ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್: 4.5 ಗಂಟೆಗಳಲ್ಲಿ 319 ಕಿಮೀ ಸಂಚಾರ
Vande Bharat Express Train: ಕರ್ನಾಟಕ ರಾಜಧಾನಿ ಬೆಂಗಳೂರು-ಮಡಗಾಂವ್ (ಗೋವಾ) ವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೊಷಿಸಿದ್ದಾರೆ. ಈ ಕ್ರಮವನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ಸ್ವಾಗತಿಸಿದ್ದಾರೆ, ಇದು ರಾಜ್ಯದ ಸಂಪರ್ಕ ಮತ್ತು ಅಭಿವೃದ್ಧಿಗೆ ಪ್ರಮುಖ ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ.
ಹೊಸ ವಂದೇ ಭಾರತ್ ರೈಲು ಸೇವೆ ಬೆಂಗಳೂರನ್ನು ಕರಾವಳಿ ಜಿಲ್ಲೆಗಳು ಹಾಗೂ ಗೋವಾವನ್ನು ಸಂಪರ್ಕಿಸಲಿದೆ. ಇದು ಪಶ್ಚಿಮ ಘಟ್ಟ ಹಾಗೂ ಕೊಂಕಣ ಕರಾವಳಿ ಪ್ರದೇಶದಲ್ಲಿ ಭಾರತದ ರೈಲು ಜಾಲವನ್ನು ವಿಸ್ತರಿಸಲಿದೆ. ತಾಂತ್ರಿಕವಾಗಿಯು ಸವಾಲಾಗಿರುವ ಈ ಮಾರ್ಗದಲ್ಲಿ ರೈಲು ಸಂಚಾರ ಅಪರೂಪ ಎನ್ನಲಾಗಿತ್ತು. ಕರಾವಳಿ ಮಾರ್ಗ ವಿದ್ಯುದೀಕರಣ ಪೂರ್ಣಗೊಂಡಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಬೆಂಗಳೂರಿನ ಬಿಇಎಂಎಲ್‌ನಲ್ಲಿ ಹೈ-ಸ್ಪೀಡ್ ರೈಲು ತಯಾರಿಕಾ ಘಟಕದ ಉದ್ಘಾಟಿಸಿ ಈ ಘೋಷಣೆ ಮಾಡಿದರು. ಬೆಂಗಳೂರು-ಮಂಗಳೂರು-ಮಡಗಾಂವ್‌ಗೆ ವಿಸ್ತರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್, ಪಶ್ಚಿಮ ಘಟ್ಟಗಳ ಕಡಿದಾದ ಇಳಿಜಾರುಗಳಿಂದಾಗಿ ತಾಂತ್ರಿಕವಾಗಿ ಸವಾಲಿನ ಮಾರ್ಗದಲ್ಲಿ ಸಂಚರಿಸಲಿದೆ. ಸದ್ಯಕ್ಕೆ ಈ ತಾಂತ್ರಿಕ ಸಮಸ್ಯೆಗಳನ್ನು ಈಗ ಪರಿಹರಿಸಲಾಗಿದೆ.
