Employees: ಉದ್ಯೋಗಿಗಳಿಗೆ ಅಮೆಜಾನ್ ಸಿಇಒ ಎಚ್ಚರಿಕೆ ಸಂದೇಶ
Employees: ಎಲ್ಲಾ ಕ್ಷೇತ್ರಗಳಲ್ಲೂ ಇದೀಗ ಎಐನದ್ದೇ ಹವಾ ಎಂಬಂತಾಗಿದೆ. ಬಹುತೇಕ ಕಂಪನಿಗಳು ಎಐ ಬಳಕೆ ಮಾಡುತ್ತಿದ್ದು, ಇದನ್ನೇ ಹೆಚ್ಚಾಗಿ ಅವಲಂಬನೆ ಮಾಡಿದೆ. ಈ ತಂತ್ರಜ್ಞಾನ ಜಾರಿಯಾದ ಮೇಲೆ ಏನೆಲ್ಲಾ ಪರಿಣಾಗಳು ಆಗಿವೆ ಎನ್ನುವ ವಿಸ್ತ್ರುತ ಮಾಹಿತಿಯನ್ನು ಅಮೆಜಾನ್ ಸಿಇಒ ಬಿಚ್ಚಿಟ್ಟಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಎಐ ಎಂಟ್ರಿ ಕೊಡ್ತಿದ್ದಂತೆ ಕಂಪನಿಗಳು ಸರದಿಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಆಘಾತಕಾರಿ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳಿ ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ತೆಗೆದುಹಾಕಿವೆ. ಈ ಸಾಲಿನಲ್ಲಿ ಐಬಿಎಂ, ಗೋಗಲ್, ಅಮೆಜಾನ್, ಮೈಕ್ರೋಸಾಫ್ಟ್‌ನಂತರ ಎಂಎನ್‌ಸಿ ಕಂಪನಿಗಳು ಇದ್ದು, ಇವುಗಳು ಈಗಲೂ ಉದ್ಯೋಗಿಗಳನ್ನು ಸಂಖ್ಯೆಯನ್ನು ಕಡಿತ ಮಾಡುವ ನಿರ್ಧಾರಕ್ಕೆ ಕೈಹಾಕಿವೆ.
ಮಾಹಿತಿ ಪ್ರಕಾರ, ಬರೀ ಈ ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು 1,00,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೆಗೆದುಹಾಕಿವೆ. ಇದೇ ಭಯದಲ್ಲಿ ಉದ್ಯೋಗಿಗಳು ಇದೀಗ ಯಾವಾಗ ನಮ್ಮ ಕೆಲಸವೂ ಹೋಗುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ.
ಈ ನಡುವೆಯೇ ಎಐ ತಂತ್ರಜ್ಞಾನದ ಪರಿಣಾಮಗಳ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಮಹತ್ವದ ಮಾಹಿತಿ ನೀಡಿದ್ದಾರೆ. ಎಐ ತಂತ್ರಜ್ಞಾನವು ಅನೇಕ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಲು ಪ್ರಾರಂಭ ಮಾಡಿದೆ. ಇದರಿಂದ ಉದ್ಯೋಗಗಳ ಅಗತ್ಯತೆ ಕಡಿಮೆಯಾಗಿದ್ದು, ಐಟಿ ಸೇರಿದಂತೆ ಎಲ್ಲೆಡೆ ದೊಡ್ಡ ಮಟ್ಟದ ಬದಲಾವಣೆಗಳಿಗೆ ಕಾರಣ ಆಗುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ಜೀವಿತಾವಧಿಯಲ್ಲೇ ಎಐ ಅತ್ಯಂತ ಪರಿವರ್ತಕ ತಂತ್ರಜ್ಞಾನವಾಗಲಿದೆ. ಇದು ಕೆಲಸ ಮಾಡುವ ವಿಧಾನವನ್ನೇ ಬದಲಾವಣೆ ಮಾಡಿಬಿಟ್ಟಿದೆ. ಪ್ರತಿಯೊಂದು ತಾಂತ್ರಿಕವಾಗಿ ರೂಪಾಂತರ ಆಗುತ್ತಿದೆ. ಆದ್ದರಿಂದ ತಂತ್ರಜ್ಞಾನ ಸಹ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲದೆ, ನಿಮ್ಮನ್ನು ಉನ್ನತ ಸ್ಥಾನಕ್ಕೇರಿಸಲು ಬಯಸುವ ಇತರ ಕೆಲಸಗಳನ್ನು ಎಐ ಉದ್ಭವವಾಗಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಎಐ ಇರಲಿದೆ ಎಂದು ಹೇಳಿದ್ದಾರೆ.
ಈ ತಂತ್ರಜ್ಞಾನದಿಂದ ಉದ್ಯೋಗಿಗಳ ಬೇಗನೆ ಕೆಲಸ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಎಲ್ಲಾ ಸಾಫ್ಟ್‌ವೇರ್ ಕಂಪನಿಗಳು ಶೇಕಡ 30ರಿಂದ 50ರಷ್ಟು ಕೆಲಸವನ್ನು ಎಐ ಮೂಲಕ ಮಾಡಿಸುತ್ತಿವೆ. ಎಐಯಲ್ಲಿನ ಹೂಡಿಕೆಗಳು ಮತ್ತು ನೈಸರ್ಗಿಕ ಕ್ಷೀಣತೆಯಿಂದ ಕಂಪನಿಯು ತನ್ನ ಉದ್ಯೋಗಿಗಳನ್ನು ಶೇಕಡ 40ರಷ್ಟು ಕಡಿತ ಮಾಡಲಿದೆ ಎಂದು ತಿಳಿಸಿದ್ದಾರೆ.
ಅಮೆಜಾನ್ ಈಗಾಗಲೇ ಎಐ ಬಂದಾಗಿನಿಂದ 27,000ಕ್ಕೂ ಹೆಚ್ಚು ಉದ್ಯೋಗಗಳನ್ನು ತೆಗೆದುಹಾಕಿದೆ. ಎಐ ಬಳಕೆಯಿಂದ ಕೆಲವೊಂದು ಕೆಲಸಗಳಿಗೆ ಇನ್ಮುಂದೆ ಕಡಿಮೆ ಉದ್ಯೋಗಿಗಳ ಅಗತ್ಯ ಇರಬಹುದು. ಆದರೆ, ರೊಬೊಟಿಕ್ಸ್, ಡೇಟಾ ವಿಶ್ಲೇಷಣೆ, ಸಂಶೋಧನೆ, ಸೃಜನಾತ್ಮಕತೆ ಮತ್ತು ಸಂಕೀರ್ಣ ನಿರ್ಧಾರಗಳ ಅಗತ್ಯ ಇರುವ ಹೊಸ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಗಳು ನಿರ್ಮಾಣವಾಗಲಿವೆ ಅಂತಲೂ ಹೇಳಿದ್ದಾರೆ.
ಎಐ ತಂತ್ರಜ್ಞಾನವು ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಆಯ್ಕೆ ಆಗಿದೆ. ಕಂಪನಿಗಳಿಗೆ ಇದು ವೇಗ, ಶ್ರದ್ಧಾ ಮತ್ತು ವೆಚ್ಚಕಡಿತ ಎಂಬ ಮೂರೂ ಲಾಭಗಳನ್ನು ಒದಗಿಸುತ್ತಿದೆ. ಸಣ್ಣ ಕಂಪನಿಗಳು ಕೂಡ ಇತ್ತೀಚೆಗೆ ಯಾವುದೇ ಕಾರಣವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ.
ಎಲ್ಲಾ ಕಂಪನಿಗಳು ಎಐನಲ್ಲಿ ಹೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ. ಕೃತಕ ಬುದ್ಧಿಮತ್ತೆ ಬಳಕೆ ಜಾಸ್ತಿ ಮಾಡಲು ಮತ್ತು ಇಂಜಿನಿಯರ್‌ಗಳು ಸೇರಿದಂತೆ ಮಾರಾಟ ವಿಭಾಗದ ಕೆಲಸಗಾರರ ಉದ್ಯೋಗ ಕಡಿತಗೊಳಿಸಲು ಮುಂದಾಗಿದೆ ಅಂತಲೂ ವರದಿಯಾಗಿದೆ.












Click it and Unblock the Notifications