ನೀರಿನಷ್ಟೇ ಸ್ವಚ್ಛವಿರಬೇಕು ಗಂಡು ಹೆಣ್ಣಿನ ಬಾಂಧವ್ಯ

Love compatibility astrology
ಗಂಡು ಹೆಣ್ಣಿನ ಬಾಂಧವ್ಯ ನೀರಿನಷ್ಟೇ ಸ್ವಚ್ಛವಾಗಿರಬೇಕು ಮಾತ್ರವಲ್ಲ, ಪಾತ್ರೆಗೆ ನೀರು ಹೊಂದಿಕೊಂಡಂತೆ ನಮ್ಮ ಜೀವನವನ್ನೂ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು.

ಕರ್ಕಾಟಕ ರಾಶಿ ಪುರುಷ - ಕುಂಭ ರಾಶಿ ಸ್ತ್ರೀ : ತನ್ನ ಪರಿವಾರದ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಕುಂಭ ರಾಶಿ ಸ್ತ್ರೀಯರಿಗೆ. ಮತ್ತೊಂದು ವಿಷಯದಲ್ಲಿ ಇವರು ಸ್ವಲ ಭಿನ್ನ ಗುಣವನ್ನು ಹೊಂದಿರುತ್ತಾರೆ. ಹಳೆಯದನ್ನು ಎಂದಿಗೂ ಮರೆಯೋಲ್ಲ. ಒಟ್ಟಾರೆ ಎಲ್ಲ ವಿಷಯದಲ್ಲೂ ಸಂಪೂರ್ಣವಾದ ಗಮನ ಹೊಂದಿರುತ್ತಾರೆ. ಇವರಿಗೆ ವಿರುದ್ಧವಾದ ಗುಣ ಹೊಂದಿರುವವರು ಕರ್ಕಾಟಕ ರಾಶಿ ಪುರುಷರು. ಅವರು ಹಿಂದಿನದು-ಈಗಿನದರ ಬಗ್ಗೆ ಚಿಂತಿಸಲ್ಲ. ಆದರೆ ಅವರ ಗಮನ ಭವಿಷ್ಯದತ್ತ. ಕುಂಭ ರಾಶಿ ಸ್ತ್ರೀ ಸ್ವಲ್ಪ ಜಾಸ್ತೀನೆ ಪೊಸೆಸಿವ್. ತನ್ನ ಸಂಗಾತಿ ತನ್ನ ಬಗ್ಗೆ ಹೆಚ್ಚು ಗಮನ ನೀಡಬೇಕು, ತನ್ನನ್ನು ಬಿಟ್ರೆ ಯಾರ ಬಗ್ಗೆನೂ ಚಿಂತಿಸಬಾರದು ಎಂದು ಬಯಸುತ್ತಾಳೆ. ಆದರೆ ಇದು ಸಾಧ್ಯವಿಲ್ಲದ ಸಂಗತಿ. ಕೇವಲ ಇಷ್ಟು ಮಾತ್ರವಲ್ಲ, ಪತಿಯ ಸರ್ವತೋಮುಖ ಬೆಳವಣಿಗೆಗೆ ತಾನು ಬೆನ್ನೆಲುಬಾಗಿ ನಿಲ್ಲಲು ಆಶಿಸುತ್ತಾಳೆ. ಆತನ ಏಳಿಗೆಯೇ ತನ್ನ ಗುರಿ ಎಂದು ತಿಳಿಯುವ ಹೆಣ್ಣುಮಗಳು ಈಕೆ.

