಾರಾಯಣ ಮಂತ್ರಗಳಿಂದ ಅಭಿಮಂತ್ರಿಸಿ ಶುಕ್ರವಾರ ಧರಿಸಿ. ನೀವು ಪ್ರತಿ ದಿನ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಿಸಿ. ನಿಮ್ಮಿಬ್ಬರಿಗೂ ಶುಭವಾಗಲಿ.

Astrology : Ask question to astrologer and get answers

***
ಮದುವೆ ವಿಳಂಬವಾಗುತ್ತಿದೆ

ಪ್ರಶ್ನೆ : ನಮಸ್ಕಾರ, ನನ್ನ ಮೂಲ ಹೆಸರು ಹೇಮಲತಾ. ನನ್ನ ಮದುವೆ ವಿಳಂಬವಾಗುತ್ತಿದೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. ನನಗೆ ಯಾವಾಗ ವಿವಾಹಯೋಗವಿದೆ. ಆದಷ್ಟು ಬೇಗ ಲಗ್ನವಾಗಬೇಕಾದರೆ ಏನು ಮಾಡಬೇಕು ತಿಳಿಸಿ. ನನ್ನ ಹುಟ್ಟಿದ ದಿನಾಂಕ : 21-07-82, ಸಮಯ : ಬೆಳಿಗ್ಗೆ 5:15, ರಾಶಿ : ಪುಷ್ಯ.

ವಿಠ್ಠಲ್ ಭಟ್ ಉತ್ತರ : ನಿಮ್ಮ ಜಾತಕದ ಪ್ರಕಾರ ನಿಮಗೆ ಬರುತ್ತಿರುವ ಮದುವೆ ಪ್ರಪೋಸಲ್ ಗಳನ್ನು ಬೇಕಂತಲೇ ತಪ್ಪಿಸಲಾಗುತ್ತಿದೆ. ಆದುದರಿಂದ ನಿಮ್ಮ ಶತ್ರುಗಳ ವಿಚಾರದಲ್ಲಿ ಸ್ವಲ್ಪ ಎಚ್ಚರ ವಹಿಸಿ. ಇನ್ನು ಮದುವೆ ವಿಚಾರಕ್ಕೆ ಬಂದರೆ, ಜಾತಕದಲ್ಲಿಯೇ ಸಮಸ್ಯೆ ಇದೆ. ಅದಕ್ಕೆ ಪರಿಹಾರವಾಗಿ ಶಾಸ್ತ್ರೋಕ್ತವಾಗಿ ಕೃಸರಾನ್ನ ದ್ರವ್ಯ ಹಾಗೂ ಶಮಿ ಸಮಿಧದಲ್ಲಿ ಶನಿ ಶಾಂತಿ ಹಾಗೂ ಕೇರಳಿಯ ತಂತ್ರದಲ್ಲಿ ಬಾಲಗಣಪತಿ ಹವನ ಮಾಡಿಸಬೇಕು. ಇನ್ನು ನಿಮಗೆ ಗುರು ಬಲ ಬರಲು ಇನ್ನೂ ಒಂದೂವರೆ ವರ್ಷ ಕಾಯಬೇಕು. ಆದರೂ ಸಹ ಮುಂದಿನ ವರ್ಷ ಜನವರಿ ನಂತರ ವಿವಾಹ ಯೋಗ ಇದೆ. ನಂಬಿಕೆ ಇದ್ದಲ್ಲಿ ನಿಮ್ಮ ಬಲಗೈ ಕಿರು ಬೆರಳಿಗೆ ಬೆಳ್ಳಿಯಲ್ಲಿ ಪಚ್ಚೆ ಉಂಗುರ ಮಾಡಿಸಿ ಅಭಿಮಂತ್ರಿಸಿ ಬುಧವಾರ ಧರಿಸಿ. ಶುಭವಾಗಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ask question related to your life, profession, career, health related issues to our astrologer Pandit Vittal Bhat and get answers. Provide your horoscope with problems you are facing.
Please Wait while comments are loading...