Ratna Debnath: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತಿರುಗಿ ಬಿದ್ದು ಗೆದ್ದ ಅತ್ಯಾಚಾರ ಸಂತ್ರಸ್ತೆ ತಾಯಿ ರತ್ನಾ ದೇಬ್ನಾಥ್
Ratna Debnath: ಪಶ್ಚಿಮ ಬಂಗಾಳದಲ್ಲಿ ಈಚೆಗೆ ನಡೆದಿದ್ದ ಘೋರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದವು. ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಅವರಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. ಇದೀಗ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ರತ್ನಾ ದೇಬ್ನಾಥ್ ಅವರು ತೀವ್ರ ಪೈಪೋಟಿ ನೀಡಿದ್ದು, ಆಡಳಿತರೂಢ ಟಿಎಂಸಿಯ ಭದ್ರಕೋಟೆಯಲ್ಲಿ ಭಾವನಾತ್ಮಕ ಹೋರಾಟವನ್ನು ಮುಂದುವರಿಸಿದ್ದಾರೆ. ರತ್ನಾ ದೇಬ್ನಾಥ್ ಅವರ ಹಿನ್ನೆಲೆ ಏನು ಹಾಗೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅವರ ರಾಜಕೀಯ ಪ್ರವೇಶ ಹೇಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ರತ್ನಾ ದೇಬ್ನಾಥ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆರ್‌ಜಿ ಕಾರ್ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಅವರು 2026 ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಟಿಎಂಸಿಗೆ ಭಾರೀ ಪೈಪೋಟಿ ಕೊಟ್ಟರು. ಇದೀಗ ಇವರು ಮುನ್ನಡೆ ಸಾಧಿಸಿದ್ದಾರೆ. 2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಅತ್ಯಂತ ಭಾವನಾತ್ಮಕವಾಗಿ ಸ್ಪರ್ಧಾ ಕಣವಾಗಿ ಬದಲಾಗಿತ್ತು.

ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಕೊಲೆಯಾದ ಯುವ ವೈದ್ಯೆಯ ತಾಯಿ ರತ್ನಾ ದೇಬ್ನಾಥ್ ಅವರು ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಜನತಾ ಪಕ್ಷವು ಇವರಿಗೆ ಟಿಕೆಟ್ ಕೊಟ್ಟಿದ್ದು, ಟಿಎಂಸಿಯ ಭದ್ರಕೋಟೆ ಎಂದೇ ಪರಿಗಣಿಸಿರುವ ಪಾಣಿಹಟಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆಡಳಿತಾರೂಢ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಭದ್ರಕೋಟೆ ಎಂದೇ ಈ ವಿಧಾನಸಭಾ ಕ್ಷೇತ್ರವನ್ನು ಪರಿಗಣಿಸಲಾಗಿದೆ.
ರತ್ನಾ ದೇಬ್ನಾಥ್ ಯಾರು
2024 ರಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯಾಗಿದ್ದ ತಮ್ಮ ಮಗಳ ಕ್ರೂರ ಹತ್ಯೆಯ ನಂತರ ರತ್ನಾ ದೇಬ್ನಾಥ್ ಅವರು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಕ್ಕೆ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅವರ ರಾಜಕೀಯ ಪ್ರವೇಶದ ಹಿಂದೆಯೂ ಅವರ ಮಗಳಿಗೆ ನ್ಯಾಯ ಕೊಡಿಸಬೇಕು ಎನ್ನುವ ಉದ್ದೇಶವೇ ಮುಖ್ಯವಾಗಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ಅಲ್ಲದೆ ಅಂತಹುದೇ ದುರಂತಗಳನ್ನು ತಡೆಯುವ ಜವಾಬ್ದಾರಿಗಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದಿದ್ದರು.
ಪಶ್ಚಿಮ ಬಂಗಾಳದ ಪಾಣಿಹಟಿ ವಿಧಾನಸಭಾ ಕ್ಷೇತ್ರವು ಹಲವು ವರ್ಷಗಳಿಂದ ಟಿಎಂಸಿಯ ಭದ್ರಕೋಟೆಯಾಗಿದೆ. ಟಿಎಂಸಿಯ ಹಿರಿಯ ನಾಯಕ ನಿರ್ಮಲ್ ಘೋಷ್ ಅವರು ಈ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದಾಗ್ಯೂ, ದೇಬ್ನಾಥ್ ಅವರ ಉಮೇದುವಾರಿಕೆಯು ಸ್ಪರ್ಧೆಯನ್ನು ನಾಟಕೀಯವಾಗಿ ಬದಲಾಯಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುವ ಘೋಷಣೆಗಳ ನಡುವೆ ನಾಮಪತ್ರ ಸಲ್ಲಿಸಿದ ಅವರು ರತ್ನಾ ದೇಬ್ನಾಥ್ ತಮ್ಮ ಪ್ರಚಾರವನ್ನು ರಾಜಕೀಯ ಹೋರಾಟಕ್ಕಿಂತ ನೈತಿಕ ಹೋರಾಟವೆಂದು ಬಿಂಬಿಸಿರುವುದು ಗಮನ ಸೆಳೆದಿದೆ.
ದುರಂತ ರಾಜಕೀಯ ಲಾಭಕ್ಕೆ ಟಿಎಂಸಿ
ಇನ್ನು ಪಶ್ಚಿಮ ಬಂಗಾಳದಲ್ಲಿ ನಡೆದ ದುರಂತವನ್ನು ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಟಿಎಂಸಿ ಪಕ್ಷವು ಚುನಾವಣಾ ಪ್ರಚಾರದ ಸಮಯದಲ್ಲಿ ಆರೋಪಿಸಿತ್ತು. ಬಿಜೆಪಿ ರಾಜಕೀಯ ಲಾಭಕ್ಕಾಗಿ ವೈಯಕ್ತಿಕ ದುರಂತವನ್ನು ಬಳಸಿಕೊಳ್ಳುತ್ತಿದೆ ಎಂದು ಟಿಎಂಸಿ ಪಕ್ಷವು ದೂರಿತ್ತು. ಇನ್ನು ದೇಬ್ನಾಥ್ ಅವರ ರ್ಯಾಲಿಗಳು ನಿರಂತರವಾಗಿ ಮಹಿಳೆಯರ ಸುರಕ್ಷತೆ ಮತ್ತು ಆಡಳಿತ ವೈಫಲ್ಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಅಲ್ಲದೆ ಎರಡು ವರ್ಷಗಳ ನಂತರವೂ ತಮ್ಮ ಮಗಳಿಗೆ ನ್ಯಾಯ ಸಿಕ್ಕಿಲ್ಲ ಎನ್ನುವ ವಿಚಾರವನ್ನು ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸಿದ್ದರು.
ಟಿಎಂಸಿಗೆ ಹಿನ್ನಡೆ
ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 'ಅಭಯ' ಘಟನೆ ಎಂದೇ ಕರೆಯಲಾಗಿರುವ ಈ ಪ್ರಕರಣವು ಸಹ ಈ ಬಾರಿಯ ಪಶ್ಚಿಮ ಬಂಗಳಾ ವಿಧಾನಸಭೆ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ.














Click it and Unblock the Notifications