ಟ್ರಂಪ್ ಭವಿ‍ಷ್ಯ: ಮೇಟಿಯಂತಹ ಪ್ರಕರಣ ವೈಟ್ ಹೌಸ್ ಮುತ್ತಿಡಲಿವೆ

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ತನ್ನ ಆಯ್ಕೆಯಿಂದ ಅಮೆರಿಕ ಅಷ್ಟೇ ಅಲ್ಲದೇ ಪ್ರಪಂಚವನ್ನೇ ದಿಗ್ಭ್ರಮೆಗೊಳಿಸಿದ ವ್ಯಕ್ತಿ ಡೊನಾಲ್ಡ್ ಟ್ರಂಪ್ ! ವಿಚಿತ್ರ ವರ್ತನೆ, ಅತಿಯಾದ ಸಿಟ್ಟು ಹಾಗೂ ಅಹಂ ಇರುವ ವ್ಯಕ್ತಿಯಂತೆ ಹೊರ ಪ್ರಪಂಚಕ್ಕೆ ಕಾಣುವ ಈ ವ್ಯಕ್ತಿಯ ಜಾತಕ ಏನು ಹೇಳುತ್ತದೆ ಎಂದು ಗಮನಿಸುವುದೇ ಒಂದು ಕೌತುಕ.

ಜ್ಯೇಷ್ಠಾ ನಕ್ಷತ್ರ 4ನೇ ಪಾದ, ವೃಶ್ಚಿಕ ರಾಶಿ, ಸಿಂಹ ಲಗ್ನದಲ್ಲಿ ಇವರ ಜನನ ಆಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಮಾನ್ಯವಾಗಿ ಸಿಂಹ ಲಗ್ನ ಹಾಗೂ ವೃಶ್ಚಿಕ ರಾಶಿ ಈ ಎರಡೂ ವ್ಯಕ್ತಿಯಲ್ಲಿ ಅತಿಯಾದ ಹಠದ ಸ್ವಭಾವವನ್ನು ವೃಧ್ಧಿಸುತ್ತದೆ. ಎರಡರಲ್ಲಿ ಒಂದು ಇದ್ದರೂ ಸಿಟ್ಟು, ಹಠ ಹೆಚ್ಚಿರುತ್ತದೆ.[ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಶಿ ಭವಿಷ್ಯ]

ಹೀಗಿರುವಾಗ ಇವರಿಗೆ ಈ ಎರಡೂ ಇರುವುದು ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಪ್ರಾಕ್ಟಿಕಲ್ ಆಗಿ ಕಣ್ಣು ಮುಂದೆ ಕಾಣುವ ವಿಷಯಗಳನ್ನು ಅಷ್ಟೇ ನಂಬುವ ಇವರನ್ನು ಮೂರ್ಖರನ್ನಾಗಿಸುವುದು ಅಥವಾ ಮೋಸ ಮಾಡುವುದು ಅತೀ ಸುಲಭವೇ ಆಗಿದ್ದರೂ ಸಿಕ್ಕಿಬಿದ್ದರೆ ಶಿಕ್ಷೆಯ ಪ್ರಮಾಣ, ಇವರು ತೆಗೆದುಕೊಳ್ಳ ಬಹುದಾದ ಕಠಿಣ ನಿರ್ಣಯಗಳ ನೆನೆದು ಆ ಸಾಹಸಕ್ಕೆ ಯಾರೂ ಕೈ ಹಾಕಲಾರರು.

ಗಮನಿಸ ಬೇಕಾದ ಅಂಶ ಎಂದರೆ ಸಿಟ್ಟು ಇವರ ದೌರ್ಬಲ್ಯ, ಅಷ್ಟೇ ಅಲ್ಲ, ಬಲ ಸಹ ಅದುವೇ ! ಆ ವಿಚಿತ್ರ ಮನೋಭಾವ ಹಾಗೂ ಮೊಂಡುತನವೇ ಅವರ ಇಂದಿನ ಸ್ಥಿತಿಗೆ ಕರೆದುಕೊಂಡು ಬಂದು ನಿಲ್ಲಿಸಿದೆ ! ಇಲ್ಲಿ ಇನ್ನೊಂದು ವಿಚಾರ ಇದೆ ಡೊನಾಲ್ಡ್ ಜಾತಕದಲ್ಲಿ ಬುಧ ಗ್ರಹ ತನ್ನ ಸ್ವಸ್ಥಾನದಲ್ಲಿ ಲಗ್ನದಿಂದ ಹನ್ನೊಂದನೆ ಮನೆಯಲ್ಲಿ ಅಂದರೆ ಲಾಭ ಸ್ಥಾನದಲ್ಲಿ ಇರುವುದು ಇವರ ಬುದ್ದಿವಂತಿಕೆ ಹಾಗೂ ತೀಕ್ಷ್ಣ ಬುದ್ದಿಗೆ ಹಿಡಿದ ಕನ್ನಡಿ ಆಗುತ್ತದೆ.

ಸಾಮಾನ್ಯವಾಗಿ ನಾವು ಪ್ರಪಂಚದಲ್ಲಿ ಕಾಣುವಂತೆ ಅತಿಯಾದ ಸಿಟ್ಟು, ಆತುರ ಇರುವವರಿಗೆ ಬುದ್ಧಿ ಸರಿಯಾಗಿ ಓಡೋದಿಲ್ಲ ಎನ್ನುತ್ತಾರೆ. ಆದರೆ ಅದಕ್ಕೆ ತದ್ವಿರುದ್ಧ ಇವರ ಜಾತಕ. ಇವರಿಗೆ ಎಷ್ಟು ಹೆಚ್ಚು ಸಿಟ್ಟು ಬರುತ್ತದೆಯೋ ಅಷ್ಟೇ ವೇಗವಾಗಿ ಅವರ ಚಿಂತನೆಗಳು ಓಡುತ್ತವೆ. ನೆನಪಿಟ್ಟುಕೊಂಡು ಸೇಡು ತೀರಿಸಿಕೊಳ್ಳುವುದರಲ್ಲಿ ಇವರು ನಿಸ್ಸೀಮರು.

ಬುಧ ಹಾಗೂ ಕೇತು ದಶೆ

ಬುಧ ಹಾಗೂ ಕೇತು ದಶೆ

ಬುಧ ಹಾಗೂ ಕೇತು ದಶೆಯಲ್ಲಿ ಬಾಲ್ಯದ ಹೆಚ್ಚು ಭಾಗವನ್ನು ಕಳೆದ ಇವರು, ಆ ಸಮಯದಲ್ಲಿ ಬಹಳ ಪರೀಕ್ಷೆಗಳನ್ನು ಕಂಡಿರುತ್ತಾರೆ. ಅದೇ ಕಾರಣದಿಂದಾಗಿ ವಿದ್ಯಾಭಾಸಕ್ಕಾಗಿ ಬೆರೆ ಬೆರೆ ಕಡೆ ಪ್ರಯಾಣ ಬೆಳೆಸಿದ ಇವರು, ನಂತರದಲ್ಲಿ ಕೇತು ದೆಸೆಯಿಂದ ಸೈನಿಕರ ಶಾಲೆಯಲ್ಲಿ ಕಲಿಯ ಬೇಕಾಗಿ ಬರುತ್ತದೆ. ಆಗಲೂ ಹೆಚ್ಚಿನ ವಿಘ್ನಗಳನ್ನು ಅನುಭವಿಸುವ ಅವರು ನಂತರ ಅವರ ಗುಣ- ಸ್ವಭಾವಗಳಿಂದಾಗಿ ಅಲ್ಲಿಯೂ ಕೆಲ ಹೆಚ್ಚುವರಿ ಜವಾಬ್ಧಾರಿಗಳನ್ನು ಹೊರಬೇಕಾಗಿ ಬರುತ್ತದೆ.

ಜಾತಕ ಬಲದಿಂದ ಜಗಳಗಂಟ

ಜಾತಕ ಬಲದಿಂದ ಜಗಳಗಂಟ

ಬಾಲ್ಯದಲ್ಲಿಯೂ ಬಹಳ ಹಠಮಾರಿ ಆಗಿದ್ದ ಇವರು ತನ್ನ ಜಾತಕವಶಾತ್ ಜಗಳಗಂಟರಾಗಿದ್ದಲ್ಲಿ ಆಶ್ಚರ್ಯವಿಲ್ಲ. ಆದರೆ ಜಾತಕದಲ್ಲಿ ಬುಧ ಉತ್ತಮ ಸ್ಥಿತಿಯಲ್ಲಿ ಇದ್ದದ್ದರಿಂದಾಗಿ ವಿದ್ಯೆ ಅನಾಯಾಸವಾಗಿ ಇವರಿಗೆ ಲಭಿಸಿದೆ. ಗುರು ಗ್ರಹವೂ ಇವರ ಜಾತಕದಲ್ಲಿ ಕುಟುಂಬ ಸ್ಥಾನದಲ್ಲಿ ಇರುವುದರಿಂದ ಇವರ ಬಾಲ್ಯದಲ್ಲಿ ಕುಟುಂದವರ ಸಹಾಯ ಬಹಳ ಚೆನ್ನಾಗಿ ದೊರಕಿದೆ.

ಕುಟುಂಬ ಆಸ್ತಿಯಲ್ಲಿ ಪಾಲು

ಕುಟುಂಬ ಆಸ್ತಿಯಲ್ಲಿ ಪಾಲು

ಅದೇ ಗುರು ಗ್ರಹದ ಪ್ರಭಾವದಿಂದಾಗಿ ಇವರಿಗೆ ಉತ್ತಮ ಸಂಸ್ಕಾರವಂತ ಮಾತಾ- ಪಿತೃಗಳು ಲಭಿಸಿ ಕೌಟುಂಬಿಕ ಆಸ್ತಿ ದೊಡ್ಡ ಪ್ರಮಾಣದಲ್ಲಿ ಲಭಿಸಿದೆ. ಇದರ ಪ್ರಕಾರ ಇವರ ಬಾಲ್ಯ ಹಾಗೂ ನಂತರದಲ್ಲಿಯೂ ಇವರ ಅಭಿವೃಧ್ಧಿಗಾಗಿ ಅವಿರತ ಶ್ರಮವಹಿಸುವ ಕುಟುಂಬ ದೊರೆತಿದೆ.

ವೃತ್ತಿ ಜೀವನ ಆರಂಭದಲ್ಲಿ ಶುಕ್ರದಶೆ

ವೃತ್ತಿ ಜೀವನ ಆರಂಭದಲ್ಲಿ ಶುಕ್ರದಶೆ

ವೃತ್ತಿ ಜೀವನ ಆರಂಭಿಸುವ ವಯಸ್ಸು ಇವರಿಗೆ ಬಂದಾಗ ಇವರಿಗೆ ಕೇತು ದಶೆ ಮುಗಿದು ಶುಕ್ರ ಮಹಾ ದಶೆ ಪ್ರಾರಂಭ ಆಗಿತ್ತು. ಇವರ ಜಾತಕದ ಪ್ರಕಾರ ಶುಕ್ರ ಇವರಿಗೆ ಜನ್ಮ ಲಗ್ನದಿಂದ ಕರ್ಮಾಧಿಪತಿ ಸಹ ಆದುದರಿಂದ ವ್ಯಾಪಾರ ಇವರಿಗೆ ತಾನಾಗಿಯೇ ಬಂದಿತು. ಇವರ ಜಾತಕದಲ್ಲಿ ಲಗ್ನದಲ್ಲಿಯೇ ಭಾಗ್ಯಾಧಿಪತಿ ಕುಜ ಇರುವುದು ಹಾಗೂ ಶನಿ ಶುಕ್ರ ಗ್ರಹರು ಒಟ್ಟಿಗೇ ಇರುವುದು ಇವರಿಗೆ ಭೂಮಿಗೆ ಸಂಬಂಧಿತ ವ್ಯಾಪಾರಗಳಿಗೆ ಹಾಗೂ ನಿರ್ಮಾಣ ವಿಭಾಗದಲ್ಲಿ ಅದ್ಭುತವಾದ ಯಶಸ್ಸು ಕೊಟ್ಟಿದೆ.

ಕುಟುಂಬದಿಂದಲೇ ಬಂದ ರಿಯಲ್ ಎಸ್ಟೇಟ್

ಕುಟುಂಬದಿಂದಲೇ ಬಂದ ರಿಯಲ್ ಎಸ್ಟೇಟ್

ಗಮನಿಸ ಬೇಕಾದ ಅಂಶ ಎಂದರೆ ಈ ರಿಯಲ್ ಎಸ್ಟೇಟ್ ವ್ಯವಹಾರ ಇವರಿಗೆ ಕುಟುಂಬದಿಂದಲೇ ಬಂದದ್ದು. ಆದರೆ ಇವರ ಕೈಗೆ ಅಧಿಕಾರ ಬಂದ ನಂತರ ಆ ಸಂಸ್ಥೆ ಇವರದೇ ಕುಟುಂಬದ ಹೆಸರಿನಲ್ಲಿ ಯಶಸ್ಸಿನ ತುತ್ತ ತುದಿಗೆ ಏರಿ ಧನ ಲಾಭವನ್ನು ಅಧಿಕವಾಗಿ ತಂದುಕೊಟ್ಟಿದೆ.

ಭಾರತೀಯರೇ ಜಾಗರೂಕರಾಗಿರಿ

ಭಾರತೀಯರೇ ಜಾಗರೂಕರಾಗಿರಿ

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಭಾರತ ಹಾಗೂ ಭಾರತೀಯರು, ಅನಿವಾಸಿ ಭಾರತೀಯರಿಗೆ ಯಾವ ರೀತಿಯ ಪರಿಣಾಮ ಬೀರುಬಹುದು ಎಂಬ ಅನುಮಾನವಿದೆ. ಅದರೆ ಟ್ರಂಪ್ ಜಾತಕದ ಪ್ರಕಾರ ಅವರಿಗೆ ಗುರುದಶೆ ಪ್ರಾರಂಭವಾಗಿದೆ. ಗುರುದಶೆಯಲ್ಲಿ ವ್ಯಕ್ತಿ ಸತ್ಯ ಮತ್ತು ದೈವಮಾರ್ಗದಲ್ಲಿ ನಡೆಯುವುದರಿಂದ ಭಾರತೀಯರು ಹೆದರಬೇಕಾಗಿಲ್ಲ. ಆದರೆ ಅಮೇರಿಕಾದ ಕಾಯಾಂ ಭಾರತೀಯರು ಜಾಗರೂಕರಾಗಿರುವುದು ಸೂಕ್ತ. ದೇಶದ ವಿಚಾರದಲ್ಲಿ ನಮಗೆ ಆದ್ಯತೆಯಿದೆ. ಅದರೆ ಭಾರತೀಯರಿಗೆ ಉದ್ಯೋಗಾವಕಾಶದ ಕೊರತೆ ಕಾಡಬಹುದು, ಅನಿವಾರ್ಯತೆ ಇಲ್ಲದವರಿಗೆ ಕೆಸಲವಿಲ್ಲದ ಸ್ಥಿತಿ ಬರಬಹುದು

ಮುಸುಕಿನ ಸಮರಕ್ಕೆ ತೆರೆ ಬೀಳುವ ಸಾಧ್ಯತೆ

ಮುಸುಕಿನ ಸಮರಕ್ಕೆ ತೆರೆ ಬೀಳುವ ಸಾಧ್ಯತೆ

ಗುರುದಶೆಯ ಮೃದುತ್ವವನ್ನು ಪಾಕಿಸ್ತಾನ ಹಾಗೂ ಚೀನಾದವರು ಹೆಚ್ಚಿನ ಆಸೆ ಇಟ್ಟುಕೊಂಡರೆ ಮಾತ್ರ ನಿರಾಸೆಯಾಗುವುದು ಖಚಿತ. ಪ್ರತಿಯೊಂದು ವಿಚಾರ ಹಾಗೂ ವಿಷಯದಲ್ಲಿ ನ್ಯಾಯವನ್ನು ಹುಡುಕಲಾಗುತ್ತದೆ. ತೆರೆ ಮರೆಯ ನಾಟಕಗಳಿಗೆ ಅವಕಾಶವಿಲ್ಲ. ಮಾತಿಗೆ ತಪ್ಪಿದರೆ ನಂಟು ಮಿರಿಯಲಿದೆ. ತಾನು ಮತ್ತು ದೇಶಕ್ಕೆ ಮೊದಲ ಆದ್ಯತೆ ದೊರೆಯಲಿದೆ. ಧಾರ್ಮಿಕತೆಯಲ್ಲಿಯೂ ಕ್ರಿಶ್ಚಿಯಾನಿಟಿ ಬೆಳೆಯಲಿದೆ ಜೊತೆಗೆ ಹಿಂದೂ ಗಳು ಮಿಂಚಲಿದ್ದಾರೆ.

ಲೈಂಗಿಕ ಹಗರಣಗಳಾಗುವ ಸಾಧ್ಯತೆ

ಲೈಂಗಿಕ ಹಗರಣಗಳಾಗುವ ಸಾಧ್ಯತೆ

2018ರ ಮೇ ನಂತರ ಟ್ರಂಪ್ ಗೆ ಶನಿ ಭುಕ್ತಿ ಪ್ರಾರಂಭ ಆಗುವುದರಿಂದ ಇವರ ಸುರಕ್ಷತೆಯ ವಿಚಾರದಲ್ಲಿ ಹೆಚ್ಚಿನ ಗಮನ ಮುಖ್ಯ, ಇವರಿಗೆ ಹಾನಿ ಮಾಡುವ ಕೆಲವು ವಿಫಲ ಪ್ರಯತ್ನಗಳೂ ಆಗಬಹುದು. ಹೆಚ್ಚಿನ ಜಾಗೃತಿ ಅಗತ್ಯ, ಸಂಬಂಧಗಳ ವಿಚಾರದಲ್ಲಿ ಅದರಲ್ಲೂ ಪರಸ್ತ್ರೀವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾದೀತು. ಇದೇ ಅಧ್ಯಕ್ಷ ಅವಧಿಯಲ್ಲಿಯೇ ಕೆಲವು ಲೈಂಗಿಕ ಹಗರಣಗಳು ಆಗುವ ಸಂಭವಗಳು ಹೆಚ್ಚು ಇವೆ. ನಮ್ಮ ರಾಜ್ಯದ ಮೇಟಿ ಯಂತಹ ಪ್ರಕರಣಗಳು ವೈಟ್ ಹೌಸ್ ಅನ್ನು ಮುತ್ತಿದರೆ ಆಶ್ಚರ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindu astrological predictions says that Donald Trump has stubbon in nature, which may turn him into a bluff during his presidentship.
Please Wait while comments are loading...