ಶಿರಸಿ: ತಂದೆಯ ಶವಸಂಸ್ಕಾರಕ್ಕೆ ಹೂ ತರಲು ಹೊರಟಿದ್ದ ಮಗ ಸೇರಿ ಇಬ್ಬರ ಸಾವು
ಶಿರಸಿ, ಮಾರ್ಚ್ 15: ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ, ತಂದೆಯ ಅಂತ್ಯಸಂಸ್ಕಾರಕ್ಕೆ ಹೂ ತರಲೆಂದು ಮಾರುಕಟ್ಟೆಗೆ ಹೊರಟಿದ್ದ ಪುತ್ರ ಹಾಗೂ ಇನ್ನೋರ್ವ ಸಂಬಂಧಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಶಿರಸಿ ನಗರದ ಎಸ್‌ಬಿಐ ಸರ್ಕಲ್ ಬಳಿ ಅಪಘಾತ ಸಂಭವಿಸಿದ್ದು, ಶಿರಸಿಯ ಗಣೇಶ ನಗರದ ರವಿಚಂದ್ರ ವಡ್ಡರ್ (34) ಹಾಗೂ ಸುನೀಲ ಇಂದೂರ (26) ಮೃತಪಟ್ಟಿದ್ದಾರೆ.
ರವಿಚಂದ್ರ ಅವರ ತಂದೆ ಹನುಮಂತಪ್ಪ ಸೋಮವಾರ ನಸುಕಿನ ಜಾವ ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಹೂ ತರಲು ತಮ್ಮ ಚಿಕ್ಕಪ್ಪನ ಮಗ ಸುನೀಲ್ ಅವರೊಂದಿಗೆ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ಇನ್ನೊಂದು ರಸ್ತೆಯಿಂದ ಬಂದ ಬಸ್ ಮತ್ತು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನ ಅಡಿಗೆ ಬೈಕ್ ಸಿಲುಕಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Recommended Video
Positive Story :ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ ದೇಶದ ಮೊದಲ ಎಸಿ ರೈಲ್ವೆ ಟರ್ಮಿನಲ್ | Oneindia Kannada
ಸ್ಥಳಕ್ಕೆ ಡಿವೈಎಸ್ಪಿ ರವಿ ನಾಯ್ಕ ಭೇಟಿ ನೀಡಿದ್ದು, ಪರಿಶೀಲಿನೆ ನಡೆಸಿದ್ದಾರೆ. ಶಿರಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪ್ರಕರಣ ದಾಖಲಾಗಿದೆ.












Click it and Unblock the Notifications