• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹು ದಶಾಕಾಲದಲ್ಲಿ ರಾಹುಲ್ ಎಚ್ಚರದಿಂದಿರಲಿ

By * ಎಚ್.ಆರ್. ಹನುಮಂತ ರಾವ್
|
Rajiv Gandhi, former PM of India
ರಾಜೀವ್ ಕುಂಡಲಿ : ಜನ್ಮ 20-8-1944, 7.11AM, 18.58 N., 72.50E., ಶುಕ್ರ ದಶ ಏಷ್ಯಾ 12ವ, 1ತಿಂ, 15ದಿ. ಲಗ್ನ: 16-03 ಸಿಂಹ, ರವಿ: 5-16 ಸಿಂಹ, ಚಂದ್ರ: 18-35 ಸಿಂಹ, ಕುಜ: 2-38 ಕನ್ಯಾ, ಬುಧ: 0-00ಕನ್ಯಾ, ಗುರು: 13-38 ಸಿಂಹ, ಶುಕ್ರ: 20-06 ಸಿಂಹ, ಶನಿ: 15-39 ಮಿಥುನ, ರಾಹು: 4-15 ಕಟಕ, ಕೇತು: 4-15 ಮಕರ.

ರಾಜೀವ ಗಾಂಧಿಯವರ ಜನ್ಮ ಕುಂಡಲಿಯನ್ನು ಪರಿಶೀಲಿಸಿದಾಗ, ಸುತಪಿತರ ಜಾತಕಗಳಲ್ಲಿ ತೋರಿಕೆಗೂ ಕೂಡ ಸಾಮ್ಯತೆ ಕಾಣಬರುವುದಿಲ್ಲ. ರಾಜೀವ್‌ರ ರಾಶಿ ಕುಂಡಲಿಯ ತನು ಸ್ಥಾನದಲ್ಲಿ ಒಟ್ಟಿಗೆ ನಾಲ್ಕು ಗ್ರಹಗಳು- ರವಿ, ಗುರು, ಶುಕ್ರ ಹಾಗು ಚಂದ್ರರು (ಭಾವದಲ್ಲಿ, ಬುಧ, ಕುಜ, ಶುಕ್ರ, ಚಂದ್ರರು) ಸ್ಥಿತರಿದ್ದರೆ, ರಾಹುಲರ ಜನ್ಮ ಹಾಗು ಭಾವ ಕುಂಡಲಿಗಳ ಲಗ್ನಭಾವದಲ್ಲಿಯಾವ ಗ್ರಹವೂ ಇಲ್ಲದಿರುವುದು ಅವರಿಬ್ಬರ ಜೀವನಚಕ್ರ ಅಥವಾ ಶೈಲಿಯಲ್ಲಿ ಸಾಮ್ಯತೆಯಿಲ್ಲದಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ರಾಜೀವರ ಜನ್ಮ, ಭಾವ ಹಾಗು ನವಾಂಶ ಕುಂಡಲಿಗಳು ಸರ್ಪ ದೋಷ ಪರಿಪೂರ್ಣವಾಗಿಯಲ್ಲದಿದ್ದರೂ, ಬಹುಹೆಚ್ಚಿನ ಅಂಶದಲ್ಲಿದರುವುದನ್ನು ಬಿಂಬಿಸುತ್ತಿವೆ. ಭಾವದಲ್ಲಿ ಮಂಗಳನು ರಾಹುಲರ ತನುಸ್ಥಾನವನ್ನು ಕರ್ಮಸ್ಥಾನದಿಂದ ವೀಕ್ಷಿಸಿದರೆ, ರಾಜೀವರ ರಾಶಿಕುಂಡಲಿಯಲ್ಲಿ ಸುಖ ಹಾಗು ಭಾಗ್ಯಾಧಿಪತಿಯಾಗಿ ಲಗ್ನ ಭಾವದಲ್ಲಿ ಸ್ಥಿತನು. ಆದರೂ ವಿದ್ಯೆಯ ವಿಷಯದಲ್ಲಿ,ರಾಜೀವರು ಕೂಡ ಪರಿಪೂರ್ಣರಾಗಲು, ಜನ್ಮ ಕುಂಡಲಿಯಲ್ಲಿ ಅಷ್ಟಮಕ್ಕೆ ಕಲುಷಿತವಾದ ಕುಜ, ಬುಧ ದೃಷ್ಟಿ ಅವಕಾಶ ಕೊಡಲಿಲ್ಲ.

ಹೀಗಾಗಿ, ವಿದ್ಯೆಯಲ್ಲಿ ಯಾವ ಡಿಗ್ರಿಗಳನ್ನು ಪಡೆಯಿದಿದ್ದರೂ, ವಿಮಾನ ಚಾಲಕ ವೃತ್ತಿಯಲ್ಲಿ ಯಶಸ್ಸು ಪಡೆದರಷ್ಟೆ. ರಾಜೀವರು ಜನ್ಮತಃ ಧೀಮಂತ ವ್ಯಕ್ತಿತ್ವವರಾದರೆ, ರಾಹುಲರು ಸ್ವಂತಿಕೆಯನ್ನು ಸಮರ್ಥವಾಗಿ ರೂಪಿಸಿಕೊಳ್ಳಲು ಸಾಕಷ್ಟು ಶ್ರಮಿಸಬೇಕು.

ಷಷ್ಠ್ಯ ಹಾಗು ಸಪ್ತಮಾಧಿಪತಿ ಶನಿಯು ರಾಜೀವರ ಕರ್ಮಸ್ಥಾನ ವೃಷಭದಿಂದ ವ್ಯಯಸ್ಥಾನವನ್ನು ವೀಕ್ಷ್ಶಿಸುವದಲ್ಲದೆ, ಲಗ್ನಾಧಿಪತಿ ರವಿ ಮತ್ತು ಉಚ್ಚ ಗುರುವು ವ್ಯವಸ್ಥಾನದಲ್ಲಿರುವುದು ಅವರಿಗೆ, ತಮ್ಮ ಹಲವು ನಿರ್ಧಾರಗಳು ಅಪಾಯಕಾರಿ ಹಾಗು ನಷ್ಟ ಸೂಚಕವೆನ್ನುವುದನ್ನು ದೃಢವಾಗಿಸುತ್ತದೆ. ಅಲ್ಲದೆ, ಪುತ್ರನಿಗೆ ತಂದೆಯಷ್ಟು ತೀವ್ರತರವಾದ ಸರ್ಪ ದೋಷವಿಲ್ಲದಿರುವುದು(ನವಾಂಶ ಪೂರ್ಣದೋಷರಹಿತ) ಕೂಡ ರಾಹುಲರಿಗೆ ತಂದೆಗಿದ್ದಂತಹ ವಿಪತ್ತುಗಳಿರಲಾವು.

ರಾಜೀವರು ಬೊಫೋರ್ಸ್ ಮತ್ತಿತರ ವಿವಾದಗಳಿಗೆ ಸಿಕ್ಕಿ ತೊಳಲಾಟ ಮತ್ತು ಕೊನೆಗಾಲದಲ್ಲಿ ಭೀಕರ ಅಪಮೃತ್ಯುವನ್ನಪ್ಪಿದುದು ಇಡೀ ವಿಶ್ವಕ್ಕೇ ತಿಳಿದ ವಿಷಯ. ಭಾಗ್ಯಾಧಿಪತಿ ಮಂಗಳನು ಲಗ್ನ ಭಾವದಲ್ಲಿದ್ದು, ಸಪ್ತಮ ಮತ್ತು ಅಷ್ಟಮ(ಮೀನ)ಕ್ಕೆ ವೀಕ್ಷಿಸುತ್ತಿರುವುದು, ಅಲ್ಲದೆ ತೃತೀಯಾ ಹಾಗು ದಶಮಸ್ಥಾನಾಧಿಪತಿ ಶುಕ್ರನು ಇವರ ಲಗ್ನದಲ್ಲಿಯೇ ನೆಲಸಿರುವುದು, ರಾಜೀವರು ತನ್ನ ಮಾತೃವಿನ ದೆಸೆಯಿಂದ ಮತ್ತು ಆಕೆಯ ನಂತರ ಉಚ್ಚ ಪದವಿಗೆ ಏರುವರೆಂಬುದನ್ನು ಸೂಚಿಸುತ್ತದೆ. ವಾಸ್ತವದಲ್ಲಿ, ಷಷ್ಠ್ಯ ಹಾಗು ಸಮಸಪ್ತಮಾಧಿಪತಿ ಶನಿಯು ಭಾವ ಕುಂಡಲಿಯಲ್ಲಿ ಕರ್ಮಸ್ತಾನದಲ್ಲಿದ್ದು, ರಾಹು ದೆಶೆ, ಶನಿ ಭುಕ್ತಿಯಲ್ಲಿ ಪ್ರಧಾನಿಯಾದರು. ರಾಶಿ ಕುಂಡಲಿ ಪ್ರಕಾರ, ವ್ಯಯದಲ್ಲಿರುವ ರಾಹುವಿನ ದಶಾ, ಷಷ್ಠ್ಯದಲ್ಲಿನ ಕೇತು, ಹಾಗು ಅಷ್ಟಮಕ್ಕೆ ವೀಕ್ಷಿಸುವ ಕುಜನಿಂದ ಕಲುಷಿತವಾದ ಬುಧನ ಅಂತರ್ಭುಕ್ತಿಯ ವೇಳೆಗಳಲ್ಲಿ ಅವರ ಅನಿಷ್ಟಕಾಲವು. ಹಾಗೆಯೇ, ಅವರ ಮರಣವು(21-5-1991) ರಾಹುದಶಾ, ಕೇತು ಭುಕ್ತಿಯ ಅಂತ್ಯಭಾಗದಲ್ಲಿ ಸಂಭವಿಸಿತು.

