Artificial Intelligence: ಕೈಗಾರಿಕಾ ಪ್ರಗತಿಗೆ ಕೃತಕ ಬುದ್ಧಿಮತ್ತೆ ಸಹಾಯಕ
ರಾಜ್ಯದ ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಹೇರಳ ಅವಕಾಶ ಇದೆ. ಕೃತಕ ಬುದ್ಧಿಮತ್ತೆ(AI) ಕ್ಷೇತ್ರದ ಬೆಳವಣಿಗೆಗಳಿಂದ ಸೃಷ್ಟಿಯಾಗಿರುವ ಅವಕಾಶಗಳನ್ನು ಬಳಸಿ ಕೈಗಾರಿಕೆಗಳ ಅಭಿವೃದ್ಧಿಗೆ ಸುಸ್ಥಿರ ವಾತಾವರಣ ರೂಪಿಸಬೇಕಿದೆ ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಅವರು ತಿಳಿಸಿದರು.
ಮಂಗಳೂರಿನಲ್ಲಿ ಸಧೃಢ ಭವಿಷ್ಯಕ್ಕಾಗಿ ಮೂಲಸೌಕರ್ಯ ಮತ್ತು ಸಂಪರ್ಕ ಸುಧಾರಣೆ ಕುರಿತು ಭಾರತೀಯ ಕೈಗಾರಿಕೆಗಳ ಒಕ್ಕೂಟ ಆಶ್ರಯದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರ್ಣವನ್ನ ಉದ್ಘಾಟಿಸಿ ಮಾತನಾಡಿದ ಅವರು, ಸರಕು ಸಾಗಣೆ ವಲಯದ ಸಮಸ್ಯೆ ಉದ್ಯಮಿಗಳ ಪಾಲಿಗೆ ದುಸ್ವಪ್ನದಂತೆ, ಪೂರೈಕೆ ಸರಪಣಿ, ಸರಕು ಸಾಗಣಿ ವ್ಯವಸ್ಥೆ ಮೇಲೆ ಕೃತಕ ಬುದ್ಧಿಮತ್ತೆ ನೇರ ಪರಿಣಾಮ ಬೀರಲಿದೆ. ಮಳೆಗಾಲದಲ್ಲಿ ಕರವಾಳಿ ಕೆಲಮೊಮ್ಮೆ ಇತರ ಪ್ರದೇಶಗಳೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಕೈಗಾರಿಕಾ ವಾತಾವರಣದ ಮೇಲೂ ಪರಿಣಾಮ ಬೀರುತ್ತಿದೆ. ಹಸಿರುಸ್ನೇಹಿ ಮೂಲಸೌಕರ್ಯವನ್ನು ಮತ್ತಷ್ಟು ಸ್ಮಾರ್ಟ್ ಮತ್ತು ಸುಸ್ಥಿರವಾಗಿ ಅಭಿವೃದ್ಧಿಪಡಿಸುವ ಸವಾಲು ಇದೆ. ಇಲ್ಲಿನ ಉದ್ಯಮಿಗಳು ಹೊಸ ಅಲೋಚನೆಗಳೊಂಡಿಗೆ ಮುಂದೆ ಬಂದರೆ, ಇಲ್ಲೂ ಕೈಗಾರಿಕೆಗೆ ಸದೃಢ ಮೌಲಸೌಕರ್ಯ ಅಭಿವೃದ್ಧಿ ಸಾಧ್ಯ. ಇದಕ್ಕೆ ಸರ್ಕಾರವೂ ಉತ್ತೇಜನ ನೀಡಲಿದೆ ಎಂದು ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಅವರು ಹೇಳಿದರು.
ರಾಜ್ಯದ ಸಮಗ್ರ ಆಂತರಿಕ ಉತ್ಪನ್ನದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯವಾಗಿದೆ. ವಿದೇಶಿ ಬಂಡವಾಳ ಆಕರ್ಷಣೆ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ನವೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎಲ್ಲ ರಾಜ್ಯಗಳಿಗಿಂತ ಮುಂದಿದ್ದೇವೆ. ಸರಕು ಸಾಗಣೆ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುವ ಅಗತ್ಯವಿದೆ. ಇದಕ್ಕಾಗಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಹಬ್ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಎಸ್ ಸೆಲ್ವಕುಮಾರ್ ಅವರು ತಿಳಿಸಿದರು.
ಇನ್ನೂ ಈ ವೇಳೆ ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಮಾತನಾಡಿ, ಮೈಸೂರು ಹಾಗೂ ಹುಬ್ಬಳ್ಳಿ-ಧಾರವಾಡಕ್ಕೆ ಹೋಲಿಸಿದರೆ ಮಂಗಳೂರಿನಲ್ಲಿ ಹೂಡಿಕೆ ಕಡಿಮೆ ಇದೆ. ಅಂತರರಾಷ್ಟ್ರೀಯ ವಿಮಾನನಿಲ್ದಾಣ, ಬಂದರು, ರಾಷ್ಟ್ರೀಯ ಹೆದ್ದಾರಿ ಮೊದಲಾದ ಎಲ್ಲ ಸಂಪರ್ಕ ವ್ಯವಸ್ಥೆಗಳಿದ್ದರೂ ಈ ಹಿನ್ನಡೆ ಏಕೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪಂಚತಾರಾ ಹೋಟೆಲ್, ದೊಡ್ಡ ಮಟ್ಟದ ರೆಸಾರ್ಟ್, ಸಮಾವೇಶ ಸಭಾಂಗಣಗಳ ಕೊರತೆ ಇಲ್ಲಿದೆ. ಜಾಗದ ಕೊರತೆ ನೀಗಲು, ಗಗನಚುಂಬಿ ಕಟ್ಟಡಗಳ ಮೊರೆ ಹೋಗುವ ಸಾಧ್ಯತೆ ಪರಿಶೀಲಿಸಬೇಕಿದೆ. ಇಲ್ಲಿನ ಸಮಸ್ಯೆಗಳನ್ನು ಮೆಟ್ಟಿನಿಂತು ಕೈಗಾರಿಕಾ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸುವ ಆಲೋಚನೆಗಳು ಇಲ್ಲೇ ಹುಟ್ಟಬೇಕು ಎಂದು ಹೇಳಿದರು.












Click it and Unblock the Notifications