Artificial intelligence: 200 ಹೆಕ್ಟೇರ್‌ನಲ್ಲಿ ಎಐ ಹಬ್ ಸ್ಥಾಪನೆ: 10,000ಕ್ಕೂ ಅಧಿಕ ಉದ್ಯೋಗಗಳು..
Artificial intelligence: ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಎಐನದ್ದೇ ಹವಾ ಆಗಿಬಿಟ್ಟಿದೆ. ಅಷ್ಟರ ಮಟ್ಟಿದೆ ಇದರ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿಬಿಟ್ಟಿದೆ. ಇದೀಗ ಕೃತಕ ಬುದ್ಧಿಮತ್ತೆಯಲ್ಲಿ ತೆಲಂಗಾಣವನ್ನು ಜಾಗತಿಕ ರಾಜಧಾನಿಯಾಗಿ ಮಾಡಲು ರಾಜ್ಯ ಸರ್ಕಾರ ಎಐ ಆವಿಷ್ಕಾರ ಕೇಂದ್ರ ಸ್ಥಾಪನೆ ಮಾಡಲು ನಿರ್ಧರಿಸಿದೆ. ಈ ಮೂಲಕ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳ ಸೃಷ್ಟಿಗೆ ಮುಂದಾಗಿದೆ.
ಎಐ ಅವಿಷ್ಕಾರ ಕೇಂದ್ರವು ಪ್ರಸ್ತುತ ಎಲ್ಲಾ ಇರುವ ಎಐ ಉಪಕ್ರಮ ಶ್ರೇಷ್ಟತೆಯ ಕೇಂದ್ರ ಮತ್ತು ಸ್ಟಾರ್ಟ್ ಅಪ್ಗಳನ್ನು ಒಟ್ಟಿಗೆ ಜಾರಿಗೊಳಿಸಲಿದೆ. ಜೊತೆಗೆ ಎಐ ಯುನಿವರ್ಸಿಟಿ ಸಹ ಇರಲಿದ್ದು, ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ 50,000 ಕೌಶಲ್ಯ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಅಲ್ಲದೆ, 10,000 ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ.

ಸಿಎಂ ರೇವಂತ್ ರೆಡ್ಡಿ ಈ ಯೋಜನೆಯನ್ನ ಈಗಾಗಲೇ ಅಂತಿಮಗೊಳಿಸಿದ್ದಾರೆ. ಐಟಿ ಮತ್ತು ಕೈಗಾರಿಕಾ ಸಚಿವ ಡಿ.ಶ್ರೀಧರ್ ಬಾಬು ಈ ಪ್ರಸ್ತಾಪ ಮಂಡಿಸಲಿದ್ದಾರೆ. ಸಿಎಂ ಈಗಾಗಲೇ ಈ ಕೇಂದ್ರ ಸ್ಥಾಪನೆ ವ್ಯವಸ್ಥೆಯ ಆಯವ್ಯಯ ಬಗ್ಗೆ ಅಧಿಕಾರಿಗಳು ಸೂಚಿಸಿದ್ದಾರೆ. ಇಲ್ಲಿನ 200 ಹೆಕ್ಟೇರ್‌ನಲ್ಲಿ ಈ ಎಐ ನಗರ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಸರ್ಕಾರ ತಾತ್ಕಾಲಿಕ ಆವಿಷ್ಕಾರ ಕೇಂದ್ರವನ್ನು ದೊಡ್ಡ ಯೋಜನೆಯಾಗಿ ರೂಪುಗೊಳ್ಳುವ ಮುಂಚೆ ಬಹುಮಹಡಿ ಕಟ್ಟಡದಲ್ಲೇ ಜಾರಿ ಮಾಡುವ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ಸದ್ಯ ತೆಲಂಗಾಣ ಎಐ ಮಿಷನ್ 270 ಎಐ ಸ್ಟಾರ್ಟ್ ಅಪ್ಗಳನ್ನು ಶ್ರೇಷ್ಟತಾ ಕೇಂದ್ರದ ಮೂಲಕ ಬೆಂಬಲಿಸಲಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಮತ್ತು ಐಟಿ ಹಬ್ ಜಂಟಿಯಾಗಿ 80 ಹಾಗೂ ಅದಕ್ಕಿಂತ ಹೆಚ್ಚಿನ ಸ್ಟಾರ್ಟ್ ಅಪ್ಗಳಿಗೆ ಬೆಂಬಲಿಸಲಿದೆ. ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ ಎಐ ಶೃಂಗಸಭೆಯಲ್ಲಿ ಕೈಂಡ್ರೆಲ್, ಯೊಟ್ಟಾ, ಮೈಕ್ರೋಸಾಫ್ಟ್, ಅಮೆಜಾನ್, ಗೂಗಲ್, ಐಐಐಟಿ, ಬಿಐಟಿಎಸ್, ಜೆಐಸಿಎ ಸೇರಿ ಹಲವು ಪ್ರಸಿದ್ಧ ಸಂಸ್ಥೆಗಳು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿಹಾಕಿವೆ ಎಂದು ತಿಳಿದುಬಂದಿದೆ.
ಈ ಸಂಸ್ಥೆಗಳು ಪ್ರತ್ಯೇಕ ಗುಂಪಾಗಿ ಕಾರ್ಯ ನಿರ್ವಹಿಸಲಿದ್ದು, ಜಾಗತಿಕ ಎಐ ಕೇಂದ್ರವಾಗುವತ್ತ ಪ್ರಗತಿಯು ಬಯಸಿದಕ್ಕಿಂತ ನಿಧಾನವಾಗಿದೆ ಎಂದು ಸರ್ಕಾರ ಭಾವಿಸಿದೆ. ಟಿಎಚ್ಐಎಚ್ ಎಲ್ಲಾ ಉಪಕ್ರಮದ ಮೂಲಕ ಒಂದೇ ಸೂರಿನಡಿಯಲ್ಲಿ ಸಂಯೋಜನೆ ಮಾಡಲಿದ್ದು, ಉದ್ಯಮ, ಜಾಗತಿಕ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಇತರ ಎಐ ಕೇಂದ್ರಗಳ ಸಹಯೋಗದೊಂದಿಗೆ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲಿದೆ. ಪ್ರಖ್ಯಾತ ಸಿಲಿಕಾನ್ ವ್ಯಾಲಿ ನಾಯಕರು ಮತ್ತು ಇತರ ಅಂತಾರಾಷ್ಟ್ರೀಯ ತಜ್ಞರನ್ನು ಒಳಗೊಂಡ ಜಾಗತಿಕ ಸಿಇಒ ಮತ್ತು ಆಡಳಿತ ಮಂಡಳಿಯನ್ನು ನೇಮಕ ಮಾಡಲು ಯೋಜಿಸಲಾಗಿದೆ.











Click it and Unblock the Notifications