ನೇಮಕಾತಿ ಪ್ರಕ್ರಿಯೆಯಲ್ಲಿ ಶೇ 75ರಷ್ಟು ಎಐ ಟೂಲ್‌ಗಳ ಬಳಕೆ; ಲಿಂಕ್ಡ್‌ಇನ್‌ ವರದಿ ಹೇಳುತ್ತಿರುವುದೇನು?

ಭಾರತದ ನೇಮಕಾತಿ ಪ್ರಕ್ರಿಯೆಯಲ್ಲಿ ಎಐ (ಕೃತಕ ಬುದ್ಧಿಮತ್ತೆ) ಬಳಕೆ ಹೆಚ್ಚಾಗುತ್ತಿದೆ. ವೃತ್ತಿಪರ ಸಾಮಾಜಿಕ ಮಾಧ್ಯಮ ಲಿಂಕ್ಡ್‌ಇನ್ ನಡೆಸಿದ ಸಮೀಕ್ಷೆಯ ಪ್ರಕಾರ, ನೇಮಕಾತಿದಾರರಲ್ಲಿ ಶೇ 75 ಜನರು ಈಗ ಎಐ ಮತ್ತು ಟೆಕ್ ಟೂಲ್‌ಗಳನ್ನು ಬಳಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಎಐ ಅನ್ನು ಕಂಪನಿಗಳಲ್ಲಿ ಅಳವಡಿಸಿಕೊಂಡ ನಂತರ, ಭಾರತದ ನೇಮಕಾತಿ ಪ್ರಕ್ರಿಯೆಯಲ್ಲಿ ಗುಣಮಟ್ಟ ಹೆಚ್ಚಾಗಿದೆ ಎಂದು ಲಿಂಕ್ಡ್‌ಇನ್‌ ವರದಿ ಪ್ರಕಟಿಸಿದೆ.

ವೇಗವಾಗಿ ನೇಮಕಾತಿ ಮಾಡುವ ಬದಲು ಗುಣಮಟ್ಟದ ನೇಮಕಾತಿಗೆ ಆದ್ಯತೆ ನೀಡುವ ಮಹತ್ವದ ಬದಲಾವಣೆ ಕಂಡುಬಂದಿದೆ. ಈಗ ಮೂರು ಜನ ನೇಮಕಾತಿದಾರರಲ್ಲಿ ಒಬ್ಬರು ತಮ್ಮ ಬಜೆಟ್‌ನ ಶೇ 70 ವರೆಗೆ ಎಐ ಮತ್ತು ಟೆಕ್ ಟೂಲ್‌ಗಳಿಗೆ ಮೀಸಲಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಲಿಂಕ್ಡ್‌ಇನ್‌ ನೀಡಿದೆ.

75 of Recruitment Now Uses AI Tools What LinkedIn Report Reveals

1,300ಕ್ಕೂ ಹೆಚ್ಚು ಎಚ್‌ಆರ್‌ ವೃತ್ತಿಪರರ ನೀಡಿದ ಅಭಿಪ್ರಾಯಗಳ ಆಧಾರದ ಮೇಲೆ, ಲಿಂಕ್ಡ್‌ಇನ್ ಇಂಡಿಯಾ ವರದಿ ಪ್ರಕಟಿಸಿದೆ. ಇದರ ಪ್ರಕಾರ, ಇಂದಿನ ನೇಮಕಾತಿ ಪ್ರಕ್ರಿಯೆಗಳಲ್ಲಿ ಉತ್ತಮ ಗುಣಮಟ್ಟ, ಕೌಶಲ್ಯಗಳಿರುವ ಅಭ್ಯರ್ಥಿಗಳನ್ನು ಹುಡುಕುವುದು (ಶೇ 57), ಸ್ಮಾರ್ಟ್ ಹೈರಿಂಗ್ ಟೆಕ್ನಾಲಜಿಗಳನ್ನು ಅಳವಡಿಸಿಕೊಳ್ಳುವುದು (ಶೇ 52) ಮತ್ತು ನೇಮಕಾತಿಯ ಪರಿಣಾಮವನ್ನು ನೇಮಕಾತಿ ಮಾಡುವವರಿಗೆ ಮನವರಿಕೆ ಮಾಡಿಕೊಡುವುದು (ಶೇ 46) ಸೇರಿವೆ.

ಎಐ ಬಳಕೆಯು ಪುನರಾವರ್ತಿತ ಕೆಲಸಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ ಉತ್ಪಾದಕತೆಯನ್ನು (ಶೇ 45%) ಹೆಚ್ಚಿಸುತ್ತಿದೆ ಮತ್ತು ಅಭ್ಯರ್ಥಿಗಳೊಂದಿಗೆ ಉತ್ತಮ ಸಂವಹನ ಹೊಂದಲು ನೇಮಕಾತಿದಾರರಿಗೆ ಹೆಚ್ಚಿನ ಸಮಯವನ್ನು (ಶೇ 42%) ನೀಡುತ್ತಿದೆ. ಈ ಬದಲಾವಣೆಯಿಂದ ಶೇ 90 ನೇಮಕಾತಿದಾರರು ತಮ್ಮನ್ನು ಕರಿಯರ್‌ ಅಡ್ವೈಸರ್‌ಗಳಾಗಿ ಪರಿಗಣಿಸುತ್ತಿದ್ದಾರೆ.

ಲಿಂಕ್ಡ್‌ಇನ್‌ ವರದಿಯ ಪ್ರಕಾರ...

ನೇಮಕಾತಿ ನಿರ್ಧಾರಗಳನ್ನು ಕೈಗೊಳ್ಳಲು ಶೇ 69 ಜನರು ಡೇಟಾ ಎನಲಿಟಿಕ್ಸ್‌ ಅನ್ನು ಬಳಸುತ್ತಾರೆ. ನೇಮಕಾತಿ ವೇಗ ಮತ್ತು ನಿಖರತೆಯನ್ನು ಹೆಚ್ಚಿಸಲು ಶೇ 63 ಜನರು ಎಐ ಟೂಲ್‌ಗಳನ್ನು ಬಳಸುತ್ತಾರೆ. ನೇಮಕಾತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಎಐ ಬಳಕೆ ಮಹತ್ವವಾಗಿದೆ ಎಂದು ಶೇ 45 ಜನರು ಹೇಳಿದ್ದಾರೆ.

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಇತರ ನಗರಗಳನ್ನು ಒಳಗೊಂಡ ಈ ಸಮೀಕ್ಷೆಯನ್ನು ಯೂಗೋವ್ ಮತ್ತು ಲಿಂಕ್ಡ್‌ಇನ್ ಮೇ 2025 ರಲ್ಲಿ ನಡೆಸಿದೆ. ಈ ಸಮೀಕ್ಷೆಯಲ್ಲಿ 25 ರಿಂದ 65 ವರ್ಷದೊಳಗಿನ ಎಚ್‌ಆರ್‌ ವೃತ್ತಿಪರರು ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+