Artificial Intelligence: ರಾಷ್ಟ್ರವ್ಯಾಪಿ ಹರಡಿದ ಮಧ್ಯಪ್ರದೇಶ ಜಾತಿ ನಿಂದನೆ ಪ್ರಕರಣ

Artificial Intelligence: ಇದೀಗ ಎಲ್ಲಿ ನೋಡಿದರೂ ಎಐನದ್ದೇ ಸದ್ದು ಜೋರಾಗಿದೆ. ಈ ನಡುವೆಯೇ ಇದೀಗ ಎಐ ಬಳಸಿ ರಚಿಸಿದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕೆ ಯುವಕನೊಬ್ಬನಿಗೆ ಜಾತಿ ನಿಂದನೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದು ಇದೀಗ ಎಲ್ಲಡೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಎಐ ಬಳಸಿ ರಚಿಸಿದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವಕನಿಗೆ ಬ್ರಾಹ್ಮಣ ಸಮುದಾಯದ ವ್ಯಕ್ತಿಯೊಬ್ಬರ ಪಾದ ತೊಳೆದು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಗಿದೆ. ಈ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

Youth Faces Caste-Based Abuse in Madhya Pradesh Over AI Image Post

ದೇಶದಲ್ಲಿ ಯಾವುದೂ ನಾಶವಾದರೂ ಜಾತಿ ಮಾತ್ರ ನಿರ್ಮೂಲನೆ ಆಗುತ್ತಿಲ್ಲ. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಮೇಲು, ಕೀಳು ಎನ್ನುವ ಮನೋಭಾವನೆಯನ್ನು ಸೃಷ್ಟಿಸಿ ನಿಂದನೆಗೆ ಕಾರಣರಾಗುತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿರುವ ಜಾತಿ ನಿಂದನೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸತಾರಿಯಾ ಗ್ರಾಮದ ನಿವಾಸಿ ಪುರುಷೋತ್ತಮ ಕುಶ್ವಾಹ ಎಂಬ ಯುವಕ ಇನ್‌ಸ್ಟಾಗ್ರಾಂ ಖಾತೆಯಯಲ್ಲಿ ಶೂಗಳ ಹಾರ ಧರಿಸಿದ ವ್ಯಕ್ತಿಯ ಎಐ ಚಿತ್ರವನ್ನು ಪೋಸ್ಟ್‌ ಮಾಡಿದ್ದ. ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ, ಗ್ರಾಮದ ಸಾಮೂಹಿಕ ನಿರ್ಧಾರವನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಎಂದು ಆರೋಪಿಸಲ್ಪಟ್ಟ ಬ್ರಾಹ್ಮಣ ಸಮುದಾಯದ ಅನುಜ್ ಪಾಂಡೆ. ಇನ್ನು ಕುಶ್ವಾಹ ಈ ಪೋಸ್ಟ್ ಅನ್ನು ಅಳಿಸಿ ಕ್ಷಮೆಯನ್ನೂ ಕೇಳಿದ್ದಾರೆ.

ಆದರೂ ಕೂಡ ಇದು ದೊಡ್ಡ ಸಂಘರ್ಷಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಕುಶ್ವಾಹ ಅನುಜ್ ಪಾಂಡೆಯವರ ಪಾದಗಳನ್ನು ತೊಳೆದು, "ನಾನು ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆಯಾಚಿಸುತ್ತಿದ್ದೇನೆ. ಇಂತಹ ತಪ್ಪು ಮತ್ತೆ ಆಗುವುದಿಲ್ಲ. ನಾವು ಬ್ರಾಹ್ಮಣರನ್ನು ಹೀಗೆ ಪೂಜಿಸುತ್ತೇವೆ" ಎಂದು ಹೇಳುತ್ತಿರುವುದು ಕಂಡುಬಂದಿದೆ.

ಇನ್ನೂ ಈ ವೈರಲ್ ವಿಡಿಯೋ ಬಗ್ಗೆ ಪೊಲೀಸರು ಗಮನ ಹರಿಸಿದ್ದು, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ತಿವಾರಿ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರಕರಣದಲ್ಲಿ ಭಾಗಿಯಾದ ಇಬ್ಬರ ವಿರುದ್ಧವೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅಲ್ಲದೆ, ಯಾವಾಗ ಬೇಕಾದರೂ ಇದು ಬೇರೆ ತಿರುವುದು ಪಡೆದು ಸಂಘರ್ಷಕ್ಕೆ ಕಾರಣ ಆಗಬಹುದು ಎನ್ನುವ ದೃಷ್ಟಿಯಿಂದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ. ಶಾಂತಿ ಕಾಪಾಡಲು ಹಿರಿಯ ಅಧಿಕಾರಿಗಳು ಮತ್ತು ಪ್ರಮುಖ ನಾಗರಿಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಪಟೆರಾ ಪೊಲೀಸ್ ಠಾಣಾಧಿಕಾರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಘಟನೆ ಸತಾರಿಯಾ ಗ್ರಾಮದಲ್ಲಿ ಮದ್ಯ ನಿಷೇಧದ ಸಾಮೂಹಿಕ ನಿರ್ಧಾರದಿಂದ ಆರಂಭ ಆಯಿತು. ಅನುಜ್ ಪಾಂಡೆ ಈ ನಿಷೇಧವನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಗ್ರಾಮ ಪಂಚಾಯಿತಿ, ಪಾಂಡೆಗೆ ಗ್ರಾಮದಾದ್ಯಂತ ತಿರುಗಿ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡುವಂತೆ ಆದೇಶಿಸಿತ್ತು. ಜೊತೆಗೆ, 2,100 ರೂಪಾಯಿ ದಂಡ ಕಟ್ಟುವಂತೆಯೂ ಹೇಳಿತ್ತು.

ಆದ್ದರಿಂದ ಕುಶ್ವಾಹ ಪಾಂಡೆಯನ್ನು ಅಪಹಾಸ್ಯ ಮಾಡುವ ಎಐ ಚಿತ್ರವನ್ನು ರಚಿಸಿ ಪೋಸ್ಟ್ ಮಾಡಿದ್ದ. ಈ ಪೋಸ್ಟ್ ಬೆಳಕಿಗೆ ಬಂದ ತಕ್ಷಣ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಯಿತು. ಪಾಂಡೆ ಕುಶ್ವಾಹ ಮತ್ತು ಅವರ ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪ ಮಾಡಲಾಗಿದೆ. ಇದು ಕೊನೆಗೆ ಕೋಮು ಸಂಘರ್ಷಕ್ಕೆ ತಿರುಗಿತು. ಸತಾರಿಯಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬ್ರಾಹ್ಮಣ ಸಮುದಾಯದ ಸದಸ್ಯರು ಸೇರಿ, ಈ ಪೋಸ್ಟ್‌ನಿಂದ ಪಾಂಡೆಗೆ ಮಾತ್ರ ಅಲ್ಲ, ಇಡೀ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಆದರೆ, ಅನುಜ್ ಪಾಂಡೆ ತಾನು ಮತ್ತು ಕುಶ್ವಾಹ ಉತ್ತಮ ಸಂಬಂಧ ಹೊಂದಿದ್ದೇವೆ ಎಂದು ಕುಶ್ವಾಹ ಸ್ವಯಂಪ್ರೇರಿತರಾಗಿ ತನ್ನ ಪಾದ ತೊಳೆದಿದ್ದಾನೆ ಅಂತಾ ಹೇಳಿಕೊಂಡಿದ್ದಾನೆ. "ಅವನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ. ಅವನು ನನ್ನ ಪಾದ ತೊಳೆದಿದ್ದರಿಂದ ನೋವಾಗಿದ್ದರೆ, ಕುಶ್ವಾಹ ಸಮುದಾಯಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಪಾಂಡೆ ಹೇಳಿದ್ದಾನೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಹೇಳೋದಾದ್ರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟೇ ಬದಲಾದ್ರೂ ಕೆಲವರು ಮಾತ್ರ ಜಾತಿ ಹೇಸರಲ್ಲಿ ಸಂಘರ್ಷ ಸೃಷ್ಟಿಸುವ ಕೆಲಸವನ್ನು ಮಾಡುತ್ತಲಿದ್ದಾರೆ. ಇದು ಮಾತ್ರ ಬದಲಾದಂತೆ ಕಾಣುತ್ತಿಲ್ಲ. ದೇಶದಲ್ಲಿ ಇದೊಂದನ್ನು ಮರೆತು ಮುಂದೆ ನಡೆದ್ರೆ ಅಭಿವೃದ್ಧಿ ಗ್ಯಾರಂಟಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+