Googl AI Tool: ಗೂಗಲ್ ನ್ಯಾನೋ ಬನಾನಾ AI ಈಗ WhatsApp ನಲ್ಲೂ ಲಭ್ಯ, ಬಳಕೆ ಹೇಗೆ?

ಬೆಂಗಳೂರು, ಸೆಪ್ಟೆಂಬರ್ 28: ಇತ್ತೀಚೆಗೆ ಗೊಗಲ್ ಜಿಮಿನಿ ಎಐ ಟ್ರೆಂಡ್ ಆಗಿತ್ತು. ಗೂಗಲ್‌ನ ನ್ಯಾನೋ ಬನಾನಾ (ಫ್ಲ್ಯಾಶ್ ಇಮೇಜ್ ಮಾಡೆಲ್ 2.5) ಈಗ ವಾಟ್ಸಾಪ್‌ (WhatsApp) ಮೂಲಕವೂ ಲಭ್ಯವಾಗಿದೆ. ಪರ್ಪ್ಲೆಕ್ಸಿಟಿ AI ಸ್ಟಾರ್ಟ್ಅಪ್ ಈ ಸೌಲಭ್ಯವನ್ನು ವಾಟ್ಸಾಪ್‌ಗೂ ತಂದಿದ್ದೆ. ಬಳಕೆದಾರರು ನೇರವಾಗಿ ವಾಟ್ಸಾಪ್‌ ಬಾಟ್ ಮೂಲಕವೇ ವಿಶಿಷ್ಟ ಬಗೆಯ ಫೋಟೋಗಳನ್ನು ರಚಿಸಬಹುದಾಗಿದೆ.

ಇದರ ಮೊದಲು ಫೋಟೋಗಳ ರಚನೆಗಾಗಿ ನ್ಯಾನೋ ಬನಾನಾ ಗೂಗಲ್ ಜಿಮಿನಿ (Google Gemini) ಅಥವಾ ಎಐ ಸ್ಟುಡಿಯೋಗೆ ಹೋಗಬೇಕಾಗಿತ್ತು. ಈಗ +1 (833) 436-3285 ನಂಬರ್ ವಾಟ್ಸಾಪ್‌ನಲ್ಲಿ ಉಳಿಸಿ, ಪರ್ಪ್ಲೆಕ್ಸಿಟಿ (Perplexity AI) ಬಾಟ್‌ಗೆ ಚಾಟ್ ಮಾಡುವ ಮೂಲಕ ಬಳಸಬಹುದಾಗಿದೆ. ಬಳಕೆದಾರರು ಫೋಟೋ ಅಪ್ಲೋಡ್ ಮಾಡಿ ತಮ್ಮ ಪ್ರಾಂಪ್ಟ್ ನೀಡಿದರೆ, AI ಸ್ಪಷ್ಟ ಮತ್ತು ಗುಣಮಟ್ಟದ ಚಿತ್ರಗಳನ್ನು ಸೃಷ್ಟಿಸುತ್ತದೆ. ಹೆಚ್ಚಿನ ವಿವರ ಹೊಂದಿರುವ ಪ್ರಾಂಪ್ಟ್‌ಗಳನ್ನು ನೀಡುತ್ತಾ ಹೋದರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ.

Google s Nano Banana AI Now Available on WhatsApp via Perplexity How to Create

ಉದಾಹರಣೆಗೆ, ಕೈಯಲ್ಲಿ ಗೊಂಬೆ ಹಿಡಿದಿರುವ ನೈಸರ್ಗಿಕ ಛಾಯಾಚಿತ್ರ, 4K ರೆಟ್ರೋ ಇಮೇಜ್ ಅಥವಾ ಐಕಾನಿಕ್ ಸೀರೆ ಟ್ರೆಂಡ್-ಎಲ್ಲವೂ ಸಾಧ್ಯ. ಇದು ಗೂಗುಲ್ ಅಪ್ಲಿಕೇಶನ್‌ಗಳಲ್ಲಿ ಮಾಡುವಂತೆಯೇ ಸುಂದರ ಫೋಟೋಗಳನ್ನು ನಿಮಗೆ ನೀಡುತ್ತದೆ. ಸದ್ಯಕ್ಕೆ ವಾಟ್ಸಾಪ್‌ನಲ್ಲಿ ಈ ಸೌಲಭ್ಯ ಉಚಿತವೇ ಎಂದು ಪರ್ಪ್ಲೆಕ್ಸಿಟಿ ಸ್ಪಷ್ಟಪಡಿಸಿಲ್ಲ. ಆದರೆ ಗೂಗಲ್ ಎಂಜಿನ್‌ಗೆ ಸೀಮಿತ ಉಚಿತ ಬಳಕೆ ಮತ್ತು ಪೇಯ್ಡ್ ಪ್ಲಾನ್ ಎರಡೂ ಇವೆ. ಅದೇ ಮಾದರಿಯಲ್ಲಿ ವಾಟ್ಸಾಪ್ ಬಾಟ್ ಕೂಡ ಇರಬಹುದು ಎಂದು ಹೇಳಲಾಗಿದೆ.

ಗೂಗಲ್ ಪ್ರಕಾರ ಭಾರತವೇ ನ್ಯಾನೋ ಬನಾನಾ ಹೆಚ್ಚು ಬಳಸುತ್ತಿರುವ ದೇಶ. ವಾಟ್ಸಾಪ್‌ ಮೂಲಕ ಲಭ್ಯವಾಗುವುದರಿಂದ ಈ ಟ್ರೆಂಡ್ ಹೆಚ್ಚು ಜನಪ್ರಿಯವಾಗುವ ನಿರೀಕ್ಷೆಯಿದೆ. ಪರ್ಪ್ಲೆಕ್ಸಿಟಿ ಸಂಸ್ಥಾಪಕ ಅರವಿಂದ್ ಶ್ರೀನಿವಾಸ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಈ ವೈಶಿಷ್ಟ್ಯವನ್ನು ಪ್ರಕಟಿಸಿದ್ದಾರೆ. ಈ ಅಭಿಪ್ರಾಯದಲ್ಲಿ, ನ್ಯಾನೋ ಬನಾನಾ ವಾಟ್ಸಾಪ್‌ ಪ್ರವೇಶವು ಭಾರತದಲ್ಲಿ AI ಬಳಕೆಯನ್ನು ಇನ್ನಷ್ಟು ವೇಗಗೊಳಿಸುತ್ತದೆ. ಮೆಟಾವನ್ನು ವಾಟ್ಸಾಪ್‌ ನಲ್ಲಿ ಮೆಟಾ ಒದಗಿಸುತ್ತಿದ್ದರೂ, ಗೂಗಲ್‌ನ ಜೆಮಿನಿ 2.5 ಆಧಾರಿತ ನ್ಯಾನೋ ಬನಾನಾ ಮಾದರಿ ಹೆಚ್ಚು ಶಕ್ತಿಶಾಲಿಯಾಗಿದೆ ಪರಿಗಣಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+