ಈ ಹೊಸ ರೈಲನ್ನು ನೈಋತ್ಯ ರೈಲ್ವೆ (SWR) ವಲಯವು ನಿರ್ವಹಿಸಲಿದೆ. ಮಂಗಳೂರು ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಬಹುದಿನಗಳ ಬೇಡಿಕೆ ಆಗಿತ್ತು. ಅದು ಸಾಕಾರಗೊಳ್ಳಲಿದೆ. ಈ ರೈಲು ಬೆಂಗಳೂರು-ಮಂಗಳೂರು ಮಾತ್ರವಲ್ಲದೇ, ಮಂಗಳೂರಿನಿಂದ ಮಡಗಾಂವ್‌ವರೆಗಿನ ವಿಸ್ತರಣೆ ಆಗಿದೆ. ಬೆಂಗಳೂರಿನಿಂದ ಗೋವಾಗೆ ತಡೆರಹಿತ ರೈಲು ಸೇವೆ ಸಿಕ್ಕಂತಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
4.5 ಗಂಟೆಗಳಲ್ಲಿ 319 ಕಿ.ಮೀ ದೂರ ಸಂಚಾರ
ಅಧಿಕೃತ ಮಾಹಿತಿ ಪ್ರಕಾರ, ಬೆಂಗಳೂರಿನಿಂದ ಮಂಗಳೂರು ಸುಮಾರು 370 ಕಿಲೋ ಮೀಟರ್ ದೂರವಿದೆ. ಅಲ್ಲಿಂದ ಮಡಗಾಂವ್ 319 ಕಿ.ಮೀ ದೂರ ಇದೆ. ಮಂಗಳೂರು-ಮಡಗಾಂವ್ ವರೆಗಿನ ದೂರವನ್ನು ಸುಮಾರು 4.5 ಗಂಟೆಗಳಲ್ಲಿ ಕ್ರಮಿಸಲಿದೆ. ಬೆಂಗಳೂರಿನಿಂದ ಐದು ಗಂಟೆಗಳ ಆಸು ಪಾಸಿಗೆ ಸಮಯದಲ್ಲಿ ಮಂಗಳೂರು ತಲುಪಲಿದೆ. ಕರಾವಳಿ ಕಾರಿಡಾರ್ ಮಾರ್ಗದಲ್ಲಿ ಸಂಚಾರ ಸುಧಾರಿಸುವ ಕಾರಣದಿಂದ ಪ್ರವಾಸೋದ್ಯಮಕ್ಕೂ ಇನ್ನಷ್ಟು ಉತ್ತೇಜನ ಸಿಕ್ಕಂತಾಗುತ್ತದೆ. ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಹೆಚ್ಚದಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬೆಂಗಳೂರನ್ನು 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಗುರುತಿಸಲಾಗುತ್ತದೆ. ಮಂಗಳೂರು 'ಕರಾವಳಿ ಕರ್ನಾಟಕದ ಹೆಬ್ಬಾಗಿಲು' ಆಗಿದ್ದು, ಸುಂದರ ಬೀಚ್‌ಗಳು ಮತ್ತು ಪುರಾತನ ದೇವಾಲಯಗಳಿರುವ ನಗರಗಳಿಗೆ ಈ ರೈಲು ಸಂಪರ್ಕವು ಮಹತ್ವದ ಪಾತ್ರ ವಹಿಸಲಿದೆ. ಜನಪ್ರಿಯ ಕಡಲತೀರಗಳನ್ನು ಗಮಟೆಗಳ ಅಂತರದಲ್ಲಿ ತಲುಪಬಹುದೆಂದು ಅವರು ವಿವರಿಸಿದರು. ಬೆಂಗಳೂರಿನಿಂದ ಮುಂಬೈಗೆ ಎರಡು ರೈಲುಗಳನ್ನು ಬಿಡಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಗೋವಾ ಸಿಎಂ ಸ್ವಾಗತ
ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಅನುಮೋದನೆ ಕೊಟ್ಟ ಕೇಂದ್ರ ಸರ್ಕಾರ ನಿರ್ಧಾರವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸ್ವಾಗತಿಸಿದ್ದಾರೆ. ಇದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ, ಮುಖ್ಯವಾಗಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ, ಪ್ರವಾಸೋದ್ಯಮಕ್ಕೆ ಪೂರಕವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಬಹುಕಾಲದ ಬೇಡಿಕೆಯು ಕೇಂದ್ರ ಬಜೆಟ್ ಬಳಿಕ ಈಡೇರಿದಂತಾಗಿದೆ. ಹೊಸ ಅರೆ-ಹೈ-ಸ್ಪೀಡ್ ರೈಲು ಗೋವಾ ಮತ್ತು ಕರ್ನಾಟಕ ನಡುವಿನ ರೈಲು ಸಂಪರ್ಕ ಸುಧಾರಿಸುತ್ತದೆ. ಅನೇಕ ಜಿಲ್ಲೆಗಳು, ತಾಲೂಕುಗಳು, ಪ್ರಾದೇಶಿಕ ಅಭಿವೃದ್ಧಿಗೆ, ಆರ್ಥಿಕ ಬೆಳವಣಿಗೆಗೂ ಈ ರೈಲು ಸಂಪರ್ಕದಿಂದ ಸಹಾಯವಾಗಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.














Click it and Unblock the Notifications