ಜಾತಕ ನೋಡಿ ಔಷಧ ನೀಡುವ ಹೊನ್ನಾವರ ಬಳಿಯ ಧನ್ವಂತರಿ ದೇಗುಲ

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ಯಲಗುಪ್ಪ ಎಂಬ ಊರಿನಲ್ಲಿ ನೆಲೆಸಿದ್ದಾನೆ ರಾಜ್ಯದ ಏಕೈಕ ಪುರಾತನ ಧನ್ವಂತರೀ ಮಹವಿಷ್ಣು! ಹೊನ್ನಾವರ ಪಟ್ಟಣದಿಂದ ಸುಮಾರು 11 ಕಿಲೋಮೀಟರ್ ದೂರ ಇರುವ ಈ ಕ್ಷೇತ್ರಕ್ಕೆ ಬೆಂಗಳೂರು ಇತ್ಯಾದಿ ಯಾವುದೇ ಸ್ಥಳದಿಂದ ಬಂದು ಹೋಗಬೇಕಾದಲ್ಲಿ ಉತ್ತಮ ವಾಹನ ಸೌಕರ್ಯ ಇದೆ.

ಮೂರು ದಿಕ್ಕಿನಲ್ಲಿಯೂ ಗುಡ್ಡಗಾಡು, ಒಂದು ದಿಕ್ಕಿನಲ್ಲಿ ತುಂಬು ಹಸಿರು ತೋಟದಿಂದ ಈ ರಮ್ಯ ಮನೋಹರ ದೇಗುಲ ಕೂಡಿದ್ದು, ಅತ್ಯಂತ ಪ್ರಶಾಂತ ಹಾಗೂ ರಮಣೀಯ ಸ್ಥಳದಲ್ಲಿ ಇದೆ. ರಾಷ್ಟ್ರೀಯ ಹೆದ್ದಾರಿ 206ರಿಂದ ಅಂದಾಜು 200 ಮೀಟರ್ ದೂರ ಹಸಿರು ತೋಟಗಳ ಮಧ್ಯ ಹಳ್ಳಿ ಸೊಗಡಿನ ಮನೆಗಳ ಮುಂದೆ ಅಂದಾಜು 200 ಮೀಟರ್ ಕ್ರಮಿಸಿದರೆ ಒಂದು ಚಿಕ್ಕ ಪುಷ್ಕರಿಣಿ ಸಿಗುತ್ತದೆ.

ಆ ಪುಷ್ಕರಿಣಿಯ ಎದುರಿನಲ್ಲಿ ಮೆಟ್ಟಿಲು ಹತ್ತಿ ಹೋದರೆ ಸರ್ವ ರೋಗ ನಿವಾರಕ ಧನ್ವಂತರಿ ದೇಗುಲವಿದೆ. ದೇವರ ಗರ್ಭಗುಡಿಯು ಶಿಲಾಮಯ. ಕರ್ಣಾಟಕ ಹಾಗೂ ಮಹಾರಷ್ಟ್ರ ಈ ಎರಡೂ ರಾಜ್ಯಗಳಲ್ಲಿ ನೂರಾರು ದೇಗುಲಗಳನ್ನು ಗುರುತಿಸಿ, ಪ್ರತಿಷ್ಠಾಪಿಸಿದ ಹಾಗೂ ಇನ್ನೂ ಕೆಲ ಪ್ರತಿಷ್ಠಾಪಿತ ದೇಗುಲಗಳನ್ನು ಉದ್ಧರಿಸಿ ಅವುಗಳನ್ನು ಶಕ್ತಿ ಕೇಂದ್ರಗಳಾಗಿ ಪರಿವರ್ತಿಸಿದ ಶ್ರೀಧರ ಸ್ವಾಮಿಗಳೇ ಸಹ ಖುದ್ದು ಈ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ.