ಮೇಲ್ಕಾಣಿಸಿದ ವಿವಿಧ ಅಂಶಗಳ ಪ್ರಕಾರ, ರಾಹುಲ್ ಮತ್ತು ರಾಜಿವ್‌ರ ಜಾತಕಗಳಲ್ಲಿ ಸಾಮರಸ್ಯಗಳು ಅತಿ ವಿರಳ. ಹಾಗಾಗಿ, ತಂದೆಯ ಭೀಕರ ಅಂತ್ಯ ಅವರಲ್ಲಿಗೇ ಕೊನೆಗೊಂಡು, ಅವರ ಪುತ್ರ ರಾಹುಲರು ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾಗುವ ಯೋಗವಿದೆ. ಆದರೂ, ರಾಹುವಿನ ದಶಾಕಾಲದಲ್ಲಿ ಅವರು ಎಚ್ಚರಿಕೆಯಿಂದಿರುವುದು ಶ್ರೇಯಸ್ಕರ.

ಆಧಾರ : ದಿ ಅಸ್ಟ್ರಲಾಜಿಕಲ್ ಮ್ಯಾಗಜೀನ್ ಪತ್ರಿಕೆಯ 2007ನೇ, ಜೂನ್ ಸಂಚಿಕೆಯ, 484, 485ನೇ ಪುಟಗಳಲ್ಲಿ ಪ್ರಕಟಗೊಂಡ ರಾಹುಲ್ ಮತ್ತು ರಾಜೀವ ಗಾಂಧಿಯವರ ಜನ್ಮ ಕುಂಡಲಿ ಮತ್ತು ದಶಾ ಭುಕ್ತಿ ವಿವರಗಳನ್ನು ಸಾಧಾರವಾಗಿ ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.

ಲೇಖಕರು : ಎಚ್.ಆರ್. ಹನುಮಂತ ರಾವ್, ಬಿ.ಎಸ್.ಸಿ., ಎಮ್.ಐ.ಇ , ಎಮ್.ಐ.ಐ.ಎಮ್., ಅಸ್ಟ್ರಲಾಜಿಕಲ್ ರಿಸರ್ಚ್ ಬ್ಯುರೋ, 47(1ನೇ ಮಹಡಿ), 7ನೇ ಮುಖ್ಯರಸ್ತೆ, 21ನೇ ಅಡ್ಡರಸ್ತೆ, ಸಿ.ಎಚ್.ಬಿ.ಎಸ್. 1ನೇ ಬಡಾವಣೆ, ವಿಜಯನಗರ, ಬೆಂಗಳೂರು 560 040. ಫೋನ್: 080 23388477, ಈ ಮೇಲ್ : hrhrau@gmail.com. ಸದ್ಯಕ್ಕೆ ಫ್ರೀಮಾಂಟ್, ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕಾದಲ್ಲಿ ಮೊಕ್ಕಾಂ.

ರಾಹುಲ್ ಮತ್ತು ರಾಜೀವ್ ಜಾತಕಗಳ ಅಧ್ಯಯನ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more