AI: ಕೈಗೆಟಕುವ ದರದಲ್ಲಿ ಐಫೋನ್ ಮೀರಿಸುವ ವಿಶೇಷತೆ ಒಳಗೊಂಡ ರಿಯಲ್‌ಮಿ 15 5G & ಪ್ರೋ ಬಿಡುಗಡೆ
ಇದೀಗ ಎಐ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟಿದ್ದು, ದೊಡ್ಡ ಮಟ್ಟದಲ್ಲಿ ಕ್ರಾಂತಿ ಮಾಡುತ್ತಿದೆ.
ಇದೀಗ ಫೋಟೋ ಕ್ಲಿಕ್ಕಿಸಿದ ಬಳಿಕ ಅದನ್ನು ಎಡಿಟ್ ಮಾಡಲೆಂದೇ ಎಐ ಎಡಿಟ್ ಜೀನಿ ಎಂಬ ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಇದು ಹೇಗೇ ಕಾರ್ಯನಿರ್ವಹಿಸಲಿದೆ. ಯಾವ ಸೀರಿನ್ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗ್ಯಾಜೆಟ್‌ನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತರಲಾಗುತ್ತದೆ. ಹಾಗೆಯೇ ಇದೀಗ ರಿಯಲ್‌ಮಿಯೂ ಕೂಡ ಒಂದೆಜ್ಜೆ ಮುಂದಿಟ್ಟಿದ್ದು, ಎಐ ಎಡಿಟ್ ಜೀನಿ ಎಂಬ ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡ ರಿಯಲ್‌ಮಿ 15 5G ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಫೋಟೋ ಎಡಿಟಿಂಗ್‌ಗಾಗಿಯೇ ಎಐ ಎಡಿಟರ್ ಇನ್‌ಬಿಲ್ಟ್ ಅಳವಡಿಕೆ ಮಾಡಿದ ಮೊಟ್ಟ ಮೊದಲ ಸ್ಮಾರ್ಟ್ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಬಗ್ಗೆ ರಿಯಲ್‌ಮಿ ಉತ್ಪನ್ನ ಕಾರ್ಯತಂತ್ರ ವ್ಯವಸ್ಥಾಪಕ ದೇವೇಂದರ್ ಸಿಂಗ್ ಮಾತನಾಡಿದ್ದು, ರಿಯಲ್‌ಮಿ ಇದೀಗ 15 5G ಪ್ರೊ ಮತ್ತು ರಿಯಲ್‌ಮಿ 15 5G ಸೀರಿಸ್ ಅನ್ನು ಬಿಡುಗಡೆ ಮಾಡಿದೆ. ಇದು ಎಐ ಪಾರ್ಟಿ ಫೋನ್ ಎಂದು ಈ ಫೋನ್ ಗುರುತಿಸಲ್ಪಡುತ್ತದೆ. ಇದರಲ್ಲಿ ಹಲವು ವಿಶೇಷತೆಗಳನ್ನು ಕಾಣಬಹುದು ಎಂದು ಹೇಳಿದ್ದಾರೆ.
ಅದರಲ್ಲೂ ಫೋಟೋ ಎಡಿಟಿಂಗ್‌ಗೆ ಇನ್‌ಬಿಲ್ಟ್ ಎಐ ಎಡಿಟ್ ಜೀನಿ ಟೆಕ್ನಾಲಜಿ ಅಳವಡಿಕೆ ಮಾಡಲಾಗಿದೆ. ಈ ಎಐ ಎಡಿಟ್ ನಿಮ್ಮ ಫೋಟೋವನ್ನು ವೃತ್ತಿಪರ ಎಡಿಟರ್‌ನಷ್ಟೇ ನಿಖರವಾಗಿ ಎಡಿಟ್ ಮಾಡಿಕೊಡಲಿದೆ. ಇದರಿಂದ ಯಾವುದೇ ಕ್ವಾಲಿಟಿ ಕಾಂಪ್ರಮೈಸ್ ಆಗುವುದಿಲ್ಲ ಎಂದು ಹೇಳಿದ್ದಾರೆ.
ವಿಶೇಷತೆಗಳೇನು?: ಈಗಿನ ಯುವ ಪೀಳಿಗೆಗೆ ತಕ್ಕಂತೆ ಈ ಎಐ ಫೋನ್ ಅನ್ನು ಬಿಡುಗಡೆಗೊಳಿಸಲಾಗಿದೆ. ರಿಯಲ್‌ಮಿ 15 ಸಿರೀಸ್, ಟ್ರಿಪಲ್ 50 MP ಅಲ್ಟ್ರಾ-ಕ್ಲಿಯರ್ ಕ್ಯಾಮೆರಾ ಮತ್ತು 4K 60FPS ವೀಡಿಯೊ ರೆಕಾರ್ಡಿಂಗ್ ಅನ್ನು ಒಳಗೊಂಡಿದೆ. ಅಲ್ಲದೆ, ಸ್ಪಷ್ಟ ಹಾಗೂ ವೈವಿಧ್ಯಮಯ ಫೋಟೋ ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದದಲ್ಲಿ ವಿಶ್ವದ ಮೊದಲ ಎಐ ಎಡಿಟ್ ಜೀನಿ ತಂತ್ರಜ್ಞಾನ ಹಾಗೂ ಎಕ್ಸ್‌ಕ್ಲೂಸಿವ್ ಎಐ ಪಾರ್ಟಿ ಮೋಡ್ ಟೆಕ್ನಾಲಜಿಯನ್ನು ಅಳವಡಿಸಲಾಗಿದ ಎಂದು ಹೇಳಿದ್ದಾರೆ.
ಕ್ಯಾಮೆರಾ ವಿಚಾರಕ್ಕೆ ಬಂದ್ರೆ, ರಿಯಲ್ ಮಿ 15ಪ್ರೊ ಟ್ರಿಪಲ್ ಲೆನ್ಸ್ 50MP ಅಲ್ಟ್ರಾ ಕ್ಲಾರಿಟಿ ಕ್ಯಾಮೆರಾ ಹೊಂದಿದ್ದು, ಫ್ಲಾಗ್‌ಶಿಪ್ ಮಟ್ಟದ ತಂತ್ರಜ್ಞಾನ ಒಳಗೊಂಡಿದೆ. 1/1.56' ಅಳತೆಯ ಸೆನ್ಸರ್ ಹೊಂದಿರುವ 24mm ಫೋಕಲ್ ಎತ್ತರದ ಸಮಾನ ಇರುವ 50MP ಸೋನಿ IMX896 OIS ಮೇನ್ ಕ್ಯಾಮೆರಾ, ಅದ್ಭುತ ಪೋರ್ಟ್ರೆಟ್ ಸೇರಿದಂತೆ ಇನ್ನುಳಿದ ಹಲವು ಆಯ್ಕೆಗಳನ್ನು ಬಳಸಿ ಫೋಟೋ ತೆಗೆಯಬಹುದಾಗಿದೆ.
ಅಲ್ಲದೆ, 1/2.8'' ಸೆನ್ಸರ್ ಒಳಗೊಂಡಿರುವ 16mm ಸಮಾನ ಇರುವ 50MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಹಾಗೂ 1/2.8 ಸೆನ್ಸರ್‌ನೊಂದಿಗೆ 50MP ಫ್ರಂಟ್ ಕ್ಯಾಮೆರಾವು ಸೆಲ್ಫಿ ಹಾಗೂ ಹಿಂಬದಿ ಕ್ಯಾಮರಾದ ಕ್ವಾಲಿಟಿಯಿಂದ ಕೂಡಿರಲಿದೆ.
4K 60 FPS ವೀಡಿಯೋ ಶೂಟಿಂಗ್‌ಗೆ ಅವಕಾಶ ಇದ್ದು, ಉತ್ತಮ ಗುಣಮಟ್ಟದ ವಿಡಿಯೋ ಸೆರೆ ಹಿಡಿಯಬಹುದು. ಎರಡು 50MP ಕ್ಯಾಮೆರಾಗಳಿವೆ. ಹಿಂದೆ ಹಾಗೂ ಮುಂಭಾಗದ ಕ್ಯಾಮೆರಾ 4K ರೆಕಾರ್ಡಿಂಗ್ ಮಾಡಲಿದೆ.
ರಿಯಲ್‌ಮಿ 15 ಸಿರೀಸ್‌ನಲ್ಲಿ ಎಐ ಎಡಿಟ್ ಜೀನಿ ಎಡಿಟಿಂಗ್ ಅಪ್ಲಿಕೇಷನ್ ಇನ್‌ಬಿಲ್ಟ್ ಇರಲಿದೆ. ಇದು ಸಂಪೂರ್ಣ ಎಐ ಆಧಾರಿತ ಎಡಿಟಿಂಗ್ ಸಾಧನ ಆಗಿದೆ. ಧ್ವನಿ ಆದೇಶಗಳ ಮೂಲಕವೇ ಚಿತ್ರಗಳನ್ನು ಎಡಿಟ್ ಮಾಡಬಹುದು. ಎಐ ಎಡಿಟ್ ಜೀನಿ ಫೋಟೋಗಳ ಬಣ್ಣ ಬದಲಿಸುವುದು, ನಿಮಗೆ ಬೇಕಾದ ಆಬ್ಜೆಕ್ಟ್‌ಗಳನ್ನು ಸೇರಿಸುವುದು ಸೇರಿಸಿದಂತೆ ಹಲವು ರೀತಿಯಲ್ಲಿ ಎಡಿಟ್ ಮಾಡಬಹುದು. ಈ ರೀತಿಯ ಟೆಕ್ನಾಲಜಿ ಇದುವರೆಗೂ ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲಿ ಬಿಡುಗಡೆಯಾಗಿಲ್ಲ.
ಎಐ ಪಾರ್ಟಿ ಮೋಡ್ ಟೆಕ್ನಾಲಜಿಯನ್ನು ಇದು ಒಳಗೊಂಡಿದೆ. ನಿಮ್ಮ ಯಾವುದೇ ರೀತಿಯ ಪಾರ್ಟಿ ಅಥವಾ ವಿಶೇಷ ದಿನಗಳನ್ನು ಮತ್ತಷ್ಟು ವಿಶೇಷಗೋಳಿಸಲು, ಆ ಎಲ್ಲಾ ಫೋಟೋಗಳಿಗೂ ಎಐ ಪಾರ್ಟಿ ಮೋಡ್ ಮೂಲಕ ಕಲರ್‌ಫುಲ್ ಫ್ರೇಮ್ ಹಾಕಬಹುದು.
ರಿಯಲ್‌ಮಿ 15 ಸೀರಿಸ್ ಮೊದಲಬಾರಿ ಸ್ನ್ಯಾಪ್ ಡ್ರ್ಯಾಗನ್ 7 Gen 4 ಚಿಪ್‌ಸೆಟ್ ಹೊಂದಿದ್ದು, ಇದು ಸುಧಾರಿತ 4nm ಕಡಿಮೆ ವಿದ್ಯುತ್ ಬಳಕೆಯ ತಂತ್ರಜ್ಞಾನದಲ್ಲಿ ತಯಾರಿಸಲಾಗಿದೆ. ಇದರ ಫಲಿತಾಂಶವಾಗಿ ಸಿಪಿಯು ಕಾರ್ಯಕ್ಷಮತೆ 15% ಹೆಚ್ಚಿದೆ. ಜಿಟಿ ಬೂಸ್ಟ್ ಎಐ ಗೇಮಿಂಗ್ ಆಪ್ಟಿಮೈಜೇಶನ್ ಅನ್ನು ಹೊಂದಿದ್ದು, ಗೇಮರ್‌ಗಳಿಗೆ ಹೇಳಿಮಾಡಿಸಿದ್ದಾಗಿದೆ.
ಅಲ್ಲದೆ, ಇದಕ್ಕೆ 7000mAh ಟೈಟಾನ್ ಬ್ಯಾಟರಿಯನ್ನು ನೀಡಲಾಗಿದೆ. ಬಳಕೆದಾರರು ಕೇವಲ 50% ಬ್ಯಾಟರಿ ಉಳಿದರೂ ದಿನವಿಡೀ ಬಳಕೆ ಮಾಡಬಹುದು. ಸೂಪರ್-ಫಾಸ್ಟ್ 80W ಚಾರ್ಜಿಂಗ್ ಇರಲಿದೆ. ಅಲ್ಲದೇ, ಬಲಿಷ್ಠ 7000mm VC ಕೂಲಿಂಗ್ ಸಿಸ್ಟಮ್ ವ್ಯವಸ್ಥೆಯನ್ನು ಒಳಗೊಂಡಿದ್ದು, ಇದರ ದಪ್ಪ 7.69mm ಆಗಿದೆ. ಇನ್ನು ಇದರ ಬೆಲೆ 23,999 ರೂಪಾಯಿನಿಂದ ಪ್ರಾರಂಭ ಆಗಲಿದ್ದು, 15 ಪ್ರೋ 28,999 ರೂಪಾಯಿಗಳಿಂದ ಆರಂಭವಾಗಲಿದೆ.
ರಿಯಲ್‌ಮಿ 15 ಫೋನ್ ದರಗಳು
* ರಿಯಲ್‌ಮಿ 15 5G: 23,999 ರೂಪಾಯಿ
* ರಿಯಲ್‌ಮಿ 15 5G ಪ್ರೊ: 28,999 ರೂಪಾಯಿ
-
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
ಯುಪಿಎಸ್ಸಿ 2025 ಫಲಿತಾಂಶ ಪ್ರಕಟ: ಪಾಸಾದವರು 958 ಆಕಾಂಕ್ಷಿಗಳು, ಅರ್ಜಿ ಹಾಕಿದ್ದವರು 10 ಲಕ್ಷ ಮಂದಿ -
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ












Click it and Unblock the Notifications