ಬಿಕ್ಕಿಬಿಕ್ಕಿ ಅತ್ತರೆ ಅದು ಸಂತೋಷದ ಪರಾಕಾಷ್ಠೆ!

ಇಂತಹುದೇ ಭಿನ್ನ ಬಗೆಯ ಮನಸ್ಸು ಕುಂಭ ರಾಶಿಯ ಪುರುಷ ಸಹ ಹೊಂದಿರುತ್ತಾರೆ. ಈತ ತನ್ನ ಆಪ್ತರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅಂದ್ರೆ ದಯಮಾಡಿ ಅದನ್ನು ದುಃಖ ಎಂದು ತಿಳಿಯಬೇಡಿ, ಅದು ಸಂತೋಷದ ಪರಾಕಾಷ್ಠೆ. ಅದೇ ರೀತಿ ವಿಚಿತ್ರವಾಗಿ ನಕ್ಕ ಎಂದು ಅನ್ನಿಸಿದರೆ ಅದರರ್ಥ ಸಿಕ್ಕಾಪಟ್ಟೆ ದುಃಖದಲ್ಲಿದೆ ಪ್ರಾಣಿ ಎಂದು ತಿಳಿಯಬೇಕು. ಈ ವಿಷಯವನ್ನು ಕುಂಭ ರಾಶಿ ಸ್ತ್ರೀ ಅರಿತುಕೊಂಡರೆ ಬದುಕಲ್ಲಿ ಖುಷಿ ಕಾಮನ್! ಇಲ್ಲದೆ ಇದ್ರೆ ಜೀವನವು ಗೊಂದಲಗಳ ಮೂಟೆ ಆಗುತ್ತದೆ.
ಮೇಷ ರಾಶಿ ಪುರುಷ - ಕುಂಭ ರಾಶಿ ಸ್ತ್ರೀ : ಮೇಷ ರಾಶಿ ಪುರುಷನ ಹಾರ್ಟ್ ಸದಾ ಪ್ರೀತಿಗಾಗಿ ತೆರೆದಿರುತ್ತದೆ. ಈ ರಾಶಿಯ ಪುರುಷರು ಪ್ರೀತಿಯಲ್ಲಿ ಶೀಘ್ರವಾಗಿ ಮುಳುಗೇಳುತ್ತಾರೆ. ಆದರೆ ಕುಂಭ ರಾಶಿ ಸ್ತ್ರೀ ಹಾಗಲ್ಲ. ಆಕೆ ನಿಧಾನಸ್ತೆ. ಮದುವೆಗೆ ಮುನ್ನ ಈಕೆಯ ಈ ಗುಣ ಓಕೆ, ಆದರೆ ಮದುವೆಯಾದ ಬಳಿಕವು ಆಕೆಯಲ್ಲಿ ಇದೇ ಗುಣ ಮುಂದುವರೆದರೆ ಕಷ್ಟ ಕಷ್ಟ!
ಅದರಲ್ಲೂ ಮೇಷ ರಾಶಿ ಪುರುಷನನ್ನು ಪತಿಯಾಗಿ ಪಡೆದರೆ ಈ ವಿಷಯವನ್ನು ಸದಾ ತಲೆಯಲ್ಲಿ ಇಟ್ಟುಕೊಳ್ಳಬೇಕು. ಯಾವಾಗ ಈಕೆ ಗಂಡನ ಪ್ರೀತಿಗೆ ರಿಯಾಕ್ಟ್ ಮಾಡಲ್ವೋ ಆಗ ಆತ ಸಿಟ್ಟಿನಿಂದ ಉರಿದು ಬೂದಿ ಆಗ್ತಾನೆ. ಅದೂ ಸಹಜ. ಈ ಅಂಶವು ಜಗಳಕ್ಕೆ ದಾರಿ ಮಾಡಿ ಕೊಡುತ್ತದೆ. ಎಲ್ಲಿ ಗಲಾಟೆ ಇರುತ್ತದೆಯೋ ಅಲ್ಲಿ ನೆಮ್ಮದಿಯನ್ನು ಹುಡುಕುವ ವಾತಾವರಣ. ಆದರೂ ಇವರಿಬ್ಬರ ಒಂದು ಒಳ್ಳೆಯ ಗುಣ ಅಂದ್ರೆ ಹೊಂದಿಕೊಳ್ಳುವುದು. ಹಾಳಾಗಿ ಹೋಗ್ಲಿ ಅವಳು ಹಾಗೆ ಏನ್ ಮಾಡೋದು ಎಲ್ಲ ವಿಷಯದಲ್ಲೂ ಕೊಂಕು ಹುಡುಕಿದರೆ ಬದುಕು ನಡೆಸೋಕೆ ಆಗುತ್ತಾ ಎಂದು ಆತ ಅಂದುಕೊಂಡ್ರೆ, ಅಯ್ಯೋ ಇದೊಂದು ಫಿಲ್ಮಿ ಮನುಷ್ಯ, ಪ್ರೀತಿ ಅಂದ್ರೆ ಐ ಲವ್ ಯು ಎಂದು ಹೇಳಿದ್ರೆನೆನಾ! ಯಾಕೆ ನನ್ ವರ್ತನೆಯಿಂದ, ಸರ್ವೀಸ್ನಿಂದ ತಿಳಿಯೋಲ್ವ ಎಂದುಕೊಂಡು ಇಬ್ಬರೂ ಕಾಂಪ್ರೋ ಆಗ್ತಾರಂತೆ. ಇವರಿಬ್ಬರ ನಡುವೆ ಪ್ರೀತಿಯ ವಿಷಯದಲ್ಲಿ ತುಂಬಾ ನಂಬಿಕೆ ಇರುತ್ತದೆ.












Click it and Unblock the Notifications