ವೈಡ್ ಓಕೆ, ನೋ-ಬಾಲ್ ಯಾಕೆ?: ವಿಶ್ವದ ನಂಬರ್ 1 ಬೌಲರ್‌ ಜಸ್ಪ್ರಿತ್ ಬುಮ್ರಾಗೆ ಮೈದಾನದಲ್ಲೇ ಸುನಿಲ್ ಗವಾಸ್ಕರ್ ತರಾಟೆ

Sunil Gavaskar: ವಿಶ್ವದ ನಂಬರ್ ಒನ್ ಬೌಲರ್ ಆಗಿರುವ ಜಸ್ಪ್ರಿತ್ ಬೂಮ್ರಾ ಅವರು 2026ರ ಐಪಿಎಲ್‌ನಲ್ಲಿ ಸತತವಾಗಿ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಸೋಮವಾರ (ಮೇ 4) ನಡೆದ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಮೂರು ನೋಬಾಲ್‌ ಎಸೆದಿದ್ದು, ಈ ಬಗ್ಗೆ ಭಾರತೀಯ ಕ್ರಿಕೆಟ್‌ನ ದಂತಕಥೆ ಸುನಿಲ್ ಗವಾಸ್ಕರ್ ತೀವ್ರ ಅಸಮಾಧನ ವ್ಯಕ್ತಪಡಿಸಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 4ರ ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಎಲ್‌ಎಸ್‌ಜಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡಿದ ವಿಶ್ವದ ನಂಬರ್ 1 ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಒಂದು ವಿಕೆಟ್‌ ಪಡೆಯದೇ ಮೂರು ನೋ ಬಾಲ್‌ ಎಸೆಯುವುದರ ಜೊತೆಗೆ ಹೆಚ್ಚು ರನ್‌ ನೀಡಿ ಮತ್ತೆ ದುಬಾರಿಯಾದರು. ಇದರ ಬೆನ್ನಲ್ಲೇ ಬುಮ್ರಾ ನೋ-ಬಾಲ್ ತಪ್ಪುಗಳ ಬಗ್ಗೆ ಸುನಿಲ್ ಗವಾಸ್ಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Jasprit Bumrah No-Ball Blunder Sparks Gavaskar Reaction in Mumbai Indians vs LSG IPL 2026 Clash

ಬುಮ್ರಾ ವಿರುದ್ಧ ಸುನಿಲ್ ಗವಾಸ್ಕರ್ ವಾಗ್ದಾಳಿ

ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಬುಮ್ರಾ ಪದೇ ಪದೇ ನೋ-ಬಾಲ್ ಹಾಕುತ್ತಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ನೀವು ಒಬ್ಬ ವೃತ್ತಿಪರ ಕ್ರಿಕೆಟಿಗ. ವೈಡ್ ಎಸೆದರೆ ತಪ್ಪೇನಿಲ್ಲ. ಆದರೆ ಪದೇ ಪದೇ ನೋ-ಬಾಲ್ ಹಾಕುವುದು ಸರಿಯಲ್ಲ," ಎಂದು ನೇರವಾಗಿಯೇ ಬುಮ್ರಾ ವಿರುದ್ಧ ಆಕ್ರೋಶ ಹೊರಹಾಕಿದರು.

ಒಂದೇ ಪಂದ್ಯದಲ್ಲಿ ಮೂರು ನೋಬಾಲ್ ಎಸೆದ ಬುಮ್ರಾ

ಬುಮ್ರಾ ಎಸೆತದ 14ನೇ ಓವರ್‌ನಲ್ಲಿ ಎಲ್‌ಎಸ್‌ಜಿ ತಂಡದ ಹಿಮ್ಮತ್ ಸಿಂಗ್ ಔಟಾಗಿದ್ದರು. ಆದರೆ ಅದು ನೋ-ಬಾಲ್ ಆಗಿದ್ದರಿಂದ ಹಿಮ್ಮತ್ ಸಿಂಗ್‌ಗೆ ದೊಡ್ಡ ಜೀವದಾನ ಸಿಕ್ಕಂತಾಯಿತು. ಬಳಿಕ ಅವರು ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಮೊತ್ತವನ್ನು 228ಕ್ಕೆ ಏರಿಸಲು ಪ್ರಮುಖ ಪಾತ್ರವಹಿಸಿದರು. ಬುಮ್ರಾ ಆ ಒಂದೇ ಓವರ್‌ನಲ್ಲಿ ಎರಡು ನೋ-ಬಾಲ್ ಮತ್ತು ಒಂದು ವೈಡ್ ಎಸೆದಿದ್ದರು.

ಈ ಪಂದ್ಯದಲ್ಲಿ ಬುಮ್ರಾ 4 ಓವರ್‌ಗಳಲ್ಲಿ 45 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಒಟ್ಟಾರೆಯಾಗಿ 3 ನೋ-ಬಾಲ್ ಮತ್ತು 3 ವೈಡ್ ಎಸೆದು ದುಬಾರಿ ಆದರು. 2026ರ ಐಪಿಎಲ್ ಬುಮ್ರಾ ಪಾಲಿಗೆ ಅತ್ಯಂತ ಕಳಪೆ ಸೀಸನ್ ಆಗಿ ಪರಿಣಮಿಸಿದ್ದು, ಅವರು ಈವರೆಗೆ 10 ಪಂದ್ಯಗಳಲ್ಲಿ ಕೇವಲ 3 ವಿಕೆಟ್ ಪಡೆದಿದ್ದು, ಒಟ್ಟು 8 ನೋ ಬಾಲ್‌ಗಳನ್ನು ಎಸೆದು ಗಮನ ಸೆಳೆದಿದ್ದಾರೆ.

ಮಿಂಚಿದ ರೋಹಿತ್, ರಿಕಲ್ಟನ್, ನಮನ್ ಧೀರ್

ಬುಮ್ರಾ ಪದೇ ಪದೇ ತಪ್ಪು ಮಾಡುತ್ತಿದ್ದಾಗ ಕ್ಯಾಮೆರಾವು ಮುಂಬೈ ತಂಡದ ಹೆಡ್ ಕೋಚ್ ಮಹೇಲಾ ಜಯವರ್ಧನೆ ಮತ್ತು ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರತ್ತ ತಿರುಗುತ್ತಿತ್ತು. ಅವರು ಈ ವೇಳೆ ಬುಮ್ರಾ ಕಳಪೆ ಪ್ರದರ್ಶನದಿಂದ ಹತಾಶರಾದಂತೆ ಕಂಡುಬಂದರು. ಆದರೂ ಹಿಟ್‌ ಮ್ಯಾನ್ ರೋಹಿತ್ ಶರ್ಮಾ ಸಿಡಿಸಿದ 84 ರನ್‌ ಹಾಗೂ ರಯಾನ್ ರಿಕಲ್ಟನ್ ಚಚ್ಚಿದ 83 ರನ್‌ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ನಮನ್ ಧೀರ್ ಕೊನೆಯಲ್ಲಿ ಅಜೇಯ 23 ರನ್‌ ಸಿಡಿಸಿ ಇನ್ನೂ 8 ಬಾಲ್‌ಗಳು ಬಾಕಿ ಇರುವಂತೆಯೇ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡ 228 ರನ್‌ಗಳನ್ನು ಕಲೆಹಾಕಲು ಜಸ್ಪ್ರಿತ್ ಬುಮ್ರಾ ಕೂಡ ಕಾರಣರಾದರು. ಅವರು ಎಸೆದ 14ನೇ ಓವರ್‌ನಲ್ಲಿ ಹಿಮ್ಮತ್ ಸಿಂಗ್ ಔಟಾಗಿದ್ದರು. ಆದರೆ ಆ ಎಸೆತ ನೋ ಬಾಲ್ ಆದ ಕಾರಣ ಅವರಿಗೆ ಜೀವದಾನ ಸಿಕ್ಕಿತು. ಈ ಅವಕಾಶವನ್ನು ಉತ್ತಮವಾಗಿ ಬಳಿಸಿಕೊಂಡ ಹಿಮ್ಮತ್ ಸಿಂಗ್ ಅಜೇಯ 40 ಸಿಡಿಸಿ ಎಲ್‌ಎಸ್‌ಜಿ ಮೊತ್ತವನ್ನು 228ಕ್ಕೆ ಮುಟ್ಟಿಸಿದರು. ಒಟ್ಟಿನಲ್ಲಿ ಬುಮ್ರಾ ಅವರ ಈ ಬೌಲಿಂಗ್ ಪ್ರದರ್ಶನದಿಂದ ಬರೀ ಕೋಚ್‌ಗಳು ಅಷ್ಟೇ ಅಲ್ಲದೆ, ಹಲವು ಕ್ರಿಕೆಟ್ ದಿಗ್ಗಜರು ಅಸಮಾಧಾನಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+