ಬೆಂಗಳೂರು, ಜುಲೈ 14: ಇದೀಗ ಫಿಫಾ ವಿಶ್ವಕಪ್ 2026 ಹಬ್ಬ ಮುಕ್ತಾಯದ ಹಂತ ತಲುಪಿದೆ. ಈ ಹಿನ್ನೆಲೆ ಬೆಂಗಳೂರು ಫುಟ್‌ಬಾಲ್ ಪ್ರಿಯರಿಗಾಗಿ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ತಡರಾತ್ರಿವರೆಗೂ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವೆಗೆ ಅವಕಾಶ ಕಲ್ಪಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲದಲಿ ನೀಡಲಾಗಿದೆ ತಿಳಿಯಿರಿ.
ಫಿಫಾ ವಿಶ್ವಕಪ್ 2026 ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರು ಪೋಲೀಸರು ನಗರದಲ್ಲಿ ಮಧ್ಯರಾತ್ರಿ 3:30ರ ವರೆಗೆ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ ಮನವಿ ಹಿನ್ನೆಲೆಯಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ ಜುಲೈ 14, 15 ಹಾಗೂ 19ರಂದು ಈ ಆದೇಶ ಅನ್ವಯ ಆಗುವಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ತಡರಾತ್ರಿ ಪಂದ್ಯ ಪ್ರದರ್ಶನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ. ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯನ್ನು ಯುಎಸ್ಎ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಜಂಟಿಯಾಗಿ ಆಯೋಜನೆ ಮಾಡಿದ್ದು, ಟೂರ್ನಿಯು ಮುಕ್ತಾಯದ ಹೊಸ್ತಿಲಲ್ಲಿದೆ. ಜುಲೈ 15ರಂದು ಅಮೆರಿಕದ ಡಲ್ಲಾಸ್‌ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಸ್ಪೇನ್ ತಂಡಗಳು ಮುಖಾಮುಖಿ ಆಗುತ್ತಿವೆ. ಜುಲೈ 16ರಂದು ಅಮೆರಿಕದ ಅಟ್ಲಾಂಟದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ ತಂಡಗಳು ಸಮರ ನಡೆಸಲಿವೆ. ಇನ್ನೂ ಜುಲೈ 20ರಂದು ನ್ಯೂಯಾರ್ಕ್‌ನಲ್ಲಿ ರೋಚಕ ಘಟ್ಟದ ಫೈನಲ್ ಪಂದ್ಯ ನಡೆಯಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲಿ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಈ 3 ಮಹತ್ವದ ಪಂದ್ಯಗಳು ಭಾರತೀಯ ಕಾಲಮಾದ ಪ್ರಕಾರ ಮಧ್ಯರಾತ್ರಿ 12:30ಕ್ಕೆ ಆರಂಭ ಆಗಲಿವೆ. ಈ ವೇಳೆ ಫುಟ್‌ಬಾಲ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಹಿನ್ನೆಲೆ ಆ ದಿನಗಳಂದು ಬೆಳಗ್ಗೆ 3 ಗಂಟೆಯವರೆಗೆ ಆಹಾರ ಸೇವೆಗಳನ್ನು ಒದಗಿಸಲು ಅವಕಾಶ ನೀಡುವಂತೆ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ದೇಶದ ಕೆಲ ನಗರಗಳ ಪೊಲೀಸ್ ಇಲಾಖೆಗಳಿಗೆ ಮನವಿ ಪತ್ರವನ್ನು ಸಲ್ಲಿಕೆ ಮಾಡಿತ್ತು. ಈ ಮನವಿ ಪತ್ರದ ಆಧಾರದ ಮೇರೆಗೆ ಬೆಂಗಳೂರು ಪೊಲೀಸರು ಆಯುಕ್ತರು ಪಂದ್ಯ ನಡೆಯುವ ದಿನಗಳಂದು ಬೆಳಗ್ಗೆ 3.30ರ ವರೆಗೆ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವೆ ಒದಗಿಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಫುಟ್‌ಬಾಲ್ ಅಭಿಮಾಬಿಗಳಿಗೆ ದೊಡ್ಡ ಶುಭ ಸುದ್ದಿ ಸಿಕ್ಕಂತಾಗಿದೆ ಅಂದ್ರೆ ತಪ್ಪಾಗಲಾರದು. ಒಟ್ಟಿನಲ್ಲಿ ಹೇಳುವುದಾದರೆ ಭಾರತೀಯ ಕಾಲಮಾನಕ್ಕೂ ಆ ದೇಶಕ್ಕೂ ಅಜಗಂತಾರ ವ್ಯಾತ್ಯಸಗಳಿವೆ. ಆದ್ದರಿಂದ ಭಾರತದಲ್ಲಿ ತುಂಬಾ ಜನ ಫುಟ್‌ಬಾಲ್ ಪ್ರೇಮಿಗಳಿರುವುದರಿಂದ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. * ಮೊದಲ ಸೆಮಿಫೈನಲ್ ಪಂದ್ಯ: ಜುಲೈ 15ರ (ಸಮಯ ಭಾರತೀಯ ಕಾಲಮಾನದ ಪ್ರಕಾರ 12:30ಕ್ಕೆ ನಡೆಯಲಿದೆ) * ಎರಡನೇ ಸೆಮಿಫೈನಲ್ ಪಂದ್ಯ: ಜುಲೈ 16 (ಸಮಯ ಭಾರತೀಯ ಕಾಲಮಾನದ ಪ್ರಕಾರ 12:30ಕ್ಕೆ ನಡೆಯಲಿದೆ) * ಫೈನಲ್ ಪಂದ್ಯ: ಜುಲೈ 20 (ಸಮಯ ಭಾರತೀಯ ಕಾಲಮಾನದ ಪ್ರಕಾರ 12:30ಕ್ಕೆ ನಡೆಯಲಿದೆ)ಪಂದ್ಯಗಳು ನಡೆಯುವ ದಿನಾಂಕಗಳು
ಮೂರು ದೇಶಗಳಿಂದ ಟೂರ್ನಿ ಆಯೋಜನೆ
ಮಧ್ಯರಾತ್ರಿ 12:30ಕ್ಕೆ ಪಂದ್ಯ ಆರಂಭ
ಪಂದ್ಯಗಳ ದಿನಾಂಕಗಳ ವಿವರ