Ugadi Horoscope 2025: ಕುಂಭ ರಾಶಿಯ ಯುಗಾದಿ ಜಾತಕ- ಕುಂಭ ರಾಶಿಯವರಿಗೆ ಯುಗಾದಿ ಹಬ್ಬದ ಸಿಹಿ ಕಹಿಗಳೇನು?
ದ್ವಾದಶಿ ರಾಶಿಗಳಲ್ಲಿ ಹನ್ನೊಂದನೆ ರಾಶಿ ಕುಂಭ. 2025 ಯುಗಾದಿಯಿಂದ 2026 ಯುಗಾದಿಯವರೆಗೆ ಕುಂಭ ರಾಶಿಯವರಿಗೆ ವರ್ಷ ಪೂರ್ತಿ ಫಲಾನುಫಲ ಹೇಗಿದೆ ಎಂದು ತಿಳಿಯೋಣ. ಈಗಾಗಲೇ ಮೇಷದಿಂದ ಮಕರ ರಾಶಿಯವರೆಗೆ ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಂಡಿದ್ದೇವೆ. ಇದೀಗ ಕುಂಭ ರಾಶಿಯ ಭವಿಷ್ಯ ಹೇಗಿದೆ ಎಂದು ತಿಳಿಯೋಣ.
ಯುಗಾದಿ ಭವಿಷ್ಯ ತಿಳಿಯಲು ಗ್ರಹಗಳ ಸ್ಥಾನಗಳ ಬಗ್ಗೆ ತಿಳಿದಿರುವುದು ತುಂಬಾ ಮುಖ್ಯ. ಮುಖ್ಯವಾಗಿ ಶನಿ, ಗುರು, ರಾಹು, ಕೇತುಗಳ ಸ್ಥಾನ ಪ್ರತಿಯೊಂದು ರಾಶಿಯ ಭವಿಷ್ಯ ತಿಳಿಯಲು ಅತ್ಯಾವಶ್ಯಕವಾಗಿದೆ. ಶನಿ ಇದೇ ಮಾರ್ಚ್ ತಿಂಗಳಲ್ಲಿ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚಾರ ಮಾಡಲಿದೆ. ಗುರು ವೃಷಭ ರಾಶಿಯಿಂದ ಮೀನ ರಾಶಿಗೆ ಮೇ ತಿಂಗಳಿನಲ್ಲಿ, ರಾಹು ಕೇತುಗಳು ಮೇ ತಿಂಗಳಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಹಾಗಾದರೆ ಈ ಗ್ರಹಗಳ ಸ್ಥಾನದಿಂದಾಗಿ ಕುಂಭ ರಾಶಿಯವರ ಯುಗಾದಿ ಭವಿಷ್ಯವನ್ನು ಹೇಗಿದೆ ತಿಳಿಯೋಣ.

ಗ್ರಹಗಳ ಸ್ಥಾನಪಲ್ಲಟ
ಯುಗಾದಿ ಹೊಸ ವರ್ಷದಲ್ಲಿ ಕುಂಭ ರಾಶಿಯವರಿಗೆ ಫಲಿತಾಂಶಗಳು ಅನುಕೂಲಕರವಾಗಿಲ್ಲ. ಶನಿಯು ಜನ್ಮ ರಾಶಿಯಲ್ಲಿ ಸಂಚರಿಸುತ್ತಾನೆ. ರಾಹು 3 ನೇ ಮನೆಯಲ್ಲಿ ಭ್ರಾತೃ ಸ್ಥಾನಂನಲ್ಲಿ ಸಂಚರಿಸುತ್ತಿದ್ದಾನೆ. ಕೇತು ಒಂಬತ್ತನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಈ ಗ್ರಹ ಸ್ಥಾನದಿಂದಾಗಿ, ಈ ವರ್ಷ ಕುಂಭ ರಾಶಿಯವರಿಗೆ ಹೆಚ್ಚು ಕೆಟ್ಟ ಫಲಿತಾಂಶಗಳಿವೆ.
