ನಕ್ಷತ್ರ ಚಕ್ರಗಳನ್ನು ಜೋಡಿಸುವುದು ಹೇಗೆ?
ಸೌರಕಕ್ಷೆ
ಆಧಾರಿತ ರಾಶಿಚಕ್ರ ಮತ್ತು ಚಾಂದ್ರಕಕ್ಷೆ ಆಧಾರಿತ ನಕ್ಷತ್ರ ಚಕ್ರಗಳನ್ನು ಜೋಡಿಸುವುದು ಹೇಗೆ? ದ್ವಾದಶ ರಾಶಿಗಳಿಗೂ 27 ನಕ್ಷತ್ರಗಳಿಗೂ ಸಂಬಂಧ ಕಲ್ಪಿಸುವುದು ಹೇಗೆ? ನಮ್ಮ ಮೇಧಾವೀ ಪುರಾತನರು ಬಲು ಸುಲಭವಾಗಿ ಈ ಸಮಸ್ಯೆಯನ್ನು ಪರಿಹರಿಸಿದರು. ಪ್ರತೀ ನಕ್ಷತ್ರವನ್ನು ಪುನಃ 4 ಸಮಪಾಲುಗಳಾಗಿ ಅಥವ ಉಪಖಂಡಗಳಾಗಿ ವಿಭಾಗಿಸಿ ಅವನ್ನು ನಕ್ಷತ್ರದ 'ಪಾದ"ಗಳು ಎಂದು ಕರೆದರು. ಪ್ರತೀ ನಕ್ಷತ್ರಪಾದದ ವಿಸ್ತಾರ 3020". ಪ್ರತೀ ರಾಶಿಯಲ್ಲಿ 9 ನಕ್ಷತ್ರ ಪಾದಗಳಿರುತ್ತವೆ. 27 ನಕ್ಷತ್ರಗಳೂ 12 ರಾಶಿಗಳಲ್ಲಿ ವಿಲೀನವಾಗುತ್ತವೆ. ಈ ವ್ಯವಸ್ಥೆಯಿಂದ ಜ್ಯೋತಿಷಿಗಳು ತಾವು ಉಲ್ಲೇಖಿಸುವ 'ನವಗ್ರಹ"(?)ಗಳ ಸ್ಥಾನವನ್ನು 'ರಾಶಿಚಕ್ರ(ಜ್ಯೋತಿಷ್ಚಕ್ರ!)ದಲ್ಲಿ ಗುರುತಿಸುತ್ತಾರೆ. id="toptextpromo">ಅಂದಹಾಗೆ,
ಭಾರತೀಯ ಜ್ಯೋತಿಷಿಗಳ ಪ್ರಕಾರ ಜನ್ಮನಕ್ಷತ್ರ ಅಂದರೆ ಜನನದ ಸಮಯದಲ್ಲಿ ಚಂದ್ರ ಇರುವ ನಕ್ಷತ್ರ. ಜನ್ಮರಾಶಿ ಅಂದರೆ ಜನನ ಕಾಲದಲ್ಲಿ ಚಂದ್ರ ಇರುವ ರಾಶಿ. ಜನ್ಮಲಗ್ನ ಅಂದರೆ ಜನನಕಾಲದಲ್ಲಿ ಪೂರ್ವದಲ್ಲಿ ಉದಯಿಸುತ್ತಿರುವ ರಾಶಿ. ಜನನಕಾಲದಲ್ಲಿ 'ನವಗ್ರಹ"ಗಳ ಪೈಕಿ ಯಾವುದು ಯಾವ ರಾಶಿಯಲ್ಲಿ ಯಾವ ನಕ್ಷತ್ರಪಾದದಲ್ಲಿ ಇದೆ ಎಂಬುದನ್ನು ಸೂಚಿಸುವ ಚಿತ್ರವೇ ಜನ್ಮಕುಂಡಲಿ. ಜನ್ಮಕುಂಡಲಿ ಬರೆಯಲು ಕಲಿಯುವುದು ಬಲು ಸುಲಭ. (ಗಣಿತದ, ಖಗೋಲಶಾಸ್ತ್ರದ ಪ್ರಾಥಮಿಕ ಜ್ಞಾನ ಇಲ್ಲದವರೂ ಜನ್ಮಕುಂಡಲಿ ಬರೆಯಲು ನೆರವಾಗಬಲ್ಲ ಸಾಫ್ಟ್ ವೇರ್ ಲಭ್ಯವಿದೆ). id='are-slot-1' class='oiad oi-axt oiadv'> id='top-searched-articles'>ಈ
ಎಲ್ಲ ಮಾಹಿತಿಯ ಹಿನ್ನೆಲೆಯಲ್ಲಿ ಈ ದ್ವಾದಶರಾಶಿಗಳು, 27 ನಕ್ಷತ್ರಗಳು ನಮ್ಮ ಜೀವನದ ಮೇಲೆ ಜ್ಯೋತಿಷಿಗಳು ಹೇಳುವಂತೆ ಪ್ರಭಾವ ಬೀರುವುದು ಸಾಧ್ಯವೇ, ಜನ್ಮಕುಂಡಲಿ ಆಧರಿಸಿ ಭವಿಷ್ಯ ನುಡಿಯುವುದೇ ಆಗಲಿ ಅದನ್ನು ನಂಬುವುದೇ ಆಗಲಿ ಸರಿಯೇ ಎಂಬುದರ ಕುರಿತು ನೀವೇ ಆಲೋಚಿಸಿ. [ಕೃಪೆ : href="http://nilume.wordpress.com/2011/07/27/%E0%B2%B0%E0%B2%BE%E0%B2%B6%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%95%E0%B3%8D%E0%B2%B7%E0%B2%A4%E0%B3%8D%E0%B2%B0/" target="_blank">ನಿಲುಮೆ]











Click it and Unblock the Notifications