Perplexity AI: ಏರ್ಟೆಲ್ ಬಳಕೆದಾರರಿಗೆ 17,000 ರೂ ಪರ್ಪ್ಲೆಕ್ಸಿಟಿ ಪ್ರೋ ಸಬ್ಸ್ಕ್ರಿಪ್ಷನ್ ಉಚಿತವಾಗಿ ಪಡೆಯುವುದು ಹೇಗೆ?
ಪ್ರತಿಯೊಂದು ಕ್ಷೇತ್ರದಲ್ಲಿಯೂ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ಹಾಸುಹೊಕ್ಕಿದೆ. ಎಲ್ಲಾ ಕ್ಷೇತ್ರದಲ್ಲೂ ಚಮತ್ಕಾರ ತೋರುತ್ತಿರುವ ಕೃತಕ ಬುದ್ಧಿಮತ್ತೆ(AI ) ಸಾಧನವಿಲ್ಲದಿದ್ದರೆ ಕೈ ಕಟ್ಟಿದ ಪರಿಸ್ಥಿತಿ ಉಂಟಾಗುವ ಸ್ಥಿತಿ ಎದುರಾಗಿದೆ. ಭಾರತದಲ್ಲಿ ಎಐ ಟೂಲ್ಗಳು ನಿಧಾನವಾಗಿ ಜನಪ್ರಿಯವಾಗತೊಡಗಿವೆ. ಹೆಚ್ಚಿನ ಜನರು ಈಗಲೂ ಕೂಡ ಬೇಸಿಕ್ ವರ್ಷನ್ ಎಐ ಟೂಲ್ಗಳನ್ನು ಬಳಸುತ್ತಿದ್ದಾರೆ. ಸುಧಾರಿತ ಎಐ ಟೂಲ್ಗಳಿಗೆ ಸಬ್ಸ್ಕ್ರಿಪ್ಷನ್ ಶುಲ್ಕ ಇರುವುದರಿಂದ ಹೆಚ್ಚಿನ ಜನರು ಮೂಲ ಆವೃತ್ತಿಗಳನ್ನು ಬಳಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಎಐ ಪ್ರೋ ಮಾಡಲ್ ಅನ್ನು ಉಚಿತವಾಗಿ ಸಿಗುವಂತೆ ಮಾಡಿದೆ. ಏರ್ಟೆಲ್ ಗ್ರಾಹಕರು ಪರ್ಪ್ಲೆಕ್ಸಿಟಿ ಪ್ರೋ ಮಾಡಲ್ ಅನ್ನು ಒಂದು ವರ್ಷಕ್ಕೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಪಡೆಯಬಹುದಾಗಿದೆ.
ಏರ್‌ಟೆಲ್ ಅಮೆರಿಕ ಮೂಲದ AI ಕಂಪನಿ ಪರ್ಪ್ಲೆಕ್ಸಿಟಿ ಜೊತೆ ಪಾಲುದಾರಿಕೆ ಹೊಂದಿದೆ. ಈ ಒಪ್ಪಂದದ ಭಾಗವಾಗಿ, ಏರ್‌ಟೆಲ್ 12 ತಿಂಗಳ ಪರ್ಪ್ಲೆಕ್ಸಿಟಿ ಪ್ರೋ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತಿದೆ. ಅಂದರೆ ವರ್ಷಕ್ಕೆ ರೂ. 17,000 ಬೆಲೆಯ ಪರ್ಪ್ಪೆಕ್ಸಿಟಿ ಎಐ ಪ್ರೊ, ಏರ್‌ಟೆಲ್‌ನ 360 ಮಿಲಿಯನ್ ಚಂದಾದಾರರಿಗೆ ಉಚಿತವಾಗಿ ಲಭ್ಯವಿದೆ. ಉಚಿತ ಕೊಡುಗೆ ಏರ್‌ಟೆಲ್ ಪ್ರಿಪೇಯ್ಡ್ ಮತ್ತು ಏರ್‌ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾನ್ಯವಾಗಿದೆ. ಈ ಪರ್ಪ್ಲೆಕ್ಸಿಟಿ ಎಐ ಪ್ರೊ ಚಂದಾದಾರಿಕೆ ಏರ್‌ಟೆಲ್ ವೈ-ಫೈ ಮತ್ತು ಡಿಟಿಎಚ್ ಗ್ರಾಹಕರಿಗೆ ಒಂದು ವರ್ಷದವರೆಗೆ ಉಚಿತವಾಗಿ ಲಭ್ಯವಿದೆ.