ಶ್ರೀಧರ ಸ್ವಾಮಿಗಳೇ ಹೇಳಿದ ಮಾತು

ಶ್ರೀಧರ ಸ್ವಾಮಿಗಳೇ ಹೇಳಿದ ಮಾತು

ಈ ಧನ್ವಂತರಿ ಮಹಾವಿಷ್ಣು ಮೂರ್ತಿಯನ್ನು ಕಂಡು, ಕರ್ನಾಟಕ ಹಾಗೂ ಮಹಾರಾಷ್ಟ್ರ ಎಲ್ಲಿಯೂ ಕಾಣದ ಈ ಸ್ವಾಮಿಯನ್ನು ಇಲ್ಲಿ ಕಂಡೆವು ಎಂದು ಸಂತಸ ಪಟ್ಟು, ಅಲ್ಲಿಯೇ ಸ್ವಾಮಿಯ ಗರ್ಭಗುಡಿಯಲ್ಲಿ ಧ್ಯಾನಾಸಕ್ತರಾದರು ಹಾಗೂ ಈ ದೇಗುಲದಲ್ಲಿ ಸಾಕ್ಷಾತ್ ಧನ್ವಂತರಿ ಮಹಾ ವಿಷ್ಣುವೇ ಸ್ವಯಂ ನೆಲೆಸಿದ್ದಾನೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಯಾರು ಇಲ್ಲಿ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಸ್ವಾಮಿಯ ಸೇವೆ ಮಾಡುತ್ತಾರೋ ಅವರ ಸಕಲ ರೋಗ ನಿವಾರಣೆ ಆಗಿ, ಆರೋಗ್ಯ ಪೂರ್ಣರಾಗಿ ಇರುತ್ತಾರೆ ಎಂದು ಸ್ವತಃ ಶ್ರೀಧರರು ತಿಳಿಸಿದ್ದಾರೆ.

ಕಪ್ಪು ಶಿಲೆಯ ವಿಗ್ರಹ

ಕಪ್ಪು ಶಿಲೆಯ ವಿಗ್ರಹ

ಇಲ್ಲಿನ ಧನ್ವಂತರಿ ವಿಗ್ರಹದ ಕುರಿತು: ಈ ಮೂರ್ತಿಯನ್ನು ಕಪ್ಪು ಶಿಲೆಯಲ್ಲಿ ಕೆತ್ತಲಾಗಿದೆ. ಪಾಣಿಪೀಠವು ಮೂರು ಭಾಗಗಳನ್ನು ಹೊಂದಿದೆ. ಪಾಣಿಪೀಠದ ಮೇಲೆ ಕಮಲದ ದಳಗಳನ್ನು ರಚಿಸಿದ್ದಾರೆ. ಅದರ ಮೇಲೆಯೇ ದೇವರ ಪದದ್ವಯಗಳು ವಿರಾಜಿಸಿವೆ. ದೇವರ ಮೂರ್ತಿಯ ಮೊದಲ ಬಲಗೈಯಲ್ಲಿ ಅಮೃತಕಲಶವಿದೆ ಹಾಗೂ ಅದರ ಮೇಲಿನ ಕೈಯಲ್ಲಿ ಪ್ರಯೋಗಿಸುತ್ತಿರುವ ಭಂಗಿಯಲ್ಲಿ ಸುದರ್ಶನ ಚಕ್ರವಿದೆ.

ಪುರಾತನ ವಿಗ್ರಹ

ಪುರಾತನ ವಿಗ್ರಹ

ಇನ್ನು ಒಂದು ಎಡಗೈಯಲ್ಲಿ ಶಂಖ ಹಾಗೂ ಇನ್ನೊಂದರಲ್ಲಿ ದೋರ್ದಂಡ ಇದೆ. ಸ್ವಾಮಿಯು ಪೀತಾಂಬರ ಧಾರಿ ಆಗಿದ್ದು, ಕೈ ಹಾಗೂ ಕಾಲುಗಳಲ್ಲಿ ಬಳೆಗಳು ಇವೆ. ಸ್ವಾಮಿಯ ಕುತ್ತಿಗೆಯಲ್ಲಿ ಮಾಣಿಕ್ಯ ಹಾರದಂತೆ ಕೆತ್ತಲಾಗಿದೆ. ಅತ್ಯಂತ ಪೂರಾತನವಾದ ಈ ವಿಗ್ರಹದ ಕಿರೀಟ ಹಾಗೂ ಹಿಂದೆ ಗುಂಗುರು ಕೂದಲನ್ನೂ ಸಹ ಕೆತ್ತಲಾಗಿದೆ.

ಧನ್ವಂತರಿ ತೀರ್ಥ ಪುಷ್ಕರಿಣಿ

ಧನ್ವಂತರಿ ತೀರ್ಥ ಪುಷ್ಕರಿಣಿ

ಪಾಣಿಪೀಠದಿಂದ ಅಳತೆ ಮಾಡಿದರೆ ಸ್ವಾಮಿಯ ವಿಗ್ರಹವು ಸರಿ ಸುಮಾರು 4 ಅಡಿ ಒಳಗೆ ಇದೆ. ಧನ್ವಂತರಿ ದೇಗುಲದ ಎದುರಿನಲ್ಲಿ "ಶ್ರೀ ಧನ್ವಂತರಿ ತೀರ್ಥ" ಎಂಬ ಪುಷ್ಕರಿಣಿಯ ಜಲವು ದೇವರ ಪಾದದ ಸ್ಥಾನದಿಂದ ಅಂದರೆ ಗರ್ಭಗುಡಿಯ ಮೂಲದಿಂದ ಹರಿದು ಬರುವುದರಿಂದ ಔಷಧೀಯ ಗುಣಗಳನ್ನು ಹೊಂದಿದ್ದು, ಇಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಾದಿ ಸಕಲ ರೋಗಗಳೂ ನಾಶ ಆಗುತ್ತವೆ ಎಂಬ ಪ್ರತೀತಿ ಇದೆ.

ಸಕಲ ರೋಗ ನಿವಾರಣೆ

ಸಕಲ ರೋಗ ನಿವಾರಣೆ

ಅದರ ಮಧ್ಯದಲ್ಲಿ ಇರುವ ವೃತ್ತಾಕಾರದ ಬಾವಿಯಿಂದ ದೊರೆಯುವ ನೀರನ್ನು ಸ್ವಾಮಿಯ ಪೂಜೆಗೆ ಬಳಸಲಾಗುತ್ತದೆ. ವಿಶೇಷ ಅಂದರೆ ಈ ನೀರು ಅತ್ಯಂತ ರುಚಿ ಆಗಿರುತ್ತದೆ. ಇದೇ ಹೊನ್ನಾವರದ ಸಮೀಪದಲ್ಲಿ ಸಿಕ್ಕಿರುವ ಶಾಸನ ಒಂದರ ಪ್ರಕಾರ ಕಾಮದೇವ ಎಂಬ ಮಹಾರಾಜನು ಪರಶಿವನ ಆದೇಶದಂತೆ ಇದೇ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ, ಸ್ವಾಮಿಯನ್ನು ಪೂಜಿಸಿ, ತನ್ನ ರೋಗವನ್ನು ಗುಣ ಪಡಿಸಿಕೊಂಡ ಎಂದು ತಿಳಿಸಿದೆ.

ವಂಶ ಪಾರಂಪರ್ಯ ಆಯುರ್ವೇದ

ವಂಶ ಪಾರಂಪರ್ಯ ಆಯುರ್ವೇದ

ಇದೇ ಸ್ಥಳದಲ್ಲಿ ದೇವರ ಅರ್ಚಕರು ಹಾಗೂ ಪರಂಪರಾಗತ ವೈದ್ಯರೂ ಆದ ಗೋಪಾಲ ಹೆಗಡೆ ನೆಲೆಸಿದ್ದಾರೆ. ಕ್ಷೇತ್ರಕ್ಕೆ ಬಂದ ರೋಗಿಗಳಿಗೆ ಔಷಧ- ಉಪಚಾರಗಳನ್ನು ಮಾಡುತ್ತಿದ್ದಾರೆ. ಹೆಚ್ಚಿನ ಔಷಧಿಗಳನ್ನು ಕಾಡಿನಿಂದ ತರುವ ಗಿಡ- ಮೂಲಿಕೆಗಳಿಂದ ತಯಾರು ಮಾಡುತ್ತಾರೆ.

ಡಯಾಬಿಟೀಸ್, ಕಿಡ್ನಿ ಸ್ಟೋನ್, ಚರ್ಮರೋಗಗಳಿಗೆ ಔಷಧ

ಡಯಾಬಿಟೀಸ್, ಕಿಡ್ನಿ ಸ್ಟೋನ್, ಚರ್ಮರೋಗಗಳಿಗೆ ಔಷಧ

ಇನ್ನು ಹಲವು ಔಷಧಗಳನ್ನು ಇತರೆಡೆಯಿಂದ ತರಿಸಿ ಕೊಡುತ್ತಾರೆ. ಆದರೆ ಯಾವುದೇ ಔಷಧವಿರಲಿ ದೇವರಲ್ಲಿ ಪ್ರಾರ್ಥಿಸಿ, ಅಭಿಮಂತ್ರಿಸಿ ರೋಗಿಗಳಿಗೆ ನೀಡುತ್ತಾರೆ. ಅದರಿಂದಲೆ ರೋಗ ಗುಣಪಡಿಸಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಡಯಾಬಿಟೀಸ್, ಕಿಡ್ನಿ ಸ್ಟೋನ್ (ಮುತ್ರಾಶಯದಲ್ಲಿ ಕಲ್ಲು) ಹಾಗೂ ಎಲ್ಲ ವಿಧದ ಚರ್ಮರೋಗಗಳಿಗೆ ಔಷಧ ಉಪಚಾರ ಮಾಡಿ ಗುಣಪಡಿಸುತ್ತಾರೆ.

ಜಾತಕ ಪರಿಶೀಲಿಸಿ ಅದಕ್ಕೆ ತಕ್ಕ ಪೂಜೆ- ಪರಿಹಾರ

ಜಾತಕ ಪರಿಶೀಲಿಸಿ ಅದಕ್ಕೆ ತಕ್ಕ ಪೂಜೆ- ಪರಿಹಾರ

ಕ್ಯಾನ್ಸರ್ ಹೊರತುಪಡಿಸಿ ಎಲ್ಲ ವಿಧದ ರೋಗಗಳಿಗೂ ಇಲ್ಲಿ ಔಷಧ ಕೊಡಲಾಗುತ್ತದೆ. ಇನ್ನೂ ವಿಶೇಷ ಎಂದರೆ ರೋಗದ ಹೆಚ್ಚಿನ ಮಾಹಿತಿ ಇಲ್ಲದ ಜನರ ಜಾತಕ ಪರಿಶೀಲಿಸಿ ಅದಕ್ಕೆ ತಕ್ಕ ಪೂಜೆ- ಪರಿಹಾರ ದೇವರ ಸನ್ನಿಧಿಯಲ್ಲಿ ನೆರವೇರಿಸುತ್ತಾರೆ. ಆ ನಂತರ ಔಷಧ ಕೊಟ್ಟು ಗುಣಪಡಿಸುತ್ತಾರೆ.

