Malti Chahar: ಸೂರ್ಯಕುಮಾರ್ ಯಾದವ್.. ನಿಮಗೊಂದು ಸಲಾಂ ಎಂದ ದೀಪಕ್ ಚಹಾರ್ ಸಹೋದರಿ; ಭಾರಿ ವೈರಲ್
Malti Chahar: ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ 2026ರ ರೋಚಕ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಈ ಗೆಲುವಿನ ಬೆನ್ನಲ್ಲೇ ಎಂಐ ತಂಡದ ದೀಪಕ್ ಚಹಾರ್ ಸಹೋದರಿ ಮಾಲ್ತಿ ಚಹಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದು ಇದೀಗ ಸಖತ್ ಟ್ರೆಂಡ್ ಆಗುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಕೇವಲ 21 ಎಸೆತಗಳಲ್ಲಿ 63 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು ಏರಿಸಿದರು. ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜಡಿ ಜಯ ಸಾಧಿಸಿತು.

ರೋಹಿತ್, ರಿಕಲ್ಟನ್ ಅಬ್ಬರದ ಆಟ
ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (84 ರನ್) ಮತ್ತು ರಯಾನ್ ರಿಕೆಲ್ಟನ್ (83 ರನ್) ಪ್ರಮುಖ ಪಾತ್ರ ವಹಿಸಿದರು. ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದ ಈ ಜೋಡಿ ಉತ್ತರ ಆರಂಭ ಒದಗಿಸಿತು. ಸತತ ಸೋಲುಗಳಿಂದ ಕಂಗಾಲಾಗಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಗೆಲುವು ಹೊಸ ಚೈತನ್ಯ ನೀಡಿದೆ. ಈ ಜಯದೊಂದಿಗೆ ಮುಂಬೈ ತಂಡವು ಪ್ಲೇ ಆಫ್ ತಲುಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ದೀಪಕ್ ಚಹಾರ್ ಸಹೋದರಿ ಟ್ವಿಟ್ ವೈರಲ್
ಬೆನ್ನು ನೋವಿನ ಸಮಸ್ಯೆಯಿಂದಾಗಿ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರು. ಸೂರ್ಯಕುಮಾರ್ ನಾಯಕತ್ವದಲ್ಲಿ ತಂಡವು ಭರ್ಜರಿ ಜಯವನ್ನು ದಾಖಲಿಸಿತು. ಪಂದ್ಯದ ನಂತರ ಮುಂಬೈ ಇಂಡಿಯನ್ಸ್ ವೇಗಿ ದೀಪಕ್ ಚಹಾರ್ ಅವರ ಸಹೋದರಿ ಮಾಲ್ತಿ ಚಹಾರ್ ಅವರು ತಮ್ಮ ಟ್ವೀಟ್ ಮೂಲಕ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಶ್ಲಾಘಿಸಿದ ಮಾಲ್ತಿ ಚಹಾರ್
ಸೂರ್ಯಕುಮಾರ್ ಯಾದವ್ ಅವರ ನಾಯಕತ್ವವನ್ನು ಶ್ಲಾಘಿಸಿದ ಮಾಲ್ತಿ, "ಇದು ಮತ್ತೆ ಹಳೆಯ ಮುಂಬೈ ಇಂಡಿಯನ್ಸ್ ತಂಡದಂತೆ ಭಾಸವಾಗುತ್ತಿದೆ. ತಂಡದ ಪ್ರತಿಯೊಬ್ಬರೂ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ," ಎಂದು ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲೂ "ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಅವರ ಬ್ಯಾಟಿಂಗ್ ಪ್ರದರ್ಶನ ಚೆನ್ನಾಗಿತ್ತು. ಸೂರ್ಯ ಅವರ ನಾಯಕತ್ವ ಅಚ್ಚುಕಟ್ಟಾಗಿದ್ದು, ಇದೊಂದು ಪರಿಪೂರ್ಣ ತಂಡದ ಆಟ," ಎಂದು ಬಣ್ಣಿಸಿದ್ದಾರೆ. ಇನ್ನೂ ಸಹೋದರ ದೀಪಕ್ ಚಹಾರ್ ಅವರು ತಮ್ಮ ಪಾಲಿನ 4 ಓವರ್‌ಗಳ ಕೋಟಾವನ್ನು ಯಶಸ್ವಿಯಾಗಿ ಪೂರೈಸಿದ್ಧಾರೆ, ಅವರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
THIS felt like MI again! 🔥
— Malti Chahar🇮🇳 (@ChaharMalti) May 4, 2026
Almost everyone performed. Well played, Ryan and Rohit bhaiya!
Nice captaincy by Surya.
And Deepak delivering all 4 overs - well bowled, bro!
Proper team game. This is MI! 💙#MIvsLSG #IPL2026 #MI
ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, "ನಿಜ ಹೇಳಬೇಕೆಂದರೆ ಈ ಸೀಸನ್‌ನಲ್ಲಿ ನಾವು ಇಂತಹ ಪರಿಸ್ಥಿತಿಯನ್ನು ಹಲವು ಬಾರಿ ಎದುರಿಸಿದ್ದೇವೆ. ಹಾಗಾಗಿ ನನಗಿದು ಹೊಸದೇನೂ ಆಗಿರಲಿಲ್ಲ. ಆದರೆ ಟಿ20 ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ನಂತರದ 7ರಿಂದ 10 ಓವರ್‌ಗಳ ನಡುವಿನ ಸಮಯವು ಪಂದ್ಯವನ್ನು ನಮ್ಮತ್ತ ತಿರುಗಿಸಲು ಅತ್ಯಂತ ಸೂಕ್ತವಾದುದು ಎಂಬುದು ತಿಳಿದಿತ್ತು. ಅಲ್ಲಿ ಒಂದು ಅಥವಾ ಎರಡು ವಿಕೆಟ್ ಪಡೆದರೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಬಹುದು ಎಂಬ ನಂಬಿಕೆಯಿತ್ತು. ನಮ್ಮ ಬೌಲರ್‌ಗಳು ಅದಕ್ಕೆ ಸ್ಪಂದಿಸಿದ ರೀತಿ ಅದ್ಭುತ, ಅವರು ತಮ್ಮ ಧೈರ್ಯವನ್ನು ಪ್ರದರ್ಶಿಸಿದರು," ಎಂದು ಹೇಳಿದರು. ಇದೆಲ್ಲದರ ನಡುವೆ ಇದೀಗ ಸದ್ದು ಮಾಡುತ್ತಿರುವುದೇ ದೀಪರ್ ಚಹಾರ್ ಅವರ ಸಹೋದರಿ ಮಾಡಿದ ಟ್ವಿಟ್.












Click it and Unblock the Notifications