ಈ ಅಡ್ವಾನ್ಸ್ಡ್ ಎಐ ಮಾಡಲ್ನ 12 ತಿಂಗಳ ಸಬ್ಸ್ಕ್ರಿಪ್ಷನ್ ದರ 17,000 ರೂ ಇದೆ. ಏರ್ಟೆಲ್ ಗ್ರಾಹಕರು ಇಷ್ಟು ದೊಡ್ಡ ಮೌಲ್ಯದ ಸಾಧನವನ್ನು ಒಂದು ವರ್ಷ ಕಾಲ ಉಚಿತವಾಗಿ ಬಳಸಬಹುದಾಗಿದೆ. ಇನ್ನು, ಏರ್ಟೆಲ್ ಗ್ರಾಹಕರು ಪರ್ಪ್ಪೆಕ್ಸಿಟಿ ಪ್ರೊ ಅನ್ನು ಹೇಗೆ ಪಡೆಯುವುದು ಎಂಬುದನ್ನ ನೋಡುವುದಾದರೆ, ಏರ್ಟೆಲ್ ಗ್ರಾಹಕರು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ನಲ್ಲಿ ಈ ಆಫರ್ ಪಡೆಯಬಹುದು. ಆ್ಯಪ್ನಲ್ಲಿ ರಿವಾರ್ಡ್ಸ್ ಅಂಡ್ ಒಟಿಟಿ ಎನ್ನುವ ಸೆಕ್ಷನ್ ಒತ್ತಿದರೆ ಈ ಆಫರ್ ಅನ್ನು ಕಾಣಬಹುದು. ನಿಮ್ಮ ಇಮೇಲ್ ಐಡಿ ಹಾಕಿ ನೊಂದಾಯಿಸಿಕೊಳ್ಳಬಹುದು.
ಇನ್ನೂ ಬಹಳ ಸರಳವಾಗಿ ನೀವು Perplexity Pro ಅನ್ನು ಪಡೆಯಬಹುದು. ಪರ್ಪ್ಪೆಕ್ಸಿಟಿ ಪ್ರೊ ನಲ್ಲಿ ಕೆಲ ಪ್ರಮುಖ ಅಡ್ವಾನ್ಸ್ಡ್ ಎಐ ಮಾಡಲ್ಗಳನ್ನು ಒಳಗೊಂಡಿರಲಾಗುತ್ತದೆ. ಪರ್ಪ್ಲೆಕ್ಸಿಟಿಯ ಸೋನಾರ್ ಮತ್ತು ಆರ್1 1776, ಆಂಥ್ರೋಪಿಕ್ನ ಕ್ಲಾಡ್ 4.0 ಸಾನೆಟ್ ಮತ್ತು ಸಾನೆಟ್ ಥಿಂಕಿಂಗ್ ಹಾಗೂ ಓಪಸ್ ಥಿಂಕಿಂಗ್, ಓಪನ್ಎಐನ ಜಿಪಿಟಿ 4.1, ಒ3 ಮತ್ತು ಒ3 ಪ್ರೋ, ಗೂಗಲ್ನ ಜೆಮಿನಿ 2.5 ಪ್ರೋ, ಎಕ್ಸ್ಎಐನ ಗ್ರೋಕ್-4 ಇತ್ಯಾದಿ ಹೊಚ್ಚ ಹೊಸ ಹಾಗೂ ಶಕ್ತಿಶಾಲಿ ಎಐ ಮಾಡಲ್ಗಳನ್ನು ಬಳಸಲು ಅವಕಾಶ ಇರುತ್ತದೆ.












Click it and Unblock the Notifications