Bengaluru: ಬೆಂಗಳೂರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಬೇಡವೇ, ಎನ್‌ಆರ್‌ಐ ಪೋಸ್ಟ್ ವೈರಲ್, ಮನೆ - ಪ್ರಾಪರ್ಟಿ ಖರೀದಿ ಚರ್ಚೆ
Bengaluru: ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಹಾಗೂ ಪ್ರಾಪರ್ಟಿಗೆ ಬಂಗಾರದ ಬೆಲೆ ಇದೆ. ಇದೀಗ ಬೆಂಗಳೂರಿನ ರಿಯಲ್ ಎಸ್ಟೇಟ್ ಬಗ್ಗೆ ಎನ್‌ಆರ್‌ಐವೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಭಾರತೀಯ ರಿಯಲ್ ಎಸ್ಟೇಟ್ ಎನ್‌ಆರ್‌ಐಗಳಿಗೆ ಚಿನ್ನದ ಹೂಡಿಕೆಯಂತೆ ಕಾಣುತ್ತದೆ. ಆದರೆ ಅನಿರೀಕ್ಷಿತ ವೆಚ್ಚಗಳಿಂದ ಸಮಸ್ಯೆ ತಪ್ಪಿದ್ದಲ್ಲ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ರೆಡ್ಡಿಟ್‌ನಲ್ಲಿ ಅವರು ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.
ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಆಸ್ತಿಗಳನ್ನು ಹೊಂದಿರುವ ದುಬೈ ಮೂಲದ ಎನ್‌ಆರ್‌ಐವೊಬ್ಬರು ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮತ್ತೊಂದು ಅಥವಾ ಹೊಸ ಆಸ್ತಿಯನ್ನು ಯಾಕೆ ಖರೀದಿ ಮಾಡುತ್ತಿಲ್ಲ ಎನ್ನುವ ಬಗ್ಗೆ ವಿವರಿಸಿದ್ದಾರೆ. ಭಾರತದಲ್ಲಿ ಮತ್ತೊಂದು ಆಸ್ತಿ ಖರೀದಿಸುವ ಮನಸ್ಸು ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ. ಶೇ 2ರಿಂದ 3 ಪ್ರತಿಶತದಷ್ಟು ನಿವ್ವಳ ಬಾಡಿಗೆ ಮತ್ತು ಕರೆನ್ಸಿ ಏರಿಳಿತಗಳಿಂದ ಹಿಡಿದು ಬಾಡಿಗೆದಾರರ ಟಿಡಿಎಸ್ ಹಾಗೂ ವಾಪಸಾತಿ ಫಾರ್ಮ್‌ಗಳನ್ನು ನಿರ್ವಹಿಸುವ ವಿಚಾರದಲ್ಲಿ ಆಡಳಿತಾತ್ಮಕವಾಗಿ ಹಲವು ಸಮಸ್ಯೆಗಳಿವೆ. ಮನೆ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.