ಕರ್ಕಾಟಕ ರಾಶಿ ಸ್ತ್ರೀ - ಮೀನ ರಾಶಿ ಪುರುಷ : ಈ ಎರಡು ರಾಶಿಗಳು ನೀರಿನಲ್ಲಿ ವಾಸಿಸುವ ಪ್ರಾಣಿಗಳು. ಆದ್ದರಿಂದ ನೀರಿನಷ್ಟೇ ಸ್ವಚ್ಛವಾಗಿರುತ್ತದೆ ಇವರಿಬ್ಬರ ಬಾಂಧವ್ಯ! ಚಿಕ್ಕ-ದೊಡ್ದ ಎಂತಹುದೇ ಸಮಸ್ಯೆಗಳಿದ್ದರೂ ಹೊಂದಿಕೊಂಡು ಹೋಗುತ್ತಾರೆ. ಈ ಸ್ತ್ರೀಯರು ಹಣವನ್ನು ಭವಿಷ್ಯಕ್ಕಾಗಿ ಕೂಡಿಡಬೇಕು ಎಂದು ಬಯಸುತ್ತಾರೆ. ಆದರೆ ಮೀನ ರಾಶಿ ಪುರುಷ ಸ್ವಲ್ಪ ಹಿಡಿತ ತಪ್ಪಿದ ವರ್ತನೆಯನ್ನು ಹೊಂದಿರುತ್ತಾರೆ. ಇರುವ ಹಣವನ್ನು ತಮ್ಮ ಆಪ್ತರು-ಸ್ನೇಹ ಬಳಗಕ್ಕೆ ನೀಡಿ ಗೋವಿಂದಾ ಎಂದು ಕುಳಿತು ಬಿಡ್ತಾರೆ. ಹೆಂಡತಿಯ ಹಿಡಿತ ಕಂಡಾಗ ಅಯ್ಯೋ ಕಂಜೂಸ್ ಎಂದು ಹೀಗಳೆಯುತ್ತಾರೆ. ಆಕೆಯೂ ಇದೇ ವರ್ತನೆಯನ್ನು ಹೊಂದಿದರೆ ಸಂಸಾರ ರಥವು ಎಂದಿಗೂ ಸುಗಮವಾಗಿ ಸಾಗದು. ಹಿಡಿತ ಬದುಕನ್ನು ಸುಂದರಾಗಿಡುತ್ತದೆ. ಭವಿಷ್ಯವನ್ನು ಆರಾಮವಾಗಿಡುತ್ತದೆ ಎನ್ನುವ ಸಂಗತಿಯನ್ನು ಎಂದಿಗೂ ಮರೆಯಬಾರದು. ಆಕೆಯ ಗುಣ ಅರಿತರೆ ಮನೆ-ಮನವು ಶಾಂತಿಯಿಂದ ಕೂಡಿರುತ್ತದೆ.

ಕರ್ಕಾಟಕ ರಾಶಿ ಪುರುಷ - ಮೀನ ರಾಶಿ ಸ್ತ್ರೀ : ಕರ್ಕಾಟಕ ರಾಶಿ ಪುರುಷ ಮತ್ತು ಮೀನ ರಾಶಿ ಸ್ತ್ರೀಯದು ಅವಿನಾಭಾವ ಸಂಬಂಧ. ಬಾಲ್ಯ ಸ್ನೇಹಿತ ದಂಪತಿಗಳು ಎಂದು ಕರೆಯಬಹುದು. ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಅವರ ಬಗ್ಗೆ ಇವರು, ಇವರ ಬಗ್ಗೆ ಅವರು ಹೆಚ್ಚಿನ ಗಮನ ಕೊಡುತ್ತಾರೆ. ಇಬ್ಬರಲ್ಲೂ ಜಗಳ-ಕದನ ಇದ್ದಿದ್ದೆ, ಆದರೆ ಅವರು ಅದನ್ನು ಹೆಚ್ಚು ಕಾಲ ಬೆಳೆಸುವುದಿಲ್ಲ. ಮನಸ್ಸುಗಳು ಬೆಸೆದಿರುವ ಈ ದಂಪತಿಗಳು ಪ್ರೀತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅಕಸ್ಮಾತ್ ಇಬ್ಬರಲ್ಲೂ ಭಿನ್ನಾಭಿಪ್ರಾಯ ಇದ್ದರೆ ತಕ್ಷಣವೇ ಸರಿಪಡಿಸಿಕೊಂಡು ಬಿಡ್ತಾರೆ. ಕೂಡಿಬಾಳಿದರೆ ಸ್ವರ್ಗ ಸುಖ ಎನ್ನುವ ಅಂಶಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ದಂಪತಿಗಳು ಇವರು. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+