ಬುಧವಾರ ಚಂದ್ರಗ್ರಹಣ, ಬೆಳದಿಂಗಳಿಗೆ ಸಂಚಕಾರ

ಜ್ಯೇಷ್ಠ, ಮೂಲಾ, ಪೂರ್ವಾಷಾಢ, ರೇವತಿ, ಅಶ್ವಿನಿ, ಆಶ್ಲೇಷಾ, ಮಖಾ, ಅನುರಾಧಾ ನಕ್ಷತ್ರದವರಿಗೂ ಮತ್ತು ವೃಶ್ಚಿಕ, ಧನಸ್ಸು, ಮೇಷ, ಕರ್ಕಾಟಕ, ಸಿಂಹ ರಾಶಿಯವರಿಗೂ ಈ ಗ್ರಹಣ ಅಷ್ಟೇನೂ ಶುಭಕರವಲ್ಲ.
ಸ್ಪರ್ಶ ಕಾಲ : ರಾತ್ರಿ 11.55
ಮಧ್ಯಕಾಲ : ರಾತ್ರಿ 01.45
ಮೋಕ್ಷಕಾಲ: ರಾತ್ರಿ 02.36
ಬುಧವಾರ ಮಧ್ಯಾಹ್ನ 2.55ರ ನಂತರಾ ಭೋಜನ ನಿಷಿದ್ದ. ಅಂದು ನಡೆಯ ಬೇಕಾಗಿರುವ ಸಾವಂತ್ಸರಿಕ ಶ್ರಾದ್ದ ಇತ್ಯಾದಿ ಕಾರ್ಯಗಳನ್ನು ಮರುದಿನಕ್ಕೆ ಮುಂದೂಡುವುದು. ಗ್ರಹಣ ಸ್ಪರ್ಶ ಮತ್ತು ಮೋಕ್ಷ ಕಾಲದಲ್ಲಿ ಪ್ರತ್ಯೇಕವಾಗಿ ಸ್ನಾನ ಮಾಡಿದರೆ ಒಳ್ಳೆಯದು.
ಗ್ರಹಣ ಸ್ಪರ್ಶ ಕಾಲದಲ್ಲಿ ದೇವರಿಗೆ ಎಳ್ಳೆಣ್ಣೆ ದೀಪ ಇಟ್ಟು ಪ್ರಾರ್ಥನೆ ಸಲ್ಲಿಸಿ. ಸಮುದ್ರ ಸ್ನಾನ ವಿಶೇಷ. ಸಮೀಪದ ದೇವಾಯಲಕ್ಕೆ ಭೇಟಿ ನೀಡಿ ಮನಃಪೂರ್ವಕವಾಗಿ ನಮಸ್ಕರಿಸಿ ಬನ್ನಿ. ಗ್ರಹಣ ಸಮಯದಲ್ಲಿ ದೇವರನ್ನು ಸ್ಮರಿಸಿದಷ್ಟೂ ಉತ್ತಮ ಎನ್ನುವುದರಲ್ಲಿ ನಂಬಿಕೆ ಇಡಿ. ಸಾಕು.
ಗ್ರಹಣ ಮೋಕ್ಷ ಕಾಲದ ನಂತರ ಮನೆಯ ಮುಂದೆ ನೀರು ಹಾಕಿ ಸ್ವಚ್ಚ ಗೊಳಿಸಿ ರಂಗೋಲಿ ಇಡಿ. ಶ್ರೀ ಮನ್ನಾರಾಯಣನು ಎಲ್ಲರಿಗೂ ಸನ್ಮಂಗಳವನ್ನು ಉಂಟು ಮಾಡಲಿ.












Click it and Unblock the Notifications