AI: ಜಾಬ್ ಲಾಸ್ ಮಾತ್ರವಲ್ಲ ಸಂಬಳವೂ ಕಡಿಮೆ ಆಗಲಿದೆ!
ವಿಶ್ವದ ಪ್ರಮುಖ ಸಂಸ್ಥೆಗಳೇ ಎಐ ಹಾವಳಿಗೆ ಬೆಚ್ಚು ಬಿದ್ದಿವೆ. ಇದೀಗ ಎಐನಿಂದ ಕೇವಲ ಕೆಲಸ ಕಳೆದುಕೊಳ್ಳುವುದು ಮಾತ್ರವಲ್ಲ ಸಂಬಳವೂ ಕಡಿಮೆ ಆಗಲಿದೆ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ChatGPT ಹಾಗೂ ಇನ್ನಿತರ AI ಚಾಟ್‌ಬಾಟ್‌ಗಳು ಬಂದ ಮೇಲೆ ಸಾವಿರಾರು ಜನ ಏಕಕಾಲಕ್ಕೆ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೊಸ ತಂತ್ರಜ್ಞಾನವು ಉದ್ಯೋಗ ಕ್ಷೇತ್ರದಲ್ಲಿ ಭಾರೀ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. AI ವ್ಯಾಪಕ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ. ಅಲ್ಲದೇ ಆರ್ಥಿಕ ಕ್ಷೇತ್ರದಲ್ಲಿ ಹೊಸ ಸಂಚಲವನ್ನೂ ಸೃಷ್ಟಿ ಮಾಡಿದೆ. ಎಐಗೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಎಐ ತಜ್ಞರು ಹಾಗೂ ಉದ್ಯಮಿಗಳು ಎಚ್ಚರಿಸಿದ್ದಾರೆ.
ಎಐನಿಂದ ದಿನಗಟ್ಟಲೆ ಮಾಡಬೇಕಾದ ಕೆಲಸಗಳು ಕೆಲವೇ ನಿಮಿಷಗಳಲ್ಲಿ ಆಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಎಐನಿಂದ ಕೆಲವೊಂದು ಸಮಸ್ಯೆಗಳು ಆಗಲಿವೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಅಂದರೆ 2023 ರಿಂದ AI ಅಭಿವೃದ್ಧಿ ಹಿನ್ನೆಲೆಯಲ್ಲಿ ಬರೋಬ್ಬರಿ ಭಾರತವೊಂದರಲ್ಲೇ ಬರೋಬ್ಬರಿ 27,000 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. AI ಬಳಕೆಯಿಂದ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಜನ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಜುಲೈನಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ AI ನಿಂದಾಗಿ ಸುಮಾರು 10,000 ಕ್ಕೂ ಹೆಚ್ಚು ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. 2023 ರಿಂದ 27,000 ಕ್ಕೂ ಹೆಚ್ಚು ಜಾಬ್ ಲಾಸ್ ಆಗಿದೆ. ಎಐನಿಂದ ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ನೇಮಕಾತಿ ವಿಚಾರದಲ್ಲೂ ಎಐ ಬಳಕೆ ಆಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಪದವೀಧರರಿಗೆ ಉದ್ಯೋಗದಲ್ಲಿ ಪ್ರಾರಂಭಿಕ ಹಂತದಲ್ಲಿ ಸಿಗುತ್ತಿದ್ದ ಕೆಲಸಗಳು ಸಹ ಕಡಿಮೆ ಆಗಿವೆ. ಪದವಿ ಮುಗಿಸಿ ಕೆಲಸಕ್ಕೆ ಬರುವವರಿಗೆ ಕಡಿಮೆ ಸಂಬಳದ ಹಾಗೂ ಉದ್ಯೋಗದಲ್ಲಿ ಮುಂದುವರಿಯುವುದಕ್ಕೆ ಸಿಗುತ್ತಿದ್ದ ಕಾರ್ಪೊರೇಟ್ ಅವಕಾಶಗಳು ಕಳೆದ ವರ್ಷದಲ್ಲಿ ಶೇ 15% ಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಏತನ್ಮಧ್ಯೆ, ಕಳೆದ ಎರಡು ವರ್ಷಗಳಲ್ಲಿ ಉದ್ಯೋಗದಲ್ಲಿ AI ಬಳಸುವ ಪ್ರಮಾಣವೂ ಉದ್ಯೋಗಿಗಳಲ್ಲಿ ಬರೋಬ್ಬರಿ ಶೇ 400% ಹೆಚ್ಚಳ ಕಂಡುಬಂದಿದೆ ಎಂದು ವರದಿಯಾಗಿದೆ.
ಸಂಬಳ ಕಡಿಮೆ ಆಗುವ ಸಾಧ್ಯತೆ: ಇನ್ನು ಎಐ ಬಳಕೆಯಿಂದ ಉದ್ಯೋಗ ಕಡಿತ ಮಾತ್ರವಲ್ಲ ಉದ್ಯೋಗಿಗಳ ಸಂಬಳ ಕಡಿಮೆ ಆಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಯಾಕೆಂದರೆ ಎಐ ಅರ್ಧಕ್ಕೆ ಅರ್ಧ ಕೆಲಸಗಳು ಕಡಿಮೆ ಆಗಲಿವೆ. ಇದರಿಂದ ಉದ್ಯೋಗಿಗಳು ಮಾಡಬಹುದಾದ ಕೆಲಸಗಳನ್ನು ಎಐ ಸಹಾಯದಿಂದಲೇ ಮಾಡುವುದಕ್ಕೆ ಸಾಧ್ಯವಿದೆ. ಇದು ಸಂಬಳ ಕಡಿಮೆ ಆಗುವುದಕ್ಕೆ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications