ನಮ್ಮ ಮೆಟ್ರೋದಲ್ಲಿ ಮಿತಿ ಮೀರಿದ ವರ್ತನೆ! ಕಪಲ್ ಕಿಸ್ಸಿಂಗ್ ವಿಡಿಯೋ ವೈರಲ್; ಅಸಭ್ಯ ವರ್ತನೆಗೆ ಜನ ಕಿಡಿ


ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮೆಟ್ರೋ ಬರು ಬರುತ್ತಾ ದೆಹಲಿ ಮೆಟ್ರೋದಂತೆ ಆಗುತ್ತಿದಿಯಾ ಎಂಬ ಚಿಂತೆ ಪ್ರಯಾಣಿಕರಲ್ಲಿ ಕಾಡತೊಡಗಿದೆ. ನೇರಳೆ ಮಾರ್ಗದಲ್ಲಿ ರೈಲು ಏರಿದ್ದ ಯುವಕ-ಯುವತಿಯ ಜೋಡಿ ಮೈಮರೆತಿದೆ. ಇಬ್ಬರು ಪರಸ್ಪರ ಮುತ್ತಿಕ್ಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇವರ ಮಿತಿ ಮೀರಿದ ವರ್ತನೆಗೆ ಬೆಂಗಳೂರು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಈ ಕಪಲ್‌ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಚಲ್ಲಘಟ್ಟ-ವೈಟ್‌ಫಿಲ್ಡ್ ಹೋಗುವ ನೇರಳೆ ಮಾರ್ಗದ ಪ್ರಮುಖ ನಿಲ್ದಾಣವಾದ ಕೆ.ಆರ್‌.ಪುರನಿಂದ ವೈಟ್‌ಫಿಲ್ಡ್‌ ಕಡೆಗೆ ಸಂಚರಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಈ ಘಟನೆ ನಡೆದಿದೆ. ಜೋಡಿಯ ಕಿಸ್ಸಿಂಗ್ ದೃಶ್ಯಗಳು ಇಂಟರ್ ನೆಟ್‌ನಲ್ಲಿ ಹರಿದಾಡುತ್ತಿದ್ದು, ಅಸಭ್ಯ ವರ್ತನೆಯಿಂದ ರೈಲಿನಲ್ಲಿ ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಅಶ್ಲೀಲ ವರ್ತನೆಗೆ ಕಡಿವಾಣ ಹಾಕಿ!

ರೈಲಿನಲ್ಲಿ ಇತರ ಪ್ರಯಾಣಿಕರಂತೆ ಅಕ್ಕಪಕ್ಕ ಕುಳಿತಿದ್ದ ಈ ಜೋಡಿಯು, ಜನರಿದ್ದಾರೆಂಬುದನ್ನೇ ಮರೆತು ತಬ್ಬಿಕೊಂಡು ಘಾಡವಾಗಿ ಕಿಸ್ಸಿಂಗ್‌ನಲ್ಲಿ ಮುಳುಗಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜವಾಬ್ದಾರಿ, ಕನಿಷ್ಠ ಪ್ರಜ್ಞೆಯು ಇಲ್ಲದೇ ಎಲ್ಲೆಂದರಲ್ಲಿ ಹೀಗೆ ಅಶ್ಲೀಲವಾಗಿ ವರ್ತಿಸುವಕ್ಕೆ ಕಡಿವಾಣ ಹಾಕಬೇಕು. ಅದರಲ್ಲೂ ನಮ್ಮ ಮೆಟ್ರೋದಲ್ಲಿ ಮಹಿಳೆ, ಮಕ್ಕಳು, ಹಿರಿಯ ನಾಗರಿಕರು ಓಡಾಡುತ್ತಾರೆ. ಇಲ್ಲಿ ಇಂಥಹ ಘಟನೆಗಳು ಮುಂದುವರಿದರೆ ನಮ್ಮ ಮೆಟ್ರೋ ದೆಹಲಿ ಮೆಟ್ರೋದಂತಾಗುತ್ತದೆಯೇ...! ಹಾಗಾಗಬಾರದು ಎಂದು ಮೆಟ್ರೋ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಬೆಂಗಳೂರು ಸೇಫ್: ರಾತ್ರಿ 2ಕ್ಕೆ ಓಡಾಡಿದ್ರು ತೊಂದ್ರೆ ಇಲ್ಲ: ನೊಯ್ಡಾ ಬಿಟ್ಟು ಇಲ್ಲಿಗೇ ಬರ್ತಿನಿ: ವಿಡಿಯೋ ವೈರಲ್
Advertisement

ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಒತ್ತಾಯ

ವಿಡಿಯೋದಲ್ಲಿದ್ದ ಯುವಕ-ಯುವತಿ ಇಬ್ಬರು ಜೀನ್ಸ್ ಪ್ಯಾಂಟ್ ಬ್ಲಾಕ್ ಕಲರ್ ಜಾಕಿಟ್ ಹಾಕಿದ್ದಾರೆ. ಕೈ ಕೈ ಹಿಡಿದು ಕೂತಿದ್ದು ಮಾತ್ರವಲ್ಲದೇ, ಚುಂಬನದಲ್ಲಿ ಮುಳುಗಿದ ದೃಶ್ಯಗಳನ್ನು ಎದುರಿಗಿದ್ದ ಸಹ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದಾರೆ. ನಮ್ಮ ಮೆಟ್ರೋದಲ್ಲಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಬೆಂಗಳೂರು ಮಟ್ರೋ ರೈಲು ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಆಕ್ರೋಶ ಹೊರ ಹಾಕಿದ ನೆಟ್ಟಿಗರು!

ಬೆಂಗಳೂರಿನ ನಮ್ಮ ಮೆಟ್ರೋ ದೆಹಲಿ ಮೆಟ್ರೋ ಆಗ್ತಿದೆ. ಕಾಮುಕರೂ ಈ ವಲಸೆ ನಾರ್ತಿಗಳು ಪಬ್ಲಿಕ್‌ ನಲ್ಲೆ ಬೀದಿ ನಾಯಿಗಳ ಹಾಗೆ ಶುರು ಮಾಡಿಕೊಂಡು ಬಿಡುತ್ತಾರೆ. ಇವರ ತಂದೆ-ತಾಯಿಗಳು ಬೇರೆಲ್ಲೋ ಇರುತ್ತಾರೆ. ಅವರಿಗೆ ತಮ್ಮ ಮಕ್ಕಳ ಕರ್ಮಕಾಂಡ್ ಗೊತ್ತೇ ಆಗಿಲ್ಲ. ಇವರು ಇಲ್ಲಿಗೆ ಬಂದು ಎಲ್ಲೆಂದರಲ್ಲಿ ಹೀಗೆ ಮಾಡುತ್ತಾರೆ ಎಂದು ನೆಟ್ಟಿಗರು ದೂರಿದ್ದಾರೆ.

Advertisement

ಇನ್ನೊಬ್ಬರು ಮೆಟ್ರೋ ರೈಲನ್ನು ಈ ಯೋಡಿ ಓಯೋ ರೂಮ್ ಮಾಡಿಕೊಂಡಂತಿದೆ' ಎಂದು ದೂರಿದ್ದಾರೆ. ಇನ್ನೊಬ್ಬರು 'ಇವರು ವಲಸಿಗರಲ್ಲ...ಹೊಲಸಿಗರಲ್ಲ' ಎಂದು ನಾರ್ತಿಗಳ ಆಟಾಟೋಪ ಟೀಕಿಸಿದ್ದಾರೆ. 'ಇವರಿಗೆ ಬೇರೆ ಜಾಗ ಸಿಗಲಿಲ್ಲವಾ' ಅಂತಲೂ ಕೆಲವರು ಕೇಳಿದ್ದಾರೆ.

English Summary

A couple's kissing video inside Bengaluru Metro went viral, triggering debate over public behavior and commuter etiquette online.