ಕಷಾಯ ಅತ್ಯಂತ ಜನಪ್ರಿಯ

ಕಷಾಯ ಅತ್ಯಂತ ಜನಪ್ರಿಯ

ಆಸಿಡಿಟಿ ಗ್ಯಾಸ್ ಹಾಗೂ ಅಜೀರ್ಣದಿಂದಾಗಿ ಆಗುವ ನಿತ್ಯದ ಆರೋಗ್ಯ ಸಮಸ್ಯೆಗೆ ಇಲ್ಲಿ ಕೊಡಲಾಗುವ ಕಷಾಯ ಅತ್ಯಂತ ಜನಪ್ರಿಯ ಹಾಗೂ ಪ್ರಭಾವಶಾಲಿ ಆಗಿದೆ. ಯಾವುದೇ ಪ್ರಿಸರ್ವೇಟಿವ್ ಗಳನ್ನೂ ಹಾಕದೆ ಕಷಾಯವನ್ನು ಎಷ್ಟು ವರ್ಷ ಇಟ್ಟರೂ ಅದು ಹಾಳಾಗದು. ಸ್ತ್ರೀಯರಿಗೆ ಮುಟ್ಟಿನ ಸಮಯದಲ್ಲಿ ಅಥವಾ ಇತರೆ ಕಾರಣಗಳಿಂದಾಗಿ ಬರುವ ಹೊಟ್ಟೆನೋವಿಗೂ ಈ ಕಷಾಯ ದಿವ್ಯಾಮೃತ.

ಪುಷ್ಕರಿಣಿಯಲ್ಲಿ ಸ್ನಾನ, ಪುರುಷಸೂಕ್ತ ಅಭಿಷೇಕ

ಪುಷ್ಕರಿಣಿಯಲ್ಲಿ ಸ್ನಾನ, ಪುರುಷಸೂಕ್ತ ಅಭಿಷೇಕ

ಯಾವುದೇ ರೋಗವಿರಲಿ ಇಲ್ಲಿಗೆ ಬಂದು ಪುಷ್ಕರಿಣಿಯಲ್ಲಿ ಸ್ನಾನ ಮಾಡಿಸಿ, ಧನ್ವಂತರಿ ಜಪ ಮಾಡಿಸಿ, ದೇವರಿಗೆ ಪುರುಷಸೂಕ್ತ ಅಭಿಷೇಕ ಮಾಡಿಸುತ್ತಾರೆ. ಪ್ರಧಾನ ಅರ್ಚಕರಾದ ವೈದ್ಯ ಗೋಪಾಲ ಹೆಗಡೆಯವರಿಂದ ಔಷಧ ಪಡೆದಲ್ಲಿ ರೋಗ ಗುಣ ಆಗುವ ಭರವಸೆಯನ್ನು ಅದರ ಅನುಭವ ಪಡೆದ ಅನೇಕ ಭಕ್ತಾದಿಗಳು ತಿಳಿಸಿದ್ದಾರೆ.

ವಿಳಾಸ, ಸಂಪರ್ಕ ಮಾಹಿತಿ

ವಿಳಾಸ, ಸಂಪರ್ಕ ಮಾಹಿತಿ

ಈ ದಿವ್ಯ ಕ್ಷೇತ್ರಕ್ಕೆ ಬೆಂಗಳೂರು ಅಷ್ಟೇ ಅಲ್ಲದೇ ಹಲವು ಪ್ರದೇಶಗಳಿಂದ ಜನ ನಿತ್ಯ ತೆರಳುತ್ತಾರೆ. ಅಲ್ಲಿನ ವಿಳಾಸ: ಶ್ರೀ ಕ್ಷೇತ್ರ ಧನ್ವಂತರಿ ಸನ್ನಿಧಿ, ಯಲಗುಪ್ಪ , ಖರ್ವಾ (ಪೋ), ತಾ| ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ), ಸಂಪರ್ಕ ಸಂಖ್ಯೆ ಫೋ- 08387261912, ಮೊ- 9482580712

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is a details about Karnataka's oldest Dhanvantari temple located in Yalagappa, Honnavar taluk, Uttar Kannada district. Temple visit can solve various health issues, well known astrologer Pandit Vittal Bhat explains temple significance.
Please Wait while comments are loading...