"ನಾನು ದುಬೈನಲ್ಲಿ ಎಮ್‌ಆರ್‌ಐ. ಭಾರತದಲ್ಲಿ 2 ಆಸ್ತಿಗಳನ್ನು ಹೊಂದಿದ್ದೇನೆ. ಮೂರನೇ ಅಥವಾ ಮತ್ತೊಂದು ಆಸ್ತಿಯನ್ನು ಖರೀದಿಸುವುದಿಲ್ಲ. ಹೈದರಾಬಾದ್‌ನಲ್ಲಿ ಒಂದು ಆಸ್ತಿ ಖರೀದಿಸಿದೆ. ಬೆಂಗಳೂರಿನಲ್ಲಿ ಒಂದು - ಎರಡೂ ಆಸ್ತಿಗಳನ್ನು / ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದೇವೆ. ಎರಡೂ ಆಸ್ತಿಗಳಿಂದ ಉತ್ತಮ ಆದಾಯ ಬರುತ್ತಿದೆ. ಆದರೆ ಭಾರತದಲ್ಲಿ ಆಸ್ತಿಗಳ ನಿರ್ವಹಣೆ, ಸೊಸೈಟಿ ಶುಲ್ಕಗಳು ಮತ್ತು ಆಸ್ತಿ ತೆರಿಗೆಯ ನಂತರದ ನಿವ್ವಳ ಬಾಡಿಗೆ ಇಳುವರಿ ಶೇ 2 ರಿಂದ 3 ಪ್ರತಿಶತ ಇದೆ. ಆದರೆ ಯುಎಇನಲ್ಲಿ ಆಸ್ತಿಗಳನ್ನು ಖರೀದಿ ಮಾಡಿದರೆ ಭಾರತಕ್ಕಿಂತ ಹೆಚ್ಚು ಲಾಭ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಜನರು ಪ್ರತಿಕ್ರಿಯೆ ಹೇಗಿತ್ತು
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎನ್‌ಆರ್‌ಐಗಳು ಭಾರತದಲ್ಲಿ ಫ್ಲ್ಯಾಟ್ ಅಥವಾ ಮನೆಗಳನ್ನು ಹೂಡಿಕೆಗಾಗಿ ಖರೀದಿಸುವುದು ಮೂರ್ಖತನ. ಡಾಲರ್ ಅಥವಾ ಇತರೆ ಸ್ಥಿರ ಕರೆನ್ಸಿಗಳಲ್ಲಿ ಹಣ ಇಟ್ಟರೆ ಹೆಚ್ಚಿನ ಲಾಭ ಸಿಗುತ್ತದೆ. ಮನೆ ಮಾರಾಟ ಮಾಡಿ ಹಣ ಹಿಂತೆಗೆದುಕೊಳ್ಳುವುದು ತುಂಬಾ ಕಷ್ಟ. ಖರೀದಿದಾರರು 20 ಟಿಡಿಎಸ್ ಪಡೆದುಕೊಳ್ಳುತ್ತಾರೆ. ನಂತರ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿ ಹಣವನ್ನು ಎನ್‌ಆರ್‌ಇ ಖಾತೆಗೆ ವರ್ಗಾಯಿಸಬೇಕು. ಸಣ್ಣ ತಪ್ಪಾದರೂ ತೆರಿಗೆ ನೋಟಿಸ್ ಬರಬಹುದು ಎಂದು ನೆಟ್ಟಿಗರು ಹೇಳಿದ್ದಾರೆ.
ಈ ಪೋಸ್ಟ್ ಮಾಡಿದಕ್ಕೆ ಧನ್ಯವಾದಗಳು. ಇದರಿಂದ ಎನ್‌ಆರ್‌ಐಗಳು ಭಾರತೀಯ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕಬಹುದು. ಆಗ ಮನೆಗಳ ಬೆಲೆ ಕಡಿಮೆಯಾಗಿ ನಮಗೂ ಮನೆ ಖರೀದಿಸಲು ಸಾಧ್ಯವಾಗಬಹುದು ಎಂದು ಬೆಂಗಳೂರಿಗರು ರಿಯಾಕ್ಟ್ ಮಾಡಿದ್ದಾರೆ. ಮತ್ತೊಬ್ಬರು, ದುಬೈ ಅಥವಾ ಅಮೆರಿಕಾದಲ್ಲಿ ಇರುವ ಎನ್‌ಆರ್‌ಐಗಳಿಗೆ ಭಾರತದಲ್ಲಿ ಒಂದು ಮನೆ ಇರಬೇಕು. ಏಕೆಂದರೆ ಅಲ್ಲಿ ಶಾಶ್ವತ ಪೌರತ್ವ ಸಿಗುವುದಿಲ್ಲ. ಆದರೆ ಯುಕೆ ಅಥವಾ ಕೆನಡಾದಲ್ಲಿ ಪೌರತ್ವ ಸಿಗುವವರಿಗೆ ಭಾರತದಲ್ಲಿ ಮನೆ ಖರೀದಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications