Vijay in Trouble: ತಮಿಳುನಾಡಿನಲ್ಲಿ ಗೆದ್ದ ಬೆನ್ನಲ್ಲೇ ಟಿವಿಕೆ ನಾಯಕ ವಿಜಯ್‌ಗೆ ಎದುರಾಯ್ತು ದೊಡ್ಡ ಸಂಕಷ್ಟ

Vijay in Trouble: ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಯಶಸ್ಸು ಗಳಿಸಿದ ಬೆನ್ನಲ್ಲೇ ನಟ ಹಾಗೂ ರಾಜಕಾರಣಿ ವಿಜಯ್ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಅಭೂತ ಪೂರ್ವ ಯಶಸ್ಸು ಗಳಿಸಿದೆ. ಆದರೆ ಇನ್ನೇನು ತಮಿಳುನಾಡಿನಲ್ಲಿ ವಿಜಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವಾಗಲೇ ಭಾರೀ ದೊಡ್ಡ ಸಂಕಷ್ಟವೊಂದು ಅವರಿಗೆ ಎದುರಾಗಿದೆ.

ದ್ರಾವಿಡ ಚಳವಳಿಯ ನಾಡು ಎಂದೇ ಖ್ಯಾತಿ ಗಳಿಸಿರುವ ತಮಿಳುನಾಡಿನಲ್ಲಿ ಈ ಬಾರಿ ಡಿಎಂಕೆ - ಎಐಎಡಿಎಂಕೆಗೆ ಪರ್ಯಾಯವಾಗಿ ಟಿವಿಕೆ ತಮಿಳುನಾಡು ಜನರಿಗೆ ಹೊಸ ಆಯ್ಕೆಯಾಗಿ ಬದಲಾಗಿದೆ. ಆದರೆ ಅವರಿಗೆ ಅಧಿಕಾರ ಸ್ವೀಕರಿಸುವುದಕ್ಕಿಂತ ಮುಂಚೆಯೇ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಅಭೂತಪೂರ್ವ ಯಶಸ್ಸು ಸಾಧಿಸುತ್ತಿರುವಾಗಲೇ ಆದರೆ ಅವರ ಜನ ನಾಯಗನ್ ಸಿನಿಮಾದ ವಿಚಾರದಲ್ಲಿ ಅವರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೆ ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುವ ಆತಂಕವೂ ಶುರುವಾಗಿದೆ.

Vijay in Trouble

ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅಂದರೆ ನಾಲ್ಕು ತಿಂಗಳ ಹಿಂದೆಯೇ ಜನ ನಾಯಗನ್ ಸಿನಿಮಾ ಬಿಡುಗಡೆಯಾಗಬೇಕಾಗಿತ್ತು. ಜನ ನಾಯಗನ್ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದ ಬಿಡುಗಡೆ ಆಗಿಲ್ಲ. ಇನ್ನೇನು ಸಿನಿಮಾ ಬಿಡುಗಡೆಯಾಗಬಹುದು ಎನ್ನುವಾಗಲೇ ಚುನಾವಣೆ ಕಾರಣಕ್ಕೂ ಸಿನಿಮಾಗೆ ಬಿಡುಗಡೆಯ ಭಾಗ್ಯ ಸಿಕ್ಕಿರಲಿಲ್ಲ.

Savarkar: ಸಾವರ್ಕರ್ ಬ್ರಿಟಿಷರ ಬಳಿ 5 ಬಾರಿ ಕ್ಷಮಾದಾನ ಕೇಳಿದ್ದು ನಿಜ, ಗೋವನ್ನು ಪೂಜಿಸಲಿಲ್ಲ: ನ್ಯಾಯಾಲಯದಲ್ಲಿ ಮೊಮ್ಮಗ ಹೇಳಿಕೆ
Savarkar: ಸಾವರ್ಕರ್ ಬ್ರಿಟಿಷರ ಬಳಿ 5 ಬಾರಿ ಕ್ಷಮಾದಾನ ಕೇಳಿದ್ದು ನಿಜ, ಗೋವನ್ನು ಪೂಜಿಸಲಿಲ್ಲ: ನ್ಯಾಯಾಲಯದಲ್ಲಿ ಮೊಮ್ಮಗ ಹೇಳಿಕೆ

ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಜನವರಿ 9ಕ್ಕೇ ನಟ - ರಾಜಕಾರಣಿ ವಿಜಯ್ ಅವರ ಜನನಾಯಗನ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಪತ್ರ ಸಿಗದೆ ಇರುವ ಕಾರಣಕ್ಕಾಗಿ 3 ರಿಂದ 4 ವಾರಗಳ ಅವಧಿಗೆ ತಡವಾಗಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ತಿಂಗಳುಗಳು ಕಳೆದರೂ ಸಹ ಸಿನಿಮಾ ಬಿಡುಗಡೆಯಾಗದೆ, ಸಿನಿಮಾದ ದೃಶ್ಯಗಳು ಲೀಕ್ ಆಗಿದ್ದವು. ಇದರೊಂದಿಗೆ ಸಿನಿಮಾ ಮೇಲಿದ್ದ ನಿರೀಕ್ಷೆ ಕಡಿಮೆಯಾಗಿದೆ.

ವಿಜಯ್ vs ಅಣ್ಣಾಮಲೈ: ಸ್ಟಾರ್ ನಟ ಗೆದ್ದಿದ್ದು ಹೇಗೆ, ಖಡಕ್ ಅಧಿಕಾರಿ ಹಿಂದೆ ಸರಿದಿದ್ದು ಏಕೆ - ತಮಿಳುನಾಡು ಫಲಿತಾಂಶ ವಿಶ್ಲೇಷಣೆ
ವಿಜಯ್ vs ಅಣ್ಣಾಮಲೈ: ಸ್ಟಾರ್ ನಟ ಗೆದ್ದಿದ್ದು ಹೇಗೆ, ಖಡಕ್ ಅಧಿಕಾರಿ ಹಿಂದೆ ಸರಿದಿದ್ದು ಏಕೆ - ತಮಿಳುನಾಡು ಫಲಿತಾಂಶ ವಿಶ್ಲೇಷಣೆ

Vijay: 120 ಕೋಟಿ ರೂಪಾಯಿ ಡೀಲ್‌ನಿಂದ ಹಿಂದೆ

120 ಕೋಟಿ ರೂಪಾಯಿ ಡೀಲ್‌ನಿಂದ ಹಿಂದೆ ಪ್ರಮುಖ ಸಂಸ್ಥೆ ಹಿಂದೆ ಸರಿದಿದೆ. ಸಿನಿಮಾದ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಖರೀದಿ ಮಾಡುವುದಿತ್ತು. ಆದರೆ ಈಗ ಅಮೆಜಾನ್ ಪ್ರೈಮ್‌ಗೂ ಸಿನಿಮಾ ಮೇಲಿನ ನಿರೀಕ್ಷೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ಈ ಹಿಂದೆ ನೀಡಿದ್ದ 120 ಕೋಟಿ ರೂಪಾಯಿ ಡೀಲ್‌ನಿಂದ ಹಿಂದೆ ಅಮೆಜಾನ್ ಪ್ರೈಮ್ ಹಿಂದೆ ಸರಿದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದು ಒಟಿಟಿ ವೇದಿಕೆ ಈ ಸಿನಿಮಾಗೆ 50 ಕೋಟಿ ರೂಪಾಯಿ ಆಫರ್ ನೀಡಿದೆ ಎಂದು ಹೇಳಲಾಗಿದೆ. ಈ ಸಿನಿಮಾ ತಂಡ ಆಫರ್‌ಗೆ ಒಂದೊಮ್ಮೆ ಒಪ್ಪಿಗೆ ನೀಡಿದರೆ ಬರೋಬ್ಬರಿ 70 ಕೋಟಿ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+