ಗಂಡ ಹೆಂಡತಿ ಅಂದರೆ ಹೀಗಿರಬೇಕು

ವೃಷಭ ರಾಶಿಯ ಪುರುಷರು ಪ್ರೀತಿಸುತ್ತಾರೆ, ಆದರೆ ಅದನ್ನು ಅಷ್ಟೆ ಬೇಗ ಮರೆತು ಹೋಗ್ತಾರೆ. ಅದೇ ರೀತಿ ಮಿಥುನ ರಾಶಿ ಸ್ತ್ರೀಯರು ಅಭಿಪ್ರಾಯಗಳನ್ನು ಹರಿಬರಿಯಾಗಿ ತೆಗೆದುಕೊಳ್ತಾರೆ. ಹಾಗೆಂದು ಎಲ್ಲವೂ ಪರ್ಫೆಕ್ಟ್ ಆಗಿ ಇರುತ್ತದೆ ಎಂದು ಇದರ ಅರ್ಥ ಅಲ್ಲ. ಸಾಕಷ್ಟು ಸಂದರ್ಭಗಳಲ್ಲಿ, ತಮಾಷೆ ಅಂದ್ರೆ, ಅವರಿಗೇನು ಬೇಕು ಎನ್ನುವ ಅಂಶ ಸ್ವಯಂ ಅವರಿಗೇ ತಿಳಿದಿರುವುದಿಲ್ಲ. ಅದನ್ನು ವ್ಯಕ್ತಪಡಿಸುವ ಗುಣವೂ ಇರುವುದಿಲ್ಲ. ಆದರೆ ವೃಷಭ ರಾಶಿ ಪುರುಷ ಶಾಂತ ಸ್ವಭಾವ ಹೊಂದಿರುತ್ತಾರೆ. ಸೊ, ಅದು ಮಿಥುನ ರಾಶಿಯ ಹೆಣ್ಣಿನ ಈ ಗುಣವನ್ನು ತಾಳ್ಮೆಯಿಂದ ನೋಡಲು ಕಾರಣ ಆಗುತ್ತದೆ. ಮತ್ತೊಂದು ಸಂಗತಿ ಈ ರಾಶಿ ಪುರುಷ ಧೈರ್ಯಕ್ಕೆ ಹೆಸರುವಾಸಿ. ಯಾವುದೇ ಕೆಲಸವನ್ನು, ಸಮಸ್ಯೆಯನ್ನು ಸಹನೆಯಿಂದ ಪರಿಹರಿಸುತ್ತಾರೆ. ಈಕೆ ಆತುರಕ್ಕೆ ಈತನ ಸಮಾಧಾನ ಗುಣ ಹೊಂದಿಕೆ ಆಗುತ್ತದೆ.
ವೃಷಭ ರಾಶಿ ಸ್ತ್ರೀ - ಕರ್ಕಾಟಕ ರಾಶಿ ಪುರುಷ
ಒಬ್ಬರನ್ನೊಬ್ಬರು ಕಂಡ ತಕ್ಷಣ ಕಣ್ಣೋಟ ಬೆರೆತು ಮರುಕ್ಷಣವೇ ಲವ್ ಉಂಟಾಗದು. ಇವರಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತ ಬಳಿಕವಷ್ಟೇ ಸಮ್ಮತಿಯ ಮುದ್ರೆ ಒತ್ತುವುದು. ಆಮೇಲೆ ನೋಡ್ರಿ ಇಬ್ಬರೂ ಜಕ್ಕವಕ್ಕಿಗಳಂತೆ ಒಬ್ಬರನ್ನೊಬ್ಬರು ಬಿಡರು. ಅಷ್ಟು ಪ್ರೀತಿಸ್ತಾರೆ ಅಂದ್ರೆ ಬೇರೆಯವರು ಅಯ್ಯೋ ನಮಗೆ ಇಲ್ಲವಲ್ಲ ಇಂತಹ ಬದುಕು ಎಂದು ಹೊಟ್ಟೆ ಉರಿದು ಕೊಳ್ಳುವಷ್ಟು! ಒಬ್ಬರಿಗಾಗಿ ಒಬ್ಬರು ಹುಟ್ಟಿದ್ದಾರೆ ಎನ್ನುವಷ್ಟು ಪ್ರೀತಿಸುತ್ತಾ ಇರ್ತಾರೆ. ವೃಷಭ ರಾಶಿ ಸ್ತ್ರೀಯರಿಗೆ ಧೈರ್ಯದ ಕೊರತೆ. ಕೋಪವಂತೂ ಶೀಘ್ರವಾಗಿ ಬರುತ್ತದೆ. ಕರ್ಕಾಟಕ ರಾಶಿ ಪುರುಷರು ಇದಕ್ಕೆ ವ್ಯತಿರಿಕ್ತವಾಗಿ ಇರ್ತಾರೆ. ಸಮಚಿತ್ತ ಇವರ ಪ್ಲಸ್ ಪಾಯಿಂಟ್. ಶಾಂತವಾಗಿದ್ದು ಸಮಸ್ಯೆಯನ್ನು ನಿಭಾಯಿಸುತ್ತಾರೆ.












Click it and Unblock the Notifications