ನಗುವಿನಿಂದಲೇ ಎಲ್ಲ ಗೆಲ್ಲಬಲ್ಲ ತುಲಾ ರಾಶಿಯ ಮಕ್ಕಳು
ತುಲಾ ರಾಶಿಯ ಮಕ್ಕಳಿಗೆ ಅಯಸ್ಕಾಂತದಂತೆ ಸೆಳೆಯುವ ಶಕ್ತಿ ಇರುತ್ತದೆ. ಯಾವುದೇ ಮಕ್ಕಳು ಹೀಗೆ ಇರುತ್ತವೆ ಎಂದು ನೀವು ಹೇಳುವುದಾದರೆ, ತುಲಾ ರಾಶಿಯ ಮಕ್ಕಳು ಮತ್ತೂ ವಿಶೇಷ. ಈ ಮಕ್ಕಳು ತುಂಬ ಪ್ರಶಾಂತವಾಗಿರುತ್ತವೆ. ಯಾವುದೇ ಕಾರಣವಿಲ್ಲದೆ ಅಳುವಂಥ ಸಂದರ್ಭ ಸಹ ವಿರಳ. ಹೃದಯ ಮತ್ತು ಮನಸಿನಿಂದಲೂ ಪ್ರಾಮಾಣಿಕವಾಗಿರುತ್ತವೆ.
ಈ ಮಕ್ಕಳು ನಿಯಮಗಳನ್ನು ಮೀರುವಂಥವಲ್ಲ. ಆದರೆ ಆ ನಿಯಮಗಳನ್ನು ಪಾಲಿಸಬೇಕು ಅಂದರೆ ಅದಕ್ಕೆ ಸರಿಯಾದ ಕಾರಣ ಕೊಡಲೇಬೇಕು. ನೀವು ಹೇಳುವ ವಿಚಾರದಲ್ಲಿ ತರ್ಕವಿದ್ದರೆ ಮಾತ್ರ ತುಲಾ ರಾಶಿಯ ಮಕ್ಕಳು ಅನುಸರಿಸುತ್ತವೆ. ಯಾವುದೇ ನಿರ್ಧಾರ ನ್ಯಾಯಯುತವಾಗಿರುತ್ತದೆ ಎಂಬುದು ಬಾಲ್ಯದಿಂದಲೇ ಈ ಮಕ್ಕಳಲ್ಲಿ ಕಾಣಬಹುದು.
ತುಲಾ ರಾಶಿಯ ಚಿಹ್ನೆಯೇ ತಕ್ಕಡಿ. ಆದ್ದರಿಂದ ಅಳೆದು- ತೂಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಈ ಮಕ್ಕಳು ಬಹಳ ಸಮಯ ತೆಗೆದುಕೊಳ್ಳುತ್ತವೆ. ಯಾವುದೇ ಒತ್ತಡ ಹೇರದೆ ಪೋಷಕರು ಹಾಗೇ ಈ ಮಕ್ಕಳನ್ನು ಬಿಡಬೇಕು. ಇಲ್ಲದಿದ್ದರೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯೇ ಕುಂದುತ್ತಾ ಹೋಗುತ್ತದೆ.

ಪ್ರೀತಿಯಿಂದಲೇ ಹೇಳಿಕೊಡಬೇಕು
ಈ ಮಕ್ಕಳಿಗೆ ಏನಾದರೂ ಕಲಿಸಬೇಕು ಅಂದರೆ ಪ್ರೀತಿಯಿಂದಲೇ ಹೇಳಿಕೊಡಬೇಕು. ಸ್ವಲ್ಪ ಕಠಿಣವಾದರೂ ಸಮಸ್ಯೆ ಬಿಗಡಾಯಿಸುತ್ತದೆ. ಈ ಮಕ್ಕಳ ತಿಳಿವಳಿಕೆ ಮಟ್ಟ ಹೆಚ್ಚಿರುತ್ತದೆ. ಇದರಿಂದ ಪೋಷಕರು ಸಿಟ್ಟಾಗುವ ಸಾಧ್ಯತೆಯೂ ಉಂಟು. ಈ ಗುಣವನ್ನು ಆ ಮಕ್ಕಳಲ್ಲಿ ಆಶಾವಾದದಂತೆಯೇ ನೋಡಬೇಕು.

ನಗುವಿಗೆ ಗೆಲ್ಲುವ ಶಕ್ತಿ
ಇವರು ಬಲೇ ಕ್ಲೀನು. ಗಲೀಜಾದ ಜಾಗದಲ್ಲಿ ಕೂತಂಥ ಸಂದರ್ಭ ಕಾಣುವುದೇ ಅಪರೂಪ. ತುಂಬ ಉದಾರ ಬುದ್ಧಿ ಇರುವ 'ತುಲಾ' ಬೇರೆಯವರಿಗೆ ತೊಂದರೆ ಕೊಡುವ ಪೈಕಿ ಅಲ್ಲ. ಯಾವುದೇ ವಿಚಾರವನ್ನು ಪಟ್ಟನೆ ಅರ್ಥ ಮಾಡಿಕೊಳ್ಳಬಲ್ಲ ಈ ಮಕ್ಕಳ ನಗುವಿಗೆ ಏನನ್ನಾದರೂ ಗೆಲ್ಲಬಲ್ಲ ಶಕ್ತಿ ಇರುತ್ತದೆ.

ಸಲೀಸಾಗಿ ಬೆರೆಯುತ್ತವೆ
ಬುದ್ಧಿವಂತಿಕೆಯ ಕಾರಣಕ್ಕೂ ಗಮನ ಸೆಳೆಯುವ ಈ ಮಕ್ಕಳು ಬೇರೆಯವರ ಜತೆಗೆ ಸಲೀಸಾಗಿ ಬೆರೆಯುತ್ತವೆ. ತನಗೆ ಪ್ರಾಮುಖ್ಯ ಇಲ್ಲದ ಜಾಗದಲ್ಲಿ ಹೆಜ್ಜೆ ಕೂಡ ಹಾಕಲ್ಲ. ಸ್ವಲ್ಪ ದುಬಾರಿ ಸಂಗತಿ- ವಿಚಾರಗಳ ಬಗ್ಗೆ ಸೆಳೆತ ಹೆಚ್ಚಿರುತ್ತದೆ. ಕ್ರೀಡೆ, ನಾಟಕ ಮತ್ತು ಇತರ ಕಲೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತವೆ.

ವಿಪರೀತ ಸ್ನೇಹಿತರು
ವಿಪರೀತ ಸ್ನೇಹಿತರಿರುತ್ತಾರೆ. ಈ ಮಕ್ಕಳಲ್ಲಿ ಕೋಪ ಕಡಿಮೆ. ಆದರೆ ಸಿಟ್ಟಿನ ಭರದಲ್ಲಿ ಏನಾದರೂ ಮಾತನಾಡಿ, ಆ ನಂತರ ಸಂಕಟ ಪಡುತ್ತವೆ. ಈ ಮಕ್ಕಳ ಸಿಟ್ಟನ್ನು ಕಡಿಮೆ ಮಾಡುವುದೇ ಸವಾಲು. ಅಪರೂಪದಲ್ಲಿ ಅಪರೂಪ ಎಂಬಂತೆ ಸೋಮಾರಿತನ ಕಾಣಿಸಿಕೊಳ್ಳುತ್ತದೆ. ಯಾವುದೇ ಕ್ರೀಡೆ ಅಥವಾ ಚಟುವಟಿಕೆ ಆದರೂ ಸಾಧನೆ ಕಡೆಗೆ ಈ ಮಕ್ಕಳ ಗುರಿ ಇರುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications