ದುಡಿಯದ ಗಂಡನನ್ನು ಹೆಂಡತಿ ಎಂದೂ ಕ್ಷಮಿಸಲಾರಳು

* ಧವಳ
ಮಿಥುನ ರಾಶಿ ಪುರುಷ - ಮಕರ ರಾಶಿ ಸ್ತ್ರೀ : ಸ್ತ್ರೀಯದು ಕಲ್ಲು ಹೃದಯ ಇವಳಿಗೆ ಭಾವುಕತೆಯ ಗಂಧ-ಗಾಳಿ ಗೊತ್ತಿಲ್ಲ ಎಂದು ಮಿಥುನ ರಾಶಿ ಪುರುಷ ತಿಳಿದರೆ, ಛೀ ಇತನಿಗಿನ್ನು ಬಾಲಿಶ ಗುಣ, ಈಗಲೂ ಮಗು ಥರ ಆಡ್ತಾರೆ ಎಂದು ಮಕರ ರಾಶಿ ಸ್ತ್ರೀ ಕಿರಿಕಿರಿ ಅನುಭವಿಸುತ್ತಾರೆ. ಹಣಕಾಸಿನ, ಮನೆ ಯಜಮಾನಿಕೆ ಹೊಣೆಗಾರಿಕೆ ಎಲ್ಲವು ಸ್ತ್ರಿಯೇ ನಿರ್ವಹಿಸುತ್ತಾರೆ. ಆದರೆ ಪುರುಷರು ಜವಾಬ್ದಾರಿಯನ್ನು ಹೊರದೆ ಹಾಯಾಗಿ ತಿರುಗಾಡಿಕೊಂಡು ಇರ್ತಾರೆ. ಸಹನೆ ಮಿತಿ ಮೀರಿದರೆ ಯಾರಿಗೆ ತಾನೆ ಹೊಂದಿಕೊಂಡು ಇರಲು ಸಾಧ್ಯ. ಇಬ್ಬರ ಈ ವ್ಯತಿರಿಕ್ತ ಗುಣವು ದಾಂಪತ್ಯ ಒಡುಕಿಗೆ ಕಾರಣ ಆಗುತ್ತದೆ. ಆಕೆ ಒಮ್ಮೆ ಈತನನ್ನು ಬಿಟ್ಟರೆ ಮತ್ತೆಂದಿಗೂ ಒಂದಾಗಲು ಇಷ್ಟಪಡುವುದಿಲ್ಲ ಇದನ್ನು ದೂರ ಮಾಡಲು ಪುರುಷ ತನ್ನ ತಾನು ಬದಲಾವಣೆ ಮಾಡಿಕೊಳುವುದು ಒಳಿತು. ಜೀವನದಲ್ಲಿ ಸಂಗಾತಿಗೆ ನೀವು ಗೌರವ ನೀಡಿದರೆ ಸಮಾಜವು ನಿಮ್ಮನ್ನು ಗೌರವಿಸುತ್ತದೆ.
ಮಿಥುನ ರಾಶಿ ಸ್ತ್ರೀ - ಕುಂಭ ರಾಶಿ ಪುರುಷ : ಮಿಥುನ ರಾಶಿ ಸ್ತ್ರೀ ಮಾತನಾಡಲು ಹೆಚ್ಚು ಇಷ್ಟ ಪಡ್ತಾರೆ. ಆಕೆಗೆ ತನ್ನ ಸಂಗಾತಿಯ ಜೊತೆ ಮಾತನಾಡುತ್ತ ಹರಟಲು ತುಂಬಾ ಇಷ್ಟ. ಪ್ರೀತಿಯ ಭಾಷೆ ಆಕೆಗೆ ಚೆನ್ನಾಗಿ ಗೊತ್ತು. ಸಿಹಿಯಾಗಿ ಮಾತಾಡ್ತಾರೆ. ಮಿಥುನ ರಾಶಿ ಸ್ತ್ರೀಗೆ ಒಂದಕ್ಕಿಂತ ಹೆಚ್ಚು ಹೆಸರುಗಳು ಇರುತ್ತವೆ. ಕುಂಭ ರಾಶಿ ಪುರುಷರು ಹೆಂಡತಿಯ ಬಗ್ಗೆ ನಂಬಿಕೆ ಹೊಂದಿರುತ್ತಾರೆ. ಅದರಲ್ಲೂ ಒಮ್ಮೆ ಸಂಗಾತಿಯ ಬಗ್ಗೆ ನಂಬಿಗೆ ಉಂಟಾದರಂತೂ ಮನಃಪೂರ್ವಕವಾಗಿ ಪ್ರೀತಿಸಲು ಆರಂಭಿಸುತ್ತಾರೆ. ಸತ್ಯ ಹೇಳುವವರನ್ನು ಕಂಡ್ರೆ ಇವರಿಗೆ ಇಷ್ಟ. ಬೇಸರದ ಸಂಗತಿ ಅಂದ್ರೆ ಮಿಥುನ ರಾಶಿ ಸ್ತ್ರೀಯಲ್ಲಿ ಅದರ ಕೊರತೆ ಹೆಚ್ಚಾಗಿ ಕಾಣಸಿಗುತ್ತದೆ. ಇದು ದಾಂಪತ್ಯದ ಒಡಕಿಗೆ ಕಾರಣ ಆಗುತ್ತದೆ. ಹಾಗಲ ಕಾಯಿ ಕಹಿ ಆದರೂ ಆರೋಗ್ಯ ಕಾಪಾಡುತ್ತದೆ. ಸಕ್ಕರೆ ತುಂಬಾ ಸಿಹಿ ಆದರೆ... ಪತಿಯ ಮನ ಅರಿತು ಬಾಳಿ ಬದುಕು ಸುಂದರವಾಗಿಟ್ಟುಕೊಳ್ಳಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications