ಚಾಟ್‌ಜಿಪಿಟಿ, ಎಐ ಬಗ್ಗೆ ಹೊರಬಿತ್ತು ಆಘಾತಕಾರಿ ಸಂಗತಿ
ಚಾಟ್ ಜಿಪಿಟಿ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇದು ಎಲ್ಲಾ ಮಾಹಿತಿಗಳನ್ನು ನೀಡುತ್ತದೆ ಎಂದು ಹೆಚ್ಚಾಗು ಬಳಕೆ ಮಾಡುತ್ತಿದ್ದಾರೆ. ಈ ನಡುವೆಯೇ ಈ ಬಗ್ಗ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಅದೇನು ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ತಂತ್ರಜ್ಞಾನದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಲಿದ್ದು, ಇದಕ್ಕೆ ತಕ್ಕಂತೆ ಮನುಷ್ಯರು ಹೊಂದಿಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಅದರಂತೆಯೇ ಇದೀಗ ಸಣ್ಣಪುಟ್ಟ ಕಂಪನಿಗಳಿಂದ ಹಿಡಿದು ಐಟಿ-ಬಿಟಿವರೆಗೂ ಚಾಟ್ ಜಿಪಿಟಿ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಇದು ಎಷ್ಟು ಆಘಾತಕಾರಿಯಾಗಿದೆ ಎನ್ನುವ ಸತ್ಯವನ್ನು ಸಂಸ್ಥೆಯೊಂದು ಬಯಲು ಮಾಡಿದೆ.

ಎಂಐಟಿ ನಡೆಸಿದ ಸಂಶೋಧನೆಯಿಂದ ಶಾಕಿಂಗ್ ಸಂಗತಿ ಹೊರ ಬಿದ್ದಿದ್ದು, ಚಾಟ್ ಜಿಪಿಟಿ ಮೆದುಳಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಪ್ರಸ್ತುತ, ಎಲ್ಲರೂ ಕೃತಕ ಬುದ್ಧಿಮತ್ತೆ (AI)ಯ ಬಗ್ಗೆ ಮಾತನಾಡುತ್ತಿದ್ದು, ತಮ್ಮ ಕೆಲಸದಲ್ಲಿ ಇದನ್ನು ಬಳಕೆ ಮಾಡುತ್ತಿದ್ದಾರೆ. ಅವರು ಚಾಟ್ ಜಿಪಿಟಿ, ಗ್ರೋಕ್ ಇತ್ಯಾದಿಗಳನ್ನು ಸಹ ಬಳಕೆ ಮಾಡುತ್ತಿದ್ದಾರೆ.
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ ಅಧ್ಯಯನವು, ಕೃತಕ ಬುದ್ಧಿಮತ್ತೆ (AI) ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಎಂದು ತೋರಿಸಿದೆ. ಚಾಟ್ ಜಿಪಿಟಿಯಂತಹ ಉತ್ಪಾದಕ ಕೃತಕ ಬುದ್ಧಿಮತ್ತೆ ಸಾಧನಗಳನ್ನ ಬಳಸುವುದರಿಂದ ವಿದ್ಯಾರ್ಥಿಗಳ ಮೆದುಳಿನ ಆಲೋಚನಾ ಸಾಮರ್ಥ್ಯವನ್ನ ಕಡಿಮೆ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸ್ಮರಣೆಯನ್ನ ದುರ್ಬಲಗೊಳಿಸಬಹುದು ಎಂದು ಸಂಶೋಧನೆಯು ತಿಳಿಸಿದೆ ಎಂದು ವರದಿಯಾಗಿದೆ.
ಎಂಐಟಿ ವಿಜ್ಞಾನಿಗಳು ವಿವಿಧ ವಯಸ್ಸಿನ ಜನರನ್ನ ಮೂರು ಗುಂಪುಗಳಾಗಿ ವಿಂಗಡಿಸುವ ಮೂಲಕ ಅಧ್ಯಯನ ನಡೆಸಿದರು. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು 18 ರಿಂದ 39 ವರ್ಷ ವಯಸ್ಸಿನ 54 ಜನರನ್ನ ಮೂರು ಗುಂಪುಗಳಾಗಿ ವಿಂಗಡಣೆ ಮಾಡಿದರು. ಒಂದು ಗುಂಪಿಗೆ ChatGPT ಬಳಸಿ ಪ್ರಬಂಧಗಳನ್ನ ಬರೆಯಲು ಕೇಳಲಾಯಿತು. ಮತ್ತೊಂದು ಗುಂಪಿಗೆ Google ಮತ್ತು ಇತರ ಸರ್ಚ್ ಇಂಜಿನ್‌ಗಳನ್ನ ಬಳಸಿ ಪ್ರಬಂಧಗಳನ್ನು ಬರೆಯಲು ಹೇಳಲಾಯಿತು. ಮೂರನೇ ಗುಂಪಿಗೆ ತಮ್ಮದೇ ಆದ ಜ್ಞಾನವನ್ನ ಬಳಸಿಕೊಂಡು ಪ್ರಬಂಧಗಳನ್ನ ಬರೆಯಲು ಹೇಳಲಾಯಿತು. ಬರೆಯುವಾಗ, ಅವರ ಮೆದುಳನ್ನ ಸಂಪೂರ್ಣವಾಗಿ ನಕ್ಷೆ ಮಾಡಲಾಯಿತು ಮತ್ತು ಚಲನೆಗಳನ್ನ ದಾಖಲಿಸಲಾಯಿತು. ಅವರು ಬರೆದ ನಂತರ, ಫಲಿತಾಂಶಗಳನ್ನ ವಿಶ್ಲೇಷಣೆ ಮಾಲಾಯಿತು.
ಫಲಿತಾಂಶಗಳ ಪ್ರಕಾರ, ಚಾಟ್ ಜಿಪಿಟಿ ಬಳಕೆದಾರರ ಮೆದುಳಿನ ಚಟುವಟಿಕೆಯಲ್ಲಿ ಕಡಿಮೆ ನರ ಸಂಪರ್ಕವನ್ನ ಹೊಂದಿವೆ ಎಂದು ತೋರಿಸಿದೆ. ವಿಶೇಷವಾಗಿ, ಸ್ಮೃತಿ, ಗಮನ ಮತ್ತು ಸೃಜನಶೀಲ ಚಿಂತನೆಗೆ ಸಂಬಂಧಿಸಿದ ನರಗಳಲ್ಲಿ ಯಾವುದೇ ಚಟುವಟಿಕೆ ಇರಲಿಲ್ಲ. ಅದೇ ಸಮಯದಲ್ಲಿ, ಸರ್ಚ್ ಇಂಜಿನ್‌ಗಳನ್ನು ಬಳಸಿದವರ ಮೆದುಳಿನಲ್ಲಿ ಸ್ವಲ್ಪ ಚಟುವಟಿಕೆ ಕಂಡುಬಂದಿತು. Google ಬಳಕೆದಾರರು ಮಾಹಿತಿಯನ್ನು ಹುಡುಕುತ್ತಾರೆ ಮತ್ತು ವಿಶ್ಲೇಷಿಸುತ್ತಾರೆ. ಆದರೂ ಯಾವುದೇ ಪರಿಕರಗಳನ್ನು ಹೊಂದಿರದವರಲ್ಲಿ ಹೆಚ್ಚು ಜ್ಞಾನ ಇರುವುದು ಕಂಡುಬಂದಿತು.
ಅದೇ ಸಮಯದಲ್ಲಿ ChatGPT ಬಳಕೆ ಮಾಡಿದವರು ಬಹುತೇಕ ಒಂದೇ ರೀತಿಯ ಪ್ರಬಂಧಗಳನ್ನ ಬರೆದರು. ಸರ್ಚ್ ಇಂಜಿನ್ ಮತ್ತು ಮೆದುಳು-ಮಾತ್ರ ಗುಂಪುಗಳಲ್ಲಿ ಕೇವಲ 10-11 ಪ್ರತಿಶತದಷ್ಟು ಜನರು ಮಾತ್ರ ಅಂತಹ ಸಮಸ್ಯೆಯನ್ನ ಎದುರಿಸಿದರು. ಅವುಗಳನ್ನ ಮೌಲ್ಯಮಾಪನ ಮಾಡಿದ ಶಿಕ್ಷಕರು ChatGPT ಬಳಸುವವರು ಬರೆದ ಪ್ರಬಂಧಗಳಲ್ಲಿ ಜ್ಞಾನದ ಕೊರತೆಯಿದೆ ಎಂದು ತೀರ್ಮಾನ ಮಾಡಿದರು.
ಏನೆಲ್ಲಾ ತೊಂದರೆಗಳಾಗಲಿವೆ?
* ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ
* ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ
* ಸ್ವಂತ ಬುದ್ಧಿ ಬಳಕೆ ಸಂಪೂರ್ಣ ನಾಶವಾಗಲಿದೆ
ಚಾಟ್ ಜಿಬಿಟಿಯಂತಹ AI ಪರಿಕರಗಳು ತ್ವರಿತವಾಗಿ ಕೆಲಸ ಮಾಡಲು ಉಪಯುಕ್ತವಾಗಿವೆ. ಆದರೆ ಅವು ಆಳವಾದ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಗೆ ಅಡ್ಡಿಯಾಗುತ್ತವೆ. ಅವು ಮಕ್ಕಳ ಮೆದುಳಿನ ಬೆಳವಣಿಗೆಯನ್ನ ಕುಂಠಿತಗೊಳಿಸುತ್ತಿವೆ. ಅಂದರೆ, ಚಾಟ್ ಜಿಪಿಟಿಯಂತಹ AI ಪರಿಕರಗಳು ಅಲ್ಪಾವಧಿಯ ಅನುಕೂಲವನ್ನ ಒದಗಿಸುತ್ತವೆ. ಆದರೆ ದೀರ್ಘಾವಧಿಯಲ್ಲಿ, ಅವುಗಳು ಮೆದುಳಿನ ಚುರುಕುತನ, ಸ್ಮರಣಶಕ್ತಿ, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನ ಕುಗ್ಗಿಸುತ್ತವೆ ಎಂದು ಅಧ್ಯಯನವು ಸ್ಪಷ್ಟವಾಗಿ ತೋರಿಸುತ್ತದೆ. ಅದಕ್ಕಾಗಿಯೇ ಚಾಟ್ ಜಿಪಿಟಿಯಂತಹ ಎಐ ವ್ಯವಸ್ಥೆಗಳನ್ನ ಬಳಸುವಾಗ ಒಬ್ಬರು ಜಾಗರೂಕರಾಗಿರಬೇಕು. ಅವುಗಳಿಗೆ ಹೊಂದಿಕೊಳ್ಳುವ ಬದಲು ನೀವೇ ಏನಾದರೂ ಮಾಡುವುದು ಉತ್ತಮ ಎಂದು ಅಧ್ಯಯ ತಿಳಿಸಿದೆ ಎಂದು ವರದಿಯಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications