ಕೇಳಿಕೊಂಡು ಬಿದ್ದಿರೋಕೆ ಯಾರು ಒಪ್ತಾರೆ ಕಣ್ರೀ!

Love compatibility astrology
ಆಧುನಿಕ ಜಮಾನಾದಲ್ಲಿ ಮಹಿಳೆಯ ಮನಸ್ಥಿತಿ, ಸ್ಥಿತಿಗತಿ ಸಾಕಷ್ಟು ಬದಲಾವಣೆ ಕಂಡಿದೆ. ಗಂಡನ ಬೆರಳ ಇಶಾರೆಗೆ ತಕ್ಕಂತೆ ಆಡುವ ಬೊಂಬೆ ಹೆಂಡತಿಯಾಗಿ ಉಳಿದಿಲ್ಲ. ಹೆಣ್ಣಿನ ಮನಸ್ಥಿತಿಗೆ ತಕ್ಕಂತೆ ಗಂಡು, ಗಂಡಿನ ಅಗತ್ಯ, ವ್ಯಕ್ತಿತ್ವಕ್ಕೆ ತಕ್ಕಂತೆ ಹೆಣ್ಣು ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡರೆ ಸಾಮರಸ್ಯಕ್ಕೆ ಕೊರತೆಯೇ ಇರುವುದಿಲ್ಲ. ಈ ದೃಷ್ಟಿಯಿಂದ ಯೋಚಿಸಿದರೆ, ಹನ್ನೆರಡು ರಾಶಿಗಳ ಗಂಡು, ಹೆಣ್ಣುಗಳ ಗುಣಸ್ವಭಾವ ಅರಿತುಕೊಳ್ಳುವುದು ಅತೀ ಮುಖ್ಯವಾಗುತ್ತದೆ.

* ಧವಳ

ಮೇಷ ರಾಶಿ ಸ್ತ್ರೀ - ಮೀನ ರಾಶಿ ಪುರುಷ

ಮೀನ ರಾಶಿ ಪುರುಷ ಎಮೋಷನಲ್ ಫೂಲ್. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಹಿಂದೂ ಮುಂದು ನೋಡಲ್ಲ. ಮುಖ್ಯವಾಗಿ ತಾನು ನಿರ್ಣಯ ತೆಗೆದುಕೊಳ್ಳಬೇಕು ಅಷ್ಟೆ ಆತನಿಗೆ ಗೊತ್ತಿರುವುದು. ಆದರೆ ಮೇಷ ರಾಶಿ ಸ್ತ್ರೀ - ತನ್ನ ಗಂಡ ತಾನು ಹೇಳಿದಂಗೆ ಕೇಳಿಕೊಂಡು ಬಿದ್ದಿರಬೇಕು, ಒಂದರ್ಥದಲ್ಲಿ ಜೋರು ಕಾ ಗುಲಾಂ ಆಗಿರಬೇಕು ಎಂದು ಬಯಸ್ತಾಳೆ. ಆದರೆ ಸಂಬಂಧಗಳ ವಿಷಯಕ್ಕೆ ಬಂದಾಗ ಮೀನ ರಾಶಿ ಪುರುಷ ತಾನು ಹೇಳಿದಂತೆ ಸಂಗಾತಿ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಎಂದು ಬಯಸುತ್ತಾನೆ. ಯಾರ್ ಕಣ್ರೀ ಒಪ್ತಾರೆ ಇದನ್ನು! ಆಕೆ ಒಪ್ಪಲ್ಲ ಈತ ಬಿಡಲ್ಲ. ಸರಿ ಆಗ ಇಬ್ಬರಲ್ಲೂ ಡಿಶ್ಯೂಂ ಡಿಶ್ಯೂಂ. ಅದು ಸಮರಸ ದೂರ ಮಾಡಿ ಬಿಡುತ್ತದೆ. ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಹಾಳಾಗುತ್ತದೆ ಅಂದ್ರೆ ಕೆಲವು ಸಂದರ್ಭಗಳಲ್ಲಿ ಇಬ್ಬರೂ ಸೋಡಚೀಟಿ ಕೊಟ್ಟುಕೊಳ್ಳಲು ಸಿದ್ಧರಾಗಿ ಬಿಡ್ತಾರೆ. ಮತ್ತೊಂದು ವಿಚಿತ್ರ ಅಂಶ ಅಂದ್ರೆ ಇವರಿಬ್ಬರೂ ಯಾವುದೋ ಒಂದು ವಸ್ತು ಬೇಕು ಅಂತ ಆಸೆ ಪಡ್ತಾರೆ ಅಂತ ಇಟ್ಟುಕೊಳ್ಳಿ, ಆದರೆ ಇಬ್ಬರೂ ಹೇಳಿಕೊಳ್ಳುವುದಿಲ್ಲ. ಪ್ರೀತಿ ಬಯಸಿದರೆ ಕೊಟ್ಟು ತಗೊಂಡು ಬಿಡ್ರಿ! ಆ ಒಂದು ಗುಣವು ನಿಮ್ಮ ಬಾಂಧವ್ಯ ಕಾಪಾಡುತ್ತದೆ, ಇಲ್ಲದೆ ಇದ್ರೆ ಅದೇ ರಾಗ ಅದೇ ಹಾಡು!

ಮೇಷ ರಾಶಿ ಪುರುಷ - ಮೀನ ರಾಶಿ ಸ್ತ್ರೀ

ಮೀನ ರಾಶಿ ಸ್ತ್ರೀಯರು ಉಲ್ಲಾಸದ ಮನಸ್ಥಿತಿ ಹೊಂದಿರುತ್ತಾರೆ. ಈ ಜೋಡಿ ಸಖತ್ ಹ್ಯಾಪಿ ಲೈಫ್ ಲೀಡ್ ಮಾಡ್ತಾ ಇರ್ತಾರೆ. ಲೈಲಾ ಮಜನೂ ಬೇರೆ ಅಲ್ಲ ಇವರು ಬೇರೆ ಅಲ್ಲ ಅನ್ನುವಷ್ಟು ಜಾಲಿ ಜೀವಿಗಳು! ಒಬ್ಬರಿಗಾಗಿ ಒಬ್ಬರು ಹುಟ್ಟಿದ್ದಾರೆ ಎಂದು ಅನ್ನಿಸುವಂತೆ ಬದುಕಿರುತ್ತಾರೆ. ಮೀನ ರಾಶಿ ಸ್ತ್ರೀ ಟಾಕೆಟೀವ್. ಅದೇ ರೀತಿ ವೆರಿ ಗುಡ್ ಲಿಸನರ್. ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಯೋಚಿಸುವ ಮನಸ್ಥಿತಿ ಇವರದು. ಪತಿಯ ಮನವನ್ನು ಅರಿತು ಬಾಳುವ ಕಲೆ ಇವರಿಗೆ ರಕ್ತಗತ. ಇಬ್ಬರ ಬದುಕು ಹಾಲುಜೇನು. ಇಚ್ಛೆಯನ್ನು ಅರಿತು ನಡೆಯುವ ಸತಿ ಸಿಕ್ಕಾಗ ಯಾವ ಗಂಡಸು ಜಗಳ ಆಡ್ತಾನೆ? ಬಾಯ್ಮುಚ್ಚಿಕೊಂಡು ಹಾಯಾಗಿ ಬದುಕು ನಡೆಸ್ತಾರೆ. ಸೋ ಇವರ ಬದುಕು ಸದಾ ಬಂಗಾರವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+