4 ರಾಜಯೋಗದಿಂದ ಬೆಳಗುವುದು 5 ರಾಶಿಯವರ ಭಾಗ್ಯ: ಶ್ರಾವಣ ಪೂರ್ತಿ ಇವರ ಮೇಲಿರಲಿದೆ ಶಿವನ ಕೃಪೆ
ಶ್ರಾವಣ ಮಾಸಕ್ಕೆ ನಮ್ಮಲ್ಲಿ ವಿಶೇಷ ಮಹತ್ವವಿದೆ. ಆದರೆ ಶ್ರಾವಣದಲ್ಲಿ ನಾಲ್ಕು ಶುಭ ಯೋಗಗಳು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳ ಸಂಚಾರದ ಪರಿಣಾಮವಾಗಿ ಬುಧಾದಿತ್ಯ ರಾಜಯೋಗ, ಹಂಸ ಮಹಾಪುರುಷ ರಾಜಯೋಗ, ಪ್ರೀತಿ ಯೋಗ ಮತ್ತು ಆಯುಷ್ಮಾನ್ ಯೋಗ ಒಟ್ಟಿಗೆ ನಿರ್ಮಾಣವಾಗಿದೆ. ಈ ಶುಭ ಯೋಗಗಳಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಶಿವನ ಆಶೀರ್ವಾದ ತುಸು ಹೆಚ್ಚೇ ಇರುವುದು. ಸಂಪತ್ತು ಹೆಚ್ಚಾಗುವುದು, ವೃತ್ತಿಜೀವನದಲ್ಲಿ ಲಾಭವಾಗುವುದು.
2 ರಾಜಯೋಗಗಳು ಮತ್ತು 2 ಶುಭ ಯೋಗಗಳು
ಜ್ಯೋತಿಷ್ಯದ ಪ್ರಕಾರ, ಆಗಸ್ಟ್ 24 ರಂದು, ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಬುಧನ ಸಂಯೋಗವು ಬುಧಾದಿತ್ಯ ಯೋಗವನ್ನು ಸೃಷ್ಟಿಸಿದೆ. ಗುರುವು ತನ್ನ ಉತ್ತುಂಗ ರಾಶಿಯಾದ ಕರ್ಕ ರಾಶಿಯಲ್ಲಿದ್ದು, ಹಂಸ ರಾಜಯೋಗ ನಿರ್ಮಾಣವಾಗಿದೆ. ಇದಲ್ಲದೆ, ಪ್ರೀತಿ ಯೋಗ ಮತ್ತು ಆಯುಷ್ಮಾನ್ ಯೋಗವೂ ಇಂದು ರೂಪುಗೊಂಡಿದೆ.

ಅದೃಷ್ಟ ರಾಶಿಗಳು
ವೃಷಭ ರಾಶಿ (Taurus): ವೃಷಭ ರಾಶಿಯವರು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವರು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ದಿನ ಉತ್ತಮವಾಗಿರುವುದು. ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುವುದು. ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುವುದು. ಹೆಜ್ಜೆ ಹೆಜ್ಜೆಯಲ್ಲಿಯೂ ಜಯ ಸಿಗುವುದು. ಆಸ್ತಿ ಖರೀದಿಸುವ ಯೋಗವಿದೆ. ಹೊಸ ಕೆಲಸಕ್ಕೆ ಸೇರಲು ಸೂಕ್ತ ಕಾಲ ಇದು.
ಕರ್ಕಾಟಕ ರಾಶಿ (Cancer): ವೃತ್ತಿಜೀವನದಲ್ಲಿ ಲಾಭವಾಗುವುದು. ತುಂಬಾ ದಿನಗಳಿಂದ ನಿರೀಕ್ಷಿಸುತ್ತಿದ್ದ ಸಿಹಿ ಸುದ್ದಿ ಸಿಗುವುದು. ಹೊಸ ಕೆಲಸಕ್ಕೆ ಪ್ರಯತ್ನಿಸಬೇಕು ಎಂದಿರುವವರಿಗೆ ಇದು ಸಕಾಲ. ಹೊಸ ವ್ಯವಹಾರವನ್ನು ಕೂಡಾ ಆರಂಭ ಮಾಡಬಹುದು. ಆರ್ಥಿಕವಾಗಿ ಸಮಯ ಅನುಕೂಲಕರವಾಗಿರುವುದು. ಮನೆಯಲ್ಲಿ ಸಂತೋಷ, ಸಂಭ್ರಮದ ವಾತಾವರಣವಿರುವುದು. ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ವಾಹನ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಇದಾಗಿರುವುದು.
ತುಲಾ ರಾಶಿ (Libra): ತುಲಾ ರಾಶಿಯವರ ಖ್ಯಾತಿ ಹೆಚ್ಚಾಗುವುದು. ಜೀವನದಲ್ಲಿ ಸೌಕರ್ಯಗಳು ಮತ್ತು ಐಷಾರಾಮಿಗಳು ಹೆಚ್ಚಾಗುವುದು. ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸುವಿರಿ. ಇದರಿಂದ ನಿಮಗೆ ಎಲ್ಲಾ ಕಡೆಗಳಿಂದ ಪ್ರಶಂಸೆ ಸಿಗಬಹುದು. ಬಡ್ತಿ ಸಿಗುವುದು. ಉನ್ನತ ಸ್ಥಾನಕ್ಕೆ ಏರುವಿರಿ. ಮನೆ ನಿರ್ಮಾಣ ಅಥವಾ ಖರೀದಿ ಬಗ್ಗೆ ಮುಂದುವರಿಯಬಹುದು. ಹಣದ ಸಮಸ್ಯೆ ನಿವಾರಣೆಯಾಗುವುದು.
ಧನು ರಾಶಿ (Sagitarius): ಧನು ರಾಶಿಯವರ ಅದೃಷ್ಟ ಹೆಚ್ಚುವುದು. ಉದ್ಯೋಗದಲ್ಲಿರುವವರಿಗೆ ಯಶಸ್ಸಿನ ಹಾದಿಗಳು ತೆರೆದುಕೊಳ್ಳುವುದು. ದೊಡ್ಡ ಸಾಧನೆ ಮಾಡುವಿರಿ. ಬಾಕಿ ಇದ್ದ ಕೆಲಸ ದಡ ಸೇರುವುದು. ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಅನಿರೀಕ್ಷಿತ ಮೂಲದಿಂದ ಹಣ ಸಿಗುವುದು. ಹೊಸ ವ್ಯವಹಾರ ಆರಂಭಿಸಬಹುದು. ಕೈ ಹಾಕುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶ್ಸು ಸಿಗುವುದು. ಮಕ್ಕಳ ಸಾಧನೆ ಖುಷಿ ಕೊಡುವುದು.
ಮಕರ ರಾಶಿ (Capricorn): ಮಕರ ರಾಶಿಯವರು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಸಿಹಿ ಸುದ್ದಿ ಕೇಳುವಿರಿ. ಇಲ್ಲಿಯವರೆಗಿನ ಕಷ್ಟಗಳಿಗೆ ಮುಕ್ತಿ ಸಿಗುವುದು. ಯಶಸ್ಸು ನಿಮ್ಮ ಮುಂದಿರುವುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಗಮನಾರ್ಹ ಲಾಭವಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಹಳೆಯ ಸಮಸ್ಯೆಗೆ ಪರಿಹಾರ ಸಿಗುವುದು.
ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ
ಗ್ರಹಗಳು ಮತ್ತು ನಕ್ಷತ್ರಗಳ ಸಂಚಾರದ ಪರಿಣಾಮ ಎಲ್ಲಾ ರಾಸಿಯವರ ಮೇಲೆ ಆಗುವುದು. ವೈಯಕ್ತಿಕ ಜಾತಕದಲ್ಲಿ ಗ್ರಹಗಳ ಸ್ಥಾನಕ್ಕೆ ಅನುಗುಣವಾಗಿ ಜಾತಕ ಫಲ ಬೇರೆ ಬೇರೆಯಾಗಿರುವುದು. ನಿಖರವಾದ ಫಲದ ಬಗ್ಗೆ ತಿಳಿಯಬೇಕಾದರೆ ನಿಮ್ಮದೇ ಜಾತಕವನ್ನು ಜ್ಯೋತಿಷಿಗಳಲ್ಲಿ ತೋರಿಸಬೇಕಾಗುತ್ತದೆ.


Click it and Unblock the Notifications