ಕುಂಭ ರಾಶಿಯ ಯುಗಾದಿ ಆರ್ಥಿಕ ಭವಿಷ್ಯ
ಕುಂಭ ರಾಶಿಯವರಿಗೆ ಯುಗಾದಿ ನಂತರದ ಜೀವನ ಹಣಕಾಸಿನ ವಿಷಯದಲ್ಲಿ ಅಷ್ಟೊಂದು ಉತ್ತಮವಾಗಿಲ್ಲ. ಕುಂಭ ರಾಶಿಯವರಿಗೆ ಗುರು ಬಲವಿದೆ. ಹೀಗಾಗಿ ಅವರಿಗೆ ಆರ್ಥಿಕ ಸಮಸ್ಯೆಗಳು ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಆದರೂ ಕೂಡ ಪ್ರತಿ ದಿನ ಹಣಕಾಸಿನ ಚಿಂತೆಗಳು ಕುಂಭ ರಾಶಿಯವರಿಂದ ದೂರವಾಗುವುದಿಲ್ಲ. ಯಾಕೆಮದರೆ ಸಾಡೇಸಾತ್ ಪ್ರಭಾವ ಇರುವುದರಿಂದ ಮುಂದಿನ ಎರಡುವರೆ ವರ್ಷಗಳ ಕಾಲ ಇದೇ ರೀತಿಯ ಸ್ಥಿತಿ ಮುಂದುವರೆಯುತ್ತದೆ. ಬೇರೆ ಶುಭ ಗ್ರಹಗಳ ಶುಭ ಪರಿಣಾಮದಿಂದಾಗಿ ಶನಿ ಪ್ರಭಾವ ಕಡಿಮೆಯಾಗಬಹುದು. ಆದರೆ ಸಂಪೂರ್ಣವಾಗಿ ಹಣಕಾಸಿನ ಸಮಸ್ಯೆಗಳು ದೂರವಾಗುವುದಿಲ್ಲ.

ಕುಂಭ ರಾಶಿಯ ಯುಗಾದಿ ಕೌಟುಂಬಿಕ ಜಾತಕ
ಶನಿ ಪ್ರಭಾವ ಇರುವುದರಿಂದ ಕುಟುಂಬದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಯಾಕೆಂದರೆ ಶನಿ ಕಾಟವಿದ್ದರೆ ಯಾವುದೇ ಶುಭ ಕಾರ್ಯಗಳನ್ನು ನಡೆಯಲು ಬಿಡುವುದಿಲ್ಲ. ಹೀಗಾಗಿ ಆದಷ್ಟು ತಾಳ್ಮೆಯಿಂದ ವರ್ತಿಸಿ. ಜಗಳ, ಮನಸ್ತಾಪ, ಕೋಪವನ್ನು ತಪ್ಪಿಸಿ. ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ. ಬಂಧು ಬಾಂಧವರೊಡನೆ ವಿಶ್ವಾಸದಿಂದ ಇರಿ. ಸಂಘ ಸಂಸ್ಥೆಗಳ ಕಾರ್ಯದಲ್ಲಿ ಭಾಗವಹಿಸಿ.
ಕುಂಭ ರಾಶಿಯ ಯುಗಾದಿ ಶೈಕ್ಷಣಿಕ ಜಾತಕ
ಈ ಯುಗಾದಿಯ ನಂತರ ಸಕಾರಾತ್ಮಕ ಚಿಂತನೆಗಳಿಂದ ಕುಂಭ ರಾಶಿಯ ವಿದ್ಯಾರ್ಥಿಗಳು ಮುನ್ನಡೆಯಬೇಕಾಗುತ್ತದೆ. ಯಾವುದೇ ಕೋರ್ಸ್ ಅಥವಾ ತರಬೇತಿ ಪಡೆಯುವುದರಿಂದ ಒಳಿತಾಗುತ್ತದೆ ಎಂದು ಸಕರಾತ್ಮಕವಾಗಿ ಚಿಂತಿಸಿ ಮುನ್ನಡೆದರೆ ಗ್ರಹಗತಿಗಳೂ ನಿಮಗೆ ಸಹಕರಿಸಬಹುದು. ಶನಿ ಕಾಟವೆಂಬ ಚಿಂತೆ ಬೇಡ. ಅದರಿಂದ ದೂರ ಬಂದು ನಿಮ್ಮ ಒಳ್ಳೆಯ ಪ್ರಯತ್ನಗಳನ್ನು ಮಾಡಿ. ಹೀಗಾಗಿ ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಇದು ಸರಾಸರಿ ಸಮಯ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಲು ಸಲಹೆ ನೀಡಲಾಗುತ್ತದೆ.

ಕುಂಭ ರಾಶಿಯ ಯುಗಾದಿ ವೃತ್ತಿ ಭವಿಷ್ಯ
ಕುಂಭ ರಾಶಿಯವರಿಗೆ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು, ತೊಂದರೆಗಳು ಮತ್ತು ದುಃಖಗಳು ಹೆಚ್ಚಾಗಬಹುದು. ಕೆಲಸದ ಮೇಲೆ ರಾಜಕೀಯ ಒತ್ತಡವಿರುತ್ತದೆ. ಕುಂಭ ರಾಶಿಯ ಉದ್ಯಮಿಗಳಿಗೆ ಈ ವರ್ಷ ಹೆಚ್ಚು ಅನುಕೂಲಕರವಾಗಿಲ್ಲ. ಸಾಲ ಹೆಚ್ಚಾಗಬಹುದು. ಸಮಯಕ್ಕೆ ಸರಿಯಾಗಿ ಹಣ ತಲುಪುವುದಿಲ್ಲ. ಒತ್ತಡದ ಜೀವನ ನಡೆಸುವಿರಿ.
ಕುಂಭ ರಾಶಿಯ ಯುಗಾದಿ ಆರೋಗ್ಯ ಭವಿಷ್ಯ
ಈ ವರ್ಷದಲ್ಲಿ ಗುರುವಿನ ಪ್ರಭಾವ ನಿಮಗೆ ಸಂಪೂರ್ಣವಾಗಿರುತ್ತದೆ. ಕುಂಭ ರಾಶಿಯವರ ಜಾತಕದಲ್ಲಿ ಗುರುವಿನ ಸ್ಥಾನ ಬಲಾಡ್ಯವಾಗಿರುವುದರಿಂದ ಮನೆಯಲ್ಲಿ ಮಂಗಳಕರ ಕಾರ್ಯಗಳು ನಡೆಯುತ್ತವೆ. ಆರೋಗ್ಯ ವೃದ್ಧಿಯಾಗುತ್ತವೆ. ದೀರ್ಘಕಾಲಿನ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಮನಸ್ಸಿನಲ್ಲಿ ಉತ್ಸಾಹ ಹುರುಪು ಕಂಡು ಬರಲಿದೆ. ಮನಸ್ಸಿಗೆ ಬಹಳಷ್ಟು ಸುಖ ಶಾಂತಿ ನೆಮ್ಮದಿ ಸಿಗಲಿದೆ.
ಕುಂಭ ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ
ಶನಿಯ ಪ್ರಭಾವದಿಂದಾಗಿ ದಾಂಪತ್ಯದಲ್ಲಿ ಸಮಸ್ಯೆಗಳು ಹೆಚ್ಚಾಗಲಿವೆ. ಮಾನಸಿಕ ಒತ್ತಡ ಅಧಿಕವಾಗುತ್ತದೆ. ಮೂರನೇ ಮನೆಯಲ್ಲಿ ಗುರುವಿನ ಸಂಚಾರ ಕೆಲಸದಲ್ಲಿ ತೊಂದರೆಗಳು ಮತ್ತು ಸಮಸ್ಯೆಗಳನ್ನು ಉಂಟುಮಾವುದು. ಮೂರನೇ ಮನೆಯಲ್ಲಿ ರಾಹು ಮತ್ತು ಅದೃಷ್ಟದಲ್ಲಿ ಕೇತು ಕುಂಭ ರಾಶಿಯವರಿಗೆ ಕೆಲವು ಅನುಕೂಲಕರ ಫಲಿತಾಂಶಗಳನ್ನು ನೀಡಬಹುದು. ಹೀಗಾಗಿ ಸ್ವಲ್ಪ ತಾಳ್ಮೆಯಿಂದ ಇರಿ. ಪ್ರೇಮಿಗಳು ತಮ್ಮ ಪ್ರೇಮ ಪ್ರಸ್ತಾಪವನ್ನು ಮನೆಯಲ್ಲಿ ಹೇಳುವುದನ್ನು ಮುಂದೂಡಿ. ಜಗಳ, ಮನಸ್ತಾಪ, ಗಲಾಟೆ ಮಾಡಿಕೊಳ್ಳುವುದರಿಂದ ದೂರವಿರಿ.
ಕುಂಭ ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ
ಕುಂಭ ರಾಶಿಯವರು ಈ ಸಮಯದಲ್ಲಿ ಯಾವುದೇ ದುಬಾರಿ ವಸ್ತುಗಳನ್ನು ಖರೀದಿ ಮಾಡದೇ ಇದ್ದರೆ ತುಂಬಾ ಒಳ್ಳೆಯದು. ಯುಗಾದಿ ನಂತರದ ಸಮಯ ಆಸ್ತಿ, ಮನೆ, ವಾಹನ ಖರೀದಿಗೆ ಉತ್ತಮವಾಗಿಲ್ಲ. ಅಂದರೆ ಸಂಪಾದನೆಯಲ್ಲಿ ತುಂಬಾ ಹಣವನ್ನು ನೀವು ಕಳೆದುಕೊಳ್ಳುವಿರಿ. ಹಣದ ಆಗಮನವಿರುವುದಿಲ್ಲ. ಹೀಗಾಗಿ ಸಾಲ ಮಾಡಬೇಕಾಗಬಹುದು. ಇದರಿಂದಾಗಿ ದುಬಾರಿ ವಸ್ತುಗಳ ಖರೀದಿ ಮಾಡುವುದನ್ನು ನಿಲ್ಲಿಸುವುದು ಉತ್ತಮ.












Click it and Unblock the